Andolana originals

ಓದುಗರ ಪತ್ರ: ಹೆಚ್ಚುವರಿ ಬಸ್‌ಗಳ ಸಂಚಾರ ಕಲ್ಪಿಸಿ

ಪ್ರತಿನಿತ್ಯ ನಂಜನಗೂಡು – ಗುಂಡ್ಲುಪೇಟೆ ಮಾರ್ಗದಲ್ಲಿ ನೂರಾರು ಜನರು ಸಾರಿಗೆ ಬಸ್‌ಗಳಲ್ಲಿ ಸಂಚರಿಸುತ್ತಾರೆ. ಇವರಲ್ಲಿ ಮುಖ್ಯವಾಗಿ ಉದ್ಯೋಗಿಗಳೇ ಹೆಚ್ಚಾಗಿದ್ದಾರೆ. ಆದರೆ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಎಲ್ಲ ಬಸ್‌ಗಳು ತುಂಬಿ ತುಳುಕುತ್ತಿರುತ್ತವೆ. ನಿಲ್ಲುವುದಕ್ಕೂ ಜಾಗವಿಲ್ಲದಷ್ಟು ಪ್ರಯಾಣಿಕರು ಇರುತ್ತಾರೆ. ಹೀಗಾಗಿ ಈ ಮಾರ್ಗದಲ್ಲಿ ಪ್ರಯಾಣಿ ಸುವುದೇ ದುಸ್ತರವಾಗಿದೆ.

ಸಂಜೆ ಕೆಲಸ ಮುಗಿಸಿ ನಂಜನಗೂಡಿನಿಂದ ಗುಂಡ್ಲುಪೇಟೆ ಕಡೆಗೆ ಪ್ರಯಾಣಿಸುವವರ ಪಾಡು ಹೇಳತೀರದಾಗಿದೆ. ಹುಲ್ಲಹಳ್ಳಿ ಸರ್ಕಲ್‌ನಲ್ಲಿ ಸಂಜೆ ೪ ರಿಂದ ರಾತ್ರಿ ೮ ಗಂಟೆಯತನಕ ನೂರಾರು ಜನರು ಬಸ್‌ಗಾಗಿ ಕಾಯುತ್ತಾರೆ. ಮೈಸೂರಿನಿಂದ ಗುಂಡ್ಲುಪೇಟೆಗೆ ಸಂಚರಿಸುವ ಎಕ್ಸ್‌ಪ್ರೆಸ್ ಬಸ್‌ಗಳು ನಂಜನಗೂಡಿನಲ್ಲಿ ನಿಲ್ಲಿಸುವುದಿಲ್ಲ. ಈ ಸಮಯದಲ್ಲಿ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದಿರುವುದು ಪ್ರಯಾಣಿಕರ ಪರದಾಟಕ್ಕೆ ಕಾರಣವಾಗಿದೆ.

ಕೆಲವು ಬಸ್‌ಗಳಲ್ಲಿ ನಿಲ್ಲಲು ಜಾಗವಿಲ್ಲದಿದ್ದರೂ ಕೆಲವರು ಬಸ್ ಹತ್ತಲು ಹೋಗಿ ಕೆಳಗೆ ಬಿದ್ದು ಗಾಯಗೊಂಡಿರುವ ಅನೇಕ ಉದಾಹರಣೆಗಳಿವೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸಂಜೆ ವೇಳೆಯಲ್ಲಿ ಈ ಮಾರ್ಗದಲ್ಲಿ ಹೆಚ್ಚಿನ ಬಸ್‌ಗಳ ವ್ಯವಸ್ಥೆ ಕಲ್ಪಿಸುವ ಮೂಲಕ ಪ್ರಯಾಣಿಕರ ಹಿತ ಕಾಪಾಡಬೇಕು.

-ಪವನ್, ಗುಂಡ್ಲುಪೇಟೆ

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ | ಕಿಕ್ಕೇರಿ ಕೆರೆಗೆ ಕೆಎಸ್‌ನ ಹೆಸರು ನಾಮಕರಣ ಶ್ಲಾಘನೀಯ

ಕನ್ನಡಕ್ಕೆ ಶ್ರೇಷ್ಠ ದಾಂಪತ್ಯ ಗೀತೆಗಳನ್ನು ನೀಡಿದ, ಪ್ರೇಮಕವಿಯೆಂದೇ ಹೆಸರಾದ ನಾಡಿನ ಹಿರಿಯ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಗೌರವಾರ್ಥವಾಗಿ ಹುಟ್ಟೂರಾದ ಕಿಕ್ಕೇರಿಯ…

28 mins ago

ಓದುಗರ ಪತ್ರ | ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಿ

ಮೈಸೂರಿನಲ್ಲಿ ಸ್ವಲ್ಪ ಮಳೆಯಾದರೂ ರೂಪಾನಗರ ಬಡಾವಣೆಯಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತದೆ. ರಾತ್ರಿ ವೇಳೆ ಮಳೆ ಬಂದರಂತೂ ವಿದ್ಯುತ್ ಸಂಪರ್ಕಕಲ್ಪಿಸುವುದು ಬೆಳಿಗ್ಗೆಯೇ.…

30 mins ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ ; ಬಿಜೆಪಿಗೆ ತಮಿಳುನಾಡು, ಪಶ್ಚಿಮ ಬಂಗಾಳವೇ ತಲೆನೋವು

ದೆಹಲಿ ಕಣ್ಣೋಟ ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಕಳೆದ ಒಂದೂವರೆ ತಿಂಗಳಿಂದ ನಡೆಸುತ್ತಿರುವ ಯುದ್ಧದಿಂದ ಉಂಟಾಗಿರುವ ಇಂಧನ ಮತ್ತು ಅನಿಲ…

53 mins ago

ನನ್ನ ಮೊದಲ ಕವಿತೆಯ ಕಥೆ….

ಕನ್ನಡದ ನಾಲ್ವರು ಖ್ಯಾತ ಕವಿಗಳು ತಮ್ಮ ಮೊದಲ ಕವಿತೆಯ ನೆನಪಲ್ಲಿ ಹೇಗೆ ಕಳೆದು ಹೋಗಿದ್ದಾರೆ ನೋಡಿ. ಬಹುಶಃ, ಮೊದಲ ಕವಿತೆ…

1 hour ago

ಅಣ್ಣಯ್ಯ ಸೇರಿ ಐವರಿಗೆ ಅಂಬೇಡ್ಕರ್‌ ಪ್ರಶಸ್ತಿ

ಬೆಂಗಳೂರು : ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ರಾಜ್ಯ ಸರ್ಕಾರದಿಂದ ನೀಡಲಾಗುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್…

2 hours ago

ಮೂಡದ ಒಮ್ಮತ : ಅಮೆರಿಕ-ಇರಾನ್ 21 ಗಂಟೆಗಳ ಮಾತುಕತೆ ವಿಫಲ

ಇಸ್ಲಾಮಾಬಾದ್ : ಪಶ್ಚಿಮ ಏಷ್ಯಾ ಸಂಘರ್ಷ ತಗ್ಗಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ ಮತ್ತು ಇರಾನ್ ನಡುವಿನ 21…

2 hours ago