ಓದುಗರ ಪತ್ರ
ಇತ್ತೀಚಿನ ದಿನಗಳಲ್ಲಿ ಸತಿ-ಪತಿ ಸಂಬಂಧ ವಿಚ್ಛೇದನದಲ್ಲಿ ಕೊನೆಯಾಗುತ್ತಿರುವುದು ಮಾಮೂಲಿ ಎನ್ನುವಂತಾಗಿದೆ. ಅನೈತಿಕ ಸಂಬಂಧಗಳಿಂದ ಬೇರೆ ಆಗುತ್ತಿರುವ ಹಲವು ಪ್ರಕರಣಗಳು ಮಾಧ್ಯಮಗಳ ಮೂಲಕ ಬೆಳಕಿಗೆ ಬರುತ್ತಿದೆ.
ಸತಿ-ಪತಿಗಳೆಂದರೆ ಜೀವನದ ಸಂಸಾರ ಬಂಡಿಯಲ್ಲಿರುವ ಎರಡು ಗಾಲಿಗಳಂತೆಎಂದು ನಮ್ಮ ಹಿರಿಯರು ಹೇಳಿದ್ದಾರೆ. ಈ ಬಂಡಿಯಲ್ಲಿ ಒಂದು ಗಾಲಿ ಮುರಿದರೂ ಜೀವನ ಎಂಬ ಸಂಸಾರದ ಬಂಡಿ ಹಾದಿ ತಪ್ಪುತ್ತದೆ. ಪ್ರಪಂಚದಲ್ಲಿ ಎಲ್ಲಕ್ಕಿಂತ ದೊಡ್ಡ ಸಂಬಂಧ ಅಂದರೆ ಅದು ಸತಿ-ಪತಿ ಸಂಬಂಧ. ಅಂತಹ ಸಂಬಂಧವನ್ನು ಇತ್ತೀಚಿನ ದಿನಗಳಲ್ಲಿ ವಾಕ್ ಸ್ವಾತಂತ್ರ್ಯದ ನೆಪವೊಡ್ಡಿ ಅರ್ಥ ಹೀನ ಮಾಡುತ್ತಿರುವುದು ಅವಿವೇಕಿತನ.
ವರದಕ್ಷಿಣೆ ಕಿರುಕುಳ, ಅಕ್ರಮ ಸಂಬಂಧದಿಂದ ಹೆಂಡತಿ ಆತ್ಮಹತ್ಯೆ, ಪ್ರಿಯಕರನಿಗಾಗಿ ಗಂಡ ಮಕ್ಕಳ ಹತ್ಯೆಗೆ ಸಂಚು, ಅಕ್ರಮ ಸಂಬಂಧಕ್ಕೆಬೇಸತ್ತು ಹೆಂಡತಿಯ ರುಂಡವನ್ನು ಬೇರ್ಪಡಿಸಿದ ಪತಿ, ಪ್ರಿಯಕರನ ಜತೆ ಓಡಿ ಹೋದ ಪತ್ನಿ ಇಂತಹ ವಿಚಾರಗಳಿಂದ ಸತಿ-ಪತಿ ಸಂಬಂಧ ಹದಗೆಟ್ಟು ಈ ಸಂಬಂಧಗಳಿಗೆ ಅರ್ಥವೇ ಇಲ್ಲದಂತಾಗಿದೆ. ಸತಿ-ಪತಿಗಳು ಈ ವಿಷಯವಾಗಿ ವಿಚಾರ ಮಾಡಿ ಅನ್ಯೋನ್ಯತೆಯಿಂದ ಬಾಳುವ ಮೂಲಕ ಪವಿತ್ರ ಬಾಂಧವ್ಯವನ್ನು ಕಾಪಾಡಬೇಕಾಗಿದೆ.
– ಪಿ.ಸಿ.ಕಂಗಾಣಿ ಸೋಮು, ಕ್ಯಾತಮಾರನಹಳ್ಳಿ, ಮೈಸೂರು
ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣದ ತನಿಖೆಯ ಅಂತಿಮ ವರದಿಯನ್ನು ನಿವೃತ್ತ ನ್ಯಾಯಮೂರ್ತಿ ಮೈಕೆಲ್…
ಮೈಸೂರು: ಹೊಸ ವರ್ಷದ ಹಿನ್ನೆಲೆಯಲ್ಲಿ ಇಂದು ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ದೇವಿಯ…
ಮೈಸೂರು: 2026ರ ಮೊದಲ ದಿನವಾದ ಇಂದು ನಾಡಿನ ಅಧಿದೇವತೆ ನೆಲೆಸಿರುವ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭಕ್ತಸಾಗರವೇ ಹರಿದುಬರುತ್ತಿದೆ. ಹೊಸ ವರ್ಷದ ಅಂಗವಾಗಿ…
ಮೈಸೂರು: ಹೊಸ ವರ್ಷ ಎಂದು ಮೋಜು ಮಸ್ತಿ ಮಾಡದೇ ರಸ್ತೆ ಬದಿಯ ನಿರಾಶ್ರಿತರಿಗೆ ಹೂದಿಕೆಗಳನ್ನು ನೀಡುವ ಮೂಲಕ ಯುವಕರ ತಂಡ…
ಮೈಸೂರು: ನೂತನ ವರ್ಷವನ್ನು ಮೈಸೂರಿನ ವಿಜಯನಗರದಲ್ಲಿರುವ ಯೋಗ ನರಸಿಂಹಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ತಿರುಪತಿ ಮಾದರಿ ಲಡ್ಡು ವಿತರಿಸುವ ಮೂಲಕ ಸ್ವಾಗತಿಸಲಾಯಿತು.…
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು, ದೇಶ ಹಾಗೂ ವಿಶ್ವದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಅಷ್ಟೇ ಅಲ್ಲದೇ…