Andolana originals

ಓದುಗರ ಪತ್ರ: ಕಗತ್ತಲಲ್ಲಿ ಮುಳುಗುತ್ತಿವೆ  ಮೈಸೂರಿನ ಹೆದ್ದಾರಿಗಳು

ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಮೈಸೂರು- ಹುಣಸೂರು ರಸ್ತೆಯ ಹಿನಕಲ್ ಭಾಗದಲ್ಲಿ ಬೀದಿ ದೀಪಗಳು ಕೆಟ್ಟು ತಿಂಗಳುಗಳೇ ಕಳೆದಿದ್ದು, ಕಗ್ಗತ್ತಲು ಆವರಿಸಿದೆ.

ಮೈಸೂರು ನಗರಪಾಲಿಕೆಯ ಅಧಿಕಾರಿಗಳಾಗಲಿ, ಚುನಾಯಿತ ಪ್ರತಿನಿಧಿಗಳಾಗಲಿ, ಸ್ಥಳೀಯ ಗ್ರಾಮ ಪಂಚಾಯಿತಿಯ ಅಧಿಕಾರಿಗಳಾಗಲೀ ಇತ್ತ ಗಮನ ಕೊಡದೆ ನಿರ್ಲಕ್ಷ  ವಹಿಸುತ್ತಿರುವುದು ವಿಪರ್ಯಾಸವೇ ಸರಿ. ಐಶ್ವರ್ಯ ಪೆಟ್ರೋಲ್ ಬಂಕ್‌ನಿಂದ ಹೂಟಗಳ್ಳಿ ಸಿಗ್ನಲ್‌ವರೆಗೂ ಇದೇ ಸಮಸ್ಯೆ ಇದ್ದು, ಜನರು ಕಗ್ಗತ್ತಲಿನಲ್ಲಿಯೇ ಓಡಾಡಬೇಕಾಗಿದೆ. ಅಲ್ಲದೆ ಈ ರಸ್ತೆಯಲ್ಲಿ ದಿನದ ೨೪ ಗಂಟೆಯೂ ವಾಹನ ದಟ್ಟಣೆ ಇರುವುದರಿಂದ ಸಂಜೆಯ ವೇಳೆ ಜನರು ಹಿನಕಲ್, ಹೂಟಗಳ್ಳಿ ಅಥವಾ ಬೆಳವಾಡಿಯ ಕಡೆಗೆ ತೆರಳಲು ಈ ಹೆದ್ದಾರಿಯನ್ನು ದಾಟಬೇಕಿದ್ದು, ಜೀವ ಕೈಯಲ್ಲಿ ಹಿಡಿದುಕೊಂಡು ಆತಂಕದಲ್ಲಿಯೇ ರಸ್ತೆ ದಾಟಬೇಕಿದೆ. ಹೆದ್ದಾರಿಯಲ್ಲೇ ಬೀದಿ ದೀಪಗಳು ಕೆಟ್ಟು ನಿಂತರೆ, ಇನ್ನು ಇತರೆ ರಸ್ತೆಗಳ ಪಾಡೇನು? ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಈ ಬಗ್ಗೆ ಗಮನಹರಿಸಿ ಬೀದಿ ದೀಪಗಳನ್ನು ಸರಿಪಡಿಸಬೇಕಿದೆ.

ಆರ್.ಯಶಸ್, ವಿಜಯನಗರ, ಮೈಸೂರು.

ಆಂದೋಲನ ಡೆಸ್ಕ್

Recent Posts

ಪ್ರಧಾನಿ ನರೇಂದ್ರ ಮೋದಿಗೆ ಮನವಿ ಪತ್ರ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮಂಡ್ಯಕ್ಕೆ ಆಗಮಿಸಲು ಬೆಂಗಳೂರಿಗೆ ಬಂದಿಳಿದಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಸಿದ್ದರಾಮಯ್ಯ ಮನವಿ ಪತ್ರ ಸಲ್ಲಿಸಿದ್ದಾರೆ. ಇಂದು…

24 mins ago

ಅಮೇರಿಕಾ-ಇರಾನ್‌ ಸಂಧಾನ: ಪಾಕ್‌ನಲ್ಲೇ 2ನೇ ಸುತ್ತಿನ ಮಾತುಕತೆ

ವಾಷಿಂಗ್ಟನ್:‌ ಇರಾನ್‌ ಜೊತೆ ಎರಡನೇ ಸುತ್ತಿನ ಮಾತುಕತೆ ಮುಂದಿನ ಎರಡು ದಿನಗಳಲ್ಲಿ ನಡೆಯಬಹುದು ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌…

38 mins ago

2 ಕ್ಷೇತ್ರಗಳ ಉಪಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ: ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲೂ ನಾವೇ ಗೆಲುವು ಸಾಧಿಸುತ್ತೇವೆ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕುರಿತು…

51 mins ago

ಹನೂರು ತಾಲ್ಲೂಕಿನ ಗ್ರಾಮಗಳಿಗೆ ಜಿಲ್ಲಾಧಿಕಾರ ಶ್ರೀರೂಪ ಭೇಟಿ: ಗ್ರಾಮಸ್ಥರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಾಣೆ,…

53 mins ago

ಯುವಕರಲ್ಲಿ ಮಾನವೀಯತೆ ಹೆಚ್ಚಬೇಕು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಸರಿಯಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಮುಖ್ಯಮಂತ್ರಿ…

2 hours ago

ಚಾಮುಂಡಿ ಬೆಟ್ಟ ರಸ್ತೆಯ ತಾವರೆಕಟ್ಟೆ ಬಳಿ ವ್ಯಕ್ತಿಯ ಶವ ಪತ್ತೆ

ಮೈಸೂರು: ಚಾಮುಂಡಿಬೆಟ್ಟ ರಸ್ತೆಯ ತಾವರೆಕಟ್ಟೆ ಬಳಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಂದಾಜು 40 ವರ್ಷ…

2 hours ago