Andolana originals

ಗಣ್ಯರಿಗೆ ವಾಸ್ತವ್ಯ ಒದಗಿಸುವುದೇ ಸವಾಲು

ಕೆ.ಬಿ.ರಮೇಶನಾಯಕ

ಮೊಟ್ಟ ಮೊದಲ ಬಾರಿಗೆ ಗಣ್ಯರ ವಾಸ್ತವ್ಯಕ್ಕಾಗಿ ಸರ್ಕಾರಿ, ಸ್ವಾಯತ್ತ ಸಂಸ್ಥೆಗಳ ಕೊಠಡಿ ಬಳಕೆ

ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿ ಮೆರವಣಿಗೆ ವೀಕ್ಷಣೆಗೆ ಈ ಬಾರಿ ನೆರೆಯ ರಾಜ್ಯಗಳ ಮುಖ್ಯಮಂತ್ರಿಗಳು, ವಿದೇಶಿ ರಾಯಭಾರಿಗಳು ಸೇರಿ ಗಣ್ಯಾತಿಗಣ್ಯರು ಭಾಗವಹಿಸುತ್ತಿರುವುದರಿಂದಾಗಿ ಹೊರಗಿನ ಗಣ್ಯರಿಗೆ ವಾಸ್ತವ್ಯ ಒದಗಿಸುವುದೇ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದೆ.

ಹೊರಗಿನಿಂದ ಬರುವ ಅತಿಗಣ್ಯ ಆಹ್ವಾನಿತರಿಗೆ ಶಿಷ್ಟಾಚಾರದಂತೆ ನೋಡಿಕೊಳ್ಳಬೇಕಾಗಿರುವ ಪರಿಣಾಮ ಕಳೆದ ಎರಡು ದಿನಗಳಿಂದ ತಲೆಬಿಸಿಮಾಡಿಕೊಂಡಿರುವ ಅಧಿಕಾರಿಗಳು ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ, ಸ್ವಾಯತ್ತ ಸಂಸ್ಥೆಗಳ ಅತಿಥಿಗೃಹಗಳಲ್ಲಿರುವ ಕೊಠಡಿಗಳನ್ನು ಕಾಯ್ದಿರಿಸಿದೆ. ಇದಲ್ಲದೇ ಖಾಸಗಿ ಹೋಟೆಲ್‌ಗಳಲ್ಲಿ ರಿಯಾಯಿತಿ ದರದಲ್ಲಿ ಶೇ.೩೦ರಷ್ಟು ಕೊಠಡಿಗಳನ್ನು ಮೀಸಲಿರಿಸಿಕೊಳ್ಳುತ್ತಿರುವುದರಿಂದ ಕೊನೆಯ ಕ್ಷಣದಲ್ಲಿ ಬಂದವರು ಒಂದೇ ದಿನಕ್ಕೆ ಹಿಂತಿರುಗಬೇಕಾಗಿದೆ.

ದಸರಾ ಮಹೋತ್ಸವಕ್ಕೆ ವರ್ಷದಿಂದ ವರ್ಷಕ್ಕೆ ಹೊಸ ಹೊಸ ಅಯಾಮ, ಕಾರ್ಯಕ್ರಮಗಳನ್ನು ಜೋಡಣೆ ಮಾಡಿಕೊಂಡು ಬರುತ್ತಿರುವುದರಿಂದ ಅದರ ಸ್ವರೂಪ ಕೂಡ ಬದಲಾಗುತ್ತಿದೆ. ಮೊದಲ ಬಾರಿಗೆ ಕರಾವಳಿ ಭಾಗದ ಕಂಬಳ ಕ್ರೀಡೆಯನ್ನು ದಸರಾ ಮಹೋತ್ಸವದಲ್ಲಿ ಆಯೋಜಿಸುವ ಮೂಲಕ ಕೋಣಗಳ ಓಟವನ್ನು ನೋಡುವ ಸದವಕಾಶವನ್ನು ಮೈಸೂರು ಭಾಗದ ಜನರಿಗೆ ರಾಜ್ಯ ಸರ್ಕಾರ ಒದಗಿಸಿಕೊಟ್ಟಿದೆ. ಇದರ ನಡುವೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಹೊರತುಪಡಿಸಿದರೆ ಈತನಕ ಬೇರೆ ರಾಜ್ಯಗಳ ಸಿಎಂಗಳು ಆಗಮಿಸಿರಲಿಲ್ಲ. ಇದೀಗ ಕೇರಳಂ, ತೆಲಂಗಾಣ ಸಿಎಂ ಆಗಮಿಸುತ್ತಿದ್ದರೆ, ಭೂಸೇನಾ, ನೌಕಾಪಡೆ, ವಾಯುಸೇನೆಯ ಅಧಿಕಾರಿಗಳು, ವಿದೇಶಿ ರಾಯಭಾರಿಗಳು ಕೂಡ ಮೈಸೂರಿಗೆ ಆಗಮಿಸುತ್ತಿದ್ದಾರೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅನೇಕರಿಗೆ ತಾವೇ ಸ್ವತಃ ಆಹ್ವಾನ ನೀಡಿದ್ದಾರೆ. ವಿಶೇಷವಾಗಿ ಕನ್ನಡ ಚಲನಚಿತ್ರ ರಂಗದ ನಟ-ನಟಿಯರು ಕೂಡ ಭಾಗವಹಿಸುವ ಜತೆಗೆ, ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗಲು ಒಪ್ಪಿಸಿರುವುದರಿಂದ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಗಣ್ಯಾತಿ ಗಣ್ಯರು ಮೈಸೂರಿನಲ್ಲಿ ವಾಸ್ತವ್ಯ ಹೂಡುವುದು ಅನಿವಾರ್ಯವಾಗಿದೆ. ಹೀಗಾಗಿಯೇ ಬಂದ ಗಣ್ಯರೆಲ್ಲರಿಗೂ ಕೊಠಡಿಗಳನ್ನು ಒದಗಿಸುವುದು ದೊಡ್ಡ ಸವಾಲಾಗಿದ್ದು, ಅದಕ್ಕೆ ತಕ್ಕಂತೆ ಕೊಠಡಿಗಳನ್ನು ಮೀಸಲಿಡುವುದಕ್ಕೆ ನೋಡಿಕೊಳ್ಳಲು ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಸರ್ಕಾರಿ, ಸ್ವಾಯತ್ತ ಸಂಸ್ಥೆಗಳ ಅತಿಥಿಗೃಹಗಳು: ಮುಖ್ಯಮಂತ್ರಿಗಳು, ರಾಯಭಾರಿಗಳು, ಮುಖ್ಯ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳಿಗೆ ಲಲಿತಮಹಲ್, ಸದರನ್‌ಸ್ಟಾರ್, ಮೆಟ್ರೋಪೋಲ್, ರ‍್ಯಾಡಿಸನ್ ಬ್ಲ್ಯೂ, ಗ್ರಾಂಡ್ ಮರ್ಕ್ಯೂರಿ ಹೋಟೆಲ್, ಸೈಲೆಂಟ್ ಶೋರ್ಸ್‌ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಸರ್ಕಾರಿ ಅತಿಥಿಗೃಹದಲ್ಲಿ ರಾಜ್ಯಪಾಲರು, ಅವರ ವಿಶೇಷಾಧಿಕಾರಿಗಳು, ಕುಟುಂಬದವರಿಗೆ ಮೀಸಲಿಡಲಾಗುತ್ತದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್,ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಹೋಟೆಲ್ ರ‍್ಯಾಡಿಸನ್ ಬ್ಲ್ಯೂನಲ್ಲಿ ಉಳಿಯಲಿದ್ದು, ಸಚಿವರ ಆಗಮನವನ್ನು ನೋಡಿ ಪಂಚತಾರಾ ಹೋಟೆಲ್‌ಗಳಿಗೆ ಕಳುಹಿಸಲಾಗುತ್ತದೆ. ಅದೇ ರೀತಿ ಶಾಸಕರು, ಸಂಸದರು, ನಿಗಮ-ಮಂಡಳಿಗಳ ಅಧ್ಯಕ್ಷರು ಬರುವುದು ಖಚಿತವಾದರೆ ಅದಕ್ಕೆ ತಕ್ಕಂತೆ ವ್ಯವಸ್ಥೆ ಮಾಡಲು ಪಟ್ಟಿ ಮಾಡಲಾಗಿದೆ. ಐಎಎಸ್ ಅಧಿಕಾರಿಗಳಿಗೆ ರಾಜ್ಯ ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಆಡಳಿತ ತರಬೇತಿ ಸಂಸ್ಥೆ, ಜಲದರ್ಶಿನಿ ಅತಿಥಿಗೃಹ, ಚಾಮುಂಡಿ ಗೆಸ್ಟ್ ಹೌಸ್‌ನಲ್ಲಿ, ಪೊಲೀಸ್ ಮಹಾ ನಿರ್ದೇಶಕರು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಸೇರಿ ಐಪಿಎಸ್ ಅಧಿಕಾರಿಗಳಿಗೂ ಆಯಕಟ್ಟಿನ ಹೋಟೆಲ್‌ಗಳಲ್ಲಿ ಕೊಠಡಿಗಳನ್ನು ಒದಗಿಸಲಾಗುತ್ತಿದೆ. ಉಳಿದಂತೆ ವಾಕ್ ಮತ್ತು ಶ್ರವಣ ಸಂಸ್ಥೆ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾನಿಲಯ, ಅಂಚೆ ತರಬೇತಿ ಕೇಂದ್ರದ ವಸತಿಗೃಹದಲ್ಲಿ ಐಎಎಸ್,ಐಪಿಎಸ್ ಅಧಿಕಾರಿಗಳಿಗೆ ಕೊಠಡಿಗಳನ್ನು ಒದಗಿಸಲಾಗುತ್ತದೆ.

ಸಿಂಗಲ್ ಸ್ಟಾರ್‌ನಿಂದ ಫೈವ್ ಸ್ಟಾರ್ ಹಂತದವರೆಗಿನ ಖಾಸಗಿ ಹೋಟೆಲ್‌ಗಳಲ್ಲಿ ೧೮ ಸಾವಿರ ಕೊಠಡಿಗಳಿದ್ದು, ಇದರಲ್ಲಿ ಶೇ.೨೦ರಿಂದ ೩೦ರಷ್ಟು ಕೊಠಡಿಗಳನ್ನು ರಿಯಾಯಿತಿ ದರದಲ್ಲಿ ಪಡೆದುಕೊಂಡು ಸರ್ಕಾರದ ವತಿಯಿಂದ ಹಣ ಪಾವತಿ ಮಾಡಲಾಗುತ್ತದೆ. ಸಿಎಂ, ಡಿಸಿಎಂ, ಲೋಕಭವನದ ಅಧಿಕಾರಿಗಳ ವಾಸ್ತವ್ಯದ ವೆಚ್ಚವನ್ನು ಜಿಲ್ಲಾಡಳಿತವೇ ಭರಿಸಲಿದ್ದರೆ, ಆಯಾಯ ಇಲಾಖೆ ಕಾರ್ಯದರ್ಶಿಗಳು, ಆಯುಕ್ತರಿಗೆ ಸ್ಥಳೀಯ ಅಧಿಕಾರಿಗಳೇ ಶಿಷ್ಟಾಚಾರದಂತೆ ನೋಡಿಕೊಳ್ಳಬೇಕಾಗಿರುವುದರಿಂದ ಬೇಕಾದ ವ್ಯವಸ್ಥೆ ಮಾಡಿಕೊಳ್ಳುವರು ಎಂದು ಹಿರಿಯ ಅಽಕಾರಿಯೊಬ್ಬರು ಹೇಳಿದರು.

ಆಂದೋಲನ ಡೆಸ್ಕ್

Recent Posts

ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್‌ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ಶುಕ್ರವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದರು. ಲೋಕಭವನದ ಗಾಜಿನ ಮನೆಯಲ್ಲಿ ನಡೆದ…

10 mins ago

ಓದುಗರ ಪತ್ರ: ನಡೆಯಲಿ ಪ್ರಶಾಂತ…!

ನಡೆಯಲಿ ಪ್ರಶಾಂತ...! ಹೆಸರಿಗೆ ತಕ್ಕಂತೆ ಗಜ ಗಾಂಭೀರ್ಯದಿಂದ ನಡೆಯುತಿಹನು ಪ್ರಶಾಂತ ಎಲ್ಲವೂ ನಡೆಯಲಿ ಶಾಂತ... ಪ್ರಶಾಂತ ! ಅಭಿಮನ್ಯುವಿನ ಉತ್ತರಾಧಿಕಾರಿ…

12 mins ago

ಓದುಗರ ಪತ್ರ: ಜೀವ ಉಳಿಸುವ ಔಷಧಗಳು ಅತಿ ಲಾಭದ ವಸ್ತು ಆಗಬಾರದಲ್ಲವೇ?

ಗಂಭೀರ ಕಾಯಿಲೆಗಳ ೧೮೦ ದುಬಾರಿ ಔಷಧಗಳು ಮತ್ತು ೭೮೦ ವೈದ್ಯಕೀಯ ಸಾಮಗ್ರಿಗಳನ್ನು ಹತ್ತಾರು ಪಟ್ಟು ಹೆಚ್ಚು ಲಾಭವಿಟ್ಟುಕೊಂಡು ಮಾರಾಟ ಮಾಡುತ್ತಿರುವುದು…

14 mins ago

ಓದುಗರ ಪತ್ರ: ‘ಕುಬೇರನ ಮೂಲೆ’ಯಲ್ಲೇ ಕಸದ ಕೊಪ್ಪರಿಗೆ!

ನಮ್ಮ ಮನೆಯ ಕಸವನ್ನು,ಪಕ್ಕದ ಮನೆಗೋ ,ಅವರ ಅಂಗಳಕ್ಕೋ ಸುರಿಯುವುದು ನಾಗರಿಕತೆಯ ಲಕ್ಷಣವಲ್ಲ. ಆದರೆ ಅದು ಮೈಸೂರಿನ ಆರ್.ಟಿ.ನಗರದ ಬಡಾವಣೆಯ ಮೂಲೆ…

23 mins ago

ನಿನ್ನೆ ರಷ್ಯಾದಲ್ಲಿ ‘ರೂಬಿ ಕ್ಯೂಬ್’, ನಾಳೆ ಟೊರೆಂಟೊದಲ್ಲಿ ‘ಮಹಿಮಾ’

ವೈಡ್‌ ಆಂಗಲ್:‌ ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ರಷ್ಯಾ-ಭಾರತ ಸಂಬಂಧದ ಹಿನ್ನೆಲೆಯಲ್ಲಿ ಚಿತ್ರೋತ್ಸವ ಆಯೋಜನೆ ಎರಡು ಕನ್ನಡ ಚಿತ್ರಗಳು ಅಂತಾರಾಷ್ಟ್ರೀಯ…

27 mins ago

ದರ್ಶನ್ ತಂಗಿದ್ದ ಜಾಗದ ರಹಸ್ಯ ಬಯಲು!

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಎಸಿಪಿ ಚಂದನ್ ಎಂಟ್ರಿ; ಒಂದೇ ಮಾತಿಗೆ ಗುಟ್ಟು ಬಾಯಿಬಿಟ್ಟ ಪ್ರದೋಷ್ ಮೈಸೂರಿನ ರ‍್ಯಾಡಿಷನ್‌ ಬ್ಲೂ…

37 mins ago