Andolana originals

ಓದುಗರ ಪತ್ರ: ಬೆರಳಚ್ಚು ಕಡ್ಡಾಯಗೊಳ್ಳಲಿ

ಪಡಿತರ ಮತ್ತು ಪಿಂಚಣಿಗೆ ಬಯೋಮೆಟ್ರಿಕ್ ಕಡ್ಡಾಯವಿರುವಾಗ ಚುನಾವಣೆಯಲ್ಲಿ ಇದಕ್ಕೇಕೆ ವಿನಾಯಿತಿ? ಭಾರತದಂತಹ ವಿಶಾಲ ದೇಶದಲ್ಲಿ. ಶೇ.೨೦ ರಿಂದ ೨೨ ರಷ್ಟು ನಕಲಿ ಮತದಾನ ತಡೆಯಲು ತಂತ್ರಜ್ಞಾನ ಅನಿವಾರ್ಯ. ಆದರೆ ಕೇವಲ ಯಂತ್ರಗಳ ಮೇಲೆ ಅವಲಂಬಿತವಾಗುವುದು ಅಪಾಯಕಾರಿ. ತಾಂತ್ರಿಕ ದೋಷದಿಂದ ಒಬ್ಬನೇ ಒಬ್ಬ ಅರ್ಹ ಮತದಾರನಿಗೆ ಹಕ್ಕು ನಿರಾಕರಣೆಯಾದರೂ ಅದು ಸಂವಿಧಾನಕ್ಕೆ ಮಾಡುವ ದ್ರೋಹ. ಗೌಪ್ಯತೆ ಮತ್ತು ಭದ್ರತೆಯ ನಡುವಿನ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ. ಬೆರಳಚ್ಚು ಪ್ರಜೆಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸಾಧನವಾಗಬಾರದು. ಡಿಜಿಟಲ್ ಇಂಡಿಯಾದಲ್ಲಿ ಪಾರದರ್ಶಕತೆ ಬೇಕು. ಆದರೆ ಅದು ಬಡವರ ಮತ್ತು ತಾಂತ್ರಿಕ ಜ್ಞಾನವಿಲ್ಲದವರ ಮತದಾನದ ಹಕ್ಕನ್ನು ಕಸಿದುಕೊಳ್ಳಬಾರದು. ವ್ಯವಸ್ಥೆಯ ಸುಧಾರಣೆ ಹೆಸರಿನಲ್ಲಿ ಪ್ರಜಪ್ರಭುತ್ವದ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಹೀಗಾಗಿ ಮತದಾನ ಸಮಯದಲ್ಲಿ ಬೆರಳಚ್ಚು ಕಡ್ಡಾಯಗೊಳ್ಳಲಿ.

– ಡಾ. ಎಚ್.ಕೆ. ವಿಜಯಕುಮಾರ, ಬೆಂಗಳೂರು

ಆಂದೋಲನ ಡೆಸ್ಕ್

Recent Posts

ಬಂಡೀಪುರದಲ್ಲಿ ಏಪ್ರಿಲ್.1ರಿಂದ ಅರಣ್ಯ ಸಿಬ್ಬಂದಿ ಮುಷ್ಕರ: ಕಾರಣ ಇಷ್ಟೇ

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಏಪ್ರಿಲ್.‌1ರಿಂದ ವನ್ಯಜೀವಿ ವಿಭಾಗದ ಹಂಗಾಮಿ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ. ಈ ಕುರಿತು ದಿನಗೂಲಿ…

32 mins ago

ಸಂಸದ ಯದುವೀರ್ ಒಡೆಯರ್ ಹುಟ್ಟುಹಬ್ಬದಂದು ‘ರಂಗೋಲಿ’ ಶುಭಾಶಯ

ಮೈಸೂರು: ಇಂದು ಮೈಸೂರು-ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರ ಹುಟ್ಟುಹಬ್ಬದ ಅಂಗವಾಗಿ ಮೈಸೂರಿನಲ್ಲಿ ಸಂಭ್ರಮ ಮನೆಮಾಡಿದೆ. ಅರಮನೆಯ…

47 mins ago

ಮಾರ್ಚ್.‌28ರಂದು ಐಪಿಎಲ್‌ ಉದ್ಘಾಟನಾ ಪಂದ್ಯ: ಆನ್‌ಲೈನ್‌ನಲ್ಲಿ ಮಾತ್ರ ಟಿಕೆಟ್‌ ಬುಕ್ಕಿಂಗ್‌

ಬೆಂಗಳೂರು: ಮಾರ್ಚ್.‌28ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್‌ ಉದ್ಘಾಟನಾ ಪಂದ್ಯ ನಡೆಯಲಿದೆ. ಈ ಬಗ್ಗೆ ಮಾತನಾಡಿದ ಕಮಿಷನರ್‌ ಸೀಮಂತ್‌ ಕುಮಾರ್‌…

52 mins ago

ಇಂದು ಐತಿಹಾಸಿಕ ಬೆಂಗಳೂರು ಕರಗ ಉತ್ಸವಕ್ಕೆ ಚಾಲನೆ

ಬೆಂಗಳೂರು: 11 ದಿನಗಳ ಕಾಲ ನಡೆಯುವ ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವಕ್ಕೆ ಇಂದು ಚಾಲನೆ ಸಿಗಲಿದೆ. ಇಂದು ಸಂಜೆ ತಿಗಳರಪೇಟೆಯ…

2 hours ago

ವಿಧಾನಮಂಡಲ ಅಧಿವೇಶನ ಒಂದು ದಿನ ಮೊಟಕು.?

ಬೆಂಗಳೂರು: ವಿಧಾನಮಂಡಲ ಅಧಿವೇಶನವನ್ನು ಒಂದು ದಿನ ಮೊಟಕುಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಾರ್ಚ್.‌27ರವರೆಗೆ ನಡೆಯಬೇಕಿದ್ದ ವಿಧಾನಮಂಡಲ ಅಧಿವೇಶನ ಮಾರ್ಚ್.‌26ರಂದು ಕೊನೆಗೊಳ್ಳಲಿದೆ.…

2 hours ago

ಕೊಲಂಬಿಯಾದಲ್ಲಿ 125 ಸೈನಿಕರಿದ್ದ ಮಿಲಿಟರಿ ವಿಮಾನ ಪತನ: 66 ಮಂದಿ ದುರ್ಮರಣ

ಬೊಗೋಟಾ: 125 ಜನರನ್ನು ಹೊತ್ತೊಯ್ಯುತ್ತಿದ್ದ ಮಿಲಿಟರಿ ವಿಮಾನವು ಟೇಕಾಫ್‌ ಕೆಲ ಸಮಯದಲ್ಲಿ ಪತನಗೊಂಡು 66 ಜನರು ಸಾವನ್ನಪ್ಪಿರುವ ಘಟನೆ ಕೊಲಂಬಿಯಾದಲ್ಲಿ…

3 hours ago