Andolana originals

ಓದುಗರ ಪತ್ರ: ರಕ್ತ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಿ

ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿಯನ್ನು ಹೊಂದಿರುವ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯಗಳಿಲ್ಲದೆ ಜನರು ಚಿಕಿತ್ಸೆಗಾಗಿ ಮೈಸೂರಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ. ಅದರಲ್ಲಿಯೂ ಅಪಘಾತವಾದಾಗಲಂತೂ ರಕ್ತ ಬೇಕಾದಲ್ಲಿ ಗಾಯಾಳುಗಳ ಪರದಾಟ ಹೇಳತೀರದು.

ಎಚ್.ಡಿ.ಕೋಟೆ ತಾಲ್ಲೂಕನ್ನು ಆಡಳಿತಾತ್ಮಕ ದೃಷ್ಟಿಯಿಂದ ಸರಗೂರು ಮತ್ತು ಎಚ್.ಡಿ.ಕೋಟೆ ತಾಲ್ಲೂಕುಗಳಾಗಿ ವಿಭಾಗಿಸಲಾಗಿದೆ. ಆದರೆ, ಈ ಎರಡೂ ತಾಲ್ಲೂಕುಗಳಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯಗಳು ಸಿಗದಿರುವ ಜತೆಗೆ ಎಲ್ಲಿಯೂ ರಕ್ತ ಸಂಗ್ರಹಣೆ ಕೇಂದ್ರವಿಲ್ಲದಿರುವ ಪರಿಣಾಮ ಅಪಘಾತದಂತಹ ತುರ್ತು ಸಂದರ್ಭಗಳಲ್ಲಿ ಗಾಯಾಳುಗಳು ಪರದಾಡುವಂತಾಗಿದೆ. ಅಪಘಾತ ಮಾತ್ರವಲ್ಲದೆ, ಗರ್ಭಿಣಿಯರಿಗೆ ಹೆರಿಗೆ ಸಂದರ್ಭದಲ್ಲಿ ರಕ್ತದ ಅವಶ್ಯವಿದ್ದರೆ ಅವರನ್ನು ಮೈಸೂರಿಗೆ ರವಾನಿಸಬೇಕಿದೆ. ತೀರ ಅನಿವಾರ್ಯವಾಗಿ ರಕ್ತ ಬೇಕಾದಾಗ ರಕ್ತ ಸಿಗದೆ ಗಾಯಾಳುಗಳು ಸಾವನ್ನಪ್ಪಿರುವ ಉದಾಹರಣೆಗಳೂ ಇವೆ. ಆದ್ದರಿಂದ ಆರೋಗ್ಯ ಇಲಾಖೆಯು ಈ ಬಗ್ಗೆ ಗಮನಹರಿಸಿ ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕುಗಳಲ್ಲಿ ರಕ್ತ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಬೇಕಿದೆ.

-ಸಿದ್ದಲಿಂಗೇಗೌಡ, ಹೈರಿಗೆ, ಎಚ್.ಡಿ.ಕೋಟೆ ತಾ.

AddThis Website Tools
ಆಂದೋಲನ ಡೆಸ್ಕ್

Recent Posts

ಅಟ್ಲಾಂಟಿಕ್‌ ಮಹಾಸಾಗರದಲ್ಲಿ ದಾಖಲೆ ಬರೆದ ಅನನ್ಯ : ಸಿಎಂ ಶ್ಲಾಘನೆಅಟ್ಲಾಂಟಿಕ್‌ ಮಹಾಸಾಗರದಲ್ಲಿ ದಾಖಲೆ ಬರೆದ ಅನನ್ಯ : ಸಿಎಂ ಶ್ಲಾಘನೆ

ಅಟ್ಲಾಂಟಿಕ್‌ ಮಹಾಸಾಗರದಲ್ಲಿ ದಾಖಲೆ ಬರೆದ ಅನನ್ಯ : ಸಿಎಂ ಶ್ಲಾಘನೆ

ಬೆಂಗಳೂರು : ಅಟ್ಲಾಂಟಿಕ್ ಮಹಾಸಾಗರವನ್ನು ಸತತ ೫೨ ದಿನಗಳ ಕಾಲ ಏಕಾಂಗಿಯಾಗಿ ರೋವಿಂಗ್ ಮಾಡಿ ದಾಟಿ ದಾಖಲೆಗೈದ ಅನನ್ಯ ಪ್ರಸಾದ್…

8 hours ago
ಸಾರಾ ಮಹೇಶ್‌ ಪುತ್ರನ ಮದುವೆ ; ಎಚ್‌ಡಿಕೆ, ಕಿಚ್ಚ ಸುದೀಪ್‌ ಭಾಗಿಸಾರಾ ಮಹೇಶ್‌ ಪುತ್ರನ ಮದುವೆ ; ಎಚ್‌ಡಿಕೆ, ಕಿಚ್ಚ ಸುದೀಪ್‌ ಭಾಗಿ

ಸಾರಾ ಮಹೇಶ್‌ ಪುತ್ರನ ಮದುವೆ ; ಎಚ್‌ಡಿಕೆ, ಕಿಚ್ಚ ಸುದೀಪ್‌ ಭಾಗಿ

ಮೈಸೂರು : ಮಾಜಿ ಸಚಿವ ಸಾ.ರಾ.ಮಹೇಶ್ ಅವರ ಎರಡನೇ ಪುತ್ರ ಸಾ.ರಾ.ಜಯಂತ್ ಮತ್ತು ಎಂ.ಎಸ್.ವರ್ಷಾ ಅವರ ವಿವಾಹ ಆರತಕ್ಷತೆ ಸಮಾರಂಭದಲ್ಲಿ…

8 hours ago
ಮೂಢನಂಬಿಕೆ ಮಹಿಳೆಯರ ಪಾಲಿನ ರಾಕ್ಷಸ ; ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ಮೂಢನಂಬಿಕೆ ಮಹಿಳೆಯರ ಪಾಲಿನ ರಾಕ್ಷಸ ; ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌

ಮೂಢನಂಬಿಕೆ ಮಹಿಳೆಯರ ಪಾಲಿನ ರಾಕ್ಷಸ ; ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌

ಸಾಧಕಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿವರ ಹೇಳಿಕೆ ಬೆಂಗಳೂರು: ಮಹಿಳೆಯರ ಪಾಲಿಗೆ ಮೂಢನಂಬಿಕೆಯೇ ರಾಕ್ಷಸ. ಇಂದಿನ ಆಧುನಿಕ ಕಾಲದಲ್ಲೂ ಊರು…

9 hours ago

ಮಹಿಳೆ ನಾಯಕತ್ವ ಗುಣ ಬೆಳೆಸಿಕೊಳ್ಳಲಿ ; ಸಚಿವೆ ಹೆಬ್ಬಾಳಕರ್

 ಕಾಂಗ್ರೆಸ್ ಸರ್ಕಾರ ಎಂದಿಗೂ‌ ಮಹಿಳೆಯರ ಪರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಹಿಳಾ ಕಾಂಗ್ರೆಸ್ ವತಿಯಿಂದ ಮಹಿಳಾ ದಿನಾಚರಣೆ ಆಚರಣೆ ಬೆಂಗಳೂರು:…

10 hours ago

ಮಂಡ್ಯ | ರಾಜಕೀಯ ಪಕ್ಷಗಳು ಬೂತ್ ಮಟ್ಟದ ಏಜೆಂಟರ ವಿವರ ಸಲ್ಲಿಸಿ ; ಜಿಲ್ಲಾಧಿಕಾರಿ ಕುಮಾರ

ಮಂಡ್ಯ : ರಾಜಕೀಯ ಪಕ್ಷಗಳು ನೇಮಕ ಮಾಡಿರುವ ಬೂತ್ ಮಟ್ಟದ ಏಜೆಂಟ್ ಗಳು ಬದಲಾಗಿದ್ದಲ್ಲಿ, ಅವರ ವಿವರದೊಂದಿಗೆ ಬೂತ್ ಲೆವಲ್…

10 hours ago

ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲು!

ಹಾಸನ : ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲಾಗಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಎಂ.ದಾಸಪುರ ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯ…

10 hours ago