ಸಾಮಾಜಿಕ ಜಲತಾಣಗಳು ಇಂದು ವದಂತಿ ಮತ್ತು ವ್ಯಕ್ತಿ ನಿಂದನೆಯ ಅಖಾಡವಾಗಿ ಮಾರ್ಪಟ್ಟಿರುವುದು ತೀವ್ರ ಕಳವಳಕಾರಿ ಸಂಗತಿ. ಸತ್ಯಾಸತ್ಯತೆಯನ್ನು ಒರೆಗೆ ಹಚ್ಚದೆ, ಬಂದ ಸಂದೇಶವನ್ನು ಹಿಂದೆಮುಂದೆ ನೋಡದೆ ಹಂಚಿಕೊಳ್ಳುವ ಪ್ರವೃತ್ತಿ ಸಮಾಜದ ಸ್ವಾಸ್ಥ್ಯವನ್ನೇ ಕೆಡಿಸುತ್ತಿದೆ.
ಇತ್ತೀಚಿನ ದಿನಗಳಲ್ಲಿ ವ್ಯಕ್ತಿಗಳ, ಅದರಲ್ಲೂ ರಾಜಕಾರಣಿಗಳ ಚಾರಿತ್ರ್ಯಹರಣ ಎಗ್ಗಿಲ್ಲದೆ ನಡೆಯುತ್ತಿದೆ. ತಿರುಚಿದ ವಿಡಿಯೋ, ಕತ್ತರಿಸಿ ಜೋಡಿಸಿದ ಹೇಳಿಕೆ, ಕೃತಕ ಬುದ್ಧಿಮತ್ತೆಯ ಮೂಲಕ ಸೃಷ್ಟಿಸಿದ ನಕಲಿ ಚಿತ್ರಗಳು ಹಾಗೂ ಆಧಾರರಹಿತ ಆರೋಪಗಳು ಕ್ಷಣಾರ್ಧದಲ್ಲಿ ಲಕ್ಷಾಂತರ ಜನರನ್ನು ತಲುಪುತ್ತವೆ. ಸತ್ಯ ತನ್ನ ಚಪ್ಪಲಿ ಮೆಟ್ಟಿ ಹೊರಡುವಷ್ಟರಲ್ಲಿ ಸುಳ್ಳು ಊರೆಲ್ಲ ಸುತ್ತಿ ಬಂದಿರುತ್ತದೆ ಎಂಬ ಮಾತು ಇಂದಿನ ಡಿಜಿಟಲ್ ಯುಗಕ್ಕೆ ಅಕ್ಷರಶಃ ಅನ್ವಯಿಸುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯವು ನಮ್ಮ ಸಂವಿಧಾನ ನೀಡಿದ ಅಮೂಲ್ಯ ಹಕ್ಕು. ಆದರೆ ಆ ಸ್ವಾತಂತ್ರ್ಯಕ್ಕೆ ಇನ್ನೊಬ್ಬರ ಗೌರವ ಮತ್ತು ಘನತೆಯನ್ನು ಕಾಪಾಡುವ ಜವಾಬ್ದಾರಿಯೂ ಅಂತರ್ಗತವಾಗಿದೆ. ಹಕ್ಕುಗಳು ಕರ್ತವ್ಯಗಳೊಂದಿಗೆ ಬೆಸೆದುಕೊಂಡಿರುವಾಗ ಮಾತ್ರ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ. ಮೊದಲನೆಯದಾಗಿ, ಸುಳ್ಳು ಮಾಹಿತಿ ಹರಡುವವರ ವಿರುದ್ಧ ತ್ವರಿತ ವಿಚಾರಣೆ ಮತ್ತು ಕಠಿಣ ಶಿಕ್ಷೆಗೆ ಅವಕಾಶ ಕಲ್ಪಿಸುವ ಸ್ಪಷ್ಟ ಕಾನೂನುಗಳು ಜಾರಿಗೆ ಬರಬೇಕು. ಎರಡನೆಯದಾಗಿ ಫೇಸ್‌ಬುಕ್, ಎಕ್ಸ್, ಇನ್ಸ್ಟಾಗ್ರಾಂ, ವಾಟ್ಸಾಪ್‌ನಂತಹ ವೇದಿಕೆಗಳನ್ನು ತಮ್ಮ ತಾಣದಲ್ಲಿ ಪ್ರಕಟವಾಗುವ ವಿಷಯಕ್ಕೆ ಹೊಣೆಗಾರರನ್ನಾಗಿ ಮಾಡಬೇಕು. ದೂರು ಬಂದ ತಕ್ಷಣ ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕುವ ಕಡ್ಡಾಯ ವ್ಯವಸ್ಥೆ ಇರಬೇಕು. ಮೂರನೆಯದಾಗಿ, ನಕಲಿ ಖಾತೆಗಳು ಮತ್ತು ಬಾಡಿಗೆ ಪಡೆದು ನಡೆಸುವ ಅಪಪ್ರಚಾರ ಜಾಲಗಳನ್ನು ಪತ್ತೆಹಚ್ಚಲು ಸೈಬರ್ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಬೇಕು. ಆದರೆ ಕೇವಲ ಕಾನೂನಿನಿಂದ ಇದು ಸಾಧ್ಯವಿಲ್ಲ. ಪ್ರತಿಯೊಬ್ಬ ನಾಗರಿಕನೂ ಡಿಜಿಟಲ್ ಸಾಕ್ಷರತೆ ಮತ್ತು ವಿವೇಚನೆಯನ್ನು ಬೆಳೆಸಿಕೊಳ್ಳಬೇಕು.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ಮಂಡ್ಯ ನಗರದ ಬನ್ನೂರು ರಸ್ತೆಯಲ್ಲಿ ಎಂವಿಜಿ ಬೇಕರಿಯಿಂದ ಗೌರಿಶಂಕರ ಕಲ್ಯಾಣ ಮಂಟಪದವರೆಗೆ ಇರುವ ರಸ್ತೆಗೆ ಫುಟ್‌ಪಾತ್ ಅನ್ನೇ ನಿರ್ಮಿಸಿಲ್ಲ. ಈ…
ಸಹಪ್ರಯಾಣಿಕರ ಹಿತಾಸಕ್ತಿ ಕಾಪಾಡಲು ಭಾರತೀಯ ರೈಲ್ವೆ ಮೊಬೈಲ್ ಸ್ಪೀಕರ್ ಬಳಕೆ ಮತ್ತು ಜೋರಾಗಿ ಮಾತನಾಡುವುದರ ವಿರುದ್ಧ ಕಠಿಣ ನಿಯಮ ಜಾರಿಗೊಳಿಸಿರುವುದು…
‘ದೂರ ಶಿಕ್ಷಣ’ದ ಮೂಲಕ ಕಾನೂನು ಡಿಗ್ರಿ ಪಡೆದ ಛಲಗಾರರು ಪ. ಬಂಗಾಳದ ಕೊಲ್ಕೋತ್ತಾದ ಒಂದು ಸಾಂಪ್ರದಾಯಸ್ಥ ಕುಟುಂಬದಲ್ಲಿ ಹುಡುಗನಾಗಿ ಹುಟ್ಟಿದ…
ಮಂಜು ಕೋಟೆ ಕೋಟೆ: ವರದರಾಜಸ್ವಾಮಿ, ಚಾಮುಂಡೇಶ್ವರಿ ದೇವಿಯ ಆರಾಧನೆಯೊಂದಿಗೆ ಮಿನಿ ದಸರಾ ವೈಭವ ಎಚ್.ಡಿ.ಕೋಟೆ: ಪಟ್ಟಣದಲ್ಲಿ ಮಿನಿ ದಸರಾ ಹಾಗೂ…
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶುಭ ಮೀನ ಲಗ್ನದಲ್ಲಿ ಚಾಲನೆ ನೀಡಿದರು.…
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯ ಪ್ರಮುಖ ಘಟ್ಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರಶಾಂತನಿಗೆ ಸಾಥ್ ನೀಡಲು ಕುಮ್ಕಿ ಆನೆಗಳಾಗಿ ರೂಪ…