Andolana originals

ಒಡನಾಡಿ ಸ್ಟ್ಯಾನ್ಲಿ ಮನೆಯಲ್ಲಿ ಸರ್ವಧರ್ಮಗಳ ಬೊಂಬೆ ಪ್ರದರ್ಶನ

ಮೈಸೂರು: ಅಲ್ಲಿ ಬುದ್ಧನಿದ್ದಾನೆ…, ಬಸವ, ಕ್ರಿಸ್ತನಿದ್ದಾನೆ…, ಕೃಷ್ಣನ ಬೊಂಬೆಯ ಜೊತೆಗೆ ಶಿವನ ಅವತಾರವೂ ಇದೆ. ಕುರಾನ್ ಗ್ರಂಥ, ಈದ್ಗಾ ಮೈದಾನದ ಚಿತ್ರಣವೂ ಇದೆ. ಒಟ್ಟಾರೆ ಇದು ಸರ್ವಧರ್ಮಗಳ ಮಿಳಿತವಾದ ಬೊಂಬೆ ಪ್ರದರ್ಶನ ಎನ್ನಲು ಅಡ್ಡಿ ಇಲ್ಲ.

ಇದರ ಜೊತೆಗೆ ದಸರಾ ಅಂಬಾರಿ, ಪಟ್ಟದ ಬೊಂಬೆಗಳು, ಪುರಾಣ ಕಥೆಗಳು, ನಾಡಿನ ದಾಸರ ಚಿತ್ರಣ, ಶ್ರೀಕೃಷ್ಣ ಲೀಲೆ, ಪೂತನಿ ಮತ್ತು ಕಂಸ ವಧೆ, ಗೋವರ್ಧನ ಗಿರಿ, ಶಿವ ಪಾರ್ವತಿ, ಮಹಾ ವಿಷ್ಣುವಿನ ದಶಾವತಾರ ಇತ್ಯಾದಿ ಬೊಂಬೆಗಳು ನಮ್ಮ ಇತಿಹಾಸ ಹಾಗೂ ಪುರಾಣಗಳ ಕಥೆಗಳನ್ನು ಹೇಳುತ್ತಿವೆ. ಪ್ರಸ್ತುತ ಅನೇಕ ವಿಚಾರಗಳಲ್ಲಿ ವಿವಾದಗಳು ಸೃಷ್ಟಿಯಾಗುತ್ತಿರುವ ಇಂಥ ಸಂದರ್ಭದಲ್ಲಿ ಈ ದೇಶಕ್ಕೆ ಬೇಕಾಗಿರುವ ಭಾವೈಕ್ಯತೆಯನ್ನು ಸಂಸ್ಕೃತಿ, ಪರಂಪರೆಗಳನ್ನು ತಮ್ಮ ಕೃತಿಗಳ ಹಾಗೂ ಬೊಂಬೆಗಳ ಮೂಲಕವೇ ಐ ದಂಪತಿ ಎಲ್ಲವನ್ನೂ ವಿವರಿಸಿದ್ದಾರೆ.

ಇದು ಕಂಡುಬಂದದ್ದು ನಗರದ ಹೂಟಗಳ್ಳಿಯಲ್ಲಿರುವ ಒಡನಾಡಿ ಸೇವಾ ಸಂಸ್ಥೆಯ ಸ್ಟ್ಯಾನ್ಲಿ ಹಾಗೂ ಡಾ.ಕುಮುದಿನಿ ಅಚ್ಚಿ ದಂಪತಿ ಮನೆಯಲ್ಲಿ ಈ ದಂಪತಿಗಳು ಕಳೆದ ಎರಡು ದಶಕಗಳಿಂದ ತಮ್ಮ ಮನೆಯಲ್ಲಿ ಬೊಂಬೆ ಹಬ್ಬವನ್ನು ಸಾಂಸ್ಕೃತಿಕ ಸಡಗರವಾಗಿ ಆಚರಿಸುತ್ತಾ ಬರುತ್ತಿದ್ದಾರೆ. ಎಲ್ಲಾ ಧರ್ಮಗಳ ಚೌಕಟ್ಟನ್ನು ಮೀರಿ ಈ ಹಬ್ಬವು ಬೊಂಬೆಗಳ ಮೂಲಕ ಇಲ್ಲಿ ಜೀವ ತಳೆದಿರುವುದನ್ನು ಕಾಣಬಹುದು.

ಸುಮಾರು ೫೦ಕ್ಕೂ ಹೆಚ್ಚು ರಾಷ್ಟ್ರಗಳ ಉಡುಗೆ ತೊಡುಗೆ ಉಳ್ಳ ಗೊಂಬೆಗಳನ್ನು ಇವರು ಅನೇಕ ವರ್ಷಗಳಿಂದ ಸಂಗ್ರಹಿಸಿ ಪ್ರದರ್ಶನಕ್ಕೆ ಇಡುತ್ತಾ ಬಂದಿದ್ದಾರೆ. ಇದೊಂದು ಅಂತಾರಾಷ್ಟ್ರೀಯ ಬೊಂಬೆಗಳ ಮಿಲನ ಎನ್ನಲು ಅಡ್ಡಿ ಇಲ್ಲ. ನಮ್ಮ ಭಾಗದ ನೈಜ ಗ್ರಾಮೀಣ ಜನರ, ರೈತರ, ಕಾರ್ಮಿಕರ ಬದುಕಿನ ಅನಾವರಣ ಇಲ್ಲಿದೆ. ಮೈಸೂರು ದಸರಾ ಮೆರವಣಿಗೆ, ದೇಶದ ಜನಪದ ಕಲಾಕಾರರು, ಸಂಗೀತಗಾರರು, ವಿಶ್ವದ ಅನೇಕ ಕಾರ್ಟೂನ್ ಗೊಂಬೆಗಳು, ಎತ್ತಿನ ಗಾಡಿಯಿಂದ ಹಿಡಿದು ಆಧುನಿಕ ವಾಹನಗಳವರೆಗೆ ಇಲ್ಲಿ ಬೊಂಬೆಗಳನ್ನು ಕಾಣಬಹುದು.

ಡಾ.ಕುಮುದಿನಿ ಅಚ್ಚಿ ಹಾಗೂ ಒಡನಾಡಿ ಸ್ಟ್ಯಾನ್ಲಿ ಅವರು ಮುತುವರ್ಜಿವಹಿಸಿ ನವರಾತ್ರಿಯ ಸಂದರ್ಭದಲ್ಲಿ ತಮ್ಮ ವೃತ್ತಿಯನ್ನು ಮುಗಿಸಿ ತಡರಾತ್ರಿಯವರೆಗೂ ಶ್ರಮ ಹಾಕಿ ಇವೆಲ್ಲವನ್ನೂ ನೋಡುಗರಿಗೆ ಕಟ್ಟಿಕೊಡುವುದರ ಜೊತೆಗೆ ಚಾಮುಂಡಿ ಬೆಟ್ಟ, ಗ್ರಾಮೀಣ ಮೈಸೂರು, ಪ್ರಾಣಿ ಸಂಗ್ರಹಾಲಯ, ಹೈನುಗಾರಿಕೆಯನ್ನು ಈ ಬೊಂಬೆ ಹಬ್ಬದಲ್ಲಿ ತಂದಿರಿಸುತ್ತಾರೆ. ಮನೆಗೆ ಬರುವ ಅತಿಥಿಗಳಿಗೆ ಹಾಗೂ ಶಾಲಾ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯವು ಈ ಬೊಂಬೆ ಹಬ್ಬದ ಸಂದರ್ಭದಲ್ಲಿ ನಡೆಯುವುದು ವಿಶೇಷ.

ನಾವು ಬಾಲ್ಯದಲ್ಲಿ ಮನುಷ್ಯರಾಗಿ ಬೆಳೆದಿದ್ದೆವು. ಅದಕ್ಕೆ ಜಾತ್ಯತೀತ ಎಂಬ ಪಟ್ಟಿ ಇರಲಿಲ್ಲ. ಎಲ್ಲಾ ಹಬ್ಬಗಳು ನಮ್ಮ ಮನೆಯಲ್ಲಿ ನಡೆಯುತ್ತವೆ. ಎಲ್ಲಾ ದೇವರಿಗೂ ನಮ್ಮಲ್ಲಿ ಸ್ಥಾನವಿದೆ. ಅವರುಗಳ ಬಗ್ಗೆ ನಮಗೆ ಭಯವಾಗಲಿ, ಅಂಧ ಶ್ರದ್ಧೆಯಾಗಲಿ ಇಲ್ಲ. ಬದಲಾಗಿ ಗೌರವವಿದೆ. ಪ್ರೀತಿ ಇದೆ. ಈ ನಾಡಿನ ಎಲ್ಲಾ ಹಬ್ಬಗಳು ನಮ್ಮನ್ನು ಜೀವಂತವಾಗಿರಿಸುತ್ತವೆ. ಒಳಗೊಳ್ಳುವಿಕೆಯ ಸಂಸ್ಕಾರವನ್ನು ನೀಡಿದೆ. ಈ ಹಬ್ಬದಲ್ಲಿ ನಮ್ಮ ಶ್ರಮ ಒಂದು ರೀತಿಯ ಥೆರಪಿಯಾಗಿ ಕೆಲಸ ಮಾಡುತ್ತಿದೆ ಎಂದು ದಂಪತಿಗಳು ನುಡಿಯುತ್ತಾರೆ.

ನಮ್ಮ ಮಕ್ಕಳಿಗೂ ಈ ದೇಶಕ್ಕೆ ಬೇಕಾಗಿರುವ ಭಾವೈಕ್ಯತೆಯನ್ನು ನಮ್ಮ ಕೃತಿಗಳ ಮೂಲಕ ಮಾತುಕತೆಗಳ ಮೂಲಕ ಹಾಗೂ ನಡವಳಿಕೆಗಳ ಮೂಲಕ ಹೇಳಿಕೊಡುವುದು ಅತ್ಯವಶ್ಯ.

ಆಂದೋಲನ ಡೆಸ್ಕ್

Recent Posts

TESLA | ಶೀಘ್ರದಲ್ಲೇ ಬೆಂಗಳೂರಿಗೆ ಟೆಸ್ಲಾ ಶೋ ರೂಂ!

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಶೀಘ್ರದಲ್ಲೇ ಶೋ ರೂಂ ತೆರೆಯುದಾಗಿ ವಿದ್ಯುತ್ ಚಾಲಿತ ಕಾರು ತಯಾರಿಕಾ ಕಂಪನಿ ʼಟೆಸ್ಲಾʼ…

4 hours ago

ಚಲನಚಿತ್ರ ಪ್ರಮಾಣೀಕರಣದಲ್ಲಿ ಪಾರದರ್ಶಕತೆ ಇರಲಿ : ನಟ ಕಮಲ್ ಹಾಸನ್ ಸಲಹೆ

ಚೆನ್ನೈ : ತಮಿಳ್ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷ ಹಾಗೂ ನಟ ವಿಜಯ್ ಅಭಿನಯದ ಜನ ನಾಯಗನ್ ಚಿತ್ರಕ್ಕೆ ಸಂಬಂಧಿಸಿದ…

4 hours ago

ಕುಕ್ಕರಹಳ್ಳಿ ಕೆರೆಯಲ್ಲಿ ಸ್ಚಚ್ಛತಾ ಅಭಿಯಾನ : 410 ಕೆ.ಜಿ ಕಸ ಸಂಗ್ರಹ

ಮೈಸೂರು : ಸ್ವಚ್ಛ ನಗರಿ ಮೈಸೂರಿನ ರಮಣೀಯ ಸ್ಥಳವಾದ ಕುಕ್ಕರಹಳ್ಳಿ ಕೆರೆಯ ಸ್ವಚ್ಛತೆಗಾಗಿ, ಸ್ವಚ್ಛ ಸರ್ವೇಕ್ಷಣ ಅಭಿಯಾನದ ಭಾಗವಾಗಿ ಮೈಸೂರು…

5 hours ago

ಸಿದ್ದರಾಮಯ್ಯ ಲೀಸ್ ಬೇಸ್ಡ್ ಮುಖ್ಯಮಂತ್ರಿ : ಎಚ್‌ಡಿಕೆ ಲೇವಡಿ

ಬೆಂಗಳೂರು : ಸಿದ್ದರಾಮಯ್ಯ ಲೀಸ್ ಬೇಸ್ಡ್ ಮುಖ್ಯಮಂತ್ರಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಅಧಿಕಾರವಧಿಯಲ್ಲಿ…

6 hours ago

SSLC ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ

ಬೆಂಗಳೂರು : ವಿದ್ಯಾರ್ಥಿ ಜೀವನದ ಅತಿ ಮಹತ್ವದ ಘಟ್ಟ ಎಂದೇ ಪರಿಗಣಿಸಲಾದ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ…

6 hours ago

ಸ್ಪಾಮ್‌ ಕರೆಗಳ ಕಾಟವೇ? TRAI DND ಅಥವಾ 1909ಗೆ ಕರೆಮಾಡಿ

ಮೈಸೂರು : ಸ್ಪಾಮ್ ಕರೆಗಳ ಮೂಲಕ ಡಿಜಿಟಲ್ ಅರೆಸ್ಟ್ ಹಾಗೂ ಡಿಜಿಟಲ್ ವಂಚನೆ ಮಾಡುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಫೋನಿನ ಕಾಲಿಂಗ್…

6 hours ago