ಓದುಗರ ಪತ್ರ
ಮೈಸೂರಿನ ಮುಖ್ಯ ರೈಲ್ವೆ ನಿಲ್ದಾಣದಲ್ಲಿರುವ ಎಸ್ಕಲೇಟರ್ ಕೇವಲ ತೋರಿಕೆಗೆ ಮಾತ್ರ ಇದೆ ಎನಿಸುತ್ತದೆ. ಒಂದನೇ ಪ್ಲಾಟ್ ಫಾರ್ಮ್ ಬಿಟ್ಟರೆ ಉಳಿದ ಪ್ಲಾಟ್ ಫಾರ್ಮ್‌ಗಳಿಗೆ, ಪ್ರಯಾಣಿಕರು ಹೋಗಲು, ಹಿರಿಯ ನಾಗರಿಕರು ಹೆಂಗಸರು ಮಕ್ಕಳು ಈ ಎಸ್ಕಲೇಟರ್‌ನ್ನು ಉಪಯೋಗಿಸುತ್ತಾರೆ. ಆದರೆ ದಿನದ ಬಹುಪಾಲು ಸಮಯದಲ್ಲಿ ಈ ಎಸ್ಕಲೇಟರ್ ಚಾಲನೆಯಲ್ಲಿರುವುದಿಲ್ಲ. ಬೆಳಿಗ್ಗೆ ಒಂದೆರಡು ಗಂಟೆಗಳ ಕಾಲ ಮಾತ್ರ ಕಾರ್ಯನಿರ್ವಹಿಸುತ್ತದೆ. ಇದರಿಂದಾಗಿ, ಹಿರಿಯ ನಾಗರಿಕರು, ಹೆಂಗಸರು, ಮಕ್ಕಳು ಹಂತಗಳನ್ನು ಹತ್ತಿಯೇ ಹೋಗಬೇಕು. ಇದರಿಂದಾಗಿ ಕೆಲವು ಸಲ ರೈಲುಗಳನ್ನು ಸರಿಯಾದ ಸಮಯಕ್ಕೆ ಹಿಡಿಯಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಈ ಎಸ್ಕಲೇಟರ್‌ನ ಕೀ ಇಲ್ಲಿನ ಕಾವಲುಗಾರನ ಬಳಿ ಇರುತ್ತದೆ. ಆತ ಕಾಫಿ -ಟೀ ಗೆ ಹೋದಾಗ ಈ ಸಮಸ್ಯೆ ಇದೆ ಎನ್ನುತ್ತಾರೆ. ಆದರೆ ಇತ್ತೀಚೆಗೆ ಈ ಎಸ್ಕಲೇಟರ್ ಸರಿಯಾಗಿ ಚಾಲನೆಯಲ್ಲಿರುವುದಿಲ್ಲ, ದಿನದ ೨೪ ಗಂಟೆಯೂ ಈ ಎಸ್ಕಲೇಟರ್ ಚಾಲನೆಯಲ್ಲಿ ಇರುವಂತೆ ರೈಲ್ವೆ ಅಽಕಾರಿಗಳು ಕ್ರಮಕೈಗೊಳ್ಳಬೇಕು.
-ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನಲ್ಲಿ ಅಂತರ್ಜಲ ಹೆಚ್ಚಿಸಿ ಕುಡಿಯುವ ನೀರು…
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಂದು ದಾಖಲೆಯ 17ನೇ ಬಜೆಟ್‌ಅನ್ನು ಮಂಡನೆ ಮಾಡಿದ್ದಾರೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್ ಹಾಗೂ…
ಬೆಂಗಳೂರು: ಎಲ್ಲಾ ಜಿಲ್ಲೆಗಳಲ್ಲೂ ಅಕ್ಕಪಡೆ ಯೋಜನೆ ಜಾರಿಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು. ಸಿಎಂ ಸಿದ್ದರಾಮಯ್ಯ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಳೆದ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಕ್ಷೇತ್ರದ ಜನರಿಗೆ ಭರವಸೆ ನೀಡಿದಂತೆ…
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ ದೊಡ್ಡ ಬದಲಾವಣೆ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ವಿಧಾನಸಭಾ ಕ್ಷೇತ್ರದ ಉಡುತೊರೆ ಹಳ್ಳ ಏತ ನೀರಾವರಿ ಯೋಜನೆಯ 490…