Andolana originals

ಓದುಗರ ಪತ್ರ: ಅರಮನೆ ಸುತ್ತಮುತ್ತ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ನಿರ್ಬಂಧಿಸಿ

ಇತ್ತೀಚೆಗೆ ಮೈಸೂರಿನ ಅಶೋಕ ರಸ್ತೆ ಮತ್ತು ಶ್ರೀಹರ್ಷ ರಸ್ತೆಯ ಮುಂದಿನ ದೊಡ್ಡ ಗಡಿಯಾರದ ಬಳಿ ಟ್ಯೂಷನ್‌ಗೆ ಹೋಗುತ್ತಿದ್ದ ವಿದ್ಯಾರ್ಥಿನಿ ನಗರ ಸಾರಿಗೆ ಬಸ್ ಹರಿದು ಸ್ಥಳದ ಮೃತಪಟ್ಟ ಘಟನೆಗೆ ಈ ಸ್ಥಳದ ಅಕ್ಕ ಪಕ್ಕದಲ್ಲಿ ನಡೆಯುತ್ತಿದ್ದ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಕಾರಣ ಎಂಬ ಮಾತು ಕೇಳಿಬಂದಿದೆ. ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಎಂಬುದು ಕೆಲವರು ಹಣ ಮಾಡುವ ದೊಡ್ಡ ದಂಧೆ ಎಂಬ ಟೀಕೆಯೂ ಇದೆ. ಕೆಲವು ಶ್ರೀಮಂತ ವರ್ಗದ ಜನರು ಈ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಗಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ.

ಪ್ರತಿ ದಿನ ಬೆಳಿಗ್ಗೆ ೬ ಗಂಟೆಯಿಂದ ಮೈಸೂರಿನ ಅರಮನೆ ಮುಂಭಾಗದ ಚಾಮರಾಜ ಒಡೆಯರ್ ವೃತ್ತ, ವಸ್ತು ಪ್ರದರ್ಶನ ಮುಂಭಾಗದ ಅರಮನೆಯ ಪೂರ್ವ ಭಾಗದಲ್ಲಿ ಕನಿಷ್ಠ ಎಂಟರಿಂದ ಹತ್ತು ತಂಡಗಳಲ್ಲಿ ಫೋಟೋ ಶೂಟ್ ನಡೆಯುತ್ತಿರುತ್ತವೆ. ಇದು ಪೊಲೀಸ್ ಇಲಾಖೆಗೂ ತಿಳಿದಿರುವ ವಿಷಯ.ಈ ಜಾಗದಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ.ಆದರೂ ಇದರ ಬಗ್ಗೆ ಪೊಲೀಸರು ತಲೆಕೆಡಿಸಿಕೊಂಡಿಲ್ಲ. ಇಲ್ಲಿ ಫೋಟೋ ಶೂಟ್ ನಡೆಯುವುದನ್ನು ಯಾರಾದರೂ ಪ್ರಶ್ನಿಸಿದರೆ, ನಾವು ಪೋಲೀಸ್ ಇಲಾಖೆಯಿಂದ ಅನುಮತಿ ಪಡೆದಿದ್ದೇವೆ ಎಂದು ಹೇಳುತ್ತಾರೆ. ಈ ಪೋಟೋ ಶೂಟ್ ನಿಂದಾಗಿ ಸುರಕ್ಷಿತ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಈ ಜಗದಲ್ಲಿ ಇನ್ನು ಮುಂದೆ ಫೋಟೋ ಶೂಟ್ ಅನ್ನು ನಿರ್ಬಂಧಿಸಲು ಕ್ರಮಕೈಗೊಳ್ಳಬೇಕು.

– ಬೂಕನಕೆರೆ ವಿಜೇಂದ್ರ, ಮೈಸೂರು

ಆಂದೋಲನ ಡೆಸ್ಕ್

Recent Posts

ಎಲ್ ನಿನೊ ಬಿಸಿ ಅಡುಗೆ ಮನೆಗೂ ತಟ್ಟುತ್ತಾ? ಅಕ್ಕಿ, ಬೇಳೆ, ಎಣ್ಣೆ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ

ಬೆಂಗಳೂರು: ಮುಂಗಾರು ಮಳೆ ಕೈಕೊಟ್ಟರೆ, ಅದರ ಪರಿಣಾಮ ನಮ್ಮ ಅಡುಗೆ ಮನೆಯ ಬಜೆಟ್‌ ಮೇಲೂ ಬೀಳುತ್ತಾ? ಎಲ್ ನಿನೊ ಪ್ರಭಾವದಿಂದ…

23 mins ago

ತಮಿಳುನಾಡಿನಲ್ಲಿ ದೀಪಾವಳಿಗೆ ‘ವೆಟ್ರಿ’ ತರಕಾರಿ ಕಿಟ್ | ₹100ಕ್ಕೆ 10 ಬಗೆಯ ತರಕಾರಿ

ಚೆನ್ನೈ: ದೀಪಾವಳಿ ಹಬ್ಬಕ್ಕೆ ತಮಿಳುನಾಡು ಸರ್ಕಾರ ವಿಶೇಷ ತರಕಾರಿ ಕಿಟ್ ಪರಿಚಯಿಸಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರದ ‘ವೆಟ್ರಿ’ ಯೋಜನೆಯಡಿ,…

31 mins ago

ಬೆಂಗಳೂರು ಏರ್‌ಪೋರ್ಟ್‌ ರಸ್ತೆ | ಇಂದಿನಿಂದ 18 ತಿಂಗಳು ಬಸ್‌, ಸರಕು ವಾಹನ ಸಂಚಾರಕ್ಕೆ ನಿರ್ಬಂಧ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆಯಲ್ಲಿ ನವೆಂಬರ್ 6ರಿಂದ 18 ತಿಂಗಳ ಕಾಲ ಕೆಎಸ್‌ಆರ್‌ಟಿಸಿ…

41 mins ago

ಕಾವೇರಿ ನೀರು ಬಿಡುಗಡೆ ಮಾಡಿಲ್ಲ ಎಂಬ ಆರೋಪ | ಮತ್ತೆ ಸುಪ್ರೀಂ ಕೋರ್ಟ್‌ ಮೊರೆ ಹೋದ ತಮಿಳುನಾಡು

ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಸರ್ಕಾರ ಮತ್ತೊಮ್ಮೆ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ಅಕ್ಟೋಬರ್ 23ರಿಂದ ಕರ್ನಾಟಕ…

44 mins ago

ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಪ್ರತಾಪ್ ಗೌಡ ಸಾವು | ಬೆನ್ನಲ್ಲೇ ತಂದೆ ನಿಂಗರಾಜು ನಿಧನ

ಹಾಸನ: ಉತ್ತರಾಖಂಡದ ಹೆಲಿಕಾಪ್ಟರ್ ದುರಂತದಲ್ಲಿ ಉದ್ಯಮಿ ಪ್ರತಾಪ್ ಗೌಡ ಮೃತಪಟ್ಟ ಬೆನ್ನಲ್ಲೇ, ಅವರ ತಂದೆ ನಿಂಗರಾಜು ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ…

46 mins ago

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಆರೋಪ: ಪತಿ ಬಂಧನ

ಬೆಂಗಳೂರು: ಬೆಂಗಳೂರಿನಲ್ಲಿ ಒಂದೇ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿರುವ ಆರೋಪದಡಿ ಕ್ಯಾಬ್ ಚಾಲಕ ಇಂದುಶೇಖರ್‌ನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.…

50 mins ago