ಕೆ.ಆರ್.ನಗರದ ಸುಭಾಷ್, ರಮೇಶ್ ಸಹೋದರರಿಂದ ಕುಲಕಸುಬು ಮುಂದುವರಿಕೆ
ಕೆ.ಆರ್.ನಗರ: ಕುಂಬಾರಿಕೆಯನ್ನು ಕುಲಕಸುಬಾಗಿ ನಂಬಿರುವ ಕುಟುಂಬವೊಂದುನಾಲ್ಕು ದಶಕಗಳಿಂದ ಗಣೇಶ ಮೂರ್ತಿ ತಯಾರಿಸುವುದರಲ್ಲಿ ತೊಡಗಿರುವ ಅಪರೂಪದ ಸಂಗತಿಗೆ ಪಟ್ಟಣದ ಆಂಜನೇಯನ ಬಡಾವಣೆ ಸಾಕ್ಷಿಯಾಗಿದೆ.
ಆಂಜನೇಯ ಬಡಾವಣೆಯಲ್ಲಿ ವಾಸವಾಗಿದ್ದ ದಿವಂಗತ ಪುಟ್ಟರಾಜು ಅವರ ಪುತ್ರರಾದಸುಭಾಷ್ ಮತ್ತು ರಮೇಶ್ ಸಹೋದರರು ಕುಟುಂಬದ ಕಾಯಕವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
ವರ್ಷಪೂರ್ತಿ ಇದೇ ಕಾಯಕದಲ್ಲಿ ತೊಡಗುವ ಇವರು ಅರ್ಧ ಅಡಿಯಿಂದ ೧೨ ಅಡಿ ಎತ್ತರದ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಾರೆ. ವರ್ಷದಲ್ಲಿ ೧೦ ಸಾವಿರಕ್ಕೂ ಹೆಚ್ಚು ಗಣಪತಿ ಮೂರ್ತಿಗಳನ್ನು ತಯಾರಿಸುವ ಇವರಿಗೆ ಪತ್ನಿ, ಮಕ್ಕಳು ಸಾಥ್ ನೀಡುತ್ತಾರೆ.
ಈವರೆಗೂ ೩ ಲಕ್ಷಕ್ಕೂ ಅಧಿಕ ಮೂರ್ತಿಗಳನ್ನು ತಯಾರಿಸಿ ದಾಖಲೆ ಮಾಡಿದ್ದಾರೆ. ಅದೂಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳೇ ಎನ್ನುವುದು ಮತ್ತೊಂದು ವಿಶೇಷತೆ.
೪೫ ವರ್ಷಗಳಿಂದ ನಿರಂತರವಾಗಿ ಗಣೇಶಮೂರ್ತಿ ತಯಾರಿಕೆಯಲ್ಲಿ ತೊಡಗಿರುವ ಈ ರೀತಿಯ ಏಳೆಂಟು ಕುಟುಂಬಗಳು ಕೆ.ಆರ್. ನಗರ ಪಟ್ಟಣದ ಆಂಜನೇಯ ಬಡಾವಣೆಯಲ್ಲಿ ನೆಲೆಸಿರುವುದು ಗಮನಾರ್ಹ.
ಕುಂಬಾರಿಕೆಯನ್ನೇ ಮೂಲ ಕಸುಬಾಗಿಸಿಕೊಂಡಿರುವ ಈ ಕುಟುಂಬಗಳು ಗಣೇಶ ಮೂರ್ತಿ ತಯಾರಿಕೆಯಲ್ಲಿ ಸಿದ್ಧಹಸ್ತರು. ಸರ್ಕಾರದ ಮಾರ್ಗಸೂಚಿಯಂತೆ ಕೇವಲ ಜೇಡಿ ಮಣ್ಣಿನಲ್ಲಿ ಪರಿಸರ ಸ್ನೇಹಿ ಗಣಪತಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ೫೦ ರೂ.ಗಳಿಂದ ೩೫ ಸಾವಿರ ರೂ. ವರೆಗೆ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಾರೆ. ಇದರೊಟ್ಟಗೆ ವಿಶೇಷವಾಗಿ ಗೌರಮ್ಮನ ಮೂರ್ತಿಗಳನ್ನೂ ಕೂಡ ತಯಾರಿಸುತ್ತಾರೆ. ಕುಂಬಾರಿಕೆಯನ್ನೇ ಕಾಯಕ ಮಾಡಿಕೊಂಡಿರುವ ಇಂತಹ ಕುಟುಂಬಗಳನ್ನು ಸರ್ಕಾರ ಗುರುತಿಸಿ ನೆರವು ನೀಡಬೇಕಿದೆ. ಜೊತೆಗೆ ಸರ್ಕಾರದಿಂದ ಯಾವುದೇ ಪ್ರಶಸ್ತಿ ನೀಡಿಲ್ಲ ಎಂದು ನಾಗರಿಕರು ಬೇಸರ ವ್ಯಕ್ತಪಡಿಸುತ್ತಾರೆ.
” ನಾವು ವೃತ್ತಿಯಲ್ಲಿ ಕುಂಬಾರರು. ಗಣೇಶ ಹಬ್ಬದ ಸಮಯದಲ್ಲಿ ಮೂರ್ತಿಗಳನ್ನು ತಯಾರಿಸುತ್ತೇವೆ. ೫೦ ರೂ.ಗಳಿಂದ ಹಿಡಿದು ೨೫ ಸಾವಿರ ರೂ.ವರೆಗಿನ ಗಣೇಶ ಮೂರ್ತಿಗಳು ನಮ್ಮಲ್ಲಿವೆ. ೬ ಅಡಿಯಿಂದ ಹಿಡಿದು ೧೨ ಅಡಿಗಳವರೆಗಿನ ವಿವಿಧ ರೂಪಗಳ ಗಣೇಶ ಮೂರ್ತಿಗಳು ಸಿಗುತ್ತವೆ. ಕೊರೊನಾ ನಂತರ ವ್ಯಾಪಾರ ಕುಸಿದಿದೆ. ಗೌರಿ-ಗಣೇಶ ಹಬ್ಬದ ಸಮಯದಲ್ಲಿ ವ್ಯಾಪಾರ ಸಾಧಾರಣವಾಗಿದೆ.”
-ಸುಭಾಷ್, ಗಣಪತಿ ಮೂರ್ತಿ ತಯಾರಕರು
” ಈ ಕುಟುಂಬ ಕುಲ ಕಸುಬನ್ನೇ ಜೀವನವನ್ನಾಗಿ ಮಾಡಿಕೊಂಡಿದೆ. ಕಾಯಕ ಸಮಾಜಗಳನ್ನು ಉಳಿಸುವ ಜವಾಬ್ದಾರಿ ಸರ್ಕಾರದ ಮೇಲೆ ಇದೆ. ಸರ್ಕಾರ ಇಂತಹ ಕುಟುಂಬಗಳಿಗೆಸೌಲಭ್ಯಗಳನ್ನು ಒದಗಿಸಿಲ್ಲ. ಇದರಿಂದಾಗಿ ಗುಡಿ ಕೈಗಾರಿಕೆ ಕಣ್ಮರೆಯಾಗುತ್ತಿದೆ. ಸರ್ಕಾರ ಮತ್ತು ತಾಲ್ಲೂಕು ಆಡಳಿತ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿಲ್ಲ.”
-ಕೆ.ಉಮೇಶ್, ಪುರಸಭಾ ಸದಸ್ಯರು
ಹನೂರು : ಶ್ರೀಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುವ ದಾಸೋಹ, ಲಾಡು ಪ್ರಸಾದ ತಯಾರಿಸಲು ಯಾವುದೇ ರೀತಿಯ ಸಿಲಿಂಡರ್ ಕೊರತೆಯಾಗಿಲ್ಲ…
ಹನೂರು : ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಯುಗಾದಿ ಜಾತ್ರಾ ಮಹೋತ್ಸವಕ್ಕೆ…
ಮೈಸೂರು : ನಗರದ ಹೊರವಲಯದ ಕೆಂಪೇಗೌಡ ವೃತ್ತ(ಮಣಿಪಾಲ್ ಜಂಕ್ಷನ್)ದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರದಿಂದ ನಡೆಯುತ್ತಿರುವ ಕಾಮಗಾರಿಗಳನ್ನು ಸಂಸದ ಯದುವೀರ್…
ಚಿಕ್ಕಮಗಳೂರು: ತಾಲ್ಲೂಕಿನ ಮುತ್ತೋಡಿ ಅರಣ್ಯ ವಲಯದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಪ್ರಮಾಣದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಪರಿಣಾಮ ಅಪರೂಪದ ಅರಣ್ಯ…
ಬೆಂಗಳೂರು: ಯುಗಾದಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ 2000 ಹೆಚ್ಚುವರಿ ಬಸ್ಸುಗಳ ವಿಶೇಷ ಸಾರಿಗೆ…
ಬಾಗಲಕೋಟೆ: ದಿವಂಗತ ಹೆಚ್.ವೈ.ಮೇಟಿಯವರ ಪ್ರಯತ್ನ ಮತ್ತು ಆಶಯದಂತೆ ಸರ್ಕಾರಿ ವೈದ್ಯಕೀಯ ಕಾಲೇಜು ಉದ್ಘಾಟಿಸುವ ಮೂಲಕ ಅವರ ಕನಸನ್ನು ನನಸು ಮಾಡಲಾಗುತ್ತಿದೆ…