Andolana originals

ಓದುಗರ ಪತ್ರ: ಪ್ರಶ್ನೆ ಪತ್ರಿಕೆ ಸೋರಿಕೆ ಎಂಬ ನಿರಂತರ ಶಾಪ

ರಾಜ್ಯದಲ್ಲಿ ಪರೀಕ್ಷೆಗಳೆಂದರೆ ಸೋರಿಕೆಗಳ ಸರಣಿ ಎಂಬಂತಾಗಿರುವುದು ದುರದೃಷ್ಟಕರ. ಈ ಬಾರಿ ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಯ ೮೦ ಅಂಕಗಳ ೪೭ ಪ್ರಶ್ನೆಗಳೂ ಪರೀಕ್ಷೆಗೆ ಒಂದು ದಿನ ಮುಂಚಿತವಾಗಿಯೇ ವಾಟ್ಸಾಪ್‌ನಲ್ಲಿ ಲಭ್ಯವಿದ್ದವು ಎಂದರೆ, ಮಂಡಳಿಯ ಗೌಪ್ಯತೆಯ ಮಟ್ಟ ಎಷ್ಟು ನಗಣ್ಯವಾಗಿದೆ ಎಂಬುದು ತಿಳಿಯುತ್ತದೆ.

ಕಳೆದ ದಶಕದಲ್ಲಿ ಕೆಪಿಎಸ್‌ಸಿಯಿಂದ ಹಿಡಿದು ಪೊಲೀಸ್ ನೇಮಕಾತಿವರೆಗೆ ನಡೆದ ಹಗರಣಗಳ ಅಂಕಿ-ಅಂಶಗಳನ್ನು ನೋಡಿದರೆ, ಶೇ.೯೦ರಷ್ಟು ಪ್ರಕರಣಗಳಲ್ಲಿ ವ್ಯವಸ್ಥೆಯ ಒಳಗಿನವರೇ ಭಾಗಿಯಾಗಿರುವುದು ಸಾಬೀತಾಗುತ್ತದೆ.ಲಕ್ಷಾಂತರ ರೂ.ವೆಚ್ಚ ಮಾಡಿ ಏಕರೂಪದ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಸರ್ಕಾರ, ಅದನ್ನು ರಕ್ಷಿಸಲು ವಿಫಲವಾಗುತ್ತಿರುವುದು ಕೇವಲ ಆಡಳಿತಾತ್ಮಕ ಲೋಪವಲ್ಲ, ಇದು ವ್ಯವಸ್ಥಿತ ಭ್ರಷ್ಟಾಚಾರ. ಪ್ರತಿ ಬಾರಿ ಶೇ.೯೦ ಕ್ಕೂ ಹೆಚ್ಚು ಅಂಕ ಪಡೆಯಲು ಶ್ರಮಿಸುವ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಬೆನ್ನಿಗೆ ಸರ್ಕಾರ ಚೂರಿ ಹಾಕುತ್ತಿದೆ. ಕೇವಲ ತನಿಖೆಯ ನಾಟಕವಾಡುವ ಬದಲು, ಪರೀಕ್ಷಾ ಮಂಡಳಿಯನ್ನು ಸಂಪೂರ್ಣವಾಗಿ ನವೀಕರಿಸಿ, ತಪ್ಪಿತಸ್ಥರ ಮೇಲೆ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸದಿದ್ದರೆ ಇಡೀ ಶಿಕ್ಷಣ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಖಚಿತ.

-ಡಾ. ಎಚ್.ಕೆ.ವಿಜಯಕುಮಾರ, ಬೆಂಗಳೂರು

 

 

ಆಂದೋಲನ ಡೆಸ್ಕ್

Recent Posts

TESLA | ಶೀಘ್ರದಲ್ಲೇ ಬೆಂಗಳೂರಿಗೆ ಟೆಸ್ಲಾ ಶೋ ರೂಂ!

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಶೀಘ್ರದಲ್ಲೇ ಶೋ ರೂಂ ತೆರೆಯುದಾಗಿ ವಿದ್ಯುತ್ ಚಾಲಿತ ಕಾರು ತಯಾರಿಕಾ ಕಂಪನಿ ʼಟೆಸ್ಲಾʼ…

6 hours ago

ಚಲನಚಿತ್ರ ಪ್ರಮಾಣೀಕರಣದಲ್ಲಿ ಪಾರದರ್ಶಕತೆ ಇರಲಿ : ನಟ ಕಮಲ್ ಹಾಸನ್ ಸಲಹೆ

ಚೆನ್ನೈ : ತಮಿಳ್ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷ ಹಾಗೂ ನಟ ವಿಜಯ್ ಅಭಿನಯದ ಜನ ನಾಯಗನ್ ಚಿತ್ರಕ್ಕೆ ಸಂಬಂಧಿಸಿದ…

7 hours ago

ಕುಕ್ಕರಹಳ್ಳಿ ಕೆರೆಯಲ್ಲಿ ಸ್ಚಚ್ಛತಾ ಅಭಿಯಾನ : 410 ಕೆ.ಜಿ ಕಸ ಸಂಗ್ರಹ

ಮೈಸೂರು : ಸ್ವಚ್ಛ ನಗರಿ ಮೈಸೂರಿನ ರಮಣೀಯ ಸ್ಥಳವಾದ ಕುಕ್ಕರಹಳ್ಳಿ ಕೆರೆಯ ಸ್ವಚ್ಛತೆಗಾಗಿ, ಸ್ವಚ್ಛ ಸರ್ವೇಕ್ಷಣ ಅಭಿಯಾನದ ಭಾಗವಾಗಿ ಮೈಸೂರು…

8 hours ago

ಸಿದ್ದರಾಮಯ್ಯ ಲೀಸ್ ಬೇಸ್ಡ್ ಮುಖ್ಯಮಂತ್ರಿ : ಎಚ್‌ಡಿಕೆ ಲೇವಡಿ

ಬೆಂಗಳೂರು : ಸಿದ್ದರಾಮಯ್ಯ ಲೀಸ್ ಬೇಸ್ಡ್ ಮುಖ್ಯಮಂತ್ರಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಅಧಿಕಾರವಧಿಯಲ್ಲಿ…

8 hours ago

SSLC ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ

ಬೆಂಗಳೂರು : ವಿದ್ಯಾರ್ಥಿ ಜೀವನದ ಅತಿ ಮಹತ್ವದ ಘಟ್ಟ ಎಂದೇ ಪರಿಗಣಿಸಲಾದ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ…

8 hours ago

ಸ್ಪಾಮ್‌ ಕರೆಗಳ ಕಾಟವೇ? TRAI DND ಅಥವಾ 1909ಗೆ ಕರೆಮಾಡಿ

ಮೈಸೂರು : ಸ್ಪಾಮ್ ಕರೆಗಳ ಮೂಲಕ ಡಿಜಿಟಲ್ ಅರೆಸ್ಟ್ ಹಾಗೂ ಡಿಜಿಟಲ್ ವಂಚನೆ ಮಾಡುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಫೋನಿನ ಕಾಲಿಂಗ್…

9 hours ago