ಓದುಗರ ಪತ್ರ
ಹುಣಸೂರು ಮುಖ್ಯ ರಸ್ತೆಯಲ್ಲಿರುವ ಇಲವಾಲ, ಬೆಳವಾಡಿ, ಹೂಟ ಗಳ್ಳಿ, ಹಿನಕಲ್ ಸೇರಿದಂತೆ ಮೈಸೂರು ನಗರದೊಳಗೂ ಸಂಚರಿಸುವ ಟಾಟಾ ಕಂಪೆನಿಯ ಮ್ಯಾಜಿಕ್ ಆಟೋ ಚಾಲಕರು, ಸಾರ್ವಜನಿಕರು ಹೇಳಿದ ಜಾಗಕ್ಕೆ ಬಿಟ್ಟು, ಇಂತಿಷ್ಟು ಹಣ ಪಡೆದು ನಿತ್ಯ ಅಷ್ಟೋ ಇಷ್ಟೋ ಬಾಡಿಗೆ ದುಡಿಯುತಿದ್ದಾರೆ. ಇವರಲ್ಲಿ ಕೆಲವು ಚಾಲಕರು ಆಟೋ ಭರ್ತಿಯಾಗಿದ್ದರೂ, ದುರಾಸೆಯಿಂದ ಮತ್ತಷ್ಟು ಜನರನ್ನು ಹತ್ತಿಸಿ ಕೊಂಡು ಫುಟ್ ಬೋರ್ಡ್ ಮೇಲೆ ನಿಲ್ಲಿಸಿ ಕೊಂಡು ಹೋಗುತ್ತಾರೆ. ಈ ವೇಳೆ ಫುಟ್ ಬೋರ್ಡ್ ಮುರಿದೋ ಅಥವಾ ಹಳ್ಳಕೊಳ್ಳ ಬಂದಾಗ ಪ್ರಯಾಣಿಕರು ಕಾಲು ಜಾರಿ ಬಿದ್ದರೆ, ಪ್ರಾಣಹಾನಿಯಾಗುವ ಸಂಭವವೇ ಹೆಚ್ಚು! ಜೊತೆಗೆ, ಹಿಂದೆ ಬರುವ ವಾಹನ ಸವಾರರಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಸಂಚಾರ ಪೊಲೀಸರು ಈ ಆಟೋ ಚಾಲಕರು ಜನರನ್ನು ಕರೆದೊಯ್ಯಲು ಸೂಕ್ತ ನಿಯಮ ರೂಪಿಸಿ, ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಹೇಳಬೇಕು, ನಿಯಮಗಳನ್ನು ಪಾಲಿಸದಿದ್ದರೆ ದಂಡ ವಿಧಿಸುವ ಕ್ರಮ ಕೈಗೊಂಡು ಅನಾಹುತಗಳನ್ನು ತಪ್ಪಿಸಬೇಕು.
-ಬಿ. ಗಣೇಶ, ಕೆ.ಜಿ.ಕೊಪ್ಪಲು, ಮೈಸೂರು
ಗುವಹಾಟಿ : ಆರಂಭದಲ್ಲಿ ಬೌಲರ್‌ಗಳ ಅಬ್ಬರ ನಂತರ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಅರ್ಧಶತಕದ ಆಟದಿಂದ ಚೆನ್ನೈ ಸೂಪರ್ ಕಿಂಗ್ಸ್…
ಮೈಸೂರು: ನಗರದ ಪ್ರತಿಷ್ಠಿತ ಮೈಸೂರು ರೇಸ್ ಕ್ಲಬ್ ಸದಸ್ಯರಾಗಿ ಗೀತಿಕಾ ಬಸಪ್ಪ (152 ಮತ), ಡಾ.ಕೆ.ರವಿ (147), ಕಲೆಂಗಡ ಮಂದಣ್ಣ…
ಬೆಂಗಳೂರು : ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಯಾಣವು ಡಿಜಿಟಲ್ ರೂಪಾಂತರದ ಹೊಸ್ತಿಲಲ್ಲಿದ್ದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು…
ಟೆಹ್ರಾನ್ : ಅಮೆರಿಕದೊಂದಿಗೆ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಯಾವುದೇ ನೇರ ಮಾತುಕತೆ ನಡೆದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಇರಾನ್ ವಿದೇಶಾಂಗ…
ವಾಷಿಂಗ್ಟನ್ : ಹಾರ್ಮುಜ್ ಜಲಸಂಧಿಯನ್ನು ತಕ್ಷಣ ತೆರೆಯದಿದ್ದರೆ ಇರಾನ್‌ನ ಎಲ್ಲ ತೈಲ ಬಾವಿಗಳು ಮತ್ತು ಖಾರ್ಗ್ ದ್ವೀಪಗಳನ್ನು ಸಂಪೂರ್ಣವಾಗಿ ನಾಶಪಡಿಸುವುದಾಗಿ…
ಬೆಂಗಳೂರು : ದೇಶದಲ್ಲಿ ಮೊದಲ ಬಾರಿಗೆ ಮಕ್ಕಳಿಗೆ ಮೀಸಲಾಗಿ 450 ಹಾಸಿಗೆಗಳ ಬೃಹತ್, ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಇಂದಿರಾ…