ಸ್ವಾತಂತ್ರ್ಯ ಹೋರಾಟಗಾರರು ಹಾಗೂ ತಗಡೂರು ಗಾಂಧಿ ಎಂದೇ ಕರೆಯಲ್ಪಟ್ಟ ಹಿರಿಯರಾದ ತಗಡೂರು ರಾಮಚಂದ್ರರಾಯರ ಗೌರವಾರ್ಥ ಮೈಸೂರು ನಗರದಲ್ಲಿ ಶ್ರೀಯುತರು ವಾಸವಾಗಿದ್ದ ಚಾಮುಂಡಿಪುರಂ ಬಡಾವಣೆಯಲ್ಲಿರುವ ಪ್ರಮುಖ ವೃತ್ತಕ್ಕೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಅಲ್ಲದೆ ಪಕ್ಕದಲ್ಲಿರುವ ಉದ್ಯಾನವನಕ್ಕೂ ತಗಡೂರು ರಾಮಚಂದ್ರರಾಯರ ಹೆಸರು ಇಡಲಾಗಿದ್ದು, ಉದ್ಯಾನದ ಆವರಣದಲ್ಲಿ ರಾಮಚಂದ್ರ ರಾಯರ ಪುತ್ತಳಿಯನ್ನು ಸ್ಥಾಪಿಸಿರುವುದು ಗೊತ್ತಿರುವ ವಿಷಯ. ಆದರೆ ಪುತ್ತಳಿಯು ಹಲವಾರು ವರ್ಷಗಳಿಂದ ಬಯಲಿನ ವಾತಾವರಣದಲ್ಲಿದ್ದರೂ ಚಾವಣಿ ವ್ಯವಸ್ಥೆಯನ್ನು ಮಾಡಲಾಗಿಲ್ಲ. ಇಂತಹ ಸಂದರ್ಭದಲ್ಲಿ ಪುತ್ತಳಿಯ ಪಕ್ಕಕ್ಕೆ ಹೊಂದಿಕೊಂಡಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಎತ್ತರದ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದು ಇದು ಸ್ವಾತಂತ್ರ್ಯ ಹೋರಾಟಗಾರರ ಪುತ್ತಳಿಯನ್ನು ಮರೆಮಾಡುವಂತಿದೆ.
ಈಗಲಾದರೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಗಮನಹರಿಸಿ ಸ್ವಾತಂತ್ರ್ಯಹೋರಾಟಗಾರರ ಪುತ್ತಳಿ ಮರೆಯಾದಂತೆ ಗಮನಹರಿಸಬೇಕಾಗಿದೆ. ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ. ಎಸ್. ಶ್ರೀವತ್ಸ ರವರು ಸಂಬಂಧಪಟ್ಟ ಅಧಿಕಾರಿಗಳೊಡನೆ ಸಮಾಲೋಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
– ಶ್ರೀಕಂಠ ಕುಮಾರ್, ಮೈಸೂರು
ನವದೆಹಲಿ: ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಾಘೇರ್ ಘಾಲಿಬಾಫ್ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅಕ್ಟೋಬರ್ 26 ಮತ್ತು 27ರಂದು…
ಬೆಂಗಳೂರು: ರಾಜ್ಯದಲ್ಲಿ ಅಂತರ್ಜಲದ ಬಳಕೆ ಶೇಕಡಾ 70ರಷ್ಟಾಗಿದ್ದು, ಅಂತರ್ಜಲ ಮಟ್ಟ ಮತ್ತಷ್ಟು ಕುಸಿಯುವ ಆತಂಕ ಎದುರಾಗಿದೆ. ಕುಡಿಯುವ ನೀರು, ಕೃಷಿ…
ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಮಳೆ ಚುರುಕುಗೊಂಡಿದ್ದು, ಕೃಷಿ ಚಟುವಟಿಕೆಗಳಿಗೆ ಮಳೆ ಮತ್ತೊಮ್ಮೆ ಮಹತ್ವ ಪಡೆದುಕೊಂಡಿದೆ. ಹಿಂಗಾರು ಬೆಳೆಗಳ ಬಿತ್ತನೆಗೆ ಸಿದ್ಧತೆ ನಡೆಸುತ್ತಿರುವ…
ಲಾಸಾ: ನೇಪಾಳ–ಟಿಬೆಟ್ ಗಡಿಯಲ್ಲಿ ಸಂಭವಿಸಿದ್ದ ಭೀಕರ ಪ್ರವಾಹದ ನೆನಪು ಮಾಸುವ ಮುನ್ನವೇ ಟಿಬೆಟ್‌ನಲ್ಲಿ ಮತ್ತೊಂದು ನೈಸರ್ಗಿಕ ವಿಕೋಪ ಸಂಭವಿಸಿದೆ. ಅಕ್ಟೋಬರ್…
ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರನ್ನು ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಯ…
ಚಾಮರಾಜನಗರದ ಡಾ. ಬಿ. ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಕ್ಟೋಬರ್ ೨೪ ಮತ್ತು ೨೫ ರಂದು ನಡೆಯಲಿರುವ ಅಂತರರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನ ಗಮನಸೆಳೆಯುವಂತಾಗಬೇಕು.…