ಒಂದೊಂದು ಕಡೆಗಳಲ್ಲೂ ತಲಾ ೮ ಎಕರೆ ಭೂಮಿ ಮಂಜೂರಾತಿಗೆ ಶೀಘ್ರ ಜಿಲ್ಲಾಡಳಿತಕ್ಕೆ ಪ್ರಸ್ತಾವ
ಕೆ.ಬಿ.ರಮೇಶನಾಯಕ
ಮೈಸೂರು: ಮುಂದಿನ ೩೦-೫೦ ವರ್ಷಗಳ ನಗರದ ಬೆಳವಣಿಗೆಯನ್ನು ಮುಂದಿಟ್ಟುಕೊಂಡು ಗ್ರೇಡ್-೧ ಮೈಸೂರು ಮಹಾನಗರ ಪಾಲಿಕೆ ರಚನೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡ ಬೆನ್ನಲ್ಲೇ ನಗರದ ನಾಲ್ಕು ದಿಕ್ಕುಗಳಲ್ಲೂ ಅತ್ಯಾಧುನಿಕ ಸೌಲಭ್ಯವುಳ್ಳ ನಾಲ್ಕು ಬಸ್ ಡಿಪೋ-ನಿಲ್ದಾಣಗಳನ್ನು ತೆರೆಯಲು ಮೈಸೂರು ನಗರ ಸಾರಿಗೆ ವಿಭಾಗವು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಆರಂಭಿಸಿದೆ.
ಗ್ರೇಡ್-೧ ಮೈಸೂರು, ಪೆರಿ-ರಲ್ ರಿಂಗ್ ರಸ್ತೆ ನಿರ್ಮಾಣವಾದ ಬಳಿಕ ಅನೇಕ ಕಡೆಗಳಿಂದ ನೇರವಾಗಿ ಬಸ್‌ಗಳನ್ನು ಕಾರ್ಯಾಚರಣೆ ಮಾಡಲು ಅನುಕೂಲವಾಗುವಂತೆ ಹೊಸ ಯೋಜನೆ ರೂಪಿಸಲಾಗಿದೆ. ಈ ನೂತನ ಪ್ರಸ್ತಾವನೆಯನ್ನು ಇನ್ನೆರಡು-ಮೂರು ದಿನಗಳಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಕಳುಹಿಸಲು ಸಿದ್ಧತೆ ನಡೆಯುತ್ತಿದೆ. ಇದರಿಂದಾಗಿ ಭವಿಷ್ಯದಲ್ಲಿ ಎದುರಾಗುವ ನಿಲ್ದಾಣ, ಭೂಮಿ, ಡಿಪೋ ಸಮಸ್ಯೆಗಳನ್ನು ಆರಂಭದಲ್ಲೇ ನಿವಾರಿಸಿಕೊಳ್ಳಲು ನೆರವಾಗಲಿದ್ದು, ಸಾರಿಗೆ ಸಚಿವರೂ ಉತ್ಸುಕತೆ ತೋರಿದ್ದಾರೆ ಎನ್ನಲಾಗಿದೆ.
ಬೆಂಗಳೂರು ನಂತರ ಅತೀ ಹೆಚ್ಚು ಸಾರಿಗೆ ಸಂಪರ್ಕಗಳನ್ನು ಹೊಂದಿರುವ ಮೈಸೂರಿನಲ್ಲಿ ಪ್ರಯಾಣಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಅದರಲ್ಲೂ ದಸರಾ ಮಹೋತ್ಸವದ ಸಂದರ್ಭದಲ್ಲಿ ವಿಶೇಷ ಬಸ್‌ಗಳನ್ನು ಕಾರ್ಯಾಚರಣೆ ಮಾಡುವುದರಿಂದ ಪ್ರಯಾಣಿಕರ ಸಂಖ್ಯೆಗೆ ಲೆಕ್ಕವೇ ಇಲ್ಲ. ಹೀಗಾಗಿಯೇ, ಬೆಂಗಳೂರು-ನೀಲಗಿರಿ ರಸ್ತೆಯಲ್ಲಿರುವ ಕೇಂದ್ರೀಯ ಬಸ್ ನಿಲ್ದಾಣದ ಕಿರಿದಾಗಿದ್ದರಿಂದ ಬನ್ನಿಮಂಟಪದಲ್ಲಿ ೧೨೦ ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣವನ್ನು ನಿರ್ಮಿಸಲಾಗುತ್ತಿದೆ. ಇದೇ ರೀತಿ ಶೀಘ್ರದಲ್ಲೇ ನೂರು ಎಲೆಕ್ಟ್ರಿಕಲ್ ಬಸ್‌ಗಳು (ವಿದ್ಯುತ್ ಚಾಲಿತ) ಬರುವ ಕಾರಣ ಬನ್ನಿಮಂಟಪದಲ್ಲಿ ಮತ್ತೊಂದು ಘಟಕವನ್ನು ನಿರ್ಮಾಣ ಮಾಡಲು ಒಪ್ಪಿಗೆ ದೊರೆತಿರುವುದು ಗಮನಾರ್ಹವಾಗಿದೆ.
ನಾಲ್ಕು ದಿಕ್ಕುಗಳಲ್ಲೂ ಪ್ಲಾನ್: ಮೈಸೂರು ನಗರ ಸಾರಿಗೆ ವಿಭಾಗದ ವ್ಯಾಪ್ತಿಯಲ್ಲಿ ೩೯೦ ನಗರ ಬಸ್ ನಿಲ್ದಾಣದಿಂದ,೧೨೭ ನಂಜನಗೂಡು ಸೇರಿದಂತೆ ೫೧೭ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿದ್ದು, ಮುಂದೆ ೧೦೦ ವಿದ್ಯುತ್ ಚಾಲಿತ ಬಸ್‌ಗಳು ಬಂದು ಸೇರ್ಪಡೆಯಾದರೆ ೬೧೭ ಬಸ್ಗಳಾಗಲಿವೆ. ರಾಜ್ಯ ಸರ್ಕಾರವು ಗ್ರೇಡ್-೧ ಮೈಸೂರು ರಚನೆ ಮಾಡಲು ನಿರ್ಧರಿಸಿರುವ ಕಾರಣ ಹಾಗೂ ಪೆರಿಫೆರಲ್ ರಸ್ತೆ ಮಾಡುವುದರಿಂದ ಮತ್ತಷ್ಟು ಹಳ್ಳಿಗಳಿಗೆ ನೇರವಾಗಿ ಬಸ್ ಸಂಚಾರವನ್ನು ಕಲ್ಪಿಸಬೇಕಿದೆ. ಅದಕ್ಕಾಗಿಯೇ ನಗರದ ಹೊರ ವಲಯದಿಂದಲೇ ನೇರವಾಗಿ ಸಂಪರ್ಕ ಕಲ್ಪಿಸಲು ಮತ್ತು ಅಂತಹ ಭಾಗಗಳನ್ನೇ ಆರಂಭದ ಸ್ಥಳವನ್ನಾಗಿ ಮಾಡಲು ಹುಣಸೂರು, ತಿ.ನರಸೀಪುರ, ನಂಜನಗೂಡು, ಎಚ್.ಡಿ.ಕೋಟೆ ಮಾರ್ಗಗಳಲ್ಲಿ ಬಸ್‌ಡಿಪೋ, ನಿಲ್ದಾಣ ಸ್ಥಾಪಿಸಲು ಪ್ಲಾನ್ ಮಾಡಲಾಗುತ್ತಿದೆ.
ಬಸ್ ಡಿಪೋ ಮತ್ತು ಬಸ್ ನಿಲ್ದಾಣ ಸೇರಿದಂತೆ ಒಟ್ಟಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸಚಿವ ರಾಮಲಿಂಗಾರೆಡ್ಡಿ ಅವರುನೀಡಿರುವ ಸೂಚನೆಯಂತೆ ಮೊದಲು ಪ್ರಸ್ತಾವನೆ ಸಲ್ಲಿಕೆಯಾಗುತ್ತದೆ. ನಂತರ ಬನ್ನಿಮಂಟಪದಲ್ಲಿ ನಿರ್ಮಿಸುತ್ತಿರುವ ಬಸ್ ನಿಲ್ದಾಣದ ಮಾದರಿ ಅಥವಾ ಬೇರೆ ಮಾದರಿಯಲ್ಲಿ ನಿರ್ಮಿಸುವ ಕುರಿತು ವಿಸ್ತೃತ ಯೋಜನಾ ವರದಿ(ಡಿಪಿಆರ್) ತಯಾರಿಸಿ ಸಲ್ಲಿಸಲು ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ.
ಬಸ್ ಡಿಪೋ, ಬಸ್ ನಿಲ್ದಾಣಕ್ಕೆ ತಲಾ ೮ ಎಕರೆಗೆ ಪ್ರಸ್ತಾವನೆ:
ನಗರದ ನಾಲ್ಕು ದಿಕ್ಕುಗಳಲ್ಲೂ ಒಂದೊಂದು ಡಿಪೋಗೆ ೬ ಎಕರೆ, ಬಸ್ ನಿಲ್ದಾಣಕ್ಕೆ ೨ ಎಕರೆ ಸೇರಿದಂತೆ ತಲಾ ೮ ಎಕರೆ ಭೂಮಿಯನ್ನು ಮಂಜೂರು ಮಾಡುವಂತೆ ಜಿಲ್ಲಾಡಳಿತ ಹಾಗೂ ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಸರ್ಕಾರದ ಜಾಗ ಅಥವಾ ಖಾಸಗಿ ಭೂಮಿಯನ್ನು ಖರೀದಿಸಿ ಮಂಜೂರು ಮಾಡುವಂತೆ ಮನವಿ ಸಲ್ಲಿಸಲಾಗುತ್ತದೆ. ಪೆರಿ-ರಲ್ ರಿಂಗ್ ರಸ್ತೆ ಹಾದು ಹೋಗುವ ಜಾಗದ ಸಮೀಪದಲ್ಲೇ ಡಿಪೋ, ನಿಲ್ದಾಣವನ್ನು ನಿರ್ಮಾಣ ಮಾಡಿದರೆ ಪ್ರಯಾಣಿಕರಿಗೆ ಅನುಕೂಲವಾಗುವ ಜತೆಗೆ, ವಾಣಿಜ್ಯ ಚಟುವಟಿಕೆಗೂ ನೆರವಾಗಲಿದೆ. ಹಾಗಾಗಿ ಸೂಕ್ತ ಜಾಗವನ್ನು ಹುಡುಕಿ ಕೊಡುವಂತೆ ಮುಡಾ ಅಧಿಕಾರಿಗಳಿಗೆ ಶೀಘ್ರದಲ್ಲೇ ಪತ್ರ ಬರೆಯಲಾಗುತ್ತದೆ ಎಂದು ಅಽಕಾರಿಯೊಬ್ಬರು ತಿಳಿಸಿದರು
” ಸ್ಟಾರ್ಟಿಂಗ್ ಪಾಯಿಂಟ್‌ಗಳಿಗೆ ಅನುಕೂಲ ನಗರ ಬಸ್ ನಿಲ್ದಾಣದಿಂದ ಹಾಗೂ ಕೊನೆಯ ಮಾರ್ಗದ ಸ್ಟಾರ್ಟಿಂಗ್ ಪಾಯಿಂಟ್‌ಗಳಿಂದ ಬಸ್ ಗಳು ಓಡಾಡುತ್ತಿವೆ. ಮುಂದೆ ಗ್ರೇಡ್-೧ ಮೈಸೂರು ರಚನೆಯಾದ ಮೇಲೆ ಮತ್ತಷ್ಟು ಪಾಯಿಂಟ್ ಹೆಚ್ಚಿಸುವ ಜತೆಗೆ, ಖಾಸಗಿ ಬಡಾವಣೆಗಳಿಗೂ ಬಸ್ ಓಡಿಸಬೇಕಾಗಿದೆ. ಹಾಗಾಗಿ, ರಿಂಗ್ ರಸ್ತೆ, ಪೆರಿಫೆರಲ್ ರಿಂಗ್ ರಸ್ತೆಯ ಸಮೀಪದ ಬಡಾವಣೆಗಳಿಗೆ ಬಸ್ ಓಡಿಸಲು ಸ್ಟಾರ್ಟಿಂಗ್ ಪಾಯಿಂಟ್ ಮಾಡಲು ಅನುಕೂಲವಾಗುತ್ತದೆ. ಇದರಿಂದ ಬೇಡಿಕೆ ಸರಿದೂಗಿಸಬಹುದು ಎಂದು ಅಂದಾಜಿಸಲಾಗಿದೆ.
” ಗ್ರೇಡ್-೧ ಮೈಸೂರು ರಚನೆಯಿಂದ ಮುಂದಿನ ದಿನಗಳಲ್ಲಿ ಬಸ್ ಸಂಚಾರ ಸುಗಮವಾಗಲು ನಾಲ್ಕು ದಿಕ್ಕುಗಳಲ್ಲಿ ಬಸ್ ನಿಲ್ದಾಣ,ಡಿಪೋ ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ನೀಡಿದ ಸೂಚನೆಯಂತೆ ಇನ್ನೆರಡು-ಮೂರು ದಿನಗಳಲ್ಲಿ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಅಗತ್ಯವಿರುವ ಭೂಮಿ ಮಂಜೂರಾತಿಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು.”
ಎಚ್.ಟಿ.ವೀರೇಶ್, ವಿಭಾಗೀಯ ನಿಯಂತ್ರಣಾಧಿಕಾರಿ, ಮೈಸೂರು ನಗರ ಸಾರಿಗೆ ವಿಭಾಗ
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…