Andolana originals

ಓದುಗರ ಪತ್ರ: ಫ್ರಾಂಚೈಸಿ ವಂಚನೆ; ಜಾಗೃತಿ ಅಗತ್ಯ

ಇತ್ತೀಚೆಗೆ ಫ್ರಾಂಚೈಸಿ ವ್ಯವಹಾರದ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಗಳು ಹೆಚ್ಚುತ್ತಿವೆ. ನಕಲಿ ಕಂಪೆನಿಗಳು ದೊಡ್ಡ ಬ್ರಾಂಡ್‌ಗಳ ಹೆಸರನ್ನು ಬಳಸಿಕೊಂಡು ಜನರನ್ನು ಮೋಸ ಮಾಡುತ್ತಿವೆ. ಈ ರೀತಿಯ ವಂಚನೆಗಳಲ್ಲಿ, ಫ್ರಾಂಚೈಸಿ ನೀಡುವ ನೆಪದಲ್ಲಿ ದೊಡ್ಡ ಮೊತ್ತದ ನೋಂದಣಿ ಶುಲ್ಕ, ತರಬೇತಿ ಶುಲ್ಕ ಹಾಗೂ ಇತರೆ ಅನವಶ್ಯಕ ಶುಲ್ಕಗಳನ್ನು ಕೇಳಲಾಗುತ್ತದೆ. ಹಣ ಪಡೆದ ನಂತರ ಮೊಬೈಲ್ ಸಂಪರ್ಕ ಕಡಿತಗೊಳಿಸುವುದು ಅಥವಾ ಸುಳ್ಳು ಭರವಸೆ ನೀಡುತ್ತಾ ಕಾಲಹರಣ ಮಾಡುವುದು ಸಾಮಾನ್ಯವಾಗಿದೆ. ಇದರಿಂದ ಅನೇಕ ಮಧ್ಯಮ ವರ್ಗದ ಮತ್ತು ನಿರುದ್ಯೋಗಿ ಯುವಕರು ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಫ್ರಾಂಚೈಸಿ ವಂಚನೆಗಳ ಮಾದರಿಯು ಬಹುತೇಕ ಪಿರಮಿಡ್ ಯೋಜನೆ ಅಥವಾ ಮಲ್ಟಿ ಲೆವೆಲ್ ಮಾರ್ಕೆಟಿಂಗ್ ಹೋಲುತ್ತಿವೆ.

ನಿಜವಾದ ಉತ್ಪನ್ನ ಅಥವಾ ಸೇವೆಯ ಬದಲು, ಹೊಸ ಸದಸ್ಯರನ್ನು ಸೇರಿಸುವ ಮೂಲಕ ಹಣಗಳಿಸುವುದೇ ಇವರ ಮುಖ್ಯ ಉದ್ದೇಶವಾಗಿರುತ್ತದೆ. ದಿನನಿತ್ಯ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಜನರು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿರುವುದು ಕಳವಳಕಾರಿ ವಿಷಯವಾಗಿದೆ. ನಕಲಿ ವೆಬ್ ಸೈಟ್‌ಗಳು, ಸುಳ್ಳು ಒಪ್ಪಂದ ಪತ್ರಗಳು ಮತ್ತು ಆಕರ್ಷಕ ಜಾಹೀರಾತುಗಳ ಮೂಲಕ ಜನರನ್ನು ವಂಚಿಸಲಾಗುತ್ತಿದೆ. ಈ ರೀತಿಯ ವಂಚನೆಗಳನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಫ್ರಾಂಚೈಸಿ ನೀಡುವ ಎಲ್ಲಾ ಕಂಪೆನಿಗಳ ಕಡ್ಡಾಯ ನೋಂದಣಿಯನ್ನು ಸರ್ಕಾರದ ಅಧಿಕೃತ ಪೋರ್ಟಲ್‌ನಲ್ಲಿ ನಡೆಸಿ ಮತ್ತು ಸಾರ್ವಜನಿಕರಿಗೆ ಸುಲಭವಾಗಿ ಪರಿಶೀಲಿಸಬಹುದಾದ ವ್ಯವಸ್ಥೆ ಕಲ್ಪಿಸಬೇಕು. ಸೈಬರ್ ಕ್ರೈ ಠಾಣೆಯವರು ಇಂತಹ ಪ್ರಕರಣಗಳನ್ನು ತ್ವರಿತವಾಗಿ ತನಿಖೆ ಮಾಡುವ ಸಂಬಂಧ ವಿಶೇಷ ತಂಡಗಳನ್ನು ರಚಿಸುವುದು ಅಗತ್ಯ.ಜೊತೆಗೆ, ಸಾರ್ವಜನಿಕ ಜಾಗೃತಿ ಅಭಿಯಾನಗಳನ್ನು ನಡೆಸಿ, ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು.

-ಡಾ. ಎಚ್.ಕೆ. ವಿಜಯಕುಮಾರ್, ಬೆಂಗಳೂರು

ಆಂದೋಲನ ಡೆಸ್ಕ್

Recent Posts

ಚಾಮುಂಡಿ ಬೆಟ್ಟ ರಸ್ತೆಯ ತಾವರೆಕಟ್ಟೆ ಬಳಿ ವ್ಯಕ್ತಿಯ ಶವ ಪತ್ತೆ

ಮೈಸೂರು: ಚಾಮುಂಡಿಬೆಟ್ಟ ರಸ್ತೆಯ ತಾವರೆಕಟ್ಟೆ ಬಳಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಂದಾಜು 40 ವರ್ಷ…

3 mins ago

9 ಸಂಕಲ್ಪಗಳನ್ನು ಕೈಗೊಳ್ಳುವಂತೆ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ

ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಅವರಿಂದು ಮಂಡ್ಯದಲ್ಲಿ ಜನರು 9 ಸಂಕಲ್ಪಗಳನ್ನು ಕೈಗೊಳ್ಳುವಂತೆ ಕರೆ ನೀಡಿದ್ದಾರೆ. ಮಂಡ್ಯದ ಆದಿಚುಂಚನಗಿರಿ ಮಹಾಸಂಸ್ಥಾನ…

7 mins ago

ಸಣ್ಣ ಮಠವನ್ನು ದೊಡ್ಡ ಮರವನ್ನಾಗಿ ಬೆಳೆಸಿದ್ದು ಬಾಲಗಂಗಾಧರನಾಥರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಮಂಡ್ಯ: ತ್ರಿವಿಧ ದಾಸೋಹದ ಮೂಲಕ ಆದಿಚುಂಚನಗಿರಿ ಮಠ ಪ್ರಸಿದ್ಧಿ ಪಡೆದಿದೆ. ಬಾಲಗಂಗಾಧರನಾಥರ ಭೈರವೈಕ್ಯ ಮಂದಿರ ಉದ್ಘಾಟನೆಗೆ ಪ್ರಧಾನಿ ಮೋದಿ ಅವರು…

14 mins ago

ಕಾಂಗ್ರೆಸ್‌ನಿಂದ ಎಂಎಲ್‌ಸಿ ಅಬ್ದುಲ್‌ ಜಬ್ಬಾರ್‌ ಅಮಾನತು

ಬೆಂಗಳೂರು: ಪರಿಷತ್‌ ಸದಸ್ಯ ಅಬ್ದುಲ್‌ ಜಬ್ಬಾರ್‌ ಅವರನ್ನು ಕಾಂಗ್ರೆಸ್‌ನಿಂದ ಅಮಾನತುಗೊಳಿಸಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಆದೇಶ ಹೊರಡಿಸಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ…

2 hours ago

ಬಿಹಾರದ ಮೊದಲ ಬಿಜೆಪಿ ಸಿಎಂ ಆಗಿ ಸಾಮ್ರಾಟ್‌ ಚೌಧರಿ ಪ್ರಮಾಣವಚನ ಸ್ವೀಕಾರ

ಪಾಟ್ನಾ: ಬಿಹಾರದ ನೂತನ ಸಿಎಂ ಆಗಿ ಬಿಜೆಪಿ ನಾಯಕ ಸಾಮ್ರಾಟ್‌ ಚೌಧರಿ ಪ್ರಮಾಣವಚನ ಸ್ವೀಕರಿಸಿದರು. ಪಾಟ್ನಾದ ಲೋಕಭವನದಲ್ಲಿ ರಾಜ್ಯಪಾಲ ಸೈಯದ್‌…

3 hours ago

ಶ್ರೀರಂಗಪಟ್ಟಣದ ಮುತ್ತು ಮಾರಮ್ಮ ದೇವಿ ಕರಗ: ಕೊಂಡದಲ್ಲಿ ಬಿದ್ದು ಇಬ್ಬರಿಗೆ ಗಾಯ

ಶ್ರೀರಂಗಪಟ್ಟಣ : ಶ್ರೀರಂಗಪಟ್ಟಣದ ಟೌನ್‌ನಲ್ಲಿ ನಡೆದ ಮುತ್ತು ಮಾರಮ್ಮ ದೇವಿ ಕರಗದ ವೇಳೆ ಕೊಂಡದಲ್ಲಿ ಬಿದ್ದು ಇಬ್ಬರು ಗಾಯಗೊಂಡ ಘಟನೆ…

3 hours ago