Andolana originals

ಓದುಗರ ಪತ್ರ: ಸೈಬರ್ ವಂಚನೆ ಪ್ರಕರಣ ತಡೆಗೆ ಜಾಗೃತಿ ಮೂಡಿಸುವುದು ಅಗತ್ಯ

ರಾಜ್ಯದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ೫೭,೭೩೩ ಸೈಬರ್ ಪ್ರಕರಣಗಳು ದಾಖಲಾಗಿದ್ದು, ೫,೪೭೫ ಕೋಟಿ ರೂ. ವಂಚನೆ ನಡೆದಿರುವುದಾಗಿ, ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ ನೀಡಿದ್ದಾರೆ,

ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ. ಇದು ಅಧಿಕೃತವಾಗಿ ದಾಖಲಾಗಿರುವ ಪ್ರಕರಣಗಳು, ಆದರೆ ಕೆಲವು ಪ್ರಕರಣಗಳು ದಾಖಲಾಗುವುದೇ ಇಲ್ಲ. ಸೈಬರ್ ಪ್ರಕರಣಗಳಲ್ಲಿ ಹೆಚ್ಚು ಮೋಸ ಹೋಗುತ್ತಿರುವವರು ಗೃಹಿಣಿಯರು ಮತ್ತು ಹಿರಿಯ ನಾಗರಿಕರು, ಹಾಗೂ ವಿದ್ಯಾವಂತರೇ ಸೈಬರ್ ವಂಚನೆಗೆ ಒಳಗಾಗುತ್ತಿದ್ದಾರೆ.

ಸೈಬರ್ ವಂಚನೆ ಪ್ರಕರಣಗಳಿಂದ ಪಾರಾಗಲು ಸಾರ್ವಜನಿಕರು ಬ್ಯಾಂಕ್‌ನ ತಮ್ಮ ಉಳಿತಾಯ ಖಾತೆಯಲ್ಲಿ ತಿಂಗಳ ಅಗತ್ಯಕ್ಕೆ ತಕ್ಕಷ್ಟು ಹಣ ಮಾತ್ರ ಇಟ್ಟುಕೊಂಡು,ಉಳಿಕೆ ಹಣವನ್ನು ಅದೇ ಬ್ಯಾಂಕ್ ನಲ್ಲಿ ಎಂಒಡಿ (ಮಲ್ಟಿಪಲ್ ಆಪ್ಷನ್)ಗೆ, ವರ್ಗಾಯಿಸಬೇಕು. ಈ ಹಣಕ್ಕೆ ಠೇವಣಿಗಳ ಮೇಲಿನ ಬಡ್ಡಿಯಂತಯೇ ಈ ಹಣಕ್ಕೆ ಬಡ್ಡಿಯೂ ಬರುತ್ತದೆ, ಹಾಗೂ ಯಾವಾಗ ಬೇಕಾದರೂ ಈ ಹಣವನ್ನು ಹಿಂತೆಗೆಯಲೂ ಬಹುದು, ಈ ಬಗ್ಗೆ ಎಲ್ಲ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಸಲಹೆ ಸೂಚನೆಯನ್ನು ನೀಡಬೇಕು. ಸೈಬರ್ ಪ್ರಕರಣಗಳ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ದೇಶಾದ್ಯಂತ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.

 – ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು

ಆಂದೋಲನ ಡೆಸ್ಕ್

Recent Posts

ಚಿರತೆ ಸೆರೆ | ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಗುಂಡ್ಲುಪೇಟೆ : ತಾಲ್ಲೂಕಿನ ಬರಗಿ ಗ್ರಾಮದ ಜಮೀನುಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದುಹಾಕಿದ್ದ ವಿಚಾರವಾಗಿ ಅರಣ್ಯ ಇಲಾಖೆ ಚಿರತೆ…

2 hours ago

ಮೈಸೂರಲ್ಲಿ ಡ್ರಗ್ಸ್‌ ಉತ್ಪಾದನೆ ಶಂಕೆ : ಓರ್ವನ ಬಂಧನ

ಮೈಸೂರು : ಬುಧವಾರವಷ್ಟೇ ಹೆಬ್ಬಾಳ್‌ನಲ್ಲಿ ಶೆಡ್‌ವೊಂದರ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿ ಪೊಲೀಸರು, ಮಾದಕ ವಸ್ತು ಮಾರಾಟ ಆರೋಪ ಪ್ರಕರಣದಲ್ಲಿ…

2 hours ago

ತೇಗದ ಮರ ಅಕ್ರಮ ಕಟಾವು : ಓರ್ವ ಬಂಧನ

ಹನೂರು : ತಾಲ್ಲೂಕಿನ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ತೇಗದ ಮರಗಳನ್ನು ಕಟಾವು…

2 hours ago

ಮೈಸೂರು ವಿ.ವಿ | ಯುಜಿಸಿ ಉದ್ದೇಶಿತ ಹೊಸ ನಿಯಾಮವಳಿ ಜಾರಿಗೆ ಒತ್ತಾಯ

ಮೈಸೂರು : ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‌ನಲ್ಲಿ ಜಾತಿ, ಧರ್ಮ,ಲಿಂಗ ಆಧಾರಿತ ಶೋಷಣೆಯನ್ನು ತಡೆಗಟ್ಟಲು ಯುಜಿಸಿಯ ಉದ್ದೇಶಿತ ಹೊಸ ನಿಯಮಾವಳಿಗಳ ಜಾರಿಗೆ ಒತ್ತಾಯಿಸಿ…

4 hours ago

ಸರ್ಕಾರಿ ನೌಕರರಿಗೆ ತಿಂಗಳಿಗೊಮ್ಮೆ ಖಾದಿ ಧಿರಿಸು ಕಡ್ಡಾಯ

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಖಾದಿ ಬಟ್ಟೆ ಬಳಕೆ ಕಡ್ಡಾಯಗೊಳಿಸಲಾಗಿದೆ. ಪ್ರತಿ ತಿಂಗಳ ಮೊದಲ ಶನಿವಾರ ಖಾದಿ ಬಟ್ಟೆ…

4 hours ago

ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ : ಯುಜಿಸಿ ನಿಯಮಾವಳಿಗೆ ʻಸುಪ್ರೀಂʼ ತಡೆ

ಹೊಸದಿಲ್ಲಿ : ಮಹತ್ವದ ಬೆಳವಣಿಗೆಯಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಹೊಸ ನಿಯಮಗಳಿಗೆ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿದೆ. ವಿಶ್ವವಿದ್ಯಾಲಯ…

4 hours ago