ಮೈಸೂರು ದಸರಾ ಮಹೋತ್ಸವದ ಕೇಂದ್ರ ಬಿಂದು ಜಂಬೂ ಸವಾರಿಯ ಮೆರವಣಿಗೆಗೆ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ನಗರದ ನಾನಾ ಭಾಗಗಳಲ್ಲಿ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿದ್ದು, ಜಂಬೂ ಸವಾರಿ ಸಾಗುವ ರಸ್ತೆಯನ್ನೂ ಸ್ವಚ್ಛಗೊಳಿಸಿ ಅಂದವಾಗಿ ಕಂಗೊಳಿಸುವಂತೆ ಮಾಡಿಲಾಗಿದೆ.
ದಸರಾ ಎಂದರೆ ಇಡೀ ಮೈಸೂರಿಗೆ ಹಬ್ಬವಿದ್ದಂತೆ. ನಗರವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಇದರ ಅಂದ ಹೆಚ್ಚಿಸಬೇಕಾದದ್ದು ಜಿಲ್ಲಾಡಳಿತದ ಕರ್ತವ್ಯ. ಆದರೆ ಇಲ್ಲಿ ಜಂಬೂಸವಾರಿ ಸಾಗುವ ಮಾರ್ಗವನ್ನು ಹೊರತುಪಡಿಸಿ ಉಳಿದ ರಸ್ತೆಗಳಲ್ಲಿ ಕಸದ ರಾಶಿಯೇ ಸಂಗ್ರಹವಾಗಿದ್ದರೂ ಅದನ್ನು ತೆರವುಗೊಳಿಸಲು ಸಂಬಂಧಪಟ್ಟವರು ಕ್ರಮಕೈಗೊಳ್ಳುತ್ತಿಲ್ಲ. ಜಂಬೂ ಸವಾರಿ ಸಾಗುವ ಮಾರ್ಗದ ಪಕ್ಕದ ರಸ್ತೆಗಳಾದ ಮಂಡಿ ಮೊಹಲ್ಲಾ, ಚಿಕ್ಕ ಮಾರುಕಟ್ಟೆ, ಸಾಡೆ ರಸ್ತೆ, ಅಕ್ಬರ್ ರಸ್ತೆಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಮಹಾನಗರ ಪಾಲಿಕೆಯವರು ಕಸದ ರಾಶಿಯನ್ನು ತೆರವುಗೊಳಿಸದೆ ದುರ್ವಾಸನೆ ಬೀರಲಾರಂಭಿಸಿದೆ.
ಅಲ್ಲದೆ ಮಳೆ, ಗಾಳಿ ಬೀಸಿದಂತೆಲ್ಲ ಈ ತ್ಯಾಜ್ಯ ರಸ್ತೆಗೆಲ್ಲ ಹರಡುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಇಲ್ಲಿ ಸಂಗ್ರಹವಾಗಿರುವ ಕಸದ ರಾಶಿಯನ್ನು ತೆರವುಗೊಳಿಸಬೇಕಿದೆ. -ಚಂದ್ರಶೇಖರ್, ಸಾಡೆ ರಸ್ತೆ, ಮೈಸೂರು.
ನುರಿತ ತಜ್ಞರ ತಂಡದಿಂದ ಕೆರೆ ಸ್ವಚ್ಛತೆ ಆರಂಭಿಸಲು ತಯಾರಿ ಮೈಸೂರು : ಪ್ರವಾಸಿಗರು ಹಾಗೂ ವಾಯುವಿಹಾರಿಗಳ ನೆಚ್ಚಿನ ತಾಣವಾದ ಕುಕ್ಕರಹಳ್ಳಿ…
ಮೈಸೂರು ನಗರದ ಪ್ರತಿಯೊಂದೂ ವಾರ್ಡ್‌ನ ಪ್ರತಿ ಮಾರ್ಗದಲ್ಲೂ ಮೈಸೂರು ಮಹಾ ನಗರ ಪಾಲಿಕೆಯಿಂದ ವಾರ್ಡ್ ಸಂಖ್ಯೆ, ವಾರ್ಡ್‌ನ್ನು ಪ್ರತಿನಿಧಿಸುವ ಪಾಲಿಕೆ…
ಮೈಸೂರಿನ ಎಲ್ಲ ವಾರ್ಡ್‌ಗಳಲ್ಲೂ ಮಹಾನಗರ ಪಾಲಿಕೆಯಿಂದ ಕಸ ವಿಂಗಡಣೆಯನ್ನು ಮೂಲದಿಂದಲೇ ಅಂದರೆ ಮನೆಮನೆಗಳಲ್ಲೇ ಹಸಿ ಕಸ ಮತ್ತು ಒಣ ಕಸ…
ರಾಜ್ಯಸರ್ಕಾರವು ವಿಧಾನಸಭೆಯಲ್ಲಿ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ (ತಡೆಗಟ್ಟುವಿಕೆ) ಮಸೂದೆ ೨೦೨೫’ ಅನ್ನು ಮಂಡಿಸಿದೆ. ಈ ಮಸೂದೆ…
ಧನರ್ಮಾಸಕ್ಕೆ ಮೊದಲೇ ಚಳಿ ದಾಂಗುಡಿ ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ದಾಖಲು ಕೆ.ಬಿ.ರಮೇಶನಾಯಕ ಮೈಸೂರು : ಜಿಲ್ಲೆಯಲ್ಲಿ ಕಳೆದ…