Andolana originals

ಓದುಗರ ಪತ್ರ: ಗುಣಮಟ್ಟದ ಕಾಮಗಾರಿ ನಡೆಯಲಿ

ಮೈಸೂರಿನ ಹಳೆಯ ಜಿಲ್ಲಾಧಿಕಾರಿಗಳ ಕಚೇರಿಯು ಪಾರಂಪರಿಕ ಸಂಗ್ರಹಾಲಯವಾಗುತ್ತಿದ್ದು, 23ನೇ ಮೈಸೂರು ಮಹಾರಾಜರಾಗಿದ್ದ 10ನೇ ಚಾಮರಾಜ ಒಡೆಯರ್ ಆಡಳಿತದಲ್ಲಿ ನಿರ್ಮಿಸಿದ್ದ 129 ವರ್ಷಗಳ ಹಳೆಯ ಕಟ್ಟಡವನ್ನು ಪಾರಂಪರಿಕ ಸಂಗ್ರಹಾಲಯವನ್ನಾಗಿ ರೂಪಿಸುತ್ತಿರುವುದು ಶ್ಲಾಘನೀಯ.
ಕೇಂದ್ರ ಸರ್ಕಾರದ ಸ್ವದೇಶ್ 20 ಯೋಜನೆಯಡಿ ರಾಜಮನೆತನದ ಆಡಳಿತವನ್ನು ಬಿಂಬಿಸುವ ಪಾರಂಪರಿಕ ಸಂಗ್ರಹಾಲಯವನ್ನಾಗಿ ರೂಪುಗೊಳಿಸುವ ಕಾಮಗಾರಿಗೆ ಡಿಪಿಆರ್‌ ಅನುಮೋದನೆಯಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಯೋಜನೆಗೆ 80 ಕೋಟಿ ರೂ. ಅನುದಾನ ಮಂಜೂರು ಮಾಡಿರುವುದು ಅಭಿನಂದನಾರ್ಹ. ಕರ್ನಾಟಕ ಪ್ರವಾಸೋದ್ಯರು ಮೂಲಸೌಕರ್ಯ ಅಭಿವೃದ್ಧಿ ನಿಗಮವು ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಏಜೆನ್ಸಿಯಾಗಿದ್ದು, ಕೃಷ್ಣರಾಜ ಬುಲೇ ವಾರ್ಡ್ ರಸ್ತೆಯನ್ನು ಪಾರಂಪರಿಕ ರಸ್ತೆಯನ್ನಾಗಿ ಹಾಗೂ ಡಿ.ದೇವರಾಜ ಅರಸು ರಸ್ತೆಯ ಜೆಎಲ್‌ಬಿ ರಸ್ತೆ ಜಂಕ್ಷನ್ ನಿಂದ ಹಳೆಯ ಜಿಲ್ಲಾಧಿಕಾರಿ ಕಚೇರಿವರೆಗೆ ದಾಹನ ಸಂಚಾರವನ್ನು ನಿಷೇಧಿಸಿ ಪಾದಾಚಾರಿ ಮಾರ್ಗಗಳನ್ನಾಗಿ ರೂಪಿಸುವ ಕೆಲಸವೂ ಮೆಚ್ಚುವಂತದ್ದು. ಈ ಯೋಜನೆಯಡಿ ಮೈಸೂರಿನ ಹೆರಿಟೇಜ್ ಟಾಂಗಾ ರೈಡ್, ಮೈಸೂರಿನ ಸಾಂಪ್ರದಾಯಿಕ ತಿನಿಸು, ತಿಂಡಿ ಹಾಗೂ ಪಾನೀಯಗಳು ಸಿಗುವುದರ ಜೊತೆಗೆ ಸಾಂಸ್ಕೃತಿಕ ನಗರಿಯ ಹಿನ್ನೆಲೆ, ಇತಿಹಾಸ ಹಾಗೂ ಗತವೈಭವದ ಮಾಹಿತಿಯೊಂದಿಗೆ ಅನನ್ಯ ಅನುಭವಗಳನ್ನು ತಮ್ಮದಾಗಿಸುವ ಅವಕಾಶ ಕಲ್ಪಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ.ಕೆ.ವಿ.ರಾಜೇಂದ್ರ ತಿಳಿಸಿರುವುದು ಸ್ವಾಗತಾರ್ಹ. ಸ್ವದೇಶ್‌ 2.0 ಯೋಜನೆಯಡಿ ಮಂಜೂರಾಗಿರುವ 80 ಕೋಟಿ ರೂ. ಅನುದಾನವನ್ನು ಸದುಪಯೋಗಪಡಿಸಿಕೊಂಡು ಗುಣಮಟ್ಟದ ಕಾಮಗಾರಿಯಾಗುವಂತೆ ನೋಡಿಕೊಳ್ಳಬೇಕು ಎಂಬುದು ಮೈಸೂರಿನ ಜನತೆಯ ಆಶಯ.
-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು.

ಆಂದೋಲನ ಡೆಸ್ಕ್

Recent Posts

ಡ್ರ್ಯಾಗನ್‌ ಪಾಂಡ್‌ ಉದ್ಘಾಟಿಸಿದ ಸಿಎಂ ; ಲೇಸರ್‌ನಲ್ಲಿ ಸಿದ್ಧರಾಮಯ್ಯ ಯಶೋಗಾಥೆ

ಮೈಸೂರು : ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ವತಿಯಿಂದ ಭಾರತದಲ್ಲೇ ಪ್ರಥಮವಾಗಿ ನಿರ್ಮಿಸಲಾಗಿರುವ ರಾಜೀವ್ ಗಾಂಧಿ ಡ್ರಾಗನ್ ಪಾಂಡ್‌ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ…

9 hours ago

ದಿಲ್ಲಿ ಗಲಭೆ ಪ್ರಕರಣ | ಉಮರ್‌ ಖಾಲಿದ್‌, ಶಾರ್ಜೀಲ್‌ ಇಮಾನ್‌ ಜಾಮೀನಿಗೆ ಸುಪ್ರೀಂ ನಕಾರ

ಹೊಸದಿಲ್ಲಿ : 2020ರ ದೆಹಲಿ ಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಜೆಎನ್‍ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್…

10 hours ago

ದೇವರಾಜ ಅರಸು ಎಲ್ಲಿ? ಇವರೆಲ್ಲಿ? : ಸಿದ್ದರಾಮಯ್ಯ ವಿರುದ್ಧ ಎಚ್‌ಡಿಕೆ ಆಕ್ರೋಶ

ಬೆಂಗಳೂರು : ಸಿ.ಎಂ.ಸಿದ್ದರಾಮಯ್ಯ ಅವರು ದೇವರಾಜು ಅರಸು ದಾಖಲೆ ಮುರಿಯುತ್ತಾರಂತೆ. ಯಾವ ಭಾಗ್ಯಕ್ಕೆ ಇದೆಲ್ಲಾ? ರಾಜ್ಯದ ಪರಿಸ್ಥಿತಿ ನೋಡಿದರೆ ಈ…

10 hours ago

ಕೋಗಿಲು ಲೇಔಟ್‌ನಲ್ಲಿ ಅಕ್ರಮ ವಲಸಿಗರು ಇದ್ದದ್ದು ನಿಜ : ಸಚಿವ ಕೃಷ್ಣಬೈರೇಗೌಡ

ಬೆಂಗಳೂರು : ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿರುವ ಬೆಂಗಳೂರು ನಗರದ ಕೋಗಿಲು ಲೇಔಟ್‍ನಲ್ಲಿ ವಲಸಿಗರು ಅನಧಿಕೃತವಾಗಿ…

11 hours ago

ʻವೆಲ್ ಸ್ಪೋರ್ಟ್ಸ್ʼ ಮೂಲಕ ಹೊಸ ಅಧ್ಯಾಯ ಆರಂಭಿಸಿದ ಚಿನ್ನದ ಹುಡುಗ ʼನೀರಜ್ ಚೋಪ್ರಾʼ

ಬೆಂಗಳೂರು : ಚಿನ್ನದ ಹುಡುಗ ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ ಮತ್ತು JSW ಸ್ಪೋರ್ಟ್ಸ್ ಸೋಮವಾರ ತಮ್ಮ ಅಧಿಕೃತ ಪಾಲುದಾರಿಕೆಯನ್ನು…

11 hours ago