ಸಂತಸ – ಸಂಕಟ
ನಿನ್ನೆ ಗೆದ್ದ ಸಂತಸ…
ಇಂದು ಸತ್ತ ಸಂಕಟ…
ಪಂದ್ಯವಾಗಿತ್ತು ರಣ ರೋಚಕ…
ಮಂದಿಗೀಗ ಸಾವಿನ ಸೂತಕ!
ತಡರಾತ್ರಿಯೆಲ್ಲ ಬಾನಂಗಳದಲ್ಲಿ
ಚುಕ್ಕಿಗಳ ನಾಚಿಸುವ ಚಮಕು!
ತುಡಿತದ ತುಳಿತಕ್ಕೆ ಸಿಕ್ಕವರಿಗೆ
ಮಸಣದ ಹಾದಿಗೆ ಬೆಳಕು!
ಹಸುಗೂಸೋ ಹದಿವಯಸೋ
ಯಾವುದೊಂದನ್ನೂ ನೋಡಲಿಲ್ಲ
ಅಭಿಮಾನದ ಕಿ(ಹು)ಚ್ಚು….!
ಅಂಗಾಲಿನಡಿ ಸಿಲುಕಿದ್ದವರೆಲ್ಲ
ಕಂಗಳ ರೆಪ್ಪೆ ಮಿಟುಕಿಸುವಷ್ಟರಲ್ಲೇ
ಚೆಲ್ಲಿದರು ಉಸಿರು…..!
ಇದಕ್ಕೀಗ ಅಭಿಮಾನವೆನ್ನುವುದೋ
ರಾಜಕೀಯದ ಲೇ(ಲೋ)ಪ ಎನ್ನುವುದೋ…!
ಏನೂ ಹೇಳಲಾಗದ ಪರಿಸ್ಥಿತಿ…!
ಸಂತಸ – ಸಂಕಟ ಒಂದೇ ನಾಣ್ಯದ
ಎರಡು ಮುಖಗಳಿದ್ದಂತೆ….!
ಅಷ್ಟೇ….!
– ಎಸ್. ಶ್ರೀಕರ





