Andolana originals

ಓದುಗರ ಪತ್ರ: ‘ಕುಬೇರನ ಮೂಲೆ’ಯಲ್ಲೇ ಕಸದ ಕೊಪ್ಪರಿಗೆ!

ನಮ್ಮ ಮನೆಯ ಕಸವನ್ನು,ಪಕ್ಕದ ಮನೆಗೋ ,ಅವರ ಅಂಗಳಕ್ಕೋ ಸುರಿಯುವುದು ನಾಗರಿಕತೆಯ ಲಕ್ಷಣವಲ್ಲ. ಆದರೆ ಅದು ಮೈಸೂರಿನ ಆರ್.ಟಿ.ನಗರದ ಬಡಾವಣೆಯ ಮೂಲೆ ಮೂಲೆಗಳಲ್ಲೂ ಎಗ್ಗಿಲ್ಲದೆ ನಡೆಯುತ್ತಿದೆ. ಈ ಬಡಾವಣೆಯನ್ನು ಮೈಸೂರಿನ ಕುಬೇರನ ಮೂಲೆ ಎಂದು ರಿಯಲ್ ಎಸ್ಟೇಟ್‌ನವರು ಬಿಂಬಿಸುತ್ತಾರೆ.

ಆದರೆ ಇಲ್ಲಿ ಕುಬೇರನ ಸಂಪತ್ತಿನ ಕೊಪ್ಪರಿಗೆಗಳು ಸಿಗದಿರಬಹುದು. ನಿಮಗಂತೂ ಕಸದ ಕೊಪ್ಪರಿಗೆಗಳ ರಾಶಿ ದಂಡಿಯಾಗಿ ಸಿಗುತ್ತವೆ ಮತ್ತು ದುರ್ನಾತವಂತೂ ಬೋನಸ್‌ ನಂತಾಗಿದೆ!

ಇದೇ ಬಡಾವಣೆಯಲ್ಲಿರುವ ಪತ್ರಕರ್ತರ ಬಡಾವಣೆಯ ಪರ್ವ ಫ್ರೆಂಡ್ಸ್ ಕ್ಲಬ್ ರಸ್ತೆಯಲ್ಲಿ ಸ್ವಲ್ಪ ಮುಂದೆ ಹೋಗಿ ಬಲಕ್ಕೆ ತಿರುಗಿದರೆ ಆರ್.ಟಿ.ನಗರದ ಜೋಡಿರಸ್ತೆಯ ಸಂಧಿಸುವ ರಸ್ತೆಯಿದೆ .ಅದಕ್ಕೆ ಡಾಂಬರೀಕರಣವೂ ಆಗಿದೆ. ಅಭಿವೃದ್ಧಿ ಹೊಂದಿದ ಬಡಾವಣೆಯವರು ಈ ರಸ್ತೆಯನ್ನು ತಮ್ಮ ಕಸ ಸುರಿಯುವ ತಿಪ್ಪೆಯಾಗಿ ಮಾರ್ಪಡಿಸಿಕೊಂಡಿದ್ದಾರೆ. ಇಲ್ಲಿ ಕಸವನ್ನು ಮಾತ್ರವಲ್ಲದೆ,ಸತ್ತ ಪ್ರಾಣಿಗಳನ್ನು ಇ ತಂದು ಬಿಸಾಕಿ ಹೋಗುತ್ತಾರೆ . ಹೀಗಿದ್ದಾಗ ಬೀದಿ ನಾಯಿಗಳು ಇವೆ ಎಂದು ಹೇಳಬೇಕಾಗಿಲ್ಲ.

೨೦ರಿಂದ ೩೦ ನಾಯಿಗಳು ಈ ಜಾಗದಲ್ಲೇ ಠಳಾಯಿಸಿವೆ. ಬೆಳಗಿನ ನಡಿಗೆಗೆ ಹೋಗುವಾಗಲಂತೂ ಅವುಗಳ ನೋಟ, ನೀವೂ ಒಂದು ದಿನ ನಮ್ಮ ಆಹಾರ ಎಂದುಕೊಂಡಂತೆ ಭಯ ಹುಟ್ಟಿಸುತ್ತವೆ .  ನಮ್ಮ ನೆರೆಯ ಲಿಂಗಾಂಬುದಿ ಪಾಳ್ಯ ಮೊದಲಾದ ಬಡಾವಣೆಗಳವರು ತಮ್ಮ ದನಗಳನ್ನು ನಮ್ಮ ಬಡಾವಣೆಗೆ ಗೋಮಾಳ ಅಂತ ತಿಳಿದು ಅಟ್ಟಿಬಿಡುತ್ತಾರೆ . ಇದರಿಂದಲೂ ಸಾಕಷ್ಟು ಸಮಸ್ಯೆ ಎದುರಿಸಬೇಕಾಗಿದೆ. ಈ ಕ್ಷೇತ್ರದ ಶಾಸಕರು, ಬೋಗಾದಿ ಪಟ್ಟಣ ಪಂಚಾಯಿತಿಯವರು ಈ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ.

– ಮಹೇಶ್ ಹರವೆ, ನಿವೃತ್ತ ಪ್ರಾಚಾರ್ಯರು , ಮೈಸೂರು

ಆಂದೋಲನ ಡೆಸ್ಕ್

Recent Posts

ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್‌ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ಶುಕ್ರವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದರು. ಲೋಕಭವನದ ಗಾಜಿನ ಮನೆಯಲ್ಲಿ ನಡೆದ…

12 mins ago

ಓದುಗರ ಪತ್ರ: ನಡೆಯಲಿ ಪ್ರಶಾಂತ…!

ನಡೆಯಲಿ ಪ್ರಶಾಂತ...! ಹೆಸರಿಗೆ ತಕ್ಕಂತೆ ಗಜ ಗಾಂಭೀರ್ಯದಿಂದ ನಡೆಯುತಿಹನು ಪ್ರಶಾಂತ ಎಲ್ಲವೂ ನಡೆಯಲಿ ಶಾಂತ... ಪ್ರಶಾಂತ ! ಅಭಿಮನ್ಯುವಿನ ಉತ್ತರಾಧಿಕಾರಿ…

14 mins ago

ಓದುಗರ ಪತ್ರ: ಜೀವ ಉಳಿಸುವ ಔಷಧಗಳು ಅತಿ ಲಾಭದ ವಸ್ತು ಆಗಬಾರದಲ್ಲವೇ?

ಗಂಭೀರ ಕಾಯಿಲೆಗಳ ೧೮೦ ದುಬಾರಿ ಔಷಧಗಳು ಮತ್ತು ೭೮೦ ವೈದ್ಯಕೀಯ ಸಾಮಗ್ರಿಗಳನ್ನು ಹತ್ತಾರು ಪಟ್ಟು ಹೆಚ್ಚು ಲಾಭವಿಟ್ಟುಕೊಂಡು ಮಾರಾಟ ಮಾಡುತ್ತಿರುವುದು…

16 mins ago

ನಿನ್ನೆ ರಷ್ಯಾದಲ್ಲಿ ‘ರೂಬಿ ಕ್ಯೂಬ್’, ನಾಳೆ ಟೊರೆಂಟೊದಲ್ಲಿ ‘ಮಹಿಮಾ’

ವೈಡ್‌ ಆಂಗಲ್:‌ ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ರಷ್ಯಾ-ಭಾರತ ಸಂಬಂಧದ ಹಿನ್ನೆಲೆಯಲ್ಲಿ ಚಿತ್ರೋತ್ಸವ ಆಯೋಜನೆ ಎರಡು ಕನ್ನಡ ಚಿತ್ರಗಳು ಅಂತಾರಾಷ್ಟ್ರೀಯ…

29 mins ago

ದರ್ಶನ್ ತಂಗಿದ್ದ ಜಾಗದ ರಹಸ್ಯ ಬಯಲು!

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಎಸಿಪಿ ಚಂದನ್ ಎಂಟ್ರಿ; ಒಂದೇ ಮಾತಿಗೆ ಗುಟ್ಟು ಬಾಯಿಬಿಟ್ಟ ಪ್ರದೋಷ್ ಮೈಸೂರಿನ ರ‍್ಯಾಡಿಷನ್‌ ಬ್ಲೂ…

39 mins ago

ಗಣ್ಯರಿಗೆ ವಾಸ್ತವ್ಯ ಒದಗಿಸುವುದೇ ಸವಾಲು

ಕೆ.ಬಿ.ರಮೇಶನಾಯಕ ಮೊಟ್ಟ ಮೊದಲ ಬಾರಿಗೆ ಗಣ್ಯರ ವಾಸ್ತವ್ಯಕ್ಕಾಗಿ ಸರ್ಕಾರಿ, ಸ್ವಾಯತ್ತ ಸಂಸ್ಥೆಗಳ ಕೊಠಡಿ ಬಳಕೆ ಮೈಸೂರು: ದಸರಾ ಮಹೋತ್ಸವದ ಪ್ರಮುಖ…

1 hour ago