Andolana originals

ಕೇಂದ್ರೀಯ ಬಸ್‌ ನಿಲ್ದಾಣಕ್ಕೇ ವಿಶ್ವ ದರ್ಜೆ ಸೌಲಭ್ಯ ಕಲ್ಪಿಸಿ

ಮೈಸೂರಿನ ಕೇಂದ್ರೀಯ ಬಸ್ ನಿಲ್ದಾಣದಲ್ಲಿನ ಒತ್ತಡ ತಗ್ಗಿಸಲು ಸಾರಿಗೆ ಇಲಾಖೆಯು ಪೀಪಲ್ಸ್ ಪಾರ್ಕ್‌ನ ೩.೫ ಎಕರೆ ಜಾಗ ಪಡೆದು ಬಸ್ ನಿಲ್ದಾಣವನ್ನು ವಿಸ್ತರಣೆ ಮಾಡುವ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದೆ. ಈ ಯೋಜನೆಯ ಆಗುಹೋಗುಗಳು ಮತ್ತು ಪರ್ಯಾಯ ಚಿಂತನೆಗಳ ಬಗ್ಗೆ ವಿಚಾರವಂತರ ಸಲಹೆ ಇಲ್ಲಿದೆ.

ಆಧುನಿಕ ತಂತ್ರಜ್ಞಾನ ಬಳಸಿ ದೀರ್ಘವಾಧಿ ಯೋಜನೆ ರೂಪಿಸಿ
ಡಾ. ಎಂ. ಪಿ. ವರ್ಷ, ಮ್ಯಾನೇಜಿಂಗ್ ಟ್ರಸ್ಟಿ, ಕ್ರೆಡಿಟ್ ಐ ಸಂಸ್ಥೆ
ಮೈಸೂರು: ನಗರದ ಸಬ್ ಅರ್ಬನ್ ಬಸ್ ನಿಲ್ದಾಣದ ಮೇಲೆ ದಿನೇ ದಿನೇ ಒತ್ತಡ ಹೆಚ್ಚುತ್ತಿರುವುದು ನಿಜ. ಹಾಗೆಂದು ಬಸ್ ನಿಲ್ದಾಣದ ವಿಸ್ತರಣೆ ಹೆಸರಲ್ಲಿ ತಾತ್ಕಾಲಿಕ ಪರಿಹಾರ ಹುಡುಕಬಾರದು. ಬದಲಿಗೆ ಮುಂದಿನ ೫೦ ವರ್ಷಗಳ ನಗರದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಇರುವ ಜಾಗದಲ್ಲೇ ಯೋಜನಾಬದ್ಧವಾದ ಬಸ್ ನಿಲ್ದಾಣ ನಿರ್ಮಿಸಬಹುದು.

ಸಬ್ ಅರ್ಬನ್ ಬಸ್ ನಿಲ್ದಾಣದ ವಿಸ್ತರಣೆಗಾಗಿ ಕೆಎಸ್ ಆರ್‌ಟಿಸಿ ಅಽಕಾರಿಗಳು ಪೀಪಲ್ಸ್ ಪಾರ್ಕ್‌ನಲ್ಲಿ ೩. ೫ ಎಕರೆ ಜಾಗ ಕೇಳಿರುವುದು ತಪ್ಪೇನಲ್ಲ. ಪಾರ್ಕ್ ಜಾಗ ಕೇಳಿದ್ದಾರೆ ಎಂದ ಕೂಡಲೇ ಭಾವನಾತ್ಮಕವಾಗಿ ನೋಡಬಾರದು. ಬದಲಿಗೆ ಜನರಿಗೆ ಅನುಕೂಲ ಕಲ್ಪಿಸುವ ಕಡೆಗೆ ನಮ್ಮ ಗಮನ ಇರಬೇಕು. ಪೀಪಲ್ಸ್ ಪಾರ್ಕ್‌ನಲ್ಲಿ ಈಗಾಗಲೇ ಕಾಲೇಜು ಇದೆ. ಅಲ್ಲಿಗೆ ಬಸ್ ನಿಲ್ದಾಣ ವಿಸ್ತರಣೆ ಮಾಡುವುದರಿಂದ ಆ ಕಾಲೇಜು ವಿದ್ಯಾರ್ಥಿಗಳಿಗೆ ಎದುರಾಗುವ ಸಮಸ್ಯೆಗಳ ಬಗ್ಗೆಯೂ ಯೋಜನೆ ರೂಪಿಸುವ ಮುನ್ನ ಆಲೋಚಿಸಬೇಕು.

ಜನರಿಗೆ ಅನನುಕೂಲ: ನಗರದ ಹೊರವಲಯದ ನಾಲ್ಕೂ ದಿಕ್ಕುಗಳಲ್ಲಿ ಬಸ್ ನಿಲ್ದಾಣಗಳನ್ನು ನಿರ್ಮಿಸಿ, ಅಲ್ಲಿಂದ ಬಸ್‌ಗಳ ಕಾರ್ಯಾಚರಣೆ ನಡೆಸಿ ಎಂದು ಹೇಳುವುದು ಸುಲಭ. ಆದರೆ, ಇದರಿಂದ ಜನರಿಗೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು. ಜತೆಗೆ ಜನರಿಗೆ ಆರ್ಥಿಕವಾಗಿ ಹೊರೆ ಕೂಡ. ದಸರಾ ಸಂದರ್ಭದಲ್ಲಿ ಹತ್ತು ದಿನಗಳ ಕಾಲ ಬಸ್‌ಗಳ ಕಾರ್ಯಾಚರಣೆಯನ್ನು ನಗರದ ಬೇರೆ ಬೇರೆ ಭಾಗಗಳಿಗೆ ಸ್ಥಳಾಂತರಿಸಿದಾಗಲೇ ಜನರು ಸಮಸ್ಯೆ ಎದುರಿಸುತ್ತಾರೆ. ದೂರದ ಊರುಗಳಿಂದ ಮೈಸೂರಿಗೆ ಬರುವ, ಇಲ್ಲಿಂದ ಬೇರೆ ಬೇರೆ ಕಡೆಗಳಿಗೆ ತೆರಳುವ ಜನರು ಸಮರ್ಪಕ ಮಾಹಿತಿ ಇಲ್ಲದೇ ಅಲೆಯಬೇಕಾಗುತ್ತದೆ. ವರ್ಷಪೂರ್ತಿ ಜನರು ಆ ಸಮಸ್ಯೆಯನ್ನು ಎದುರಿಸುತ್ತಲೇ ಇರಬೇಕೇ?

ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಕೆಂಪೇಗೌಡ ಬಸ್ ನಿಲ್ದಾಣ, ನಗರ ಬಸ್ ನಿಲ್ದಾಣ, ರೈಲು ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣ ಎಲ್ಲವನ್ನೂ ಒಂದೇ ಕಾಂಪ್ಲೆಕ್ಸ್‌ನಡಿ ತರುವ ಯೋಜನೆ ರೂಪಿಸುತ್ತಿರುವಾಗ ಮೈಸೂರಿನಂತಹ ನಗರದಲ್ಲಿ ಬಸ್ ನಿಲ್ದಾಣಗಳನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸುವುದು ಸರಿಯಲ್ಲ.

ನಗರದಲ್ಲಿ ಸದ್ಯ ಸಬ್ ಅರ್ಬನ್ ನಿಲ್ದಾಣ, ನಗರ ಬಸ್ ನಿಲ್ದಾಣ, ರೈಲು ನಿಲ್ದಾಣಗಳು ಜನರು ನಡೆದು ತಲುಪಬಹುದಾದಷ್ಟು ಅಂತರದಲ್ಲಿರುವುದರಿಂದ ಅವುಗಳು ಇರುವ ಜಾಗಗಳಲ್ಲೇ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಜನರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಬೇಕು.

ಬೆಂಗಳೂರಿನಲ್ಲಿ ಎರಡನೇ ಫ್ಲೋರ್ -ಓವರ್ ಬರುತ್ತೆ ಅಂದ್ರೆ ಹುಬ್ಬೇರಿಸುತ್ತೇವೆ. ಆದರೆ, ಮುಂದುವರಿದ ದೇಶಗಳು ಈ ವಿಷಯದಲ್ಲಿ ನಮಗಿಂತ ೫೦ ವರ್ಷಗಳು ಮುಂದಿವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸುವುದು ಸೂಕ್ತ. ರಾಜರ ಕಾಲದಲ್ಲಿ ಯೋಜನಾಬದ್ಧವಾಗಿಯೇ ಮೈಸೂರು ನಗರವನ್ನು ರೂಪಿಸಲಾಗಿದೆ. ಹಾಗೆ ನೋಡಿದರೆ ರಾಜ್ಯದ ಇತರೆ ಜಿಲ್ಲೆಗಳಿಗಿಂತ ಮೈಸೂರು ಅಭಿವೃದ್ಧಿಹೊಂದಿದ ಜಿಲ್ಲೆ. ಅದನ್ನು ಹಾಗೆಯೇ ಉಳಿಸಿಕೊಳ್ಳಬೇಕು. ಇದಕ್ಕಾಗಿ ಮೈಸೂರಿಗೆ ದೀರ್ಘ ಕಾಲ ಜನರಿಗೆ ಅನುಕೂಲ ವಾಗುವಂತಹ ಹೊಸ ಯೋಜನೆ ತರುವುದು ಒಳಿತು.

ತಜ್ಞರ ಉಪ ಸಮಿತಿ ರಚಿಸಲಿ
ಯಾವುದೇ ಯೋಜನೆಗಳನ್ನು ರೂಪಿಸುವಾಗ ರಾಜಕಾರಣಿಗಳು ಮತ್ತು ಅಽಕಾರಿಗಳ ಮಾತೇ ಅಂತಿಮ ಆಗಬಾರದು. ಇವರುಗಳ ಜತೆಗೆ ಆ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ತಂತ್ರಜ್ಞರುಗಳನ್ನು ಒಳಗೊಂಡ ಉಪ ಸಮಿತಿ ರಚಿಸಿ, ಮುಂದುವರಿದ ಜಪಾನ್, ಫ್ರಾನ್ಸ್ ಮೊದಲಾದ ದೇಶಗಳಲ್ಲಿ, ವಿಶಾಲ ಭೂ ಪ್ರದೇಶ ಇಲ್ಲದ, ಬೆಟ್ಟಗುಡ್ಡಗಳಿರುವ ಕಡೆಗಳಲ್ಲಿ ಯಾವ ರೀತಿ ಒಂದೇ ಕಾಂಪ್ಲೆಕ್ಸ್‌ನಲ್ಲಿ ಮಲ್ಟಿಫ್ಲೆಕ್ಸ್ ರೀತಿಯಲ್ಲಿ ರೈಲು, ಬಸ್, ಮೆಟ್ರೋ ಎಲ್ಲವೂ ಇರುತ್ತದೆ. ಅವುಗಳ ಸಾಧಕ-ಬಾಧಕಗಳ ಅಧ್ಯಯನ ನಡೆಸಿ ವರದಿ ಪಡೆದು ದೀರ್ಘಾವಽಯ ಯೋಜನೆ ರೂಪಿಸಿ, ಕಾರ್ಯರೂಪಕ್ಕೆ ತಂದಲ್ಲಿ ಜನರಿಗೆ ಅನುಕೂಲವಾಗಲಿದೆ.

ಮುಂದುವರಿದ ರಾಷ್ಟ್ರಗಳಲ್ಲಿರುವಂತೆ ಅತ್ಯಾಧುನಿಕ ಮಾದರಿ ಬಸ್‌ ನಿಲ್ದಾಣ ರೂಪಿಸುವುದು ಸೂಕ್ತ
ಜಯಪ್ರಕಾಶ್ ರಾವ್, ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿ, ಡಿಆರ್‌ಡಿಒ
ಮೈಸೂರು: ಜನರಿಗೆ ಸುಗಮ ಸಾರಿಗೆ ಸೌಲಭ್ಯ ಕಲ್ಪಿಸುವ ದೃಷ್ಟಿ ಯಿಂದ ಸಬ್ ಅರ್ಬನ್ ಬಸ್ ನಿಲ್ದಾಣದ ವಿಸ್ತರಣೆಗೆ ಪೀಪಲ್ಸ್ ಪಾರ್ಕ್‌ನ ಜಾಗ ಬಳಸಿಕೊಳ್ಳಲು ಮುಂದಾಗಿರುವ ಕೆಎಸ್‌ಆರ್ ಟಿಸಿಯ ಯೋಜನೆ ತಪ್ಪೇನಲ್ಲ. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸಾರಿಗೆ ಸೇರಿದಂತೆ ಇತರೆ ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಮುಖ್ಯ.

ಹಾಗೆ ನೋಡಿದರೆ ಪೀಪಲ್ಸ್ ಪಾರ್ಕ್‌ನ ನಿರ್ವ ಹಣೆಯೇ ಸರಿ ಇಲ್ಲ. ಅದು ಹೆಸರಿಗಷ್ಟೇ ಪೀಪಲ್ಸ್ ಪಾರ್ಕ್, ಸದ್ಯ ಅದು ಪಬ್ಲಿಕ್ ಟಾಯ್ಲೆಟ್, ಅನೈತಿಕ ಚಟುವಟಿಕೆಗಳ ತಾಣವಾಗಿ ಬಳಕೆಯಾಗುತ್ತಾ ಹಾಳಾಗಿದೆ. ಜನ ಉಸಿರಾಡಲು ಹಸಿರು ಬೇಕು. ಮೈಸೂರಿನಲ್ಲಿ ಸಾಕಷ್ಟು ಪಾರ್ಕ್ಗಳಿರುವುದರಿಂದ, ನಿರ್ವಹಣೆ ಇಲ್ಲದೇ ಹಾಳಾಗಿರುವ ಆ ಪಾರ್ಕ್‌ನ ಒಂದು ಭಾಗವನ್ನು ಸದುದ್ದೇಶಕ್ಕೆ ಬಳಸಿಕೊಳ್ಳುವುದು ತಪ್ಪಲ್ಲ. ರಕ್ಷಣಾ ಮಂತ್ರಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸುದೀರ್ಘ ಕಾಲ ಕೆಲಸ ಮಾಡುವ ಸಂದರ್ಭದಲ್ಲಿ ಜಗತ್ತಿನ ಹಲವು ರಾಷ್ಟ್ರಗಳಿಗೆ ಭೇಟಿ ನೀಡುವ ಅವಕಾಶ ಒದಗಿ ಬಂದಿತ್ತು. ಆ ಅನುಭವದ ಆಧಾರದ ಮೇಲೆ ಹೇಳುವುದಾದರೆ ಜನಸಂಖ್ಯೆ ಪ್ರಮಾಣ ಕಡಿಮೆ ಇರುವ ಐರೋಪ್ಯ ರಾಷ್ಟ್ರ, ಅಮೆರಿಕದಂತಹ ಶ್ರೀಮಂತ ರಾಷ್ಟ್ರಗಳಲ್ಲಿ ವೈಯಕ್ತಿಕ ಪೆಟ್ರೋಲ್ ಕಾರುಗಳ ಬಳಕೆ ಹೆಚ್ಚು.

ಸಾರ್ವಜನಿಕ ಸಾರಿಗೆ ಬಸ್‌ಗಳನ್ನು ಬಳಸುವವರ ಸಂಖ್ಯೆ ತೀರಾ ಕಡಿಮೆ. ಆದರೆ, ಭಾರತದಂತೆ ಜನದಟ್ಟಣೆ ಹೆಚ್ಚಿರುವ ಫಿಲಿಫೈನ್ಸ್, ಬ್ಯಾಂಕಾಕ್, ವಿಯೆಟ್ನಾಂ, ಕಾಂಬೋಡಿಯಾ ಮೊದಲಾದ ದೇಶಗಳಲ್ಲಿ ನಮ್ಮಂತೆಯೇ ಸಾರ್ವಜನಿಕ ಸಾರಿಗೆ ಬಸ್‌ಗಳ ಬಳಕೆ ಹೆಚ್ಚು. ಹೀಗಾಗಿ ಸಂಚಾರ ದಟ್ಟಣೆಯೂ ಹೆಚ್ಚು. ಮೈಸೂರಿನ ಸಬ್ ಅರ್ಬನ್ ಬಸ್ ನಿಲ್ದಾಣದ ಮೇಲೆ ಒತ್ತಡ ಹೆಚ್ಚಾಗಿದೆ. ಅದಕ್ಕಾಗಿ ತಂತ್ರಜ್ಞಾನವನ್ನು ಬಳಸಿಕೊಂಡು ಮುಂದುವರೆದ ರಾಷ್ಟ್ರಗಳಲ್ಲಿರುವಂತೆ ಅತ್ಯಾಧುನಿಕ ಮಾದರಿಯ ಬಸ್ ನಿಲ್ದಾಣವನ್ನು ರೂಪಿಸುವುದು ಸೂಕ್ತ. ಬೆಂಗಳೂರಿನಲ್ಲಿ ಅಷ್ಟು ದೊಡ್ಡ ಮೆಜೆಸ್ಟಿಕ್ ಬಸ್ ನಿಲ್ದಾಣ ಇದ್ದರೂ ಪಕ್ಕದಲ್ಲಿ ಸಣ್ಣ ಸಣ್ಣ ಪಾರ್ಕ್‌ಗಳನ್ನು ಉಳಿಸಿಕೊಳ್ಳಲಾಗಿದೆ. ಬೇರೆ ಬೇರೆ ದೇಶಗಳಲ್ಲೂ ಇದೇ ರೀತಿಯಲ್ಲಿ ಸಣ್ಣ ಸಣ್ಣ ಪಾರ್ಕ್‌ಗಳನ್ನು ಬಸ್ ನಿಲ್ದಾಣಗಳ ಬಳಿ ಕಾಣಬಹುದು. ಅದೇ ರೀತಿಯಲ್ಲಿ ಇಲ್ಲೂ ಪೀಪಲ್ಸ್ ಪಾರ್ಕ್‌ನ ಒಂದು ಭಾಗವನ್ನಷ್ಟೇ ಬಸ್ ನಿಲ್ದಾಣಕ್ಕೆ ಬಳಸಿಕೊಂಡು ಉಳಿದ ಭಾಗವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಇಲ್ಲವೇ ಹೊಸದಾಗಿ ಬೆಂಗಳೂರು-ಮೈಸೂರು ಹೆದ್ದಾರಿ ಆಗಿರುವುದರಿಂದ ನಗರದಿಂದ ಒಂದೆರಡು ಕಿ. ಮೀ ದೂರದಲ್ಲಿ ಬೆಂಗಳೂರು ಕಡೆಗೆ ಕಾರ್ಯಾಚರಣೆಗೆ ಸೀಮಿತವಾಗಿ ಬಸ್ ನಿಲ್ದಾಣ ಮಾಡಿ, ಉಳಿದ ಭಾಗಗಳ ಬಸ್‌ಗಳ ಕಾರ್ಯಾಚರಣೆಯನ್ನು ಸಬ್ ಅರ್ಬನ್ ನಿಲ್ದಾಣದಲ್ಲಿಯೇ ಉಳಿಸಿಕೊಳ್ಳಬಹುದು.

 

ಆಂದೋಲನ ಡೆಸ್ಕ್

Recent Posts

ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ: ಬಸ್ ಟಿಕೆಟ್‌ ದರ ದುಪ್ಪಟ್ಟು ಏರಿಕೆ

ಬೆಂಗಳೂರು: ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಇರುವುದರಿಂದ ಪ್ರಯಾಣಿಕರ ಪರದಾಟ ಮುಂದುವರೆದಿದೆ. ಇಂಡಿಗೋ ವಿಮಾನ ಸಮಸ್ಯೆ ಬೆನ್ನಲ್ಲೇ ಇತರ ವಿಮಾನಗಳ…

4 mins ago

2026ರ ಐಪಿಎಲ್‌ ಬೆಂಗಳೂರಿನಲ್ಲೇ ಫಿಕ್ಸ್: ಡಿಸಿಎಂ ಡಿ.ಕೆ.ಶಿವಕುಮಾರ್‌ ಘೋಷಣೆ

ಬೆಂಗಳೂರು: 2026ರ ಐಪಿಎಲ್‌ಗೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಘೋಷಣೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕೆಎಸ್‌ಸಿಎ ಚುನಾವಣೆ ಮತದಾನದ ವೇಳೆ…

27 mins ago

ದೆಹಲಿ: ಇಂದು 108 ಇಂಡಿಗೋ ವಿಮಾನಗಳ ಹಾರಾಟ ರದ್ದು

ನವದೆಹಲಿ: ಇಂಡಿಗೋ ವಿಮಾನದ ಅಧ್ವಾನ ಆರನೇ ದಿನವೂ ಮುಂದುವರಿದಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ನೂರಕ್ಕೂ…

39 mins ago

ರೇವಣಸಿದ್ದೇಶ್ವರ ಬೆಟ್ಟ ಹತ್ತುವಾಗ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

ರಾಮನಗರ: ದೇವರ ದರ್ಶನಕ್ಕೆಂದು ರೇವಣಸಿದ್ದೇಶ್ವರ ಬೆಟ್ಟ ಹತ್ತುವಾಗಲೇ ವ್ಯಕ್ತಿಯೋರ್ವರು ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಕೆಂಪನಹಳ್ಳಿ…

2 hours ago

ನಾಳೆಯಿಂದ ಬೆಳಗಾವಿಯ ಚಳಿಗಾಲದ ಅಧಿವೇಶನ: ಬಿಗಿ ಭದ್ರತೆ

ಬೆಂಗಳೂರು: ದೆಹಲಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಇಂದಿನಿಂದ ಆರಂಭವಾಗುವ ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಬಿಗಿ ಭದ್ರತೆ ಆಯೋಜಿಸಲಾಗಿದೆ. ಸುಮಾರು ಆರು…

2 hours ago

ಗೋವಾದಲ್ಲಿ 25 ಮಂದಿ ಸಜೀವ ದಹನ: ಪ್ರಧಾನಿ ಮೋದಿ ಸಂತಾಪ

ನವದೆಹಲಿ: ಉತ್ತರ ಗೋವಾದ ಬಾಗಾ ಬೀಚ್‌ ಬಳಿಯ ಅರ್ಪೊರಾದ ನೈಟ್‌ಕ್ಲಬ್‌ ಬೀರ್ಚ್‌ ಬೈ ರೋಮಿಯೋ ಲೇನ್‌ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ…

3 hours ago