ಓದುಗರ ಪತ್ರ
ಮೈಸೂರು ನಗರದ ಅಗ್ರಹಾರ ಬಡಾವಣೆಯ ರಾಮಾನುಜ ರಸ್ತೆಯ ೭ನೇ ಮತ್ತು ೮ನೇ ಕ್ರಾಸ್ ಬಳಿ ಇರುವ ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗೆ ಆಧಾರವಾಗಿ ಅಳವಡಿಸಿರುವ ಕಬ್ಬಿಣದ ಕಂಬವು ಬಹುಪಾಲು ತುಕ್ಕು ಹಿಡಿದು ಉದುರುತ್ತಿದ್ದು, ಭಾರೀ ಅನಾಹುತಕ್ಕೆ ಕಾದುನಿಂತಿದೆ. ಈ ಕಂಬವು ವಿದ್ಯುತ್ ಟ್ರಾನ್ಸ್ ಫಾರ್ಮರ್‌ನ ಸಂಪೂರ್ಣ ಭಾರವನ್ನು ಹೊತ್ತು ನಿಂತಿದೆ. ಆದರೆ ಕಂಬದ ತಳಭಾಗ ಬಹುಪಾಲು ತುಕ್ಕುಹಿಡಿದು ಉದುರುತ್ತಿರುವುದರಿಂದ ಕುಸಿದು ಬೀಳುವ ಹಂತದಲ್ಲಿದೆ.
ಈಗ ಮಳೆಗಾಲವಾದ್ದರಿಂದ ಕಂಬ ಮತ್ತಷ್ಟು ತುಕ್ಕು ಹಿಡಿದು ದುರ್ಬಲಗೊಳ್ಳುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಕಂಬ ಸಂಪೂರ್ಣ ತುಕ್ಕು ಹಿಡಿದು ದುರ್ಬಲಗೊಂಡು ಕುಸಿದರೆ, ಟ್ರಾನ್ಸ್ ಫಾರ್ಮರ್ ನೆಲಕ್ಕುರುಳಲಿದ್ದು, ಭಾರಿ ಅನಾಹುತ ಸಂಭವಿಸಲಿದೆ ಎಂದು ರಸ್ತೆಯ ಅಕ್ಕಪಕ್ಕದ ಮನೆಗಳವರು ಆತಂಕಗೊಂಡಿದ್ದಾರೆ.ಸಾರ್ವಜನಿಕರು ಈ ರಸ್ತೆಯಲ್ಲಿ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ಪರಿಸ್ಥಿತಿಯಿದೆ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ರೀತಿಯ ಅನಾಹುತ ಸಂಭವಿಸುವ ಮೊದಲೇ ಎಚ್ಚೆತ್ತುಕೊಂಡು ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗೆ ಆಧಾರವಾಗಿ ಸದೃಢವಾದ ಹೊಸ ಕಂಬವನ್ನು ಅಳವಡಿಸಬೇಕು. ಅನಂತರ ತುಕ್ಕುಹಿಡಿದು ಬೀಳುವ ಸ್ಥಿತಿಯಲ್ಲಿರುವ ಕಂಬವನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಾರ್ವಜನಿಕರ ಪ್ರಾಣ ಹಾನಿ ತಡೆಗಟ್ಟುವುದು ಮತ್ತು ಆಸ್ತಿ ರಕ್ಷಣೆ ಹಿತದೃಷ್ಟಿಯಿಂದ ಫುಟ್‌ಪಾತ್, ರಸ್ತೆಯ ಮಧ್ಯೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗಳನ್ನು ಅಳವಡಿಸಬಾರದು ಎಂಬುದಾಗಿ ಇತ್ತೀಚೆಗೆ ಹೈಕೋರ್ಟ್ ಕೂಡ ಆದೇಶ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಪಂಜು ಗಂಗೊಳ್ಳಿ ಬಡಕಟ್ಟು ಜನರಿಗೆ ಅಕ್ಷರ ಕಲಿಸಿ ಬದುಕು ರೂಪಿಸಿದ ಕರುಣಾಮಯಿ ೧೯೯೦ರಲ್ಲಿ ಅಸ್ಸಾಮಿನ ಹೊಜಾಯ್ ಜಿಲ್ಲೆಯ ಲುಮ್ಡಿಂಗ್ ಗ್ರಾಮದ…
ರೂಪ ಹಾಸನ ನೇಪಥ್ಯಕ್ಕೆ ಸರಿದ ಅಂತಾರಾಷ್ಟ್ರಿಯ ಖ್ಯಾತಿಯ ಅದ್ಭುತ ಕಲಾವಿದ ಮೂರು ದಶಕಗಳ ಹಿಂದೆ ಮದುವೆಯಾಗಿ ಹಾಸನಕ್ಕೆ ಬಂದ ಹೊಸತು.…
ಮಂಜು ಕೋಟೆ ಸವ್ವೆ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಕೆರೆಯ ಬಳಿ ಮಾಟ-ಮಂತ್ರ; ಇಂಥ ಕೃತ್ಯಗಳಿಗೆ ಕಡಿವಾಣ ಹಾಕಲು ಆಗ್ರಹ ಎಚ್.ಡಿ.ಕೋಟೆ:…
ಬೆಂಗಳೂರು: ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಬಂಡೀಪುರ ಹಾಗೂ ನಾಗರಹೊಳೆ ಉದ್ಯಾನಗಳಲ್ಲಿ ಸಫಾರಿ ಆರಂಭಿಸಿ ಎಂದು ಸಿಎಂ ಡಿ.ಕೆ.ಶಿವಕುಮಾರ್…
ವೆನೆಜುವೆಲಾ: ಇಲ್ಲಿ ಬುಧವಾರ ಸಂಜೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಲ್ಲಿ ಮೃತಪಟ್ಟವರ ಸಂಖ್ಯೆ 1700ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ 5000ಕ್ಕೂ…