ಇತ್ತೀಚಿನ ದಿನಗಳಲ್ಲಿ ಮೈಸೂರಿನಲ್ಲಿ ಹಣ,ಒಡವೆ ಕಳ್ಳತನ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. ಅಷ್ಟೇ ಅಲ್ಲದೆ ರಸ್ತೆಯಲ್ಲಿ ನಿಲ್ಲಿಸಿರುವ ದ್ವಿಚಕ್ರ ವಾಹನಗಳು ಹಾಗೂ ಇತರ ವಾಹನಗಳನ್ನು ಕಳ್ಳತನ ಮಾಡಲಾಗುತ್ತಿದೆ.
ರಸ್ತೆಗಳಲ್ಲಿ ಕೆಲ ಯುವಕರು ಗಲಾಟೆ ಮಾಡುತ್ತಾ ಕಿರುಚಾಡುತ್ತಾ ತೊಂದರೆ ಕೊಡುವುದು ಮಾಮೂಲಿ ಎಂಬಂತಾಗಿದೆ. ರಾತ್ರಿಯ ವೇಳೆಯಲ್ಲಿ ದುಬಾರಿ ಬೈಕ್‌ಗಳಲ್ಲಿ ಅತೀ ವೇಗವಾಗಿ ಚಾಲನೆ ಮಾಡುವ ಮೂಲಕ ಸಾರ್ವಜನಿಕರ ನೆಮ್ಮದಿಗೆ ಭಂಗ ತಂದಿದ್ದಾರೆ.
ಉದ್ಯಾನವನಗಳಲ್ಲಿ ಕುಳಿತು ಧೂಮಪಾನ, ಮದ್ಯಪಾನ ಮಾಡಿ ವಾತಾವರಣವನ್ನು ಹದಗೆಡಿಸಲಾಗುತ್ತಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರೀತಿ ಪ್ರೇಮದ ನೆಪದಲ್ಲಿ ಉದ್ಯಾನವನಗಳಲ್ಲಿಯೇ ಮೋಜು ಮಸ್ತಿ ಮಾಡುತ್ತಿದ್ದಾರೆ.
ಇದರಿಂದ ವಾಯುವಿಹಾರಕ್ಕೆ ಬರುವವರಿಗೆ ಮುಜುಗರವಾಗುತ್ತಿದೆ. ಇಂತಹ ಕೃತ್ಯಗಳನ್ನು ತಡೆಯಲು ರಸ್ತೆಗಳ ಬದಿ ಹಾಗೂ ಉದ್ಯಾನವನಗಳಲ್ಲಿ ಸಿ ಸಿ ಕ್ಯಾಮೆರಾಗಳನ್ನು ಅಳವಡಿಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಿದೆ.
– ನಾಗೇಶ್, ಮಾನಸಗಂಗೋತ್ರಿ, ಮೈಸೂರು
ಬೆಂಗಳೂರು : 2026ರ ಹೊಸವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ಯಾವುದೆ ಅಹಿತಕರ ಘಟನೆ ನಡೆಯದೆ ಸುರಕ್ಷಿತವಾಗಿ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ.…
ಮುಂಬೈ : ಐಪಿಎಲ್ ತಂಡವಾದ ಕೋಲ್ಕತ್ತಾ ನೈಟ್ ರೈಡರ್ಸ್ ( ಕೆಕೆಆರ್) ತಂಡಕ್ಕೆ ನೆರೆಯ ಬಾಂಗ್ಲಾದೇಶದ ಆಟಗಾರನನ್ನು ಖರೀದಿಸಿರುವ ಬಾಲಿವುಡ್…
ಹುಬ್ಬಳ್ಳಿ : ಮರ್ಯಾದೆಗೇಡು ಹತ್ಯೆ ಅಂತಹ ಘಟನೆ ತಡೆಗೆ ಮಾನ್ಯಾ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆ ಜಾರಿಗೊಳಿಸುವ ಬಗ್ಗೆ ಗಂಭೀರ ಚಿಂತನೆ…
ಬೆಂಗಳೂರು: ರಾಜ್ಯದಲ್ಲಿ ನುಸುಳುಕೋರರು, ಬಾಂಗ್ಲಾದೇಶದವರು, ರೋಹಿಂಗ್ಯಾಗಳು ಯಾರು ಅಂತ ತನಿಖೆ ಮಾಡಿ, ಬಳಿಕ ಪುನರ್ ವಸತಿ ಕಲ್ಪಿಸಬೇಕು ಎಂದು ಶಾಸಕ…
ಸ್ವಿಟ್ಜರ್ಲೆಂಡ್: ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್ಲೆಂಡ್‌ನಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 40 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.…
ಬೆಂಗಳೂರು: ಹೊಸ ವರ್ಷದ ಹಿನ್ನೆಲೆಯಲ್ಲಿ ಒಂದೇ ದಿನ 8.93 ಲಕ್ಷ ಜನರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ್ದು, 3.08 ಕೋಟಿ ರೂ…