Andolana originals

ಓದುಗರ ಪತ್ರ: ಸರ್ಕಾರಿ ಶಾಲೆಗಳ ನಿರ್ವಹಣೆ ನಮ್ಮೆಲ್ಲರ ಹೊಣೆಯಾಗಲಿ

ಚಿಕ್ಕಮಗಳೂರು ಜಿಲ್ಲೆ ಮಾಚಗೊಂಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ಶಿಕ್ಷಕಿಯರು ತಮ್ಮ ಸ್ವಂತ ಖರ್ಚಿನಲ್ಲಿ (೨.೫೦ ಲಕ್ಷ ರೂ.) ಶಾಲೆಯಲ್ಲಿ ಬೋರ್ ವೆಲ್ ಕೊರೆಸಿದ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಶಿಕ್ಷಕಿಯರ ಕಾರ್ಯ ಶ್ಲಾಘನೀಯವಾಗಿದೆ. ಮಕ್ಕಳ ಭವಿಷ್ಯಕ್ಕಾಗಿ ಚಿಂತಿಸುವ ಇಂತಹ ಶಿಕ್ಷಕರು ಸಿಗುವುದೇ ಬಹಳ ಅಪರೂಪ. ಇವರಿಬ್ಬರ ಮಾದರಿಯ ನಡೆ ಎಲ್ಲರಿಗೂ ಆದರ್ಶನೀಯ. ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳು ಹಲವು ಮೂಲಭೂತ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿವೆ. ಕುಡಿಯುವ ನೀರು, ಶೌಚಾಲಯ, ಆಸನ ವ್ಯವಸ್ಥೆ, ಆಟದ ಮೈದಾನ, ಉತ್ತಮ ಕಟ್ಟಡ, ಶೈಕ್ಷಣಿಕ ಉಪಕರಣಗಳು ಮತ್ತು ಶಿಕ್ಷಕರ ಕೊರತೆ ಮುಂತಾದವುಗಳು ಶಾಲೆಯಲ್ಲಿನ ಶೈಕ್ಷಣಿಕ ಗುಣಮಟ್ಟವನ್ನು ಕುಗ್ಗಿಸುತ್ತಿವೆ.

ಅಲ್ಲದೆ ಈ ಕಾರಣಗಳಿಂದಲೇ ನಮ್ಮ ಸರ್ಕಾರಿ ಶಾಲೆಗಳು, ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಸೆಳೆಯುವಲ್ಲಿ ವಿಫಲವಾಗುತ್ತಿವೆ. ಇಷ್ಟಕ್ಕೂ ಸರ್ಕಾರಿ ಶಾಲಾ ಸಮಸ್ಯೆ ಗಳನ್ನು ಸರ್ಕಾರವೇ ನಿವಾರಣೆ ಮಾಡಲಿ ಎಂಬ ಧೋರಣೆ ತಪ್ಪಬೇಕಿದೆ. ನಮ್ಮ ಸರ್ಕಾರಿ ಶಾಲೆಗಳ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಮಾಜದ ಪ್ರತಿಯೊಬ್ಬರೂ ಸರ್ಕಾರದೊಂದಿಗೆ ಕೈಜೋಡಿಸಬೇಕಾದುದು ಅಗತ್ಯವಾಗಿದೆ.

-ಹರಳಹಳ್ಳಿ ಪುಟ್ಟರಾಜು,ಪಾಂಡವಪುರ.

ಆಂದೋಲನ ಡೆಸ್ಕ್

Recent Posts

ರಾಜ್ಯದಲ್ಲಿ ಇಂದು ಹಾಗೂ ನಾಳೆ ಧಾರಾಕಾರ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡು ವಾರಗಳಿಂದ ಚದುರಿದಂತೆ ಅಲ್ಲಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ಇಂದು ಮತ್ತು ನಾಳೆಯೂ ಕೂಡ ಧಾರಾಕಾರ…

3 mins ago

ಮೈಸೂರು| ಅನಧಿಕೃತ ಕಟ್ಟಡಗಳೆಂದು ಮನೆ ಧ್ವಂಸ: ಕಂಗಾಲಾದ ಸಂತ್ರಸ್ತರು

ಮೈಸೂರು: ಇಲ್ಲಿನ ಸುಯೇಜ್‌ ಫಾರಂ ಸಮೀಪದಲ್ಲಿ ಅನಧಿಕೃತ ಕಟ್ಟಡಗಳೆಂದು ಅಧಿಕಾರಿಗಳು ಜೆಸಿಬಿಗಳ ಮೂಲಕ ಮನೆಗಳನ್ನು ಧ್ವಂಸ ಮಾಡಿದ್ದು, ಹತ್ತಾರು ಬಡ…

26 mins ago

ವಿರೋಧದ ನಡುವೆಯು ಜಾತಿ ಗಣತಿ ವರದಿ ಮಂಡನೆ ಸಾಧ್ಯತೆ

ಬೆಂಗಳೂರು: ಸಾಕಷ್ಟು ಪರ-ವಿರೋಧದ ಚರ್ಚೆಗಳ ನಡುವೆ ಜಾತಿಗಣತಿ ವರದಿಯನ್ನು ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ…

50 mins ago

ತಾಯಿ ಮಕ್ಕಳ ಅಸ್ಪತ್ರೆಗೆ ಬೇಬಿ ವಾರ್ಮರ್ ಕೊಡುಗೆ ನೀಡಿದ ರಾಜಮಾತೆ ಪ್ರಮೋದಾದೇವಿ ಒಡೆಯರ್‌

ಗುಂಡ್ಲುಪೇಟೆ: ಪಟ್ಟಣದ ತಾಯಿ ಮಕ್ಕಳ ಅಸ್ಪತ್ರೆಗೆ ಗುಣಾಂಭ ಟ್ರಸ್ಟ್ ವತಿಯಿಂದ ರಾಜಮಾತೆ ಪ್ರಮೋದಾದೇವಿ ಅವರು 20 ಮಕ್ಕಳ ವಾರ್ಮರ್ ಮತ್ತು…

59 mins ago

ಮೈಸೂರು| ಗ್ಯಾಸ್ ಸಿಲಿಂಡರ್‌ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ಮೈಸೂರು: ಗ್ಯಾಸ್‌ ಸಿಲಿಂಡರ್‌ ದರ ಏರಿಕೆ ಖಂಡಿಸಿ ಮೈಸೂರಿನಲ್ಲಿಂದು ಜಿಲ್ಲಾ ಯೂತ್‌ ಕಾಂಗ್ರೆಸ್‌ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಜಿಲ್ಲಾ…

1 hour ago

ಪಕ್ಷ ಸಂಘಟನೆ ಮಾಡದವರು ನಿವೃತ್ತಿ ಹೊಂದಲಿ: ಮಲ್ಲಕಾರ್ಜುನ ಖರ್ಗೆ

ಅಹಮಾದಾಬಾದ್:‌ ಪಕ್ಷದ ಬಲವರ್ಧನೆ ಹಾಗೂ ಸಂಘಟನೆಯಲ್ಲಿ ಯಾರು ಕೆಲಸ ಮಾಡುವುದಿಲ್ಲವೋ ಅಂತಹವರು ಪಕ್ಷದಿಂದ ನಿವೃತ್ತಿ ಹೊಂದಲಿ ಎಂದು ಎಐಸಿಸಿ ಅಧ್ಯಕ್ಷ…

1 hour ago