ಓದುಗರ ಪತ್ರ
ಮೈಸೂರು ರೈಲು ನಿಲ್ದಾಣದಲ್ಲಿ ಆಟೋಚಾಲಕರ ದುರ್ವರ್ತನೆಯಿಂದಾಗಿ, ದೂರದ ಊರುಗಳಿಂದ ಬರುವ ಪ್ರಯಾಣಿಕರು ಮನೆಗೆ ತೆರಳಲು ತೀವ್ರ ತೊಂದರೆಯಾಗುತ್ತದೆ. ಆಟೋ ಚಾಲಕರು ಮೀಟರ್ ಹಾಕುವುದಿಲ್ಲ. ನಿಗದಿತ ದರಕ್ಕಿಂತಲೂ ಒಂದೂವರೆ ಪಟ್ಟು ಹಣ ಕೇಳುತ್ತಾರೆ.
ವಯಸ್ಸಾದವರನ್ನು ಕರೆದುಕೊಂಡು ಬಂದು ರೈಲು ನಿಲ್ದಾಣದ ಫ್ಲಾಟ್ ಫಾರಂನಿಂದ ವಿದ್ಯುತ್ ಚ್ಛಾಲಿತ ಬಗ್ಗಿ ವಾಹನದಲ್ಲಿ ಬಂದು ಆಪ್ ಆಧಾರಿತ ಆಟೋಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಿದರೆ ಆ ಆಟೋ ಚಾಲಕರು ರೈಲು ನಿಲ್ದಾಣಕ್ಕೆ ಬರಲು ನಿರಾಕರಿಸುತ್ತಾರೆ. ಇದಕ್ಕೆ ಕಾರಣ ಕೇಳಿದರೆ ರೈಲು ನಿಲ್ದಾಣದ ಆಟೋ ಚಾಲಕರು ನಮ್ಮ ಮೇಲೆ ಹಲ್ಲೆ ಮಾಡುತ್ತಾರೆ, ಪೊಲೀಸರು ಸಾವಿರಾರು ರೂ. ದಂಡ ವಿಧಿಸುತ್ತಾರೆ ಎನ್ನುತ್ತಾರೆ. ವಯೋ ವೃದ್ಧರು ನಡೆಯುವುದೇ ಕಷ್ಟವಾಗಿರುವಾಗ ರೈಲು ನಿಲ್ದಾಣದ ಹೊರ ಭಾಗಕ್ಕೆ ಅವರನ್ನು ಅವರ ಅವಲಂಬಿತರು ಕರೆದುಕೊಂಡು ಹೋಗುವುದೇ ದುಸ್ತರವಾಗಿರುವುದರಿಂದ ಆಪ್ ಆಧಾರಿತ ಆಟೋ ಬುಕಿಂಗ್ ರದ್ದುಪಡಿಸಿ ಆಟೋ ನಿಲ್ದಾಣದ ಚಾಲಕರು ಕೇಳುವ ಒಂದೂವರೆ ಪಟ್ಟು ದುಬಾರಿ ಹಣ ನೀಡಿ ಮನೆಗೆ ತೆರಳುವುದು ಅನಿವಾರ್ಯವಾಗಿದೆ. ಅವರು ಕೇಳುವ ಮೊತ್ತ ರೈಲು ಪ್ರಯಾಣ ದರಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚಾಗಿರುತ್ತದೆ.
ದುಡ್ಡು ಇದ್ದವರು ಕೇಳಿದಷ್ಟು ಹಣ ಕೊಟ್ಟು ತೆರಳುತ್ತಾರೆ. ಆದರೆ ದುಡ್ಡು ಇಲ್ಲದ ವಯಸ್ಸಾದವರು ಏನು ಮಾಡಬೇಕು? ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ನಗರ ಪೊಲೀಸ್ ಆಯುಕ್ತರು, ರೈಲ್ವೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
-ಶಿವಮೊಗ್ಗ ನಾ. ದಿನೇಶ್ ಅಡಿಗ, ಮೈಸೂರು
ಮಂಡ್ಯ: ಮೂರು ದಿನಗಳ ಕಾಲ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಲಿರುವ ಕೃಷಿ ಮೇಳಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಕೃಷಿ…
ಬೆಂಗಳೂರು: ಸೋಮವಾರದಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಆರಂಭವಾಗುವ ಚಳಿಗಾಲದ ಅಧಿವೇಶನದ ವೇಳೆ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ…
ಮೈಸೂರು: ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ…
ಮಂಡ್ಯ: ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೆನ್ನಮ್ಮ…
ರಾಜ್‌ಘಾಟ್‌ಗೆ ಭೇಟಿ ನೀಡಿದ ವ್ಲಾಡಿಮಿರ್ ಪುಟಿನ್, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ದೆಹಲಿಯಲ್ಲಿ ರಾಷ್ಟ್ರಪತಿ…
ಬೆಂಗಳೂರು: ರಾಜ್ಯದ ಹಲವೆಡೆ ಒಣಹವೆ ಇದ್ದರೆ ಮತ್ತೆ ಕೆಲವೆಡೆ ಮಂಜು, ಮೋಡ ಕವಿದ ವಾತಾವರಣ ಮುಂದುವರೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ…