ಓದುಗರ ಪತ್ರ
ಮಂಡ್ಯದ ಪಾಂಡವಪುರ ತಾಲ್ಲೂಕಿನ ಡಿಂಕ ಗ್ರಾಮದ ಮಹಿಳೆ ಮಂಗಳಮ್ಮ ೨೦೨೫ರ ದಕ್ಷಿಣ ಡೇರಿ ಶೃಂಗ ಸಭೆಯಲ್ಲಿ ಅತ್ಯುತ್ತಮ ಹೈನುಗಾರ್ತಿ ಪ್ರಶಸ್ತಿ ಪಡೆದಿರುವುದು ರಾಜ್ಯವೇ ಹೆಮ್ಮೆ ಪಡುವ ವಿಚಾರ.
ಮಂಗಳಮ್ಮ ಓದಿದ್ದು ಕೇವಲ ೫ನೇ ತರಗತಿ ಯಾದರೂ ಹೈನುಗಾರಿಕೆಯಲ್ಲಿ ಸಂಪೂರ್ಣ ಜ್ಞಾನವನ್ನು ಹೊಂದಿದ್ದಾರೆ. ೨೦ ವರ್ಷಗಳ ಹಿಂದೆ ಕೇವಲ ಒಂದು ಹಸುವಿನಿಂದ ಹೈನುಗಾರಿಕೆ ಪ್ರಾರಂಭಿಸಿದ ಇವರು ಇಂದು ೩೦ ಹೈಬ್ರಿಡ್ ತಳಿಯ ಹಸುಗಳನ್ನು ಸಾಕಿ ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಒಂದು ಲಕ್ಷ ಲೀಟರ್‌ಗೂ ಅಧಿಕ ಹಾಲನ್ನು ಉತ್ಪಾದಿಸಿ ಡಿಂಕ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸರಬರಾಜು ಮಾಡುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಆ ಮೂಲಕ ಒಂದು ವರ್ಷದಲ್ಲಿ ೩೦ ಲಕ್ಷ ರೂಪಾಯಿ ಆದಾಯವನ್ನೂ ಗಳಿಸಿದ್ದಾರೆ.
ಮಂಗಳಮ್ಮನವರ ಸತತ ಪ್ರಯತ್ನ, ಕೆಲಸದ ಮೇಲಿನ ಶ್ರದ್ಧೆ ಫಲ ನೀಡಿದೆ. ಮಹಿಳೆಯರು ಸ್ವಾವಲಂಬಿಯಾಗಿ ಶ್ರಮಪಟ್ಟು ದುಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಮಂಗಳಮ್ಮರವರೇ ಮಾದರಿ. ಹೈನುಗಾರಿಕೆ ಮಾಡುವವರು ಮಂಗಳಮ್ಮನವರನ್ನು ಮಾದರಿಯಾಗಿ ಅನುಸರಿಸಿ ಅವರಂತೆ ಶ್ರಮಿಸಬೇಕು. ಸರ್ಕಾರ ಇವರ ಸಾಧನೆಯನ್ನು ಗುರುತಿಸಿ ಕರ್ನಾಟಕದ ಪ್ರತಿಷ್ಠಿತ ನಂದಿನಿ ಹಾಲಿನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಬೇಕು.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಳೆದ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಕ್ಷೇತ್ರದ ಜನರಿಗೆ ಭರವಸೆ ನೀಡಿದಂತೆ…
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ ದೊಡ್ಡ ಬದಲಾವಣೆ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ವಿಧಾನಸಭಾ ಕ್ಷೇತ್ರದ ಉಡುತೊರೆ ಹಳ್ಳ ಏತ ನೀರಾವರಿ ಯೋಜನೆಯ 490…
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಂದು ದಾಖಲೆಯೆ 17ನೇ ರಾಜ್ಯ ಬಜೆಟ್ ಅನ್ನು ಮಂಡನೆ ಮಾಡಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನ ಸಂಚಾರ…
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ವಿವಿಧ ಇಲಾಖೆಗಳಿಗೆ ಭರ್ಜರಿ ಅನುದಾನ ಹಂಚಿಕೆ ಮಾಡಲಾಗಿದೆ. ಶಿಕ್ಷಣ ಇಲಾಖೆಗೆ…
ಬೆಂಗಳೂರು: ಸಾಂಸ್ಕೃತಿಕ ನಗರಿ ಮೈಸೂರನ್ನು ಕರ್ನಾಟಕದ ಎರಡನೇ ಅತಿದೊಡ್ಡ ಐಟಿ ಸಿಟಿಯನ್ನಾಗಿ ಅಭಿವೃದ್ಧಿಪಡಿಸಲು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. 17ನೇ…