ಓದುಗರ ಪತ್ರ
ಹೊಸ ವರ್ಷದ ಆಗಮನವೆಂದರೆ ಬಣ್ಣಬಣ್ಣದ ದೀಪಗಳ ಅಲಂಕಾರ, ಸಿಹಿ ವಿತರಣೆ ಅಥವಾ ಮಧ್ಯರಾತ್ರಿಯ ಸಂಭ್ರಮಾಚರಣೆಯಷ್ಟೇ ಅಲ್ಲ. ಅದು ಕಾಲ ಚಕ್ರದ ತಿರುವಿನಲ್ಲಿ ನಡೆಸುವ ಆತ್ಮಾವಲೋಕನ. ಪ್ರತಿ ವರ್ಷವೂ ನಾವು ಮಾಡುವ ಸಂಕಲ್ಪಗಳು ಕೇವಲ ವೈಯಕ್ತಿಕ ಬೆಳವಣಿಗೆಯಷ್ಟೇ ಅಲ್ಲದೆ, ಸಾಮಾಜಿಕ ಜವಾಬ್ದಾರಿಯನ್ನೂ ಒಳಗೊಂಡಿರಬೇಕು. ನಾವೆಲ್ಲರೂ ಮಾಡಿಕೊಳ್ಳಲೇಬೇಕಾದ ಮೊದಲ ಸಂಕಲ್ಪವೆಂದರೆ ‘ಸಮಯದ ಸದುಪಯೋಗ’. ವೃಥಾ ಕಾಲಹರಣವನ್ನು ಬಿಟ್ಟು ಸೃಜನಶೀಲ ಕೆಲಸಗಳಲ್ಲಿ ತೊಡಗಿಸಿ ಕೊಳ್ಳೋಣ. ಎರಡನೆಯದಾಗಿ, ‘ಪರಿಸರಕಾಳಜಿ’. ನಮ್ಮ ಮನೆಯ ಅಂಗಳದಿಂದ ಹಿಡಿದು ಸಾರ್ವಜನಿಕ ಸ್ಥಳಗಳವರೆಗೆ ಸ್ವಚ್ಛತೆಯನ್ನು ಕಾಪಾಡುವುದು ಮತ್ತು ಗಿಡಗಳನ್ನು ಬೆಳೆಸುವ ಮೂಲಕ ಪ್ರಕೃತಿಯನ್ನು ಗೌರವಿಸುವುದು ನಮ್ಮ ಆದ್ಯತೆಯಾಗಲಿ.
ತಂತ್ರಜ್ಞಾನದ ಅತಿಯಾದ ಹಾವಳಿಯಿಂದಾಗಿ ಮರೆಯಾಗುತ್ತಿರುವ ‘ಮಾನವೀಯ ಸಂಬಂಧಗಳನ್ನು’ ಮರಳಿ ಬೆಳೆಸೋಣ. ಮೊಬೈಲ್ ಪರದೆಯ ಮೇಲಿನ ಸಂಭಾಷಣೆಗಿಂತ, ಎದುರು ಕುಳಿತ ವ್ಯಕ್ತಿಯ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ ಸಹಜತೆ ನಮ್ಮದಾಗಲಿ. ಅಸೂಯೆ, ದ್ವೇಷದ ಬದಲಿಗೆ ಪರಸ್ಪರ ಸಹಕಾರ ಮತ್ತು ಸಹನೆಯಿಂದ ಬದುಕುವುದು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ.
ಬದಲಾವಣೆ ಜಗತ್ತಿನ ನಿಯಮ. ಆದರೆ ಆ ಬದಲಾವಣೆ ಸಕಾರಾತ್ಮಕವಾಗಿರಬೇಕಾದರೆ ನಮ್ಮ ಸಂಕಲ್ಪಗಳು ದೃಢವಾಗಿರಬೇಕು. ದೊಡ್ಡ ಗುರಿಗಳ ಬೆನ್ನುಹತ್ತುವ ಮೊದಲು, ಸಣ್ಣ ತಪ್ಪುಗಳನ್ನೂ ತಿದ್ದಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡೋಣ. ಈ ಹೊಸ ಕ್ಯಾಲೆಂಡರ್ ವರ್ಷ ನಮಗೆ ಕೇವಲ ಹೊಸ ದಿನಗಳನ್ನಷ್ಟೇ ಅಲ್ಲ, ಹೊಸ ದೃಷ್ಟಿಕೋನವನ್ನೂ ನೀಡಲಿ.
-ಬಿ.ಗಣೇಶ, ಕೆ.ಜಿ.ಕೊಪ್ಪಲು, ಮೈಸೂರು
ಚಾಮರಾಜನಗರ : ತಾಲ್ಲೂಕಿನ ನಂಜೇದೇವಪುರ ಬಳಿ ನಾಲ್ಕು ಮರಿಗಳ ಜೊತೆ ತಾಯಿ ಹುಲಿ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವುಗಳ ಸೆರೆಗಾಗಿ ಕೂಂಬಿಂಗ್…
ಮೈಸೂರು : ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಲ್ಲಿಕಾರ್ಜುನ ಬಾಲದಂಡಿ ಗುರುವಾರ ಅಧಿಕಾರ ಸ್ವೀಕಾರ ಮಾಡಿದರು. ಮಂಡ್ಯ ಜಿಲ್ಲೆಯ ಎಸ್‌ಪಿ…
ಗುಂಡ್ಲುಪೇಟೆ: ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಿ ಏಳು ಬಾರಿ ಶಾಸಕಿ ,ಸಚಿವೆಯಾಗಿ ಮೊದಲ ಮಹಿಳಾ ಸ್ಪೀಕರ್ ಆದಂತಹ ಗಟ್ಟಿಗಿತ್ತಿ ಕೆ.ಎಸ್.ನಾಗರತ್ನಮ್ಮ ಅವರ…
ಗುಂಡ್ಲುಪೇಟೆ: ಪಟ್ಟಣದ ಕೂತನೂರು ಗುಡ್ಡ ಹಾಗೂ ತೆರಕಣಾಂಬಿ ಭಾಗದಿಂದ ಅಧಿಕ ಭಾರಹೊತ್ತು ಸಾಗುವ ಟಿಪ್ಪರ್ ಗಳ ಸಂಚಾರ ನಡೆಸುತಿದ್ದರು ಆರ್…
ಗುಂಡ್ಲುಪೇಟೆ: ಮೋಟರ್ ಆನ್ ಮಾಡುವ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ಕೂಲಿ ಕಾರ್ಮಿಕ ಮೃತಪಟ್ಟಿರುವ ಘಟನೆ ತಾಲೂಕಿನ ತೆರಕಣಾಂಬಿ ಗ್ರಾಮದ ತೋಟವೊಂದರಲ್ಲಿ…
ಬೆಂಗಳೂರು : 2026ರ ಹೊಸವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ಯಾವುದೆ ಅಹಿತಕರ ಘಟನೆ ನಡೆಯದೆ ಸುರಕ್ಷಿತವಾಗಿ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ.…