ಕೊಲ್ಲಿ ಯುದ್ಧದ ನೆಪದಲ್ಲಿ ಬಂಡವಾಳಶಾಹಿಗಳು ಕೆಜಿಗೆ ರೂ. ೮೯ ಇದ್ದ ಆಟೋ ಗ್ಯಾಸ್ ಗ್ಯಾಸ್ ಅನ್ನು ರೂ. ೧೭೦ಕ್ಕೆ ಮಾರುತ್ತಾ ಹಗಲು ದರೋಡೆ ಮಾಡುತ್ತಿದ್ದರೂ ಸರ್ಕಾರ ಮೂಕ ಪ್ರೇಕ್ಷಕವಾಗಿದೆ. ಕಳೆದ ೪೦ ದಿನಗಳಿಂದ ಆಟೋ ಚಾಲಕರು ಗ್ಯಾಸ್ ಬಂಕ್‌ಗಳ ಮುಂದೆ ರಾತ್ರಿಯಿಡೀ ಕಾಯುತ್ತಿದ್ದು, ಅವರ ಕುಟುಂಬಗಳು ಉಪವಾಸ ಬೀಳುತ್ತಿವೆ. ಕೇವಲ ರೂ. ೫೦೦ ಮಿತಿಯ ಗ್ಯಾಸ್ ನೀಡುತ್ತಿರುವುದು ದುರಂತ.
ಇದು ಕೇವಲ ಇಂಧನ ಕೊರತೆಯಲ್ಲ. ಆಡಳಿತ ಯಂತ್ರದ ಸಂಪೂರ್ಣ ವೈಫಲ್ಯ ಹಾಗೂ ದಿವ್ಯ ನಿರ್ಲಕ್ಷ್ಯದ ಸಂಕೇತ. ಮಾರುಕಟ್ಟೆಯಲ್ಲಿನ ಈ ಅರಾಜಕತೆಯನ್ನು ತಡೆಗಟ್ಟಲು ಸರ್ಕಾರ ತಕ್ಷಣವೇ ಗ್ಯಾಸ್ ದರವನ್ನು ನಿಯಂತ್ರಿಸಿ ಕಾಳಸಂತೆಕೋರರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಬಡವರ ಹೊಟ್ಟೆ ಮೇಲೆ ಹೊಡೆಯುವ ಈ ದಬ್ಬಾಳಿಕೆ ನಿಲ್ಲದಿದ್ದರೆ, ಮುಂಬರುವ ದಿನಗಳಲ್ಲಿ ಬೀದಿಗಿಳಿದು ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಲಿ. ಸಾರ್ವಜನಿಕ ಸಾರಿಗೆಯ ಜೀವನಾಡಿಯಾಗಿರುವ ಆಟೋಗಳನ್ನು ನಂಬಿರುವ ಪ್ರಯಾಣಿಕರಿಗೂ ಇದರಿಂದ ತೀವ್ರ ತೊಂದರೆಯಾಗುತ್ತಿದ್ದು, ಪರ್ಯಾಯ ಇಂಧನ ಪೂರೈಕೆ ವ್ಯವಸ್ಥೆ ಕಲ್ಪಿಸಲು ಮೀನ ಮೇಷ ಎಣಿಸುತ್ತಿರುವ ಸರ್ಕಾರದ ನಡೆಯು ಅಕ್ಷಮ್ಯ ಅಪರಾಧವಾಗಿದೆ.
-ಡಾ.ಎಚ್.ಕೆ.ವಿಜಯಕುಮಾರ, ಬೆಂಗಳೂರು
ಇಸ್ಲಾಮಾಬಾದ್: ಪಶ್ಚಿಮ ಏಷ್ಯಾ ಯುದ್ಧವನ್ನು ಕೊನೆಗೊಳಿಸಲು ಇಸ್ಲಾಮಾಬಾದ್‌ನಲ್ಲಿ ಅಮೇರಿಕಾ-ಇರಾನ್ ನಡುವೆ ಕದನ ವಿರಾಮ ಮಾತುಕತೆ ನಡೆದಿದೆ. ಸಂಸದೀಯ ಸ್ಪೀಕರ್ ಮೊಹಮ್ಮದ್…
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಹೀಟ್ ವೇವ್ ಎಚ್ಚರಿಕೆ…
ಬೆಂಗಳೂರು: ಇಲ್ಲಿನ ಡಿ.ಜೆ.ಹಳ್ಳಿ ಬಳಿಯ ಶಾಂಪುರ ರಸ್ತೆಯಲ್ಲಿ ಕಿಡಿಗೇಡಿಯೊಬ್ಬ ಬೆಂಕಿ ಹಚ್ಚಿ ಆರು ಹಸುಗಳನ್ನು ಸಜೀವ ದಹನ ಮಾಡಿದ್ದ ಪ್ರಕರಣಕ್ಕೆ…
ನವದೆಹಲಿ: ಇದೇ ಏಪ್ರಿಲ್.15ರಿಂದ ಈ ವರ್ಷದ ಅಮರನಾಥ ಯಾತ್ರೆಗೆ ಮುಂಗಡ ನೋಂದಣಿ ಆರಂಭವಾಗಲಿದೆ. ಭಾರತದಾದ್ಯಂತ ಒಂದೇ ಸಮಯಕ್ಕೆ ಬುಕಿಂಗ್ ಪ್ರಾರಂಭವಾಗಲಿದ್ದು,…
ಕೊಡಗು: ಕಾಫಿ ತೋಟದಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬೇತ್ರಿ ಗ್ರಾಮದಲ್ಲಿ ನಡೆದಿದೆ.…
ನವದೆಹಲಿ: ಸಂಸತ್ತಿನ ಆವರಣದಲ್ಲಿ ಕಾರಿನಿಂದ ಇಳಿದು ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ…