Andolana originals

೩ ತಿಂಗಳು ಮುನ್ನವೇ ದಸರಾ ಸಿದ್ಧತೆ ಆರಂಭ

ಕೆ.ಬಿ.ರಮೇಶನಾಯಕ

ವಿವಿಧ ಉಪ ಸಮಿತಿಗಳಿಗೆ ವಿಶೇಷಾಧಿಕಾರಿಗಳ ನೇಮಕ; ಅದ್ಧೂರಿ ಆಚರಣೆಗೆ ಅಧಿಕಾರಿಗಳಿಗೆ ಹೊಣೆಗಾರಿಕೆ

ಕೆ.ಆರ್.ರಕ್ಷಿತ್ಗೆ ಮತ್ತೆ ಯುವ ದಸರಾ ಹೊಣೆ

ಹಲವು ಅಧಿಕಾರಿಗಳಿಗೆ ಮೊದಲ ದಸರಾದ ಜವಾಬ್ದಾರಿ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲು ನಿರ್ಧಾರ ವಾದ ಬೆನ್ನಲ್ಲೇ ಮೂರು ತಿಂಗಳ ಮುನ್ನವೇ ಜಿಲ್ಲಾಡ ಳಿತ ದಸರಾ ಸಿದ್ಧತೆಯನ್ನು ಸದ್ದಿಲ್ಲದೆ ಆರಂಭಿಸಿದ್ದು, ಜಿಲ್ಲಾ ಮಟ್ಟದ ಅಽಕಾರಿಗಳಿಗೆ ಉಪ ಸಮಿತಿ ಹೊಣೆಗಾರಿಕೆಯನ್ನು ವಹಿಸಲಾಗಿದೆ.

ಜಂಬೂ ಸವಾರಿ ಮೆರವಣಿಗೆಯಲ್ಲಿ ಸ್ತಬ್ಧಚಿತ್ರ ಉಪ ಸಮಿತಿ ಸದಸ್ಯರು, ಮೆರವಣಿಗೆ ಸಮಿತಿ ಸದಸ್ಯರು ಓಡಾಡುವುದಕ್ಕೆ ಬ್ರೇಕ್ ಹಾಕುವಂತೆ ಸಲಹೆಗಳು ಕೇಳಿಬಂದಿರುವ ಕಾರಣ ಈ ಬಾರಿ ಒಂದಿಷ್ಟು ಸದಸ್ಯರ ಸಂಖ್ಯೆಯನ್ನು ಕಡಿತ ಮಾಡುವುದು ನಿಶ್ಚಿತವಾಗಿದೆ ಎಂದು ಹೇಳಲಾಗಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ದಸರಾ ಮಹೋತ್ಸವ ಉನ್ನತ ಮಟ್ಟದ ಸಮಿತಿ ಸಭೆಯ ಬೆನ್ನಲ್ಲೇ ಜಿಲ್ಲಾಧಿಕಾರಿಗಳೂ ಆಗಿರುವ ದಸರಾ ವಿಶೇಷಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಉಪ ಸಮಿತಿಗಳಿಗೆ ಉಪ ವಿಶೇಷಾಧಿಕಾರಿಗಳು, ಕಾರ್ಯಾಧ್ಯಕ್ಷರು, ಕಾರ್ಯದರ್ಶಿಗಳನ್ನು ನೇಮಕ ಮಾಡಿದ್ದಾರೆ. ಉಪ ಸಮಿತಿಗಳಿಗೆ ಅಽಕಾರಿಗಳನ್ನು ನೇಮಿಸುವ ಜತೆಗೆ, ಯಾವ್ಯಾವ ರೀತಿಯಲ್ಲಿ ಕಾರ್ಯಕ್ರಮ ರೂಪಿಸಬೇಕೆಂಬ ಸಲಹೆ, ಮಾರ್ಗದರ್ಶನ ಮಾಡಲಾಗಿದೆ. ಅದರಂತೆ, ತಕ್ಷಣ ದಿಂದಲೇ ಕಾರ್ಯಪ್ರವೃತ್ತರಾಗಿರುವ ಅಧಿಕಾರಿಗಳು ಒಂದು ತಿಂಗಳ ಮುನ್ನವೇ ಬೇಕಾದ ಸಿದ್ಧತೆ ಯನ್ನು ಮುಗಿಸುವ ಗಡುವು ನೀಡಲಾಗಿದೆ.

ಕೆ.ಆರ್.ರಕ್ಷಿತ್‌ಗೆ ಯುವ ದಸರಾ ಹೊಣೆ: ಕಳೆದ ವರ್ಷ ಹೊರವಲಯದ ಉತ್ತನಹಳ್ಳಿ ಸಮೀಪ ಆಯೋಜಿಸಿದ್ದ ಯುವ ದಸರಾ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯುವಂತೆ ನೋಡಿಕೊಂಡ ಕೆ.ಆರ್.ರಕ್ಷಿತ್‌ಗೆ ಈ ಬಾರಿಯೂ ಯುವ ದಸರಾ ಹೊಣೆ ನೀಡಲಾಗಿದೆ. ಈಗ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿರುವ ರಕ್ಷಿತ್, ಯುವ ದಸರಾಗೆ ಪ್ರಾಯೋಜಕತ್ವ, ಕಲಾವಿದರ ಆಯ್ಕೆ, ಲಕ್ಷಾಂತರ ಜನರು ವೀಕ್ಷಣೆ ಮಾಡಿದರೂ ಸಣ್ಣ ಗೊಂದಲವೂ ಆಗದಂತೆ ಪ್ಲಾನ್ ಮಾಡಿದ್ದ ರಿಂದಾಗಿ ಸರ್ಕಾರ ಮತ್ತೆ ಅವರನ್ನೇ ನಿಯೋಜಿಸಿದೆ. ಕೆ.ಆರ್.ರಕ್ಷಿತ್ ಅವರ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಅವರನ್ನು ಉಪ ವಿಶೇಷಾಧಿಕಾರಿಯಾಗಿ ನೇಮಿಸಿರುವುದು ಗಮನಾರ್ಹವಾಗಿದೆ.

ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಎಸ್‌ಪಿಯಾಗಿದ್ದಾಗ ಯುವ ದಸರಾದಲ್ಲಿ ಕಾರ್ಯ ನಿರ್ವಹಿಸಿದ್ದರೆ, ಜಿ.ಲಕ್ಷ್ಮೀಕಾಂತ ರೆಡ್ಡಿ ಅವರು ಪಾಲಿಕೆ ಆಯುಕ್ತರಾಗಿದ್ದಾಗ ಸ್ವಾಗತ ಮತ್ತು ಆಮಂತ್ರಣ ಉಪ ಸಮಿತಿ ಉಪ ವಿಶೇಷಾಧಿಕಾರಿಗಳಾಗಿದ್ದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಲಿಂಗಯ್ಯ, ಹುಣಸೂರು ಮತ್ತು ಮೈಸೂರು ಉಪ ವಿಭಾಗದ ಉಪ ವಿಭಾಗಾಧಿಕಾರಿಗಳಿಗೂ ಇದು ಮೊದಲನೇ ದಸರಾವಾಗಿದೆ. ನವರಾತ್ರಿಯ ದಿನಗಳಲ್ಲಿ ಅರಮನೆ ನಗರಿ ಕಂಗೊಳಿಸುವಂತೆ ಮಾಡುವ ವಿದ್ಯುತ್ ದೀಪಾಲಂಕಾರದ ಹೊಣೆ ಹೊತ್ತಿರುವ ಚಾಮುಂಡೇಶ್ವರಿ ವಿದ್ಯುತ್ ಸರಬ ರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ ರಾಜು ಅವರು ದಸರಾಮಹೋತ್ಸವದಲ್ಲಿ ಅತಿ ಹೆಚ್ಚು ಬಾರಿ ಹೊಣೆ ಹೊತ್ತ ಹೆಸರನ್ನು ಪಡೆದಿದ್ದಾರೆ. ಕಾರ್ಯಪಾಲಕ ಅಭಿಯಂತರ, ಅಧಿಕ್ಷಕ ಅಭಿಯಂತರ, ತಾಂತ್ರಿಕ ನಿರ್ದೇಶಕರಾಗಿದ್ದಾಗಲೂ ಈ ಹೊಣೆಯನ್ನು ನಿರ್ವಹಿಸಿದ್ದರು. ಈಗ ಅವರೇ ನಿಗಮದ ಎಂಡಿಯಾದ ಮೇಲೆ ನಡೆಯುತ್ತಿರುವ ಮೊದಲನೇ ದಸರಾದಲ್ಲಿ ಹೊಸ ಹೊಸ ವಿನ್ಯಾಸಗಳ ಮಾದರಿಯನ್ನು ಅಳವಡಿಸುವುದಕ್ಕೆ ಪ್ಲಾನ್ ಮಾಡುತ್ತಿರುವುದು ಕೇಳಿಬಂದಿದೆ.

ಸಿಇಒ, ಪಾಲಿಕೆ ಆಯುಕ್ತರಿಗೆ ಮೊದಲ ದಸರಾ: ಕಳೆದ ಮೂರು ತಿಂಗಳಿಂದ ಅಧಿಕಾರಿಗಳ ವರ್ಗಾವಣೆಯಾಗಿರುವ ಕಾರಣ ಈ ಬಾರಿ ಹಳಬರು – ಹೊಸಬರು ಮಿಳಿತ ಗೊಂಡಿದ್ದು, ಅನೇಕರಿಗೆ ಮೊದಲ ದಸರೆಯಾಗಿದೆ. ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್, ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿ-, ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಬಿಂದುರಾಣಿ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಕೆ.ಎಸ್.ಸುಂದರರಾಜ್ ಹೊಸಬರಾಗಿದ್ದಾರೆ.

ವೈಮಾನಿಕ ಪ್ರದರ್ಶನಕ್ಕೆ ಪತ್ರ ವ್ಯವಹಾರ: 

ದಸರಾದಲ್ಲಿ ವೈಮಾನಿಕ ಪ್ರದರ್ಶನಕ್ಕೆ ರಕ್ಷಣಾ ಪಡೆಯ ಯುದ್ಧ ವಿಮಾನಗಳನ್ನು ಒದಗಿಸುವ ಸಂಬಂಧ ರಕ್ಷಣಾ ಇಲಾಖೆಗೆ ಪತ್ರ ಬರೆಯಲು ಜಿಲ್ಲಾಡಳಿತ ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆಯಂತೆ ಪತ್ರ ಬರೆಯುವ ಸಿದ್ಧತೆ ನಡೆದಿದೆ. ಅಲ್ಲದೆ,ಮುಂದಿನ ದಿನಗಳಲ್ಲಿ ರಕ್ಷಣಾ ಸಚಿವರು, ಕಾರ್ಯದರ್ಶಿ ಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುವ ಸಾಧ್ಯತೆ ಇದೆ.

ಆಂದೋಲನ ಡೆಸ್ಕ್

Recent Posts

ಸಿದ್ದರಾಮಯ್ಯ ಪೂರ್ಣವಧಿ ಸಿಎಂ : ಡಿನ್ನರ್‌ ಬ್ರೇಕ್‌ಫಾಸ್ಟ್‌ ಬಳಿಕವೂ ತಂದೆ ಪರ ಯಂತ್ರೀಂದ್ರ ಬ್ಯಾಟಿಂಗ್‌

ಬೆಳಗಾವಿ : ಡಿನ್ನರ್‌ ಬ್ರೇಕ್‌ಫಾಸ್ಟ್‌ ಬಳಿಕವೂ ತಂದೆಯ ಪರ ಪುತ್ರ ಯತೀಂದ್ರ ಬ್ಯಾಟಿಂಗ್‌ ಮಾಡುವುದನ್ನು ಮುಂದುವರಿಸಿದ್ದಾರೆ. ಸಿದ್ದರಾಮಯ್ಯ ಪೂರ್ಣ ಅವಧಿಯವರೆಗೆ…

8 mins ago

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ : ಡಿಕೆಶಿ ಆಪ್ತ ಇನಾಯತ್‌ ಅಲಿಗೆ ದಿಲ್ಲಿ ಪೊಲೀಸರಿಂದ ನೋಟಿಸ್‌

ಹೊಸದಿಲ್ಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಪ್ತ, ಕಾಂಗ್ರೆಸ್ ಮುಖಂಡ ಇನಾಯತ್ ಅಲಿಗೆ ದೆಹಲಿ…

27 mins ago

ಇಂಡಿಗೋ ಬಿಕ್ಕಟ್ಟು : ತುರ್ತು ವಿಚಾರಣೆಗೆ ಸುಪ್ರೀಂ ನಕಾರ

ಹೊಸದಿಲ್ಲಿ : ಇಂಡಿಗೋ ವಿಮಾನಗಳ ರದ್ದತಿ ಮತ್ತು ವಿಳಂಬದ ಕುರಿತು ತುರ್ತು ವಿಚಾರಣೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಆಲಿಸಲು…

35 mins ago

ಜನವರಿಯಿಂದ ಇಂದಿರಾ ಕಿಟ್‌ ವಿತರಣೆ

ಬೆಳಗಾವಿ : ಮುಂಬರುವ ಜನವರಿಯಿಂದ ಹೆಚ್ಚುವರಿ 5 ಕೆ.ಜಿ ಅಕ್ಕಿ ಬದಲಿಗೆ ರಾಜ್ಯಾದ್ಯಂತ ಇಂದಿರಾ ಕಿಟ್‍ಗಳನ್ನು ವಿತರಣೆ ಮಾಡಲಾಗುವುದು ಎಂದು…

1 hour ago

ಲ್ಯಾಂಡ್‌ ಲಾರ್ಡ್‌ ಚಿತ್ರದ ಟೀಸರ್‌ ರಿಲೀಸ್‌

ಬೆಂಗಳೂರು: ನಟ ದುನಿಯಾ ವಿಜಯ್‌ ಅಭಿನಯದ ಲ್ಯಾಂಡ್‌ ಲಾರ್ಡ್‌ ಚಿತ್ರದಲ್ಲಿ ನಟ ರಾಜ್‌ ಬಿ ಶೆಟ್ಟಿ ನಟಿಸುತ್ತಿದ್ದು, ಇಂದು ಸಿನಿಮಾದ…

1 hour ago

ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿ ಬಗ್ಗೆ ಸಚಿವ ಮಧು ಬಂಗಾರಪ್ಪ ಹೇಳಿದ್ದಿಷ್ಟು.!

ಬೆಳಗಾವಿ: ಶಿಕ್ಷಕರ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯ ಸಮಸ್ಯೆ ಇಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಪ್ರಾಥಮಿಕ…

2 hours ago