Andolana originals

ಓದುಗರ ಪತ್ರ: ಸರ್ಕಸ್ ಕಂಪನಿಗಳಿಗೆ ಸರ್ಕಾರದ ನೆರವು ಅಗತ್ಯ

ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನಲ್ಲಿ ‘ಜೆಮಿನಿ ಸರ್ಕಸ್’ ಪ್ರಾರಂಭಗೊಂಡಿದೆ. ದೇಶದ ಸರ್ಕಸ್ ಕಂಪೆನಿಗಳ ಇತಿಹಾಸದಲ್ಲಿ ‘ಜೆಮಿನಿ’ ಸರ್ಕಸ್‌ಗೆ ತನ್ನದೇ ಆದ ಭವ್ಯ ಇತಿಹಾಸವಿದೆ. ದೇಶದ ಉದ್ದಗಲಕ್ಕೂ ಚಿರಪರಿಚಿತವಾಗಿರುವ ಈ ಕಂಪೆನಿಯ ಅತ್ಯಾಕರ್ಷಕ ಪ್ರದರ್ಶನಗಳು ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತವೆ.

ಪ್ರಾಣಿ ದಯಾ ಸಂಘದವರ ಮಧ್ಯ ಪ್ರವೇಶದಿಂದ ಪ್ರಾಣಿಗಳನ್ನು ಸರ್ಕಸ್‌ನಲ್ಲಿ ಬಳಸುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿರುವುದರಿಂದ, ಸರ್ಕಸ್ ಕಂಪನಿಗಳು ಅವನತಿಯತ್ತ ಸಾಗಿವೆ. ದೇಶದಲ್ಲಿ ಜೆಮಿನಿ ಸರ್ಕಸ್ ಸೇರಿದಂತೆ ಕೆಲವು ಸರ್ಕಸ್ ಕಂಪನಿಗಳು ಮಾತ್ರ ಉಳಿದುಕೊಂಡಿವೆ ಎಂದು ಹೇಳಲಾಗಿದೆ.

ಈ ಕಂಪನಿಗಳನ್ನೇ ನಂಬಿಕೊಂಡು ಬದುಕುತ್ತಿರುವ ನೂರಾರು ಮಂದಿ ನೌಕರರಿಗೆ, ಇದುವೇ ಜೀವನಾಧಾರವಾಗಿರುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಂತಹ ಸರ್ಕಸ್ ಕಂಪನಿಗಳ ನೆರವಿಗೆ ಬರುವುದು ಅಗತ್ಯವಾಗಿದೆ.

-ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ನಗರ ಸಾರಿಗೆ ಬಸ್‌ಗಳಿಂದ ಪರಿಸರ ಮಾಲಿನ್ಯ

ಮೈಸೂರಿನ ಕುವೆಂಪುನಗರ ಮಾರ್ಗದಲ್ಲಿ ಸಂಚರಿಸುವ ನಗರ ಸಾರಿಗೆಯ ಕೆಲವು ಬಸ್ಸುಗಳಿಂದ ವಿಪರೀತವಾಗಿ ಕಪ್ಪು ಹೊಗೆ ಬರುತ್ತಿದ್ದು, ಇದರಿಂದಾಗಿ ಸಾರ್ವಜನಿಕರ ಆರೋಗ್ಯದ…

1 hour ago

ಓದುಗರ ಪತ್ರ: ರಾಜ್ಯಕ್ಕೆ ಕೇಂದ್ರದ ಅನುದಾನ ಕಡಿತ: ಹೋರಾಟ ಅಗತ್ಯ

ಪ್ರತಿ ವರ್ಷ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಸುಮಾರು ಐದು ಲಕ್ಷ ಕೋಟಿ ರೂ.ಗಳ ತೆರಿಗೆ ಹೋಗುತ್ತಿದ್ದರೂ, ಕೇಂದ್ರ ಸರ್ಕಾರ ರಾಜ್ಯಕ್ಕೆ…

1 hour ago

ಓದುಗರ ಪತ್ರ: ಕುವೆಂಪುನಗರ ಸಾರ್ವಜನಿಕ ಗ್ರಂಥಾಲಯ ಅಭಿವೃದ್ಧಿಪಡಿಸಿ

ಮೈಸೂರಿನ ಕುವೆಂಪು ನಗರದಲ್ಲಿರುವ ಕೇಂದ್ರ ಗ್ರಂಥಾಲಯಕ್ಕೆ ಪ್ರತಿ ದಿನ ಹಿರಿಯ ನಾಗರಿಕರು ಬರುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆಗಳಿಗೆ ಸಿದ್ಧತೆ…

1 hour ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಕನ್ನಡ ಚಿತ್ರರಂಗವೂ ಅರಸು-ಸಿದ್ದರಾಮಯ್ಯ ಆಡಳಿತ ರಂಗವೂ

ವೈಡ್‌ ಆಂಗಲ್‌  ಬಾ.ನಾ.ಸುಬ್ರಹ್ಮಣ್ಯ  ಅತಿ ಹೆಚ್ಚು ಕಾಲ ನಾಡಿನ ಆಡಳಿತ ಚುಕ್ಕಾಣಿ ಹಿಡಿದಿದ್ದವರು ದೇವರಾಜ ಅರಸು. ಆ ದಾಖಲೆಯನ್ನು ಮೊನ್ನೆ…

1 hour ago

ಇಂದು ಫಲಪುಷ್ಪ ಪ್ರದರ್ಶನದ ಮಧುರ ವಸ್ತ್ರೋತ್ಸವ

ಮಂಡ್ಯ: ಜಿಲ್ಲಾಡಳಿತ ಮತ್ತು ಮಂಡ್ಯ ಜಿಲ್ಲಾ ಪಂಚಾಯಿತಿ,ತೋಟಗಾರಿಕೆ ಇಲಾಖೆ ಮತ್ತು ಕೈಮಗ್ಗ ಮತ್ತು ಜವಳಿ ಇಲಾಖೆ ಸಹ ಯೋಗದಲ್ಲಿ ಫಲಪುಷ್ಪ…

2 hours ago

ಜನವರಿ.24ರಿಂದ ಮಂಜಿನ ನಗರಿಯಲ್ಲಿ ಫಲಪುಷ್ಪ ಪ್ರದರ್ಶನ

ನವೀನ್ ಡಿಸೋಜ ಗಮನ ಸೆಳೆಯಲಿದೆ ೧೮ ಅಡಿ ಎತ್ತರದ ಶ್ರೀ ಭಗಂಡೇಶ್ವರ ದೇವಸ್ಥಾನ ಕಲಾಕೃತಿ; ಹಲವು ವಿಭಿನ್ನತೆಯೊಂದಿಗೆ ಆಯೋಜನೆ ಮಡಿಕೇರಿ:…

2 hours ago