Andolana originals

ದೇಶಾದ್ಯಂತ ರಕ್ಷಿತಾ ಗಾನ ಸಿಂಚನ…

ಸಾಲೋಮನ್

ಪ್ಯಾನ್ ಇಂಡಿಯಾಗೆ ಮೈಸೂರಿನ ಮತ್ತೊಂದು ಕೊಡುಗೆ

ನಟರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಸಾಹಿತ್ಯ ಹಾಗೂ ಸ್ಟುಡಿಯೋ ಮಾಲೀಕರು… ಹೀಗೆ ಭಾರತೀಯ ಚಿತ್ರರಂಗದ ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಹೆಸರು ಮಾಡಿರುವ ಅನೇಕ ಪ್ರತಿಭಾನ್ವಿತರು ಮೈಸೂರಿನವರೇ ಆಗಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ಮೈಸೂರಿನ ಗಾಯಕಿ ರಕ್ಷಿತಾ ಸುರೇಶ್ ಅವರು.

ರಕ್ಷಿತಾ ಸುರೇಶ್ ಅವರು ಪ್ಯಾನ್ ಇಂಡಿಯಾ ಗಾಯಕಿಯಾಗಿ ಖ್ಯಾತಿ ಪಡೆದಿರುವುದು ಮೈಸೂರಿನ ಕಿರೀಟಕ್ಕೆ ಮತ್ತೊಂದು ಶ್ರೇಷ್ಠ ಗರಿಯಾಗಿದೆ. ಇವರು ಭಾರತೀಯ ಚಲನಚಿತ್ರರಂಗದ ಸಂಗೀತ ಕ್ಷೇತ್ರದ ದಿಗ್ಗಜರಾದ ಇಳಯರಾಜ ಹಾಗೂಎಆರ್.ಹಮಾನ್ ಅಮೊಟ್ಟಿಗೆ ಕೆಲಸ ಮಾಡುತ್ತಿದ್ದಾರೆ.

ರಕ್ಷಿತಾ ಅವರ ಹಿನ್ನೆಲೆ ಗಾಯನದ ಜರ್ನಿ ಆರಂಭವಾಗಿದ್ದು ಕಂಬೋಲಿನ ಇಳಯರಾಜ ಸಂಗೀತ ನಿರ್ದೇಶನದ ತೆಲುಗು ಚಿತ್ರ ವಿಶೇಷ ಹಾಡಿನಮೂಲಕ ಆ ಹಾಡು ಸೂಪರ್ ಹಿಟ್ ಆಗಿತ್ತು. ‘ಯವಡೆ ಸುಬ್ರಹ್ಮಣ್ಯಂ’ ಸಿನಿಮಾದ ‘ಚಲ್ಲ ಗಾಳಿ…’ ಆದರೆ ರಕ್ಷಿತಾ ಅವರಿಗೆ ಪ್ರಚಾರ ಸಿಗದ ಕಾರಣ ಸುಮಾರು ಆರು ವರ್ಷಗಳು ಯಾವುದೇ ಸಿನಿಮಾದಲ್ಲಿ ಅವಕಾಶ ಸಿಗಲಿಲ್ಲ. ಮೈಸೂರಿನ ಸುರೇಶ್‌ ವಿಶ್ವನಾಥ್‌ ಹಾಗೂ ಅನಿತಾ ದಂಪತಿಯ ಪುತ್ರಿ ರಕ್ಷಿತಾ, ಬಾಲ್ಯದಿಂದಲೇ ವಿದುಷಿ ಸುನಿತಾ ಚಂದ್ರಶೇಖರ್ ಅವರ ಬಳಿ ಸಂಗೀತಾಭ್ಯಾಸ ಮಾಡಿ, ಅದರ ಎಲ್ಲ ಪಟ್ಟುಗಳನ್ನೂ ಕರಗತ ಮಾಡಿಕೊಂಡರು.

2011ರಲ್ಲಿ ವಿಜಯ್ ಟಿವಿ ನಡೆಸಿದ ಸೂಪರ್ ಸಿಂಗರ್ಸ್ ಜೂನಿಯರ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ವಿಜೇತರಾಗಿದ್ದರು. ಆನಂತರ ಸಂಗೀತ ನಿರ್ದೇಶಕ ಇಳಯರಾಜ ಈಕೆಯ ಪ್ರತಿಭೆಯನ್ನು ಗುರುತಿಸಿ ಅವಕಾಶ ನೀಡಿದರು. ಬಳಿಕ 2018 ರಲ್ಲಿ ಸೂಪರ್ ಸಿಂಗರ್-6ರಲ್ಲಿ ಭಾಗವಹಿಸಿ ರನ್ನರ್ ಅಪ್ ಆದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಗೀತ ನಿರ್ದೇಶಕ ಎ. ಆರ್.ರೆಹಮಾನ್ ಅವರು ರಕ್ಷಿತಾರಿಗೆ ತಮ್ಮ ಸಂಗೀತ ನಿರ್ದೇಶನದ ‘ಕೋಬಾ’ ಚಿತ್ರದಲ್ಲಿ ಹಾಡಲು ಅವಕಾಶ ನೀಡಿದರು. ಅಲ್ಲಿಂದ ಮುಂದೆ ರಕ್ಷಿತಾ ಗಾಯಕಿಯಾಗಿ ಹಿಂದಿ, ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಚಿತ್ರಗಳಲ್ಲಿ ಹಾಡಿದ ಬಹುತೇಕ ಹಾಡುಗಳು ಸೂಪರ್ ಹಿಟ್ ಆಗಿವೆ. ರಕ್ಷಿತಾ ಈಗ ಬಹು ಬೇಡಿಕೆಯ ಪ್ಯಾನ್ ಇಂಡಿಯಾ ಗಾಯಕಿಯಾಗಿದ್ದಾರೆ. ಸದ್ಯ ಚೆನ್ನೈನಲ್ಲಿ ಕುಟುಂಬದ ಜೊತೆ ನೆಲೆಸಿದ್ದಾರೆ.

ಗಾಯಕಿ ಚಿತ್ರಾ ಸ್ಫೂರ್ತಿ: ಹಿನ್ನೆಲೆ ಗಾಯಕಿ ಚಿತ್ರಾ ಹಾಗೂ ನನ್ನ ಕುಟುಂಬ ನನಗೆ ಸ್ಫೂರ್ತಿಯಾಗಿದೆ. ಅವರು ನನ್ನ ಅಮ್ಮನ ಸ್ಥಾನದಲ್ಲಿದ್ದಾರೆ ಎಂದು ರಕ್ಷಿತಾ ಸ್ಮರಿಸುತ್ತಾರೆ. ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಅವರ ಅನೇಕ ಹಾಡುಗಳಿಗೆ ಟ್ರ್ಯಾಕ್ ಗಾಯಕಿಯಾಗಿ ಹಾಡಿರುವ ರಕ್ಷಿತಾಳ ಇಂಪಾದ ದನಿಗೆ ಅವರೇ ಮನಸೋತಿದ್ದಾರೆಂದರೆ ಇದು ಹೆಮ್ಮೆಯ ವಿಷಯವೇ ಹೌದು, ‘ನೀನು ಟ್ರ್ಯಾಕ್ ಹಾಡಿದ್ದನ್ನು ಕೇಳಿ, ಅನೇಕ ವಿಚಾರಗಳನ್ನು ನಾನೂ ಕಲಿತುಕೊಂಡಿದ್ದೇನೆ. ನಿನ್ನ ಹಾಡು ಯಾವಾಗ ರಿಲೀಜ್ ಆಗುತ್ತೆ ಎಂದು ಕಾಯುತ್ತಿರುತ್ತೇನೆ’ ಎಂದು ಶ್ರೇಯಾ ಅವರು ಹೇಳುವಾಗ ನನಗೆ ಖುಷಿ ಆಗುತ್ತದೆ. ಅಷ್ಟು ದೊಡ್ಡ ಗಾಯಕಿ ಎಷ್ಟು ಸರಳವಾಗಿ ನಡೆದುಕೊಳ್ಳುತ್ತಾರೆ. ಇದನ್ನೆಲ್ಲಾ ನೋಡುತ್ತಾ, ಸರಳತೆಯನ್ನು ಮೈಗೂಡಿಸಿಕೊಳ್ಳುತ್ತಿದ್ದೇನೆ ಎನ್ನುತ್ತಾರೆ ರಕ್ಷಿತಾ ಅವರು.

ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ, ರಘುದೀಕ್ಷಿತ್, ಇಳಯರಾಜ, ಎ.ಆರ್.ರೆಹಮಾನ್, ಅನಿರುದ್ಧ ಅವರಂತಹ ಟಾಪ್ ಮ್ಯೂಜಿಕ್ ಡೈರೆಕ್ಟರ್‌ಗಳ ರಾಗಸಂಯೋಜನೆಯಲ್ಲಿ ಹಾಡಿದ್ದಾರೆ. ‘ಪೊನ್ನಿಯಿನ್ ಸೆಲ್ವನ್ -2’, ಕೋಬ್ರಾ, ಹಿಂದಿಯ ‘ಜವಾನ್’ ಕನ್ನಡದ ಉಪಾಧ್ಯಕ್ಷ ಹಾಗೂ ‘ಕೃಷ್ಣಂ ಪ್ರಣಯಂ ಸಖಿ’ ಮತ್ತು ಆಲ್ಬಮ್‌ಗಳಲ್ಲಿ ರಕ್ಷಿತಾ ಹಾಡಿದ್ದಾರೆ.

‘ಇವಳ ಅಪ್ಪ ಇದ್ದಿದ್ದರೆ ಖುಷಿ ಪಡುತ್ತಿದ್ದರು:
ನಮ್ಮ ಬದುಕಿನ ಪುಟಗಳನ್ನು ಹಿಂದಕ್ಕೆ ತಿರುವಿ ನೋಡಿದಾಗ ಅನೇಕ ಕಷ್ಟಕಾರ್ಪಣ್ಯ ಸಾಹಸ ಸಾಧನೆಗಳು ಕಂಡು ಬರುತ್ತದೆ. ಆ ಶ್ರಮದ ಫಲವೆ ರಕ್ಷಿತಾ ಇಂದಿನ ಯಶಸ್ಸು ರಕ್ಷಿತಾಳನ್ನು ಒಬ್ಬ ಗಾಯಕಿಯಾಗಿ ಕಾಣಲು ಆಕೆಯ ತಂದೆ ತುಂಬಾ ಆಸೆ ಪಟ್ಟಿದ್ದರು. ಆಕೆಯ ಯಶಸ್ಸಿನ ಹಿಂದೆ ಅವರ ಶ್ರಮವೂ ಇದೆ.
-ಅನಿತಾ ಸುರೇಶ್, ರಕ್ಷಿತಾ ತಾಯಿ.

ಸ್ವಂತ ಆಲ್ಬಮ್ ಮಾಡುವ ಬಯಕೆ: ಈಗಾಗಲೇ ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ ಚಲನಚಿತ್ರಗಳಲ್ಲಿ ಹಾಡಿದ್ದೇನೆ. ನನ್ನ ವೃತ್ತಿ ಖುಷಿಕೊಟ್ಟಿದೆ. ನಾನು ಹಾಡಿದ ಹಾಡುಗಳು ನನಗೆ ಖುಷಿಕೊಟ್ಟಿವೆ. ಇದರ ಜೊತೆಗೆ ನನ್ನದೇ ಸ್ವಂತ ಆಲ್ಬಮ್ ಹೊರತರುವ ಬಯಕೆ ಎನ್ನುತ್ತಾರೆ ರಕ್ಷಿತಾ.

ಮೈಸೂರಿನಲ್ಲಿ ಮೊದಲ ಬಾರಿಗೆ ಯುವ ದಸರಾದಲ್ಲಿ ವೇದಿಕೆ ಕಾರ್ಯಕ್ರಮ ನಡೆಸಿಕೊಟ್ಟ ಜನಪ್ರಿಯ ಸಂಗೀತ ನಿರ್ದೆಶಕ ಎ.ಆರ್.ರೆಹಮಾನ್ ತಂಡದಲ್ಲಿ ಪ್ರಮುಖ ಗಾಯಕಿಯಾಗಿ ಹಾಡಿದ್ದು ಮೈಸೂರಿನ ಹುಡುಗಿ ರಕ್ಷಿತಾ ಸುರೇಶ್ ಎಂಬುದು ಹೆಮ್ಮೆಯ ಸಂಗತಿ.

ಆಂದೋಲನ ಡೆಸ್ಕ್

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

5 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago