ಡಿವಿ ರಾಜಶೇಖರ
ಥಾ ಯ್ಲೆಂಡ್ ದೇಶ ಎಂದರೆ ಬಹಳ ಜನರಿಗೆ ಜ್ಞಾಪಕಕ್ಕೆ ಬರುವುದು ಅಲ್ಲಿನ ಸೆಕ್ಸ್ ಟೂರಿಸಂ. ರಾಜಧಾನಿ ಬ್ಯಾಂಕಾಕ್ ಮತ್ತು ಪಟ್ಟಯಾ ನಗರಗಳಿಗೆ ಹಣವುಳ್ಳ ಪುರುಷರು ಸೆಕ್ಸ್ ಮನರಂಜನೆಗಾಗಿ ವಿಶ್ವದಾದ್ಯಂತದಿಂದ ದಂಡುದಂಡಾಗಿ ಹೋಗಿ ಬರುತ್ತಾರೆ. ರಾಜಧಾನಿ ಬ್ಯಾಂಕಾಕ್ ನಗರವೊಂದರಲ್ಲಿಯೇ ಸುಮಾರು 30 ಸಾವಿರ ಸೆಕ್ಸ್ ವರ್ಕರ್ಸ್ ಹಗಲು-ರಾತ್ರಿ ದುಡಿಯುತ್ತಾರೆ ಎನ್ನಲಾಗಿದೆ. ಅಲ್ಲಿ ಅದೊಂದು ಉದ್ಯೋಗ, ಸಾವಿರಾರು ಕುಟುಂಬಗಳು ಇದೇ ವೃತ್ತಿಯನ್ನು ನಂಬಿ ಬದುಕುತ್ತಿವೆ. ಇಲ್ಲಿ ಸ್ನೇಹ ಮತ್ತು ಸೆಕ್ಸ್ ಒಂದು ಮನರಂಜನೆಯಾಗಿ ಭಾವಿಸಲಾಗುತ್ತದೆ.
ಸರ್ಕಾರಕ್ಕೆ ಪ್ರತಿವರ್ಷ 65 ಬಿಲಿಯನ್ ಡಾಲರ್ ತಂದುಕೊಡುವ ಉದ್ಯಮ ಇದು. ಸೆಕ್ಸ್ ಟೂರಿಸಂಅನ್ನು ಸರ್ಕಾರ ಕಾನೂನುಬದ್ದಗೊಳಿಸಿಲ್ಲ. ಆದರೆ ಎಲ್ಲವೂ ಅನಧಿಕೃತವಾಗಿ ಒಪ್ಪಿತ ಉದ್ಯಮವಾಗಿ ಬೆಳೆದಿದೆ. ದೇಶದ ಸುಂದರ ಬೀಚ್‌ಗಳು, ಸಮುದ್ರದ ಮೇಲಿನ ಆಟಗಳು, ರುಚಿಕರ ಭಕ್ಷ್ಯಗಳು, ಅರೆ ಬೆತ್ತಲೆ ಮಹಿಳೆಯರ ಮಸಾಜ್ ಬಾರ್‌ಗಳು, ಸ್ಟ್ರಿಪ್ ಟೀಸ್ ಕೇಂದ್ರಗಳು, ಒಂದು ದಿನ, ಒಂದು ವಾರದ ಲೆಕ್ಕದ ಮೇಲೆ ಸ್ನೇಹ, ಸೆಕ್ಸ್ ಮತ್ತು ಇತರ ಮನರಂಜನೆಗೆ ಸಿಗುವ ಮಹಿಳೆಯರು ಥಾಯ್ಲೆಂಡ್‌ನ ಆಕರ್ಷಣೆ. ಪ್ರಾಚೀನ ತಾಣಗಳು, ಭೌದ್ಧ ಕೇಂದ್ರಗಳು, ದೇವಾಲಯಗಳು ಈ ಮನರಂಜನೆಯ ಭಾಗವಾಗಿವೆ. ಎಷ್ಟು ಹಣ ಇದ್ದರೂ ಸಾಕಾಗದು. ಸೂಟ್‌ಕೇಸ್ ಗಟ್ಟಲೆ ಹಣತೆಗೆದುಕೊಂಡು ಹೋದ ಕೆಲ ಶ್ರೀಮಂತ ಪುರುಷರು ಸೆಕ್ಸ್ ಮನರಂಜನೆಯಲ್ಲಿ ತೊಡಗಿ ಕೊನೆಗೆ ಬರಿ ಚೆಡ್ಡಿಯಲ್ಲಿ ವಾಪಸಾದ ಸಾಕಷ್ಟು ಕಥೆಗಳು ಚಾಲ್ತಿಯಲ್ಲಿವೆ. ಆದರೆ ವಾಸ್ತವಾಂಶ ತಿಳಿಯದು. ಸರ್ಕಾರ ಮನರಂಜನೆಗೆ ಸಂಬಂಧಿಸಿದ ಅಪರಾಧಗಳ ವಿಚಾರದಲ್ಲಿ ಬಹಳ ಕಠಿಣವಾಗಿದೆ. ಭೌದ್ಧ ಧರ್ಮದ ಈ ನಾಡು ಸೆಕ್ಸ್ ಟೂರಿಸಂನಿಂದಾಗಿ ಕೆಟ್ಟಹೆಸರು ಗಳಿಸಿದ್ದರೂ ಆರ್ಥಿಕವಾಗಿ ಬಹುವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶ.
ಆಗ್ಗೇಯ ಏಷ್ಯಾದ ಮಧ್ಯಮ ಪ್ರಮಾಣದ ಶ್ರೀಮಂತ ದೇಶಗಳಲ್ಲಿ ಥಾಯ್ಲೆಂಡ್ ಕೂಡ ಮುಖ್ಯವಾದುದು ಎಂದು ವಿಶ್ವ ಬ್ಯಾಂಕು ಗುರುತಿಸಿದೆ. ಆಧುನಿಕ ತಾಂತ್ರಿಕ ವಲಯ, ಸೇವಾ ವಲಯಕ್ಕೆ ಉತ್ತಮ ವಾತಾವರಣ ಇರುವುದರಿಂದ ಚೀನಾ ಸೇರಿದಂತೆ ಅಭಿವೃದ್ಧಿ ದೇಶಗಳಿಂದ ಸಾಕಷ್ಟು ವಿದೇಶೀ ಬಂಡವಾಳ ಹರಿದುಬಂದಿದೆ. ಭಾರತ ಕೂಡ ಥಾಯ್ಲೆಂಡ್ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದೆ. ಈ ದೇಶ ಭಾರತಕ್ಕೆ ಹತ್ತಿರವಿರುವ ದೇಶ. ದೆಹಲಿಯಿಂದ ಬ್ಯಾಂಕಾಕ್‌ಗೆ ವಿಮಾನ ಪ್ರಯಾಣದ ಅವಧಿ ಕೇವಲ ಐದು ಗಂಟೆಗಳು. ಬರ್ಮಾ, ಲಾವೋಸ್, ವಿಯಟ್ನಾಂ, ಕಾಂಬೋಡಿಯಾ, ಮಲೇಷಿಯಾ ನೆರೆಯ ದೇಶಗಳು. ಹಿಂದೆ ಈ ಪ್ರದೇಶವನ್ನು ಸಿಯಾಮ್ ಸಾಮ್ರಾಜ್ಯ ಎಂದು ಕರೆಯಲಾಗುತ್ತಿತ್ತು. ಸುಮಾರು 7 ಕೋಟಿ ಜನಸಂಖ್ಯೆ ಇರುವ ಈ ದೇಶದಲ್ಲಿ ಸಾಕಷ್ಟು ಮಂದಿ ಚೀನಾ ಜನಾಂಗಕ್ಕೆ ಸೇರಿದವರು ಮತ್ತು ದಕ್ಷಿಣ ಚೀನಾದಿಂದ ವಲಸೆ ಬಂದವರ ವಂಶಸ್ಥರು.
ದೇಶದ ದೊಡ್ಡ ಸಮಸ್ಯೆ ರಾಜಕೀಯ ಸ್ಥಿರತೆಯದ್ದು. ಇಲ್ಲಿ ಬ್ರಿಟನ್ ಮಾದರಿ ರಾಜಕೀಯ ವ್ಯವಸ್ಥೆಯಿದೆ. ರಾಜಪ್ರಭುತ್ವ ಹೆಸರಿಗಷ್ಟೆ. ರಾಜಕೀಯ 8 ವ್ಯವಸ್ಥೆ ಸದಾ ಮಿಲಿಟರಿಯ ನಿಯಂತ್ರಣದಲ್ಲಿರುತ್ತಾ ಬಂದಿದೆ. ಮಿಲಿಟರಿ ರೂಪಿಸಿದ ಸಂವಿಧಾನದ ಕೆಳಗೆ ರಾಜಕೀಯ ವ್ಯವಸ್ಥೆ ನಡೆಯಬೇಕಾಗಿ ಬಂದಿದೆ. ರಾಜಪ್ರಭುತ್ತ ಮತ್ತು ಮಿಲಿಟರಿಯ ಸಂಬಂಧ ಹಾಗೂ ಅದಕ್ಕೆ ಅನುಗುಣವಾಗಿ ನಡೆದುಕೊಳ್ಳುತ್ತಿರುವ ಕೋರ್ಟ್‌ಗಳು ದೇಶದಲ್ಲಿ ಪ್ರಜಾತಂತ್ರ ಬಲಗೊಳ್ಳಲು ದೊಡ್ಡ ಅಡ್ಡಿಯಾಗಿವೆ. ಇದಕ್ಕೆ ದೇಶದಲ್ಲಿ ಇತ್ತೀಚೆಗೆ ನಡೆದಿರುವ ಬೆಳವಣಿಗೆಗಳೇ ಸಾಕ್ಷಿ.
ಕಳೆದ ವರ್ಷ ನಡೆದ ಚುನಾವಣೆಗಳ ನಂತರ ಅಧಿಕಾರಕ್ಕೆ ಬಂದಿದ್ದ ದೇಶದ ಶ್ರೀಮಂತರಲ್ಲಿ ಒಬ್ಬರಾದ ಪ್ರಧಾನಿ ಶ್ರೇಥಾ ತವಸಿನ್ ಅವರನ್ನು ಅಲ್ಲಿನ ಸಂವಿಧಾನ ಕೋರ್ಟ್ ಕೆಲವು ದಿನಗಳ ಹಿಂದೆ ವಜಾ ಮಾಡಿದೆ. ಇದರಿಂದಾಗಿ ಇಡೀ ರಾಜಕೀಯ ವ್ಯವಸ್ಥೆಯೇ ತಲ್ಲಣಗೊಂಡಿದೆ. ಕ್ರಿಮಿನಲ್ ಅಪರಾಧವೊಂದರಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ವಕೀಲ ಪಿಚೆಟ್ ಚಯನ್ ಬಾನ್ ಅವರನ್ನು ಸಂಪುಟ ಸಚಿವರನ್ನಾಗಿ ನೇಮಕಮಾಡಿಕೊಂಡದ್ದೇ ಪ್ರಧಾನಿ ಶ್ರೇಥಾ ವಿರುದ್ಧ ಬಂದ ಆರೋಪ. ಈ ಸೇರ್ಪಡೆ ವಿರುದ್ದ 40 ಮಂದಿ ಸೆನೆಟರ್ ಗಳು ಸಂವಿಧಾನ ಕೋರ್ಟ್‌ಗೆ ದೂರೊಂದನ್ನು ನೀಡಿದ್ದರು. ಈ ದೂರಿನ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಈ ಪ್ರಕರಣದಲ್ಲಿ ಪ್ರಧಾನಿ ತಪ್ಪು ಮಾಡಿದ್ದಾರೆ ಎಂದು ತೀರ್ಪು ನೀಡಿತು. ಅಷ್ಟೇ ಅಲ್ಲ ಈ ವಿಚಾರದಲ್ಲಿ ಪ್ರಧಾನಿ ಪ್ರಾಮಾಣಿಕವಾಗಿ ನಡೆದುಕೊಂಡಿಲ್ಲ ಮತ್ತು ಈ ಕ್ರಮ ನೈತಿಕತೆಯ ಉಲ್ಲಂಘನೆಯಾಗಿದೆ ಎಂದು ಹೇಳಿ ಪ್ರಧಾನಿ ಶ್ರೇಥಾ ತವಸಿನ್ ಅವರನ್ನೇ ಅವರ ಸ್ಥಾನದಿಂದ ವಜಾಗೊಳಿಸಿದೆ. ಈ 8 ಪ್ರಕರಣದಲ್ಲಿ ನ್ಯಾಯಾಲಯ ಇಷ್ಟು ಕಟುವಾದ ತೀರ್ಪ ನೀಡುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಏಕೆಂದರೆ ಪ್ರಧಾನಿಯವರ ಮರ್ಯಾದೆ ಕಾಪಾಡುವ ಉದ್ದೇಶದಿಂದ ಸಚಿವ ಪಿಚೆಟ್ ಚಯನ್‌ಬಾನ್ ಅವರು ಈ ತೀರ್ಪಿಗೆ ಮೊದಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಕೀಲ ಪಿಜೆಟ್ ಕೋರ್ಟಿನ ಅಧಿಕಾರಿಗಳಿಗೆ ಎರಡು ದಶಲಕ್ಷ ಬಾತ್ (ಸುಮಾರು 55 ಸಾವಿರ ಡಾಲರ್) ಲಂಚ ನೀಡಲು ಹೋಗಿ ಸಿಕ್ಕಿಬಿದ್ದಿದ್ದರು. ಈ ಆರೋಪ ಸಾಬೀತಾಗಿ ಅವರಿಗೆ 2008ರಲ್ಲಿ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ಪ್ರಕರಣ ಗೊತ್ತಿದ್ದೂ ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದು ನೈತಿಕತೆಯ ಉಲ್ಲಂಘನೆ ಎಂದು ಕೋರ್ಟ್ ತೀರ್ಪು ನೀಡಿತು.
ಪ್ರಧಾನಿಯನ್ನು ವಜಾ ಮಾಡಿದ ಈ ಪ್ರಕರಣ ದೇಶದಲ್ಲಿ ಇದು ಮೊದಲನೆಯದೇನಲ್ಲ. ಕಳೆದ 16 ವರ್ಷಗಳಲ್ಲಿ ಕೋರ್ಟ್ ವಜಾ ಮಾಡಿದ ನಾಲ್ಕನೆಯ ಪ್ರಕರಣ ಇದು. ಕೋರ್ಟ್‌ಗಳು ಪ್ರಧಾನಿಯನ್ನು ವಜಾ ಮಾಡಿದ ಪ್ರಕರಣದಂತೆಯೇ ಮಿಲಿಟರಿ ಅಧಿಕಾರಿಗಳೂ ಅನೇಕ ಬಾರಿ ಪ್ರಧಾನಿಯನ್ನು ಕಿತ್ತೊಗೆದು ಕ್ಷಿಪ್ರ ಕ್ರಾಂತಿ ನಡೆಸಿದ್ದಾರೆ. ದೇಶದ ಅತ್ಯಂತ ಜನಪ್ರಿಯ ನಾಯಕ ತಾಕ್‌ಸಿನ್ ನಾವಾತ್ರಾ ಅವರು 2006ರಲ್ಲಿ ನಡೆದ ಮಿಲಿಟರಿ ಕ್ಷಿಪ್ರಕ್ರಾಂತಿಯಲ್ಲಿ ಅಧಿಕಾರ ಕಳೆದುಕೊಂಡಿದ್ದರು. ಆ ನಂತರ 2014ರಲ್ಲಿ ಯಿಂಗ್‌ಚುಕ್ ಕೂಡ ಅಧಿಕಾರ ಕಳೆದುಕೊಂಡಿದ್ದರು.
ಕೋರ್ಟ್ ಕಳೆದ ವಾರ ಇನ್ನೂ ಒಂದು ಆಘಾತಕಾರಿ ತೀರ್ಪನ್ನು ನೀಡಿದೆ. ದೇಶದ ಮತ್ತೊಂದು ಮುಖ್ಯ ರಾಜಕೀಯ ಪಕ್ತವಾದ ಮೂವ್ ಪಾರ್ವಡ್್ರ ಪಾರ್ಟಿಯನ್ನು (ಎಂಎಫ್ ಪಿ) ವಿಸರ್ಜಿಸಿ ಕೋರ್ಟ್ ತೀರ್ಪು ನೀಡಿದೆ. ರಾಜಪ್ರಭುತ್ವದ ಅಧಿಕಾರವನ್ನು ಮೊಟಕುಗೊಳಿಸಿ ಸಂವಿಧಾನದ ಸುಧಾರಣೆ ಮಾಡಬೇಕೆಂದು ಈ ಪಕ್ಷ ಪ್ರತಿಪಾದಿಸಿದ್ದೇ ಅಪರಾಧವಾಯಿತು. ರಾಜಪ್ರಭುತ್ತಕ್ಕೆ ಅಪಮಾನ ಮಾಡಲಾಗಿದೆ ಎಂದು ಕೋರ್ಟ್ ತೀರ್ಪು ನೀಡಿ ಆ ಪಕ್ಷವನ್ನೇ ವಿಸರ್ಜಿಸಲು ಆದೇಶಿಸಿದೆ. ಹಾಗೆ ನೋಡಿದರೆ ಎಂಎಫ್‌ಪಿ 2023ರಲ್ಲಿ ನಡೆದ ಪಾರ್ಲಿಮೆಂಟ್ ಚುನಾವಣೆಗಳಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಿತ್ತು. ಆದರೆ ಆ ಪಕ್ಷ ಸರ್ಕಾರ ರಚಿಸಲು ಮಿಲಿಟರಿ ಅವಕಾಶ ನೀಡಲಿಲ್ಲ. ಆ ಪಕ್ಷದ ನಾಯಕ ಪಿಟಾ ಲಿಂಜರೋಯೆನ್ ರಾತ್ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ವಜಾ ಮಾಡಿ ಅವರು ಪ್ರಧಾನಿಯಾಗುವುದನ್ನು ಮಿಲಿಟರಿ ತಪ್ಪಿಸಿತು. ದೇಶದ ರಾಜಕೀಯದಲ್ಲಿ ಮಿಲಿಟರಿಯ ಪಾತ್ರ ಕಡಿಮೆ ಮಾಡಬೇಕೆಂದು ಅವರು ಪ್ರತಿಪಾದಿಸುತ್ತಿದ್ದುದೇ ಆಪರಾಧವಾಗಿತ್ತು. ಈ ಕಾರಣದಿಂದ 11 ಪಕ್ಷಗಳ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಮಿಲಿಟರಿ ಕ್ಷಿಪ್ರಕ್ರಾಂತಿಯ ನಂತರ ದೇಶದಿಂದ ಹೊರಗೆ ನೆಲೆಸಿದ್ದ ಹಿರಿಯ ರಾಜಕಾರಣಿ ತಾಕ್ ಸಿನ್ ಅವರು ಮರಳಿ ದೇಶಕ್ಕೆ ಬರುವಂತೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಈ ಪಕ್ಷಗಳ ನಡುವೆ ಒಪ್ಪಂದವಾಗಿತ್ತು. ಹೀಗಾಗಿ ತಾಕ್ಸಿನ್ ಕಳೆದ ವರ್ಷ ಸ್ವದೇಶಕ್ಕೆ ಮರಳಿದ್ದಾರೆ.
ಇದೀಗ ಹೊಸ ಸರ್ಕಾರ ಬರಬೇಕಿದೆ. ಯಾರನ್ನು ನಾಯಕರನ್ನಾಗಿ ಆಯ್ಕೆಮಾಡಬೇಕೆಂಬ ಪ್ರಶ್ನೆ ಸಂಸದರನ್ನು ಕಾಡಿದೆ. ಕೊನೆಗೆ ತಾಕ್‌ಸಿನ್ ಅವರ ಕೊನೆಯ ಮಗಳಾದ ಪೆನ್ ತಾಯ್ ಪಕ್ಷದ ನಾಯಕಿ ಪೀಟೋಂಗತಾರ್ನ್ ಸಿನವಾತ್ರ ಅವರ ಹೆಸರನ್ನು ಪ್ರಧಾನಿ ಸ್ಥಾನಕ್ಕೆ ಸೂಚಿಸಲಾಗಿದೆ. ಪ್ರಧಾನಿ ಆಗಿ ಅವರ ನೇಮಕಕ್ಕೆ ಸಂಸತ್ತು ಒಪ್ಪಿಗೆ ನೀಡಿದೆ.
ದಾ.ರಾ. ಮಹೇಶ್ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…
ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…