Andolana originals

ಓದುಗರ ಪತ್ರ: ಅಂಗ್ ಸಾನ್ ಸೂಕಿಗೆ ಬೇಕು ವಿಶ್ವ ಸಮುದಾಯದ ಬೆಂಬಲ

ಮ್ಯಾನ್ಮಾರ್ ಸೇನೆಯು ಅಂಗ್ ಸಾನ್ ಸೂಕಿ ಅವರ ಚುನಾಯಿತ ಸರ್ಕಾರವನ್ನು ೨೦೨೧ ರ -ಬ್ರವರಿಯಲ್ಲಿ ಕೆಳಗಿಳಿಸಿ ಅಧಿಕಾರ ಕಸಿದುಕೊಂಡು ಬಂಧಿಸಿ, ೧೮ ವರ್ಷ ಜೈಲು ಶಿಕ್ಷೆ ವಿಧಿಸಿ ಗೃಹ ಬಂಧನದಲ್ಲಿರಿಸಿದೆ .

ಇದೀಗ ೫ ವರ್ಷದ ನಂತರ ಲಂಡನ್‌ನಲ್ಲಿ ಇರುವ ತಮ್ಮಕಿರಿಯ ಮಗನ ಜೊತೆ ೨೦ ನಿಮಿಷ ಮಾತನಾಡಲು ಅವರಿಗೆ ಅವಕಾಶ ಕಲ್ಪಿಸಿರವುದು ಪತ್ರಿಕೆಗಳಲ್ಲಿ ವರದಿಯಾಗಿದೆ.

‘ಕೊನೆಗೂ ನನ್ನ ತಾಯಿಯೊಂದಿಗೆ ಮಾತನಾಡಲು ಸಾಧ್ಯವಾಯಿತು. ಅವರ ಧ್ವನಿಯನ್ನು ಮತ್ತೆ ಕೇಳಿರುವುದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ’ ಎಂದು ಅವರ ಮಗ ಕಿಮ್ ಅರಿಸ್ ಅವರು ಫೇಸ್‌ಬುಕ್ ನಲ್ಲಿ ಬರೆದುಕೊಂಡಿರುವುದಾಗಿ ವರದಿಯಾಗಿದೆ. ಇದು ತಾಯಿ-ಮಕ್ಕಳ ನಡುವಿನ ಮಮತೆಯನ್ನು ಎತ್ತಿ ತೋರಿದೆ. ೧೯೮೯ ರಿಂದ ೨೦೧೦ ರ ವರೆಗೆ ಮಿಲಿಟರಿ ಆಡಳಿತದ ಅವಧಿಯಲ್ಲಿ ಸೂಕಿ ಯವರು ಒಟ್ಟು ೧೫ ವರ್ಷಗಳನ್ನು ಗೃಹ ಬಂಧನದ ಕಳೆದಿದ್ದಾರೆ. ಪ್ರಜಾಪ್ರಭುತ್ವದ ಹಕ್ಕಿಗಾಗಿ ಹೋರಾಡುತ್ತಿರುವ ಇಂತಹ ನಾಯಕಿಯನ್ನು ಅವರ ಇಳಿ ವಯಸ್ಸಿನಲ್ಲೂ ಬಂಧಿಸಿರುವುದು ಖಂಡನೀಯ. ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತ ಮತ್ತು ಅಮೆರಿಕ ಹಾಗೂ ವಿಶ್ವ ಸಮುದಾಯ ಸೂಕಿಯವರ ಬೆಂಬಲಕ್ಕೆ ನಿಲ್ಲಬೇಕು. ಆದರೆ ಅತಿ ದೊಡ್ಡ ಪ್ರಜಾಪ್ರಭುತ್ವ ಎಂದು ಹೇಳಿಕೊಳ್ಳುವ ಈ ಎರಡೂ ರಾಷ್ಟ್ರ ಗಳಲ್ಲೂ ಪ್ರಭುತ್ವದ ವಿರುದ್ಧ ಹೋರಾಟ ನಡೆಯುತ್ತಿದೆ ಎನ್ನುವುದು ಪ್ರಜಾಪ್ರಭುತ್ವ ಪರ ದನಿ ಎತ್ತಲು ಅಸಹಾಯಕ ಎನ್ನುವ ಸ್ಥಿತಿಯನ್ನು ನಿರ್ಮಿಸಿದೆ.

-ಮುಳ್ಳೂರು ಪ್ರಕಾಶ್, ಮೈಸೂರು

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮಲ್ಲಿಗೆಯ ಮೈಸೂರಲಿ…

ಮಲ್ಲಿಗೆಯ ಮೈಸೂರಲಿ... ತಾಯಿ ಚಾಮುಂಡಿ ಮಡಿಲಲಿ ಮಲ್ಲಿಗೆಯ ಮೈಸೂರಲಿ ಅದ್ಧೂರಿ ಜಂಬೂ ಸವಾರಿ ಈ ಬಾರಿ, ಅಂಬಾರಿ ಹೊತ್ತ ಮೊದಲ…

1 hour ago

ಓದುಗರ ಪತ್ರ: ಬಯೋಮೆಟ್ರಿಕ್ ಪರಿಶೀಲನೆ ಕಟ್ಟುನಿಟ್ಟಾಗಿ ಜಾರಿಗೊಳಿಸಿ

ಇ -ಸಿಮ್ ತಂತ್ರeನದ ದುರ್ಬಳಕೆಯಿಂದ ಎಟಿಎಂ ಹಾಗೂ ಯುಪಿಐ ನಿಷ್ಕ್ರಿಯಗೊಂಡಿದ್ದರೂ ರೂ. ೪ ಲಕ್ಷದವರೆಗೆ ಸೈಬರ್ ವಂಚನೆ ನಡೆಯು ತ್ತಿರುವುದು…

1 hour ago

ಅಭಿಮನ್ಯು: ಇನ್ನು ದಸರಾ ಚೌಕಟ್ಟಿನಲ್ಲಿ ಸಿಗದವನಾದನು

ಶ್ರೇಯಸ್ ದೇವನೂರು ಮುಂದಿನ ಜಂಬೂಸವಾರಿಯ ಆನೆಗಳ ಸಾಲಿನಲ್ಲಿ ಕಾಣಸಿಗನು ಕೆಲವು ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಬಹುದು. ಆದರೆ ಆ ಕ್ಷಣಗಳಲ್ಲಿ ಮನಸ್ಸು…

1 hour ago

ಜ್ಞಾನೇಶ್ ಕುಮಾರ್‌ರನ್ನು ಜನರ ಎದುರು ನಿಲ್ಲಿಸೀಪ್ಪಾ!

ಇಂಡಿಯಾ ಟುಡೇ ಸಂದರ್ಶನದಲ್ಲಿ ಪ್ರಕಾಶ್‌ ರಾಜ್‌ ಆಗ್ರಹ  ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಕಾರಿನಲ್ಲಿ ಸಾಗುತ್ತಿದ್ದಾಗ ಇಂಡಿಯಾ ಟುಡೇಯ ರಾಜದೀಪ್…

2 hours ago

ಅರಮನೆ, ಮೃಗಾಲಯಕ್ಕೆ ಪ್ರವಾಸಿಗರ ಲಗ್ಗೆ

ಕೇಶವ್ ಎಂ. ಅರಮನೆಗೆ ೨,೧೯,೯೧೮ ಮಂದಿ, ಮೃಗಾಲಯಕ್ಕೆ ೧.೫೭ ಲಕ್ಷ ಮಂದಿ ಭೇಟಿ ಮೈಸೂರು: ದಸರಾ  ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆ…

2 hours ago