Andolana originals

ಓದುಗರ ಪತ್ರ: ನಮ್ಮ ‘ನಂದಿನಿ’ ನಮ್ಮ ಹೆಮ್ಮೆ

ಉತ್ಪನ್ನಗಳ ಗುಣಮಟ್ಟವನ್ನು ಸ್ವತಂತ್ರವಾಗಿ ಪರೀಕ್ಷಿಸುವ ಖ್ಯಾತ ಟ್ರಸ್ಟಿಫೈಡ್ ಸಂಸ್ಥೆಯು ಕರ್ನಾಟಕದ ಜನಪ್ರಿಯ ‘ನಂದಿನಿ’ ತುಪ್ಪವನ್ನು ಕಠಿಣ ಲ್ಯಾಬ್ ಪರೀಕ್ಷೆಗೆ ಒಳಪಡಿಸಿದ್ದು, ಅದರ ವರದಿಯ ಪ್ರಕಾರ ನಂದಿನಿ ತುಪ್ಪವು ಶುದ್ಧತೆ ಹಾಗೂ ಕೀಟನಾಶಕಮುಕ್ತ ಎಂಬ ಎರಡೂ ಪ್ರಮುಖ ಮಾನದಂಡಗಳಲ್ಲಿ ಸಂಪೂರ್ಣವಾಗಿ ತೇರ್ಗಡೆಯಾಗಿದೆ.

ಯಾವುದೇ ಹಾನಿಕಾರಕ ಕೀಟನಾಶಕಗಳ ಅಂಶವಿಲ್ಲದೆ, ನೈಸರ್ಗಿಕ ಶುದ್ಧತೆಯಿಂದ ಕೂಡಿದೆ ಎಂದು ದೃಢಪಡಿಸಿರುವ ವರದಿಯನ್ನು ಉಖಿಸಿ ಖ್ಯಾತ ನ್ಯೂಟ್ರಿಷನಿಸ್ಟ್ ಊರ್ವಶಿ  ಅಗರ್ವಾಲ್ ಅವರು ತಮ್ಮ ‘ಬನೊ ನ್ಯೂಟ್ರಿಸ್ಮಾರ್ಟ್’ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವುದು ಸಂತಸದ ವಿಚಾರ.

೫ ಪ್ರಮುಖ ಬ್ರಾಂಡ್‌ಗಳ ತುಪ್ಪದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನಿಗದಿಪಡಿಸಿರುವ ಸುರಕ್ಷಿತ ಮಿತಿಗಿಂತಲೂ ಅಧಿಕ ಪ್ರಮಾಣದ ರಾಸಾಯನಿಕ ಅಂಶಗಳು ಪತ್ತೆಯಾಗಿ ಲ್ಯಾಬ್ ಟೆಸ್ಟ್ ದೃಢಪಡಿಸಿರುವ ವರದಿಯ ವಿಷಯವನ್ನು ಊರ್ವಶಿ ಅಗರ್ವಾಲ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ, ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ನಂದಿನಿ ದೇಶದ ಅತ್ಯುತ್ತಮ ಶುದ್ಧ ತುಪ್ಪ ಎಂದು ಸಾಬೀತಾಗಿರುವುದು ಕರ್ನಾಟಕಕ್ಕೆ ಹೆಮ್ಮೆ ತರುವ ವಿಷಯವಾಗಿದೆ. ಇತ್ತೀಚಿನ ದಿನಗಳಲ್ಲಿ ಕಲಬೆರಕೆ ವಿಚಾರ ಸಾಕಷ್ಟು ಮುನ್ನೆಲೆಗೆ ಬಂದಿರುವ ಸಂದರ್ಭದಲ್ಲೇ ನಂದಿನಿಯ ಗುಣಮಟ್ಟದ ಶ್ರೇಷ್ಠತೆ ಸಾಬೀತಾಗಿರುವುದು ಖುಷಿಯಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡಿಗರು ಹಾಗೂ ಗ್ರಾಹಕರು ನಂದಿನಿ ತುಪ್ಪದ ಗುಣಮಟ್ಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಮೆಚ್ಚುವಂತದ್ದು. ಈಗ ಹೇಳಬೇಕಿದೆ ‘ನಮ್ಮ ನಂದಿನಿ ನಮ್ಮ ಹೆಮ್ಮೆ’.

-ಬೆಸಗರಹಳ್ಳಿ ರವಿಪ್ರಸಾದ್, ಮೈಸೂರು

ಆಂದೋಲನ ಡೆಸ್ಕ್

Recent Posts

‘40 ವರ್ಷದ ಗೆಳೆತನಕ್ಕೆ ಬಿರುಕು ಸಾಧ್ಯವೇ ಇಲ್ಲ’: ಸಂಸದ ಸುನಿಲ್‌ ಬೋಸ್‌

ಮೈಸೂರು: ಸಿದ್ದರಾಮಯ್ಯ ಮತ್ತು ಮಹದೇವಪ್ಪ ನಡುವೆ ಮುನಿಸು ಮೂಡಿದೆ ಎಂಬ ವರದಿಗಳಿಗೆ ಸಂಸದ ಸುನಿಲ್‌ ಬೋಸ್‌ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಇಬ್ಬರದ್ದು…

21 hours ago

ವಾಹನ ಸವಾರರಿಗೆ ಗುಡ್‌ ನ್ಯೂಸ್‌: ಇನ್ಮುಂದೆ ಪದೇ ಪದೇ ಮಾಲಿನ್ಯ ತಪಾಸಣೆ ಮಾಡಿಸಬೇಕಿಲ್ಲ

ನವದೆಹಲಿ: ನಿಮ್ಮ ಖಾಸಗಿ ಕಾರು ಅಥವಾ ಬೈಕ್‌ ಬಿಎಸ್‌-6 ಮಾದರಿಯದ್ದೇ? ಹಾಗಿದ್ದರೆ ಮಾಲಿನ್ಯ ತಪಾಸಣೆಯ ಅವಧಿಯಲ್ಲಿ ನಿಮಗೊಂದು ಸಿಹಿಸುದ್ದಿ ಇದೆ.…

21 hours ago

ಕರ್ನಾಟಕದಲ್ಲಿ ಇನ್ನೆರಡು ದಿನ ಚಳಿ ಹೆಚ್ಚುವ ಸಾಧ್ಯತೆ, ವಿಜಯಪುರದಲ್ಲಿ 12.9°C ದಾಖಲು

ಬೆಂಗಳೂರು: ಕರ್ನಾಟಕದಲ್ಲಿ ಇನ್ನೆರಡು ದಿನ ಚಳಿ ಹೆಚ್ಚಾಗುವ ಸಾಧ್ಯತೆಯಿದೆ. ನವೆಂಬರ್‌ 20ರ ಹವಾಮಾನ ವರದಿ ಪ್ರಕಾರ, ರಾಜ್ಯದ ಬಯಲು ಪ್ರದೇಶಗಳ ಪೈಕಿ…

21 hours ago

ಬಾಂಗ್ಲಾದೇಶದಲ್ಲಿ ಹಿಂಸಾಚಾರ: ಯೂನಸ್‌ ಮನೆಗೆ ಬೆಂಕಿ, ಘರ್ಷಣೆಗಳಲ್ಲಿ ನಾಲ್ವರು ಸಾವು

ಢಾಕಾ: ಬಾಂಗ್ಲಾದೇಶದಲ್ಲಿ ಮತ್ತೆ ರಾಜಕೀಯ ಉದ್ವಿಗ್ನತೆ ಭುಗಿಲೆದ್ದಿದೆ. ಅವಾಮಿ ಲೀಗ್‌ ಕರೆ ನೀಡಿದ್ದ ಪ್ರತಿಭಟನೆಗೂ ಮುನ್ನ ನಡೆದ ಘರ್ಷಣೆಗಳಲ್ಲಿ ನಾಲ್ವರು…

21 hours ago

ಒಡಿಶಾ ಕರಾವಳಿಗೆ ‘ಅಕ್ವಾನ್’ ಭೀತಿ: 1.2 ಲಕ್ಷಕ್ಕೂ ಹೆಚ್ಚು ಜನರ ಸ್ಥಳಾಂತರ, 69 ರೈಲು ರದ್ದು

ಒಡಿಶಾ: ‘ಅಕ್ವಾನ್’ ಚಂಡಮಾರುತದ ಹಿನ್ನೆಲೆಯಲ್ಲಿ ಒಡಿಶಾದಲ್ಲಿ 1 ಲಕ್ಷ 20 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಚಂಡಮಾರುತದ…

21 hours ago

ವ್ಯಕ್ತಿ ಮೇಲೆ ಕಾಡುಕೋಣ ದಾಳಿ : ಸಾವು

ಮಂಡ್ಯ : ಹಸು ಮೇಯಿಸಲು ಆರಣ್ಯದಂಚಿಗೆ ತೆರಳಿದ್ದ ವೃದ್ಧರೊಬ್ಬರ ಮೇಲೆ ಕಾಡುಕೋಣ ಏಕಾಏಕಿ ದಾಳಿ ನಡೆಸಿದ ಪರಿಣಾ ಮ ಅವರು…

21 hours ago