Andolana originals

ಕೇಂದ್ರೀಯ ಬಸ್‌ ನಿಲ್ದಾಣದ ಸಾಧಕ – ಬಾಧಕಗಳ ಬಗ್ಗೆ ಚರ್ಚೆ

ಮೈಸೂರಿನ ಕೇಂದ್ರೀಯ ಬಸ್ ನಿಲ್ದಾಣದ ಮೇಲಿನ ಒತ್ತಡ ತಗ್ಗಿಸಲು ಕೆಎಸ್‌ಆರ್‌ಟಿಸಿಯು ಸಬ್ ಅರ್ಬನ್ ಬಸ್ ನಿಲ್ದಾಣದ ಎದುರಿನ ಪೀಪಲ್ಸ್ ಪಾರ್ಕ್‌ನ ೩. ೫ ಎಕರೆ ಜಾಗ ಪಡೆದು ಕಾರ್ಯಾಚರಣೆಯನ್ನು ವಿಸ್ತರಿಸುವ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಟ್ಟಿದೆ. ಈ ಯೋಜನೆಯ ಸಾಧಕ-ಬಾಧಕಗಳು ಮತ್ತು ಪರ್ಯಾಯ ಚಿಂತನೆಗಳ ಬಗ್ಗೆ ವಿಚಾರವಂತರ ಸಲಹೆಗಳು ಇಲ್ಲಿವೆ.

ನಾಲ್ಕು ದಿಕ್ಕುಗಳಲ್ಲೂ ಸ್ಯಾಟ್‌ಲೈಟ್‌ ಬಸ್ ನಿಲ್ದಾಣ ಬೇಕು

ದಿನೇಶ್ ಬಸವಾಪಟ್ಟಣ, ವನ್ಯಜೀವಿ ಛಾಯಾಗ್ರಾಹಕ.

ಮೈಸೂರು: ನಗರದ ಬೆಂಗಳೂರು- ನೀಲಗಿರಿ ರಸ್ತೆ ಯಲ್ಲಿರುವ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ದಿನೇ ದಿನೇ ಸಂಚಾರ ಒತ್ತಡ ಹೆಚ್ಚಾಗುತ್ತಿದ್ದು, ಇದಕ್ಕೆ ಪರ್ಯಾಯವಾಗಿ ನಗರದ ಹೊರ ವಲಯದ ನಾಲ್ಕು ದಿಕ್ಕುಗಳಲ್ಲೂ ಸ್ಯಾಟಲೈಟ್ ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡುವುದು ಸೂಕ್ತ. ನಗರದ ಕೇಂದ್ರ ಬಸ್ ನಿಲ್ದಾಣ ಮುಂಭಾಗದ ಬಿ. ಎನ್. ರಸ್ತೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ.

ಈ ಸಂಚಾರ ದಟ್ಟಣೆ ಹೋಗಲಾ ಡಿಸಲು ನಗರದ ಹೊರ ವಲಯದ ನಾಲ್ಕು ದಿಕ್ಕುಗಳಲ್ಲೂ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ ಮಾಡುವುದು ಸೂಕ್ತ. ಆಯಾ ನಿಲ್ದಾಣಕ್ಕೆ ಬರುವ ಜನರನ್ನು ನಗರದ ಒಳಗೆ ಕರೆತರಲು ೧೦ರಿಂದ ೧೫ ಮಂದಿ ಪ್ರಯಾಣಿಸಬಹುದಾದ ಎಲೆಕ್ಟ್ರಿಕ್ ವಾಹನಗಳನ್ನು ಬಳಸಬಹುದು. ಸದ್ಯಕ್ಕೆ ಕೇಂದ್ರೀಯ ಬಸ್ ನಿಲ್ದಾಣದ ಸುತ್ತಮುತ್ತ ಸಂಚಾರದ ದಟ್ಟಣೆ ಹೆಚ್ಚಾಗಿರುವುದು ನಿಜ. ಈ ಒತ್ತಡವನ್ನು ತಗ್ಗಿಸಲು ಸಾರಿಗೆ ಇಲಾಖೆ ಬಸ್ ನಿಲ್ದಾಣದ ಮುಂಭಾಗದ ಪೀಪಲ್ಸ್ ಪಾರ್ಕ್ ಸ್ಥಳವನ್ನು ಕೇಳಿರುವು ದರಲ್ಲಿ ತಪ್ಪೇನಿಲ್ಲ.

ಇದಕ್ಕೆ ಬಸ್ ನಿಲ್ದಾಣದಿಂದ ಅಂಡರ್ ಪಾಸ್ ನಿರ್ಮಾಣ ಮಾಡುವುದು ಅಥವಾ – ಓವರ್ ನಿರ್ಮಾಣ ಮಾಡುವ ಮೂಲಕ ಪೀಪಲ್ಸ್ ಪಾರ್ಕ್ ಮತ್ತು ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವುದರಿಂದ ಸಾರ್ವ ಜನಿಕರಿಗೂ ಯಾವುದೇ ಗೊಂದಲ ಅಥವಾ ಒತ್ತಡ ಆಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬಹುದು. ಮೈಸೂರು ನಗರದಲ್ಲಿ ಬೆಂಗಳೂರಿನ ರೀತಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಮೈಸೂರಿಗರಿಗೆ ಇದರ ಅರಿವು ಹಾಗೂ ಅನುಭವ ಈಗ ಆಗುತ್ತಿದೆ.

ಹೀಗೆಯೇ ಬಿಟ್ಟರೆ ಮುಂದೆ ಬೆಂಗಳೂರಿನಂತೆಯೇ ಆಗುವುದರಲ್ಲಿ ಅನುಮಾನ ವಿಲ್ಲ. ಹಾಗಾಗಿ ಅಽಕಾರಿಗಳು ಮತ್ತು ಜನಪ್ರತಿನಿಽಗಳು ಈಗಲೇ ಎಚ್ಚೆತ್ತುಕೊಳ್ಳಬೇಕು. ಆಧುನಿಕ ತಂತ್ರeನ ಬಳಕೆ ಮಾಡಿಕೊಂಡು ಉತ್ತಮ ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡಬಹುದು. ಚೀನಾದಲ್ಲಿ ಮಲ್ಟಿಲೆವಲ್ ಬಿಲ್ಡಿಂಗ್ ಮೇಲೆ ರೈಲುಗಳೇ ಓಡಾಡುತ್ತವೆ. ಮಲ್ಟಿಲೆವಲ್ ಪಾರ್ಕಿಂಗ್‌ಗಳೂ ಅನೇಕ ವರ್ಷಗಳ ಹಿಂದಿನಿಂದ ಇವೆ. ಆಧುನಿಕ ತಂತ್ರಜ್ಞಾನದಿಂದ ಇನ್ನೂ ಉತ್ತಮ ಬಸ್ ನಿಲ್ದಾಣ ಗಳನ್ನು ನಿರ್ಮಾಣ ಮಾಡುವುದು ಮುಖ್ಯವಾಗಿದೆ.

ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಬಹಳ ಮುಖ್ಯವಾದದ್ದು. ಸುಸಜ್ಜಿತ ಸ್ಯಾಟಲೈಟ್ ಬಸ್ ನಿಲ್ದಾಣಗಳಿದ್ದಲ್ಲಿ ಹೆಚ್ಚು ಅನುಕೂಲವಾಗುತ್ತದೆ. ಶುದ್ಧ ಕುಡಿಯುವ ನೀರು, ಸ್ವಚ್ಛ ಶೌಚಾಲಯ, ಪ್ರಯಾಣಿಕರು ತಂಗಲು ಆಧುನಿಕ ಕೊಠಡಿಗಳು ಬೇಕಿವೆ. ಇವುಗಳಲ್ಲಿ ಸೂಕ್ತ ಅನುಕೂಲಗಳು ಇರಬೇಕು. ಸ್ಯಾಟಲೈಟ್ ಬಸ್ ನಿಲ್ದಾಣಗಳಿಂದ ಯಾವುದೇ ಬಸ್ಸುಗಳು ನಗರದ ಒಳಗೆ ಬಾರದಂತೆ ಗಮನಹರಿಸಬೇಕು. ನಾಲ್ಕು ಕಡೆಗಳಲ್ಲಿ ಇಂತಹ ಸುಸಜ್ಜಿತ ಬಸ್ ನಿಲ್ದಾಣಗಳು ನಿರ್ಮಾಣವಾದಲ್ಲಿ ಒತ್ತಡ ಕಡಿಮೆಯಾಗುವ ಸಾಧ್ಯತೆ ಇದೆ. ಇಂತಹ ಸುಸಜ್ಜಿತ ಸ್ಯಾಟಲೈಟ್ ಬಸ್ ನಿಲ್ದಾಣ ಗಳನ್ನು ದುಬೈನಲ್ಲಿ ನೋಡಬಹುದು. ಬಸ್ ನಿಲ್ದಾಣಗಳಲ್ಲಿ ಬಸ್ ಗಳು ಬರುವ ಮತ್ತು ಹೋಗುವ ಬಗ್ಗೆ ಮಾಹಿತಿ ನೀಡುವ ಮೂಲಕ ಜನದಟ್ಟಣೆಯನ್ನೂ ನಿಯಂತ್ರಿಸಬಹುದು.

ಸಂಚಾರ ದಟ್ಟಣೆ ಹಾಗೂ ಪರಿಸರ ಮಾಲಿನ್ಯವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ದೇಶದಲ್ಲೇ ಪ್ರಪ್ರಥಮ ಮಲ್ಟಿ- ಲೆವೆಲ್ ಎಲೆಕ್ಟ್ರಿಕ್ ಬಸ್ ನಿಲ್ದಾಣವನ್ನು ರಾಜಧಾನಿ ದಿಲ್ಲಿಯ ನೈಋತ್ಯದಲ್ಲಿರುವ ವಸಂತ ವಿಹಾರದಲ್ಲಿ ನಿರ್ಮಿಸಲಾಗು ತ್ತಿದೆ. ೪೦೬ ಕೋಟಿ ರೂ. ವೆಚ್ಚದ ಈ ಕಾಮಗಾರಿಗೆ ಕಳೆದ ಆಗಸ್ಟ್ ತಿಂಗಳಿನಲ್ಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಹಾಗೂ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಶಂಕುಸ್ಥಾಪನೆ ನೆರವೇರಿಸಿದ್ದು, ೨೦೨೬ರ ಆಗಸ್ಟ್ ವೇಳೆಗೆ ಈ ಬಸ್ ನಿಲ್ದಾಣ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆ ಇದೆ. ಈ ನಿಲ್ದಾಣವು ಗ್ರೌಂಡ್ ಲೆವೆಲ್ ಸಹಿತ ಬೇಸ್ ಮೆಂಟ್ ಹಾಗೂ ೬ ಪಾರ್ಕಿಂಗ್ ಲೆವೆಲ್‌ಗಳನ್ನು ಹೊಂದಲಿದೆ. ಮೈಸೂರಿನಲ್ಲಿಯೂ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಈ ಮಾದರಿಯ ಬಸ್ ನಿಲ್ದಾಣ ನಿರ್ಮಿಸುವ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಸಲಹೆಯಾಗಿದೆ.

ಟ್ರಾಫಿಕ್‌ ನಿಯಂತ್ರಣಕ್ಕೆ ಆಪ್‌ ಅಭಿವೃದ್ಧಿಪಡಿಸಿ

ಮೈಸೂರು ಕೇಂದ್ರೀಯ ಬಸ್ ನಿಲ್ದಾಣದ ಸುತ್ತಲೂ ಸಂಚಾರ ದಟ್ಟಣೆ ಇರುವುದನ್ನು ಈಗಿನಿಂದಲೇ ನಿಯಂತ್ರಿಸಬೇಕಿದೆ. ಡಿಜಿಟಲೀಕರಣದ ಮೂಲಕ ಟ್ರಾಫಿಕ್ ನಿಯಂತ್ರಣ ಸಾಧ್ಯ. ಈಗಾಗಲೇ ಬೆಂಗಳೂರಿನಂತಹ ನಗರದಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಆಪ್‌ಗಳನ್ನು ಅಭಿವೃದ್ಧಿ ಮಾಡಿ ನಿಯಂತ್ರಣ ಮಾಡಲಾಗುತ್ತಿದೆ. ಎಫ್‌ಎಂ ರೇಡಿಯೋಗಳು ಬಂದಾಗ ರೇಡಿಯೋ ಮೂಲಕ ಟ್ರಾಫಿಕ್ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು. ಇದೇ ಮಾದರಿಯಲ್ಲಿ ಟ್ರಾಫಿಕ್ ನಿಯಂತ್ರಿಸಲು ಮೈಸೂರು ನಗರಕ್ಕೆ ಆಪ್ ಅಭಿವೃದ್ಧಿ ಮಾಡಿ ಮೊಬೈಲ್‌ಗಳ ಮೂಲಕ ಸಂಚಾರ ದಟ್ಟಣೆ ಬಗ್ಗೆ ಮಾಹಿತಿ ನೀಡುವುದರಿಂದ ಒಂದಷ್ಟು ಒತ್ತಡ ನಿಯಂತ್ರಿಸಲು ಸಾಧ್ಯವಿದೆ. ಇಂದಿನ ಯುವ ಪೀಳಿಗೆ ಸದಾ ಮೊಬೈಲ್‌ನಲ್ಲೇ ಮುಳುಗಿರುವುದರಿಂದ ಮೊಬೈಲ್ ಆಪ್‌ಗಳ ಮೂಲಕ ಟ್ರಾಫಿಕ್ ಜಾಮ್ ಬಗ್ಗೆ ಸಂದೇಶ ರವಾನಿಸಿ ಒತ್ತಡ ನಿಯಂತ್ರಿಸಬಹುದು. ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲು ಇದು ಸೂಕ್ತ ಸಮಯ. – ಡಾ. ರೋಹಿಣಿ ನಾಗಪದ್ಮ, ಪ್ರಾಂಶುಪಾಲರು, ಎನ್‌ಐಇ ಕಾಲೇಜು, ಮೈಸೂರು.

ಅಭಿವೃದ್ಧಿ ಹೆಸರಿನಲ್ಲಿ ಪಾರ್ಕ್‌ ಮುಚ್ಚುವುದು ಸರಿಯಲ್ಲ

ರತಿ ರಾವ್, ಹೋರಾಟಗಾರ್ತಿ

ಮೈಸೂರಿನ ಸಬ್‌ಅರ್ಬನ್ ಬಸ್ ನಿಲ್ದಾಣದ ಮೇಲೆ ಒತ್ತಡ ಇರುವುದು ಸತ್ಯ. ರಜಾ ದಿನಗಳಲ್ಲಂತೂ ಸಾಕಷ್ಟು ಒತ್ತಡ ಇರುತ್ತದೆ. ಹೀಗಾಗಿ ಬಸ್ ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಮಾಡಲು ಪರ್ಯಾಯ ಆಲೋಚನೆ ಗಳನ್ನು ಮಾಡಬೇಕು. ರಾಜ್ಯ ಸರ್ಕಾರ ‘ಶಕ್ತಿ’ ಯೋಜನೆಯಡಿ ಹೆಣ್ಣು ಮಕ್ಕಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿರುವುದರಿಂದ ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಅದರಲ್ಲಿಯೂ ಹೆಣ್ಣು ಮಕ್ಕಳ ಸಂಖ್ಯೆ ಒಂದಷ್ಟು ಹೆಚ್ಚಿದೆ ಎಂದರೆ ತಪ್ಪಾಗಲ್ಲ. ಸರ್ಕಾರ ಹೆಣ್ಣು ಮಕ್ಕಳಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಿರುವುದು ಸರಿ. ಹಾಗೆಂದು ಬಸ್ ನಿಲ್ದಾಣದ ಮೇಲಿನ ಒತ್ತಡದ ಹಿನ್ನೆಲೆಯಲ್ಲಿ ಸಬ್ ಅರ್ಬನ್ ಬಸ್ ನಿಲ್ದಾಣದ ವಿಸ್ತರಣೆ ಹೆಸರಿನಲ್ಲಿ ಪೀಪಲ್ಸ್ ಪಾರ್ಕ್ ಮುಚ್ಚುವುದು ಸರಿಯಲ್ಲ. ಜನರ ಆರೋಗ್ಯದ ದೃಷ್ಟಿಯಿಂದ ಸಬ್ ಅರ್ಬನ್ ಬಸ್ ನಿಲ್ದಾಣವನ್ನು ನಗರದ ಹೊರ ವಲಯಕ್ಕೆ ಸ್ಥಳಾಂತರ ಮಾಡಬೇಕು. ಅಭಿವೃದ್ಧಿ ಮಾಡುತ್ತೇವೆ ಎಂದು ಇರುವ ಉದ್ಯಾನವನಗಳನ್ನೆಲ್ಲಾ ಮುಚ್ಚಿ ಭಾರೀ ಕಟ್ಟಡಗಳನ್ನು ಕಟ್ಟುತ್ತಾ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುತ್ತಾ ಹೋದರೆ ಆ ವಾಹನಗಳು ಬಿಡುವ ಹೊಗೆಯಿಂದ ಜನರ ಆರೋಗ್ಯ ಏನಾಗಬೇಕು. ಸ್ವಚ್ಛತಾ ನಗರಿಯ ಕಥೆ ಏನಾಗಬಹುದು. ಪಾರ್ಕ್‌ಗಳನ್ನು ಮುಚ್ಚಿ ಕಾಂಕ್ರೀಟ್ ಕಾಡು ಮಾಡುವುದು ಸರಿಯಲ್ಲ. ಈಗ ಬೆಂಗಳೂರು, ಮಂಗಳೂರು ಸೇರಿದಂತೆ ಯಾವ ಕಡೆಗೆ ಹೋಗಬೇಕಾದರೂ ಎಲ್ಲ ಬಸ್‌ಗಳೂ ಸಬ್ ಅರ್ಬನ್ ಬಸ್ ನಿಲ್ದಾಣ ದಿಂದಲೇ ಕಾರ್ಯಾಚರಣೆ ಆರಂಭಿಸುತ್ತವೆ. ಅದರ ಬದಲಿಗೆ ನಗರದ ಹೊರ ವಲಯದ ನಾಲ್ಕೂ ದಿಕ್ಕುಗಳಲ್ಲಿ ಬಸ್ ನಿಲ್ದಾಣಗಳನ್ನು ನಿರ್ಮಿಸಿ ಅಲ್ಲಿಂದ ನಗರ ಬಸ್‌ಗಳ ಕಾರ್ಯಾಚರಣೆ ಮಾಡುವುದು ಹೆಚ್ಚು ಸೂಕ್ತ.

 

andolana

Recent Posts

ಮೃಗಾಲಯದ ಬೇಟೆ ಚೀತಾ ‘ಬ್ರೂಕ್’ ಇನ್ನಿಲ್ಲ

ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…

33 mins ago

ಸಿಲಿಂಡರ್‌ ಸ್ಫೋಟ ಪ್ರಕರಣ : ತನಿಖೆ ತೀವ್ರ ; ಮೈಸೂರಲ್ಲಿ ಖಾಕಿ ಕಟ್ಟೆಚ್ಚರ

ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ…

36 mins ago

ಎಚ್.ಡಿ.ಕೋಟೆ | ತಾಲ್ಲೂಕಿನ ಶೈಕ್ಷಣಿಕ ಪ್ರಗತಿಗೆ ಮಾದರಿ ಕಾರ್ಯಕ್ರಮ

ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಮಾದರಿ ಕಾರ್ಯಕ್ರಮಗಳನ್ನು ಹಗಲಿರುಳು ಎನ್ನದೆ ಶಿಕ್ಷಣ ಇಲಾಖೆಯವರು ನಡೆಸುತ್ತಿದ್ದಾರೆ ಎಂದು ಶಾಸಕ…

44 mins ago

ಹೊಗೇನಕಲ್‌ ಜಲಪಾತಕ್ಕೆ ಪ್ರವಾಸಿಗರ ದಂಡು

ಹನೂರು : ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು,…

57 mins ago

ಪುಷ್ಪ-2 ಕಾಲ್ತುಳಿತ ಪ್ರಕರಣ ; ವರ್ಷದ ಬಳಿಕ ಚಾರ್ಜ್‌ಶೀಟ್‌ ಸಲ್ಲಿಕೆ

ಹೈದರಾಬಾದ್‌ : ಪುಷ್ಪ-2 ಸಿನಿಮಾ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ವರ್ಷದ ಬಳಿಕ ಇದೀಗ ಪೊಲೀಸರು ಕೋರ್ಟ್ಗೆ…

1 hour ago

ನರೇಗಾಗೆ ಯಾವ ಹೆಸರನ್ನು ಬೇಕಾದರು ಇಡಲಿ ; ಅಭ್ಯಂತರ ಇಲ್ಲ : ಸಚಿವ ಪ್ರಿಯಾಂಕ ಖರ್ಗೆ

ಗ್ರಾಮಗಳಲ್ಲಿ ಉದ್ಯೋಗ ಸೃಷ್ಟಿ ಮಾಡಲಿ : ಖರ್ಗೆ ಬೆಂಗಳೂರು : ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಮಹಾತ್ಮ ಗಾಂಧೀಜಿ ಅವರ…

1 hour ago