Andolana originals

ಓದುಗರ ಪತ್ರ: ಉಳ್ಳವರಿಗೊಂದು ನ್ಯಾಯ, ಜನಸಾಮಾನ್ಯರಿಗೊಂದು ನ್ಯಾಯವೇ?

ಕೃಷ್ಣ ಮೃಗ ಬೇಟೆಯಾಡಿದ ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್‌ನನ್ನು ಪೊಲೀಸ್ ವಶಕ್ಕೆ ಪಡೆಯುವಂತೆ ಮುಂಬೈ ನ್ಯಾಯಾಲಯ ಆದೇಶ ನೀಡಿತ್ತು. ಆದರೆ ಮುಂಬೈನ ಉನ್ನತ ನ್ಯಾಯಾಲಯ ಸಲ್ಮಾನ್ ಖಾನ್ ಬಂಧನಕ್ಕೂ ಮೊದಲೇ ಅವರಿಗೆ ಜಾಮೀನು ನೀಡಿತು. ಅಂತಹದ್ದೇ ಪ್ರಕರಣ ಈಗ ಮರುಕಳಿಸಿದ್ದು, ಉಳ್ಳವರಿಗೆ ಒಂದು ಕಾನೂನು ಬಡವರಿಗೆ ಒಂದು ಕಾನೂನು ಇದೆಯೇ ಎಂಬ ಪ್ರಶ್ನೆ ಮೂಡಿಸಿದೆ.

ನಟ ಅಲ್ಲು ಅರ್ಜುನ್ ನಟನೆಯ ಪುಷ್ಪ-೨ ಸಿನಿಮಾ ಪ್ರದರ್ಶನದ ವೇಳೆ ಯಾವುದೇ ಮಾಹಿತಿ ನೀಡದೆ ಚಿತ್ರ ಮಂದಿರಕ್ಕೆ ಅಲ್ಲು ಅರ್ಜುನ್ ಏಕಾಏಕಿ ಭೇಟಿ ನೀಡಿದ್ದರಿಂದ ನೂಕುನುಗ್ಗಲು ಉಂಟಾಗಿ ಕಾಲ್ತುಳಿತದಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಆಕೆಯ ೯ ವರ್ಷದ ಮಗನೂ ಗಂಭೀರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿ ಡಿ.೧೩ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಆದರೆ ಉನ್ನತ ನ್ಯಾಯಾಲಯ ಆತನಿಗೆ ಅಂದೇ ಜಾಮೀನು ಮಂಜೂರು ಮಾಡಿತು. ಇಂತಹ ಪ್ರಕರಣಗಳನ್ನು ಗಮನಿಸಿದರೆ ನ್ಯಾಯಾಲಯಗಳ ಈ ಶೀಘ್ರ ತೀರ್ಪಿನ ಕ್ರಮ ಜನಸಾಮಾನ್ಯರ ಪ್ರಕರಣಗಳಲ್ಲಿ ಏಕಿಲ್ಲ ಎಂಬ ಪ್ರಶ್ನೆ ಮೂಡುತ್ತದೆ. ಜನಸಾಮಾನ್ಯರ ಪ್ರಕರಣಗಳು ನ್ಯಾಯಾಲಯಕ್ಕೆ ಬರುವುದೇ ತಡವಾಗುತ್ತದೆ. ಬಂದರೂ ಜಾಮೀನು ಸಿಗಲು ಅಥವಾ ಪ್ರಕರಣದ ತೀರ್ಪು ಹೊರಬರಲು ದಶಕವೇ ಬೇಕಾಗಬಹುದು. ಇನ್ನು ಮೃತ ಮಹಿಳೆಯ ಬಗ್ಗೆ ಕಿಂಚಿತ್ತೂ ಕರುಣೆ ತೋರದ ಅನೇಕ ರಾಜಕಾರಣಿಗಳು ಅಲ್ಲು ಅರ್ಜುನ್ ಪರವಾಗಿ ಮಾತನಾಡಿದ್ದು, ನಟನ ಬಂಧನವನ್ನು ಖಂಡಿಸಿದ್ದಾರೆ. ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಕೂಡ ರಾಷ್ಟ್ರ ಪ್ರಶಸ್ತಿ ಪಡೆದ ನಟನನ್ನು ಬಂಽಸಿರುವುದು ಪೊಲೀಸರ ಅಮಾನವೀಯ ನಡೆ ಎಂದಿದ್ದಾರೆ. ಇಂತಹ ಬೆಳವಣಿಗೆಗಳು ಜನಸಾಮಾನ್ಯರಿಗೆ ನ್ಯಾಯ ದೊರಕುತ್ತದೆ ಎಂಬ ಭರವಸೆಯನ್ನು ದೂರಾಗಿಸುತ್ತವೆ.

-ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು.

ಆಂದೋಲನ ಡೆಸ್ಕ್

Recent Posts

ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದ ಮೊಗಿಲಯ್ಯ ವಿಧಿವಶ

ಹೈದರಾಬಾದ್:‌ ಟಾಲಿವುಡ್‌ ಚಲನಚಿತ್ರ ಬಳಗಂ ಮೂಲಕ ಪ್ರಖ್ಯಾತಿ ಗಳಿಸಿದ್ದ ಜನಪ್ರಿಯ ಜಾನಪದ ಕಲಾವಿದ ದರ್ಶನಂ ಮೊಗಿಲಯ್ಯ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ.…

13 mins ago

ರಾಜಕೀಯ ಅಧಿಕಾರ ಹಿಡಿಯಲು ಅಂಬೇಡ್ಕರ್‌ ಹೆಸರು ಬಳಕೆ: ಸಿದ್ದರಾಮಯ್ಯ ವಿರುದ್ಧ ಆರ್‌.ಆಶೋಕ್‌ ವಾಗ್ದಾಳಿ

ಬೆಂಗಳೂರು: ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಕುರಿತಂತೆ ಗೃಹ ಸಚಿವ ಅಮಿತ್‌ ಶಾ ನೀಡಿರುವ ಹೇಳಿಕೆಗೆ ರಾಜ್ಯದ ಮುಖ್ಯಮಂತ್ರಿ ಸಿಎಂ…

26 mins ago

ಕಾಶ್ಮೀರದಲ್ಲಿ ಭರ್ಜರಿ ಬೇಟೆಯಾಡಿದ ಭಾರತೀಯ ಸೇನೆ: ಐವರು ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಐವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಬೇಹಿಬಾಗ್‌…

41 mins ago

ಅಪರಿಚಿತ ವಾಹನ ಡಿಕ್ಕಿ: ಜಿಂಕೆ ಸಾವು

ಮಡಿಕೇರಿ: ಅಪರಿಚಿತ ವಾಹನ ಡಿಕ್ಕಿಯಾಗಿ ಜಿಂಕೆಯೊಂದು ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದೆ. ಮಡಿಕೇರಿಯ ಹಾರಂಗಿ ಜ್ಞಾನಗಂಗಾ ಶಾಲೆಯ…

59 mins ago

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆಗೆ ತಮಿಳು ನಟ ವಿಜಯ್‌ ಆಕ್ರೋಶ

ಚೆನ್ನೈ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.‌ಅಂಬೇಡ್ಕರ್‌ ಕುರಿತು ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಹೇಳಿಕೆ ಕುರಿತು ತಮಿಳು…

1 hour ago

ಸಾಹಿತ್ಯ ಸಮ್ಮೇಳನಕ್ಕೆ ಬರುವವರಿಗೆ ಸಿಹಿ ಸುದ್ದಿ ನೀಡಿದ ಕೆಎಸ್‌ಆರ್‌ಟಿಸಿ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಾಳೆಯಿಂದ ಆರಂಭವಾಗುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವವರಿಗೆ ಕೆಎಸ್‌ಆರ್‌ಟಿಸಿ ಸಿಹಿ…

2 hours ago