ಅಪ್ರಾಪ್ತ ವಯಸ್ಸಿನ ಮಕ್ಕಳ ಅಶ್ಲೀಲ ಚಿತ್ರಗಳನ್ನು ಡೌನ್‌ಲೋಡ್ ಮಾಡುವುದು, ವೀಕ್ಷಿಸುವುದು, ಹಂಚಿಕೊಳ್ಳುವುದು ಮಾತ್ರವಲ್ಲದೆ ಅವುಗಳನ್ನು ಯಾವುದೇ ಡಿಜಿಟಲ್ ಸಾಧನಗಳಲ್ಲಿ ಶೇಖರಿಸಿಟ್ಟುಕೊಳ್ಳುವುದೂ ಪೋಕ್ಸೊ ಕಾಯಿದೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆಯಡಿ ಅಪರಾಧ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದು ಸ್ವಾಗತಾರ್ಹ.
ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗುವುದು, ಲೈಂಗಿಕ ಆಸಕ್ತಿಗಳನ್ನು ಅವರಲ್ಲಿ ಬಿಂಬಿಸಿ ಅವುಗಳನ್ನು ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣ ಹಾಗೂ ಇತರೆ ಫೋರ್ನ್ ವೆಬ್‌ಸೈಟ್‌ಗಳಲ್ಲಿ ಹಂಚುವುದು ನಿಜಕ್ಕೂ ಬಹುದೊಡ್ಡ ಅಪರಾಧ. ಮಕ್ಕಳ ಮೇಲೆ ಎಸಗುವ ಲೈಂಗಿಕ ದೌರ್ಜನ್ಯಗಳು ಅವರಲ್ಲಿ ಸೈಕೋಪಥಾಲಜಿ ಸೇರಿದಂತೆ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಪರಿಣಾಮಗಳನ್ನು ಬೀರುತ್ತವೆ. ಖಿನ್ನತೆ, ಆತಂಕ, ಅಸ್ವಸ್ಥತೆ, ನಿದ್ರಾಭಂಗ ಸೇರಿದಂತೆ ಅವರು ಆಘಾತದಲ್ಲಿಯೇ ಬದುಕು ದೂಡುವಂತಾಗಬಹುದು.
ಅಲ್ಲದೆ ಆ ಮಗು ಸಮಾಜದಲ್ಲಿ ಎಲ್ಲರೊಂದಿಗೆ ಬೆರೆತು ಬದುಕಲು ಹಿಂಜರಿಯುವಂತೆ ಮಾಡಿರುತ್ತದೆ. ಅಲ್ಲದೆ ಮಕ್ಕಳ ದೈಹಿಕ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರಿ ಅವರು ವಿವಿಧ ಸೋಂಕುಗಳಿಗೆ ತುತ್ತಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ದುರುಳರಿಗೆ ಕಾನೂನಿನಡಿ ತಕ್ಕ ಶಿಕ್ಷೆ ಆಗಲೇಬೇಕಿದೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಉತ್ತಮವಾದ ತೀರ್ಪನ್ನೇ ನೀಡಿದೆ.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ಹುಣಸೂರು : ರಾಜ್ಯದಲ್ಲೇ ಜಾನುವಾರುಗಳ ಪ್ರಮುಖ ಜಾತ್ರೆಯಲ್ಲೊಂದಾದ ಹುಣಸೂರು ತಾಲೂಕಿನ ರತ್ನಪುರಿ(ದರ್ಗ)ಯಲ್ಲಿ ಹಿಂದೂ-ಮುಸ್ಲಿಮರ ಭಾವೈಕ್ಯತೆ ಮೆರೆವ ಶ್ರೀ ಅಂಜನೇಯ ಸ್ವಾಮಿಯ…
ಚಾಮರಾಜನಗರ : ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್ ಅವರು ದೀಢಿರ್‌ಭೇಟಿ ನೀಡಿ, ವಿವಿಧ…
ಮೈಸೂರು : ಅರಣ್ಯ ಇಲಾಖೆ ಇರಿಸಿದ ಬೋನಿನಲ್ಲಿ ನಾಲ್ಕು ವರ್ಷದ ಗಂಡು ಚಿರತೆ ಸೆರೆಯಾಗಿದೆ. ಸರಗೂರು ತಾಲ್ಲೂಕಿನ ಎನ್.ಬೆಳತ್ತೂರು ಹಳೆ…
ಮೈಸೂರು : ದೇವರಗುಡ್ಡ ಮತ್ತು ಬ್ಯಾಡಗಿ ನಡುವಿನ ಎಲ್ಸಿ ಸಂಖ್ಯೆ 222 ರಲ್ಲಿ ತಾತ್ಕಾಲಿಕ ಗರ್ಡರ್‌ಗಳನ್ನು ಸೇರಿಸಲು ಮತ್ತು ತೆಗೆದುಹಾಕಲು…
ಮೈಸೂರು : ನಗರದ ಎನ್‌ಐಇ ಕಾಲೇಜು ಹಿಂಭಾಗದ ಅರಣ್ಯ ಇಲಾಖೆಯ ಶ್ರೀಗಂಧದ ಕೋಠಿ ಆವರಣದಲ್ಲಿ ಕ್ವಾರ್ಟರ್ಸ್ ಕಟ್ಟಡ ನಿರ್ಮಾಣಕ್ಕಾಗಿ ಹತ್ತಾರು…
ಮೈಸೂರು : ಕರ್ನಾಟಕದ ಕಲಾ-ಶಿಲ್ಪ ಪರಂಪರೆಯು ಮತ್ತೊಮ್ಮೆ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಮೈಸೂರಿನ ಖ್ಯಾತ ಕರಕುಶಲ ಶಿಲ್ಪಿ ಕೈಸರ್…