ಓದುಗರ ಪತ್ರ
ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಆಹಾರ ಪದಾರ್ಥಗಳ ತಯಾರಿಕೆಯ ವೇಳೆ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ಆದೇಶಿಸಿದ್ದರೂ ಕೆಲ ಹೋಟೆಲ್, ಬೇಕರಿ, ಫಾಸ್ಟ್‌ಫುಡ್ ಸೆಂಟರ್‌ಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ.
ಪ್ಲಾಸ್ಟಿಕ್ ಬಳಸಿ ಇಡ್ಲಿ ತಯಾರಿಸುವುದು ಮಾತ್ರವಲ್ಲದೆ ಪ್ಲಾಸ್ಟಿಕ್ ಲೋಟ, ತಟ್ಟೆಗಳ ಬಳಕೆ ಮಾಡುವುದೂ ಆರೋಗ್ಯಕ್ಕೆ ಹಾನಿಕರವಾಗಿದ್ದು, ಇದು ಕ್ಯಾನರ್‌ಗೆ ಕಾರಣವಾಗುತ್ತದೆ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ.
ಇಷ್ಟಿದ್ದರೂ ಕೆಲ ಹೋಟೆಲ್, ಫಾಸ್ಟ್‌ಫುಡ್ ಸೆಂಟರ್ ಹಾಗೂ ಬೇಕರಿಗಳಲ್ಲಿ ಆಹಾರ ತಯಾರಿಕೆ ವೇಳೆಯಲ್ಲಿ ಮಾತ್ರವಲ್ಲದೆ ತಿಂಡಿ, ಊಟ ಬಡಿಸುವಾಗಲೂ ತಟ್ಟೆಯ ಮೇಲೆ ಪ್ಲಾಸ್ಟಿಕ್ ಕವರ್ ಬಳಸುತ್ತಿದ್ದಾರೆ. ಚಹ ಅಂಗಡಿಗಳು ಹಾಗೂ ಜ್ಯೂಸ್ ಸೆಂಟರ್ ಗಳಲ್ಲಿಯೂ ಪ್ಲಾಸ್ಟಿಕ್ ಲೋಟಗಳು ಬಳಕೆಯಾಗುತ್ತಿವೆ. ಆದ್ದರಿಂದ ಸರ್ಕಾರ ಈ ಬಗ್ಗೆ ಗಮನಹರಿಸಿ ಪ್ಲಾಸ್ಟಿಕ್ ಬಳಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.
-ಪಿ.ಭಾಗ್ಯ, ಪತ್ರಿಕೋದ್ಯಮ ವಿಭಾಗ, ಮಹಾರಾಣಿ ಮಹಿಳಾ ಕಲಾ ಕಾಲೇಜು, ಮೈಸೂರು.
ಬೆಂಗಳೂರು: ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ದಾಖಲೆಯ 17ನೇ ಬಜೆಟ್ ಮಂಡಿಸಲು ಸಿದ್ಧರಾಗಿದ್ದಾರೆ. ಸಾಂಪ್ರದಾಯಿಕವಾಗಿ…
ಏಕಸ್ವಾಮ್ಯ ಸಾಧಿಸಲು ತಯಾರು ಪರಮಾಣು ಅಣ್ವಸ್ತ್ರ ಅದಕ್ಕಾಗಿಯೇ ನಿಲ್ಲದೆ ನಡೆಯುತ್ತಿದೆ ವಾಯು, ಡ್ರೋನ್, ಕ್ಷಿಪಣಿ ದಾಳಿ ನೆತ್ತರು ಹರಿಯುತ್ತಿದೆ ಹಿಂಸೆ…
ಸಂಬಂಧ..! ಒಂದೊಂದು ರೀತಿ ಒಬ್ಬೊಬ್ಬರ ಸಂಬಂಧ.. ಇವರದು ಹಾಲು-ಜೇನು ಅವರದು ಎಣ್ಣೆ-ಸೀಗೆಕಾಯಿ ಬೇಕಿದ್ದರೆ ಗಮನಿಸಿ.. ಇರಾನ್ -ಇಸ್ರೇಲ್ ಹಾವು-ಮುಂಗುಸಿ !…
ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಹಾಲ್ ನಿರ್ಗಮನ ದ್ವಾರದ ಬಳಿ ಮರವೊಂದು ಒಣಗಿ ನಿಂತಿದ್ದು, ಯಾವಾಗಲಾದರೂ ಬೀಳುವ ಸಾಧ್ಯತೆಯಿದೆ. ಕ್ರಾ-ರ್ಡ್ ಹಾಲ್…
ಮೈಸೂರಿನ ಮುಖ್ಯ ರೈಲ್ವೆ ನಿಲ್ದಾಣದಲ್ಲಿರುವ ಎಸ್ಕಲೇಟರ್ ಕೇವಲ ತೋರಿಕೆಗೆ ಮಾತ್ರ ಇದೆ ಎನಿಸುತ್ತದೆ. ಒಂದನೇ ಪ್ಲಾಟ್ ಫಾರ್ಮ್ ಬಿಟ್ಟರೆ ಉಳಿದ…
ಚಿತ್ರರಂಗದಲ್ಲಿರುವ ಮಹಿಳೆಯರಾಗಿ, ನಿರಂತರವಾಗಿ ನಡೆಯುತ್ತಿರುವ ಒಂದು ಗಂಭೀರ ಸಮಸ್ಯೆಯನ್ನು ಎದುರಿಸಲು ಒಟ್ಟಾಗಿ ನಿಂತಿದ್ದೇವೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಹಿಳಾ ಕಲಾವಿದರ…