ಮೈಸೂರಿನ ವಿಜಯನಗರದಲ್ಲಿರುವ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ಸಮೀಪದ ಕನ್ನಡ ಸಾಹಿತ್ಯ ಪರಿಷತ್ ಭವನದ ರಸ್ತೆಯ ಬಳಿ ಮ್ಯಾನ್‌ಹೋಲ್‌ನಿಂದ ಕೊಳಚೆ ನೀರು ಹೊರ ಬರುತ್ತಿದ್ದು, ದುರ್ವಾಸನೆ ಬೀರಲಾರಂಭಿಸಿದೆ. ಐದು- ಆರು ದಿನಗಳಿಂದ ಈ ಮ್ಯಾನ್‌ಹೋಲ್ ಮೂಲಕ ಕೊಳಚೆ ನೀರು ರಸ್ತೆಗೆ ಹರಿ ಯುತ್ತಿದ್ದು, ಕಾಲೇಜು ವಿದ್ಯಾರ್ಥಿಗಳು, ರಸ್ತೆಯಲ್ಲಿ ತಿರು ಗಾಡುವ ಸಾರ್ವಜನಿಕರು ಈ ನೀರನ್ನು ತುಳಿದು ಕೊಂಡೇ ದುರ್ವಾಸನೆ ತಾಳಲಾರದೆ ಮೂಗು ಮುಚ್ಚಿ ಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿತ್ಯ ಮುಂಜಾನೆ ಈ ಮ್ಯಾನ್ ಹೋಲ್‌ನಿಂದ ಚರಂಡಿ ನೀರು ಮೇಲೆ ಉಕ್ಕುತ್ತಿದೆ. ಅಲ್ಲದೆ ಈ ನೀರಿನ ಮೇಲೆ ವಾಹನಗಳು ಸಂಚರಿಸುತ್ತಿದ್ದಂತೆಲ್ಲಾ ಆ ನೀರು ಅಕ್ಕ ಪಕ್ಕಕ್ಕೆ ಆರುತ್ತಿದೆ. ಇದರಿಂದಾಗಿ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ಇಂತಹ ಅನೈರ್ಮಲ್ಯದ ವಾತಾವರಣದಿಂದಾಗಿ ರೋಗಗಳು ಉಲ್ಭಣಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ಮೈಸೂರು ಮಹಾ ನಗರ ಪಾಲಿಕೆಯವರು ಈ ಬಗ್ಗೆ ಗಮನಹರಿಸಿ ಈ ಮ್ಯಾನ್‌ಹೋಲ್‌ಅನ್ನು ಸರಿಪಡಿ ಸುವ ಮೂಲಕ ಕೊಳಚೆ ನೀರು ರಸ್ತೆಗೆ ಹರಿಯದಂತೆ ನೋಡಿ ಕೊಳ್ಳಬೇಕಿದೆ.
-ಆರ್.ಯಶಸ್, ಮೈಸೂರು.
ಹನೂರು : ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಸನಿಹದಲ್ಲಿರುವ ತೊಳಸಿಕೆರೆ ಗ್ರಾಮದ ದುಮ್ಮತಂಬಡಿ ಅವರಿಗೆ ಸೇರಿದ ಹಸು ಜಮೀನಿನಲ್ಲಿ ಮೇಯುತ್ತಿದ್ದಾಗ…
ನಂಜನಗೂಡು : ʻಹತ್ತೂರು ಜಾತ್ರೆಗೆ ಸುತ್ತೂರು ಜಾತ್ರೆʼ ಸಮ ಎಂಬ ಗಾದೆ ಹೊಂದಿರುವ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳ ಜಾತ್ರಾ…
ಕಿಕ್ಕೇರಿ : ಗ್ರಾಮೀಣ ಬದುಕಿನ ಸವಾಲುಗಳ ನಡುವೆ ಬೆಳೆದ ರೈತನ ಮಗಳು ತನ್ನ ಅಕ್ಷರಾಸಕ್ತಿಯಿಂದ ಇಡೀ ತಾಲ್ಲೂಕಿನ ಹೆಮ್ಮೆಯ ಮಗಳಾಗಿ…
ಚಿಕ್ಕಾಡೆ ಗ್ರಾಮದಲ್ಲಿ ಘಟನೆ; ಮೂವರ ಬಂಧನ ಪಾಂಡವಪುರ : ಜಮೀನು ವಿಚಾರವಾಗಿ ದಾಯಾದಿಗಳ ನಡುವೆ ನಡೆಯುತ್ತಿದ್ದ ಕಲಹ ಕೊಲೆಯಲ್ಲಿ ಅಂತ್ಯ…
ಮಂಡ್ಯ : ತಾಲ್ಲೂಕಿನ ಕಚ್ಚಿಗೆರೆ ಗ್ರಾಮದ ದಲಿತ ಮಹಿಳೆ ರಜನಿ ಎಂಬವರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿರುವ ಆರೋಪಿಗಳನ್ನು…
ಮೈಸೂರು : ಕೃಷಿ ಪದ್ಧತಿಯಲ್ಲಿ ರಾಸಾಯನಿಕ ಗೊಬ್ಬರದ ಬಳಕೆ ಕಡಿಮೆ ಮಾಡಿ ಹಸಿರೆಲೆ ಹಾಗೂ ಜೈವಿಕ ಗೊಬ್ಬರಗಳನ್ನು ಸರಿಯಾದ ರೀತಿಯಲ್ಲಿ…