ಓದುಗರ ಪತ್ರ
ಖ್ಯಾತ ಬಾಲಿವುಡ್ ನಟ ಅಮಿತಾಭ್ ಬಚ್ಚನ್‌ರವರು ಖಾಸಗಿ ಮನರಂಜನಾ ಟಿವಿ ಚಾನಲ್‌ನಲ್ಲಿ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ ಪತಿ ಸೀಸನ್- ೧೭’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗುಜರಾತ್ ರಾಜ್ಯದ ಗಾಂಧಿ ನಗರದ ಐದನೇ ತರಗತಿ ವಿದ್ಯಾರ್ಥಿ ಇಶಿತ್ ಭಟ್ ವರ್ತನೆ ಬೇಸರ ತರಿಸಿತು.
ಮೊದಲಿಗೆ ಅಮಿತಾಭ್ ಬಚ್ಚನ್‌ರವರು ಕಾರ್ಯಕ್ರಮದ ನಿಯಮಗಳನ್ನು ಹೇಳಲು ಪ್ರಾರಂಭಿಸಿದಾಗ ಈ ನಿಯಮಗಳನ್ನು ನನಗೆ ಹೇಳಬೇಡಿ, ನನಗೆ ಎಲ್ಲಾ ಗೊತ್ತು ಎಂದು ಅಸಡ್ಡೆಯಿಂದ ಉತ್ತರಿಸಿದ್ದಾನೆ. ಒಂದು ಪ್ರಶ್ನೆಯನ್ನು ಕೇಳಿ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಲು ಪ್ರಾರಂಭಿಸಿದಾಗಲೂ ಅದೆಲ್ಲವೂ ಗೊತ್ತು ಎಂದು ಉಡಾ-ಯಿಂದ ಉತ್ತರಿಸಿದ್ದಾನೆ. ಕೊನೆಯ ಪ್ರಶ್ನೆಯಾದ ವಾಲ್ಮೀಕಿ ರಾಮಾಯಣದಲ್ಲಿ ಪ್ರಥಮ ಕಾಂಡ ಯಾವುದು ಎಂದು ಕೇಳಿದಾಗ ಆತ ಆಯ್ಕೆಗಳನ್ನು ನೀಡಿ ಎಂದು ಏರು ದನಿಯಲ್ಲಿ ಹೇಳಿ ಅಲವತ್ತುಕೊಂಡಿದ್ದಾನೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅದರಲ್ಲೂ ಅಮಿತಾಭ್ ಬಚ್ಚನ್‌ರಂತಹ ಹಿರಿಯ ನಟರ ಮುಂದೆ ಬಾಲಕನ ವರ್ತನೆ ಕುರಿತ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಮಕ್ಕಳಿಗೆ ಚಿಕ್ಕಂದಿನಿಂದಲೇ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನೂ ನೀಡದಿದ್ದರೆ ಏನಾಗುತ್ತದೆ ಎಂಬುದಕ್ಕೆ ಈ ಬಾಲಕನ ವರ್ತನೆ ನಿದರ್ಶನ .
ಪೋಷಕರು ತಮ್ಮ ಮಕ್ಕಳನ್ನು ಪ್ರೀತಿಸಬೇಕು ಹಾಗೆಯೇ ತಪ್ಪು ಮಾಡಿದಾಗ, ಉದ್ಧಟತನದಿಂದ ವರ್ತಿಸಿದಾಗ ದಂಡಿಸಬೇಕು. ವಿದ್ಯೆಯ ಜತೆ ವಿನಯವನ್ನೂ ಕಲಿಸಿದಾಗ ಮಾತ್ರ ಮಕ್ಕಳು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ.
-ಪುಂಡಲೀಕ ಲಮಾಣಿ, ಮೈಸೂರು
ಬಾಗಲಕೋಟೆ: ದಿವಂಗತ ಹೆಚ್.ವೈ.ಮೇಟಿಯವರ ಪ್ರಯತ್ನ ಮತ್ತು ಆಶಯದಂತೆ ಸರ್ಕಾರಿ ವೈದ್ಯಕೀಯ ಕಾಲೇಜು ಉದ್ಘಾಟಿಸುವ ಮೂಲಕ ಅವರ ಕನಸನ್ನು ನನಸು ಮಾಡಲಾಗುತ್ತಿದೆ…
ಬೆಂಗಳೂರು: ರಾಜ್ಯದಲ್ಲಿ ಗ್ಯಾಸ್ ಅಭಾವದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ರಾಜಕೀಯ ಮಾಡಬಾರದು ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.…
ಸುಂಟಿಕೊಪ್ಪ: ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ತಮಿಳುನಾಡು ಮೂಲದ ವಿದ್ಯಾರ್ಥಿಯೋರ್ವ ಉಸಿರು ಚೆಲ್ಲಿರುವ ಘಟನೆ ಇಂದು ಬೆಳಿಗ್ಗೆ ಹೇರೂರುವಿನಲ್ಲಿ ನಡೆದಿದೆ.…
ಮಂಡ್ಯ: ಜಿಲ್ಲೆಯಲ್ಲಿ ಕಂದಾಯ ಇಲಾಖೆ ನೌಕರರು ಕರ್ತವ್ಯ ನಿಷ್ಠೆಯಿಂದ ಕಾರ್ಯ ನಿರ್ವಹಿಸಿ ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸಬೇಕು ಎಂದು ಕೃಷಿ ಹಾಗೂ…
ಮಂಡ್ಯ: 2026ರ ಸಾಲಿನ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವವು ಮಾರ್ಚ್ 23ರಿಂದ ಏಪ್ರಿಲ್.4ರವರೆಗೆ ನಡೆಯಲಿದೆ. ಈ ಉತ್ಸವದ ಪ್ರಮುಖ…
ಮಂಡ್ಯ: ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ನಾನು ಕೊಟ್ಟ ಮಾತಿನಂತೆ ನುಡಿದಂತೆ ನಡೆಯುತ್ತಿದ್ದೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ತಿಳಿಸಿದ್ದಾರೆ.…