ಕಾರ್ಯನಿಮಿತ್ತ ಅ.೨೩ರಂದು ಮುಂಜಾನೆ ೮ ಗಂಟೆಗೆ ಮೈಸೂರಿನಿಂದ ಬೆಂಗಳೂರಿಗೆ ರಾಜ್ಯ ರಸ್ತೆ ಸಾರಿಗೆ ನಿಗಮದ ತಡೆರಹಿತ ಬಸ್‌ನಲ್ಲಿ ತೆರಳಿದಾಗ ನಿರ್ವಾಹಕ ೨೪೦ ರೂ. ಟಿಕೆಟ್ ನೀಡಿದರು. ಸಾಮಾನ್ಯವಾಗಿ ೨೧೦ ರೂ. ಇರುತ್ತಿದ್ದ ಟಿಕೆಟ್ ದರ ಏಕೆ ಹೆಚ್ಚಾಗಿದೆ ಎಂದು ನಿರ್ವಾಹಕನನ್ನು ಕೇಳಿದರೆ ದಸರಾ ಸ್ಪೆಷಲ್, ಹಾಗಾಗಿ ೩೦ ರೂ. ಹೆಚ್ಚಳ ಮಾಡಿದ್ದಾರೆ ಎಂದರು.
ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಅದೇ ದಿನ ರಾತ್ರಿ ೮.೩೦ಕ್ಕೆ ಬೆಂಗಳೂರಿನಿಂದ ಮೈಸೂರಿಗೆ ಕೆಎಸ್‌ಆರ್‌ಟಿಸಿ ತಡೆರಹಿತ ಬಸ್ ಹತ್ತಿದಾಗ ನಿರ್ವಾಹಕ ೨೧೦ ರೂ. ಟಿಕೆಟ್ ನೀಡಿದರು. ಬೆಳಿಗ್ಗೆ ೨೪೦ ರೂ. ಟಿಕೆಟ್ ದರ ಪಡೆಯಲಾಗಿತ್ತು. ಈಗ ೨೧೦ ರೂ. ದರವಿದೆ ಎಂದು ಕೇಳಿದಾಗ ನಮಗೇನು ಗೊತ್ತು ಸರ್ ಡಿಪೋದಲ್ಲಿ ಟಿಕೆಟ್ ಮೆಷಿನ್‌ಗೆ ದರ ನಿಗದಿ ಮಾಡಿರುತ್ತಾರೆ. ನಮ್ಮದೇನೂ ಇಲ್ಲ ಎಂದು ಹೇಳಿದರು.
ರಾಜ್ಯ ರಸ್ತೆ ಸಾರಿಗೆ ನಿಗಮದವರು ಒಂದೇ ದಿನ ನಿಗದಿತ ಪ್ರಯಾಣಕ್ಕೆ ಎರಡೆರಡು ರೀತಿಯ ದರವನ್ನು ಪಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು. ದಸರಾ ಮುಗಿದ ಬಳಿಕವೂ ಪ್ರಯಾಣಿಕರಿಂದ ಹೆಚ್ಚುವರಿಯಾಗಿ ಟಿಕೆಟ್ ದರ ಪಡೆಯವುದನ್ನು ಕೂಡಲೇ ನಿಲ್ಲಿಸಬೇಕು.
-ಸುನಿಲ್, ಭೇರ್ಯ
ಪಡಿತರ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವವರು ಇ- ಕೆವೈಸಿ ಮಾಡಿಸಲು ರಾಜ್ಯ ಸರ್ಕಾರ ಆದೇಶ ಮಾಡಿದ್ದು, ಇದಕ್ಕೆ ಆಧಾರ್…
ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ತಲ್ಲಣ ಉಂಟು ಮಾಡಿರುವ ಸ್ಟಿಂಗ್ ಆಪರೇಷನ್ ( ಮಾರುವೇಷದ ಕಾರ್ಯಾಚರಣೆ) ಬಗ್ಗೆ ಕೇಂದ್ರ ಸಚಿವ…
ಶಿವಾಜಿ ಗಣೇಶನ್ ಅವರ ವಾರದ ಅಂಕಣ ನಶಿಸಿ ಹೋಗುತ್ತಿದ್ದ ಬೌದ್ಧ ಧರ್ಮ ಮರುಹುಟ್ಟು ಪಡೆದ ಪುಣ್ಯಭೂಮಿ ವಿಜಯದಶಮಿ ಬಂತೆಂದರೆ ದೇಶದಾದ್ಯಂತ…
ಎಸ್.ಎ.ಹುಸೇನ್ ಬಿಸಿಲು-ಮಳೆಯ ವಾತಾವರಣದಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಳ; ಮುಂಜಾಗ್ರತೆ ವಹಿಸಲು ಆರೋಗ್ಯ ಇಲಾಖೆ ಮನವಿ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬಿಸಿಲು…
ಮಹಾದೇಶ್ ಎಂ.ಗೌಡ ಸಿಗ್ನಲ್ ಅಳವಡಿಕೆಗೆ ಸಾರ್ವಜನಿಕರ ಒತ್ತಾಯ ಹನೂರು: ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳಗಳಲ್ಲಿ ಒಂದಾದ ಮಲೆ ಮಹದೇಶ್ವರ…
ಸಿರಿ ಮೈಸೂರು ‘ಈ ಬಾರಿ ದಸರಾಗೆ ಆಹ್ವಾನಿಸಿ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುವವರಿಗೆ ಸೀಟ್ ನಂಬರ್ ಸಹಿತ ವಿಐಪಿ ಪಾಸ್ ನೀಡಲಾಗಿತ್ತಂತೆ,…