ಓದುಗರ ಪತ್ರ
ಇತ್ತೀಚಿನ ದಿನಗಳಲ್ಲಿ ಬೆಂಗಳೂರು, ಮೈಸೂರು, ಹೈದರಾಬಾದ್, ಮುಂಬೈನಂತಹ ನಗರ ಪ್ರದೇಶಗಳಲ್ಲಿ ಓಲಾ, ಊಬರ್, ರ‍್ಯಾಪಿಡೋ, ನಮ್ಮ ಯಾತ್ರೆ ಎಂಬ ಆಪ್ ಗಳ ಮೂಲಕ ಸಾರ್ವಜನಿಕರು ಪ್ರಮುಖವಾಗಿ ರೈಲು, ಬಸ್ ನಿಲ್ದಾಣಗಳು ಸೇರಿದಂತೆ ಇನ್ನಿತರ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪುವುದಕ್ಕಾಗಿ ಆಪ್‌ಗಳ ಮೂಲಕವೇ ಆಟೋರಿಕ್ಷಾ, ಸ್ಕೂಟರ್, ಕಾರ್‌ಗಳನ್ನು ಬುಕ್ ಮಾಡುವ ಸಂದರ್ಭದಲ್ಲಿ ಆಪ್‌ಗಳು ತೋರಿಸುವ ನಿಗದಿತ ದರಕ್ಕೆ ಆಧರಿಸಿ ಬುಕ್ ಮಾಡುವಾಗ ೫-೧೦ ನಿಮಿಷಗಳವರೆಗೂ ಬುಕಿಂಗ್ ಪಡೆಯದೆ ಸಮಯ ವ್ಯರ್ಥ ಮಾಡಿಸುವುದರ ಜೊತೆಗೆ ಅದಕ್ಕನುಣವಾಗಿ ೧೦ರೂ., ೨೦ರೂ., ೩೦ರೂ., ೪೦ರೂ., ೫೦.ರೂಗಳಿಗೂ ಅಧಿಕ ಮೊತ್ತವನ್ನು ಸೇರಿಸಿ ಬುಕ್ ಮಾಡಿದರೆ ತಕ್ಷಣವೇ ಬುಕಿಂಗ್ ಪಡೆಯುವುದಾಗಿ ಸೂಚನೆಗಳನ್ನು ತೋರಿಸುತ್ತಾರೆ.
ದಿನ-ದಿನಕ್ಕೆ ಇದು ಒಂದು ರೀತಿಯಲ್ಲಿ ಹಗಲು ದರೋಡೆಯಂತಾಗುತ್ತಿದೆ. ಆಮೂಲಕ ಸಾರ್ವಜನಿಕರಿಂದ ಹೆಚ್ಚಿನ ಹಣವನ್ನು ಪಡೆಯುತ್ತಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕರಿಗೆ ಆಗುತ್ತಿರುವ ಅನ್ಯಾಯವನ್ನು ಸರ್ಕಾರದ ಗಮನಕ್ಕೆ ತಂದು ಹಿಂದೆ ಇದ್ದಂತಹ ಮೀಟರ್‌ಗಳ ದರದ ಮೂಲಕವೇ ಆಟೋರಿಕ್ಷಾದಿಂದ ಅನುಕೂಲ ಪಡೆಯಲು ಸೂಚನೆ ನೀಡುವುದರೊಂದಿಗೆ, ಕಾರು ಮತ್ತು ಸ್ಕೂಟರ್‌ಗಳಿಗೆ ಪ್ರತಿ ಕಿಲೋ ಮೀಟರ್‌ಗೆ ನಿಗದಿತ ದರ ನಿಗದಿಪಡಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಗಮನ ಹರಿಸಬೇಕಾಗಿದೆ.
-ನಾಗೇಶ್ , ಮಾನಸಗಂಗೋತ್ರಿ, ಮೈಸೂರು
ಬೆಂಗಳೂರು : ಬೆಂಗಳೂರು ಉತ್ತರ ತಾಲ್ಲೂಕು ಜಾರಕಬಂಡೆ ಶ್ರೀಗಂಧದ ಕಾವಲ್‌ನಲ್ಲಿ ವಾಯುಪಡೆಯ ವಶದಲ್ಲಿರುವ 444 ಎಕರೆ ಅರಣ್ಯಭೂಮಿಯ ಮರು ವಶಕ್ಕೆ…
ಹೊಸದಿಲ್ಲಿ : ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಆತಂಕ ಸೃಷ್ಠಿಯಾಗಿರುವ ನಡುವೆ ಕೇಂದ್ರ…
ವಾಷಿಂಗ್ಟನ್ : ಇರಾನ್ ಕೋರಿಕೆಯ ಮೇರೆಗೆ ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು 10 ದಿನ ಮುಂದೂಡಿದ್ದೇವೆ ಎಂದು ಅಮೆರಿಕ ಅಧ್ಯಕ್ಷ…
ಮುಂಬೈ : ಬಿಸಿಸಿಐ ಮಾರ್ಚ್ 26ರ ಗುರುವಾರದಂದು ಬಹುನಿರೀಕ್ಷಿತ 19 ನೇ ಸೀಸನ್ ಐಪಿಎಲ್‌ನ ಎರಡನೇ ಹಂತದ ವೇಳಾಪಟ್ಟಿಯನ್ನು ಪ್ರಕಟಿಸಿದೆ.…
ಮೈಸೂರು ವಿವಿಯಲ್ಲಿ ಆರ್ಥಿಕ ಶಿಸ್ತು ಇಲ್ಲ ; ಕೋವಿಡ್ ನಂತರದಲ್ಲಿ ಅನುದಾನದ ಕೊರತೆ : ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮೈಸೂರು :…
ದೇಶದ ತುಂಬಾ ಇಂದು ಭಕ್ತ ಗಣ ಮಾಡುತ್ತಿದೆ ಜಪ ರಾಮ ರಾಮ... ಆ ಟ್ರಂಪಣ್ಣನೂ ಜಪಿಸುತ್ತಿದ್ದಾರಂತೆ ಯಾವಾಗ ಘೋಷಿಸುತ್ತದೆಯೋ ಇರಾನ್,…