ಮಂಡ್ಯದಲ್ಲಿ ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟದ ಪ್ರಸ್ತಾಪ ಚರ್ಚೆಗೆ ಒಳಗಾಗುತ್ತಿದೆ. ಅದು ಆಹಾರ ಸಂಸ್ಕೃತಿಯ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೆ ಅದು ಪರೋಕ್ಷವಾಗಿ ಜತಿ ವ್ಯವಸ್ಥೆಯ ಪರ- ವಿರೋಧವಾಗಿ ಕಾಣುತ್ತಿದೆ. ಯಾರು ಏನೇ ಹೇಳಿದರೂ ದೇಶದಲ್ಲಿ ಜತಿ ಪದ್ಧತಿಯ ಬೇರು ಗಟ್ಟಿಯಾಗುತ್ತಲೇ ಇರುವಂತಿದೆ. ಅಲ್ಲದೆ, ಆಧುನಿಕತೆಗೆ ಒಗಿಕೊಂಡಷ್ಟೂ, ಜತಿವಾದವೂ ನವೀನ ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಮಾತಿಗೆ ಒಂದು ‘ಮನೆ ಭೋಗ್ಯಕ್ಕೆ ಖಾಲಿ ಇದೆ’ ಎಂಬ ಭಿತ್ತಿಪತ್ರ (ಗೋಡೆ ಬದಲಿಗೆ ಮರದ ಮೇಲಿದೆ)ದಲ್ಲಿರುವ ಒಕ್ಕಣೆ ಸಾಕ್ಷ್ಯವಾಗಿದೆ.
ಮೈಸೂರಿನ ಬಡಾವಣೆಯೊಂದರಲ್ಲಿ ಆ ಪತ್ರವನ್ನು ಮರಕ್ಕೆ ಅಂಟಿಸಲಾಗಿದೆ. ಅದರಲ್ಲಿ ಒಳಗೆ ೨ ಬಿಎಚ್‌ಕೆ ಎಂಬುದಾಗಿ ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾಗಿದೆ. ಅದನ್ನು ಮೀರಿ ಅದೇ ಇಂಗ್ಲಿಷ್ ಭಾಷೆಯಲ್ಲಿ ಆವರಣದ ಒಳಗೆ ‘ವೆಜ್ ಓನ್ಲಿ’ ಎಂಬುದನ್ನು ರಾಜರೋಷವಾಗಿ ಬರೆಯಲಾಗಿದೆ. ಅದೂ ಮೊಬೈಲ್ ಸಂಖ್ಯೆ ಸಹಿತ ದಾಖಲಿಸಿದ್ದಾರೆ. ಆ ಮನೆಯ ಮಾಲೀಕರಿಗೆ ಬಹುಶಃ ಕಾನೂನಿನ ಅರಿವು ಇಲ್ಲದಿರಬಹುದು. ಆದರೆ, ಇದು ಪರಿಶಿಷ್ಟ ಜತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಅಪರಾಧ ಎಂಬುದು ಗೊತ್ತಿಲ್ಲದಿರಬಹುದು. ಆದರೆ, ಈ ನೆಲದಲ್ಲಿ ಜತಿ ಪದ್ಧತಿ ಯನ್ನು ಬೇರು ಸಮೇತ ಕೀಳುವುದು ಸಾಧ್ಯವೇ ಎಂಬ ಬೃಹತ್ ಪ್ರಶ್ನೆಯನ್ನು ಈ ಭಿತ್ತಿಪತ್ರ ಅಣಕಿಸಿ ಕೇಳಿದಂತಿತ್ತು. ಇದು ಒಂದು ಉದಾಹರಣೆ ಅಷ್ಟೆ. (ಬಹುಶಃ ಈಗ ಆ ಭಿತ್ತಿಪತ್ರ ಕಿತ್ತುಹೋಗಿರಬಹುದು)
-ಅನ್ವಿಕ್, ಕೆಎಚ್‌ಬಿ ಕಾಲೋನಿ, ನಂಜನಗೂಡು
ಬೆಂಗಳೂರು: ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ಆದ ದೌರ್ಜನ್ಯ ಎಲ್ಲರೂ ತಲೆತಗ್ಗಿಸುವ ಘಟನೆ ಎಂದು ಮಾಜಿ ಸಚಿವ ಅರಗ ಜ್ಞಾನೇಂದ್ರ…
ಬೆಂಗಳೂರು: ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಒಳನಾಡು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಮತ್ತೆ ಕುಸಿತವಾಗಿದ್ದು, ಚಳಿಯ…
ನವದೆಹಲಿ: 2027ರ ಜನಗಣತಿಯ ಮೊದಲ ಹಂತದ ಮನೆ ಪಟ್ಟಿ ಕಾರ್ಯ ಈ ವರ್ಷದ ಏಪ್ರಿಲ್ 1 ರಿಂದ ಸೆಪ್ಟೆಂಬರ್.30ರವರೆಗೆ ಎಲ್ಲಾ…
ಬೆಂಗಳೂರು: ಬಳ್ಳಾರಿಯಲ್ಲಿ ನಡೆದ ಫೈರಿಂಗ್ ಪ್ರಕರಣವನ್ನು ಸಿಬಿಐಗೆ ಕೊಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಈ…
ಬೆಂಗಳೂರು: ಆದಷ್ಟು ಬೇಗ ಬಿಜೆಪಿ ಜೊತೆ ಜೆಡಿಎಸ್ ವಿಲೀನ ಆಗಬಹುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ…
ಮದ್ದೂರು: ಮದ್ದೂರು ಪಟ್ಟಣದ ಪೊಲೀಸ್ ಠಾಣೆಯ ವಿಶ್ರಾಂತಿ ಗೃಹದಲ್ಲಿ ಕಾನ್‌ಸ್ಟೇಬಲ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ…