Andolana originals

ಓದುಗರ ಪತ್ರ: ಬಳ್ಳೆ ಆನೆ ಶಿಬಿರ ಪ್ರವಾಸಿ ತಾಣವಾಗಲಿ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಎಚ್. ಡಿ. ಕೋಟೆ ತಾಲ್ಲೂಕಿನ ಡಿ. ಬಿ. ಕುಪ್ಪೆ ವಲಯದ ಬಳ್ಳೆ ಆನೆ ಶಿಬಿರಕ್ಕೆ ಮಹೇಂದ್ರ ಹಾಗೂ ಲಕ್ಷಿ ಸಾಕಾನೆಗಳನ್ನು ಕರೆತಂದಿರುವುದು ತಾಲ್ಲೂಕಿನ ಜನತೆಗೆ ಸಂತಸವನ್ನುಂಟು ಮಾಡಿದೆ.

ಮಹಾರಾಜರ ಕಾಲದಿಂದಲೂ ಆನೆ ಖೆಡ್ಡಾಗಳಿಗೆ ಖ್ಯಾತಿ ಪಡೆದಿದ್ದ ಬಳ್ಳೆ ಆನೆ ಶಿಬಿರವು ಕಳೆದ ೧೦ ತಿಂಗಳುಗಳಿಂದ ಯಾವುದೇ ಆನೆಗಳಿಲ್ಲದೆ ಆಕರ್ಷಣೆ ಕಳೆದುಕೊಂಡಿತ್ತು. ಇದೇ ಆನೆ ಶಿಬಿರದಲ್ಲಿ ಪಳಗಿದ್ದ ರಾಜೇಂದ್ರ, ದ್ರೋಣ, ಐರಾವತ, ಅರ್ಜುನ ಆನೆಗಳು ದಸರಾದಲ್ಲಿ ಅಂಬಾರಿ ಹೊತ್ತು ತಾಲ್ಲೂಕಿಗೆ ಕೀರ್ತಿ ತಂದಿದ್ದವು. ಆದರೆ ಕಳೆದ ಡಿಸೆಂಬರ್‌ನಲ್ಲಿ ಹಾಸನದ ಸಕಲೇಶಪುರ ಸಮೀಪ ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆ ವೇಳೆ ಅರ್ಜುನ ಆನೆ ಸಾವನ್ನಪ್ಪಿತ್ತು.

೯ ಬಾರಿ ಅಂಬಾರಿ ಹೊತ್ತಿದ್ದ ಅರ್ಜುನನ ಸಾವು ಆತನ ಅಪಾರ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಅರ್ಜು ನನ ಸಾವಿನ ಬಳಿಕ ಬಳ್ಳೆ ಶಿಬಿರದಲ್ಲಿ ಯಾವುದೇ ಆನೆಗಳಿಲ್ಲದೆ ಶಿಬಿರ ಕಳೆಗುಂದಿದ್ದರಿಂದ ಬಳ್ಳೆ ಆನೆ ಶಿಬಿರ ಬರಿ ನೆನಪಿನಲ್ಲಿ ಉಳಿಯಬಹುದು ಎಂಬ ಆತಂಕ ಜನರಲ್ಲಿತ್ತು. ಸದ್ಯ ಈಗ ಈ ಶಿಬಿರಕ್ಕೆ ಮಹೇಂದ್ರ ಮತ್ತು ಲಕ್ಷಿ ಆನೆಗಳು ಬಂದಿರುವುದು ಜೀವಕಳೆ ಬಂದಂತಾಗಿದೆ. ಅರಣ್ಯ ಇಲಾಖೆಯು ದುಬಾರೆ ಆನೆ ಶಿಬಿರದ ಮಾದರಿಯಲ್ಲಿಯೇ ಈ ಶಿಬಿರವನ್ನೂ ಒಂದು ಪ್ರವಾಸಿ ತಾಣವಾಗಿ ರೂಪಿಸಬೇಕಿದೆ.

-ಸಿದ್ದಲಿಂಗೇಗೌಡ, ಹೈರಿಗೆ, ಎಚ್. ಡಿ. ಕೋಟೆ ತಾ.

 

andolana

Recent Posts

ವಕ್ಫ್‌ ನೋಟಿಸ್‌ ಬಂದರೆ ಬಿಜೆಪಿಗೆ ತಿಳಿಸಿ: ಆರ್.ಅಶೋಕ್

ವಕ್ಫ್ ನಲ್ಲಿ ಜಮೀನು ಲೂಟಿಯಾಗಿದ್ದರೆ ಸಿಬಿಐ ತನಿಖೆಗೆ ವಹಿಸಿ: ಪ್ರತಿಪಕ್ಷ ನಾಯಕ ಕೋಲಾರ: ವಕ್ಫ್‌ ಅಧಿಕಾರಿಗಳು ರೈತರ ಬಳಿ ಬಂದರೆ…

3 hours ago

ಹುಕ್ಕಾ ಬಾರ್‌ಗೆ ಅನಧಿಕೃತ ಲೈಸೆನ್ಸ್:‌ ಪಿಡಿಓಗೆ ಡಿಸಿ ತರಾಟೆ

ಮಂಡ್ಯ: ಇಲ್ಲಿನ ಬೂದನೂರು ಗ್ರಾಮದ ಬಳಿ ಅನ್ಯಕ್ರಾಂತವಾಗದ ಜಮೀನಿನಲ್ಲಿ ಹುಕ್ಕಾ ಬಾರ್‌ ನಡೆಸಲು ಅನಧಿಕೃತ ಲೈಸೆನ್ಸ್‌ ನೀಡಿದ ಪಿಡಿಓ ವಿನಯ್‌ಕುಮಾರ್‌ನನ್ನು…

3 hours ago

ಶನಿವಾರಸಂತೆ: ದೇವಲಯಗಳಿಗೆ ಕನ್ನ

ಮಡಿಕೇರಿ: ಶನಿವಾರಸಂತೆಯ ವಿಜಯ ವಿನಾಯಕ ದೇವಾಲಯದಲ್ಲಿ ಭಾನುವಾರ ರಾತ್ರಿ ಬಾಗಿಲು ಮುರಿದು ದೇವಾಲಯದ ಒಳಗಡೆ ಇದ್ದ ಹುಂಡಿ ಹೊತ್ತು ಕಳ್ಳರು…

4 hours ago

HSRP ನಂಬರ್ ಪ್ಲೇಟ್ ಅಳವಡಿಕೆ ಗಡುವು ಮತ್ತೆ ವಿಸ್ತರಣೆ

ಬೆಂಗಳೂರು: ಇನ್ನೂ ತಮ್ಮ ತಮ್ಮ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್‌ ಪ್ಲೇಟ್‌(ಎಚ್‌ಎಸ್‌ಆರ್‌ಪಿ) ಅಳವಡಿಕೆ ಮಾಡದ ವಾಹನ ಸವಾರರಿಗೆ ರಾಜ್ಯ ಸರ್ಕಾರ…

5 hours ago

MYSURU CRIME|ಯುವತಿ ಮೇಲೆ ಸ್ನೇಹಿತರಿಂದಲೇ ಅತ್ಯಾಚಾರ

ಮೈಸೂರು : ಸಾಂಸ್ಕೃತಿಕ ನಗರದಲ್ಲಿ ಇದೀಗ ಮತ್ತೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಿದ್ದು ಯುವತಿಯ ಸ್ನೇಹಿತರಿಬ್ಬರು ವಿಜಯನಗರದ ಖಾಸಗಿ ಹೋಟೆಲ್…

6 hours ago

ಸಿ.ಪಿ.ಯೋಗೇಶ್ವರ್ ಗೆದ್ದರೆ ಚನ್ನಪಟ್ಟಣ ಅಭಿವೃದ್ಧಿ| ಎನ್.ಚಲುವರಾಯಸ್ವಾಮಿ ಭರವಸೆ

ಚನ್ನಪಟ್ಟಣ: ಚನ್ನಪಟ್ಟಣ ಉಪಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಗೆದ್ದರೆ ಚನ್ನಪಟ್ಟಣ ತಾಲೂಕಿನ ಸಮಗ್ರ ಅಭಿವೃದ್ಧಿಯಾಗಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.…

6 hours ago