Andolana originals

ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ಗುಂಡಿಗಳ ದರ್ಬಾರ್

ಪ್ರಶಾಂತ್.ಎಸ್

ದುರಸ್ತಿಗೆ ಜನಪ್ರತಿನಿಧಿ, ಅಧಿಕಾರಿಗಳ  ನಿರ್ಲಕ್ಷ್ಯ, ಅಪಘಾತವಾದರೆ ಸಾವು ಗ್ಯಾರಂಟಿ

ಮೈಸೂರು: ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಡಾ.ರಾಜ್ ಕುಮಾರ್ ರಸ್ತೆ ತುಂಬೆಲ್ಲಾ ಗುಂಡಿಗಳು ಬಿದ್ದಿದ್ದು, ನಾಲ್ಕು ವರ್ಷಗಳಿಂದಲೂ ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

ಶಕ್ತಿನಗರ,ಯರಗನಹಳ್ಳಿ, ಶಿಕ್ಷಕರ ಬಡಾವಣೆ, ರಾಘವೇಂದ್ರ ನಗರ ಸೇರಿದಂತೆ ಅಂದಾಜು ೭ ಕಿ.ಮೀ. ಇರುವ ಈ ರಸ್ತೆ ಕಾವೇರಿ ವೃತ್ತದಿಂದ ಯರಗನಹಳ್ಳಿಯ ಸಿದ್ದಪ್ಪಾಜಿ ದೇವಸ್ಥಾನದವರೆಗೆ ಸುಮಾರು ೫೦೦ ಮೀ.ವರೆಗಿನ ರಸ್ತೆಯಲ್ಲಿ ಹಲವು ದಿನಗಳಿಂದ ಗುಂಡಿ ಬಿದ್ದಿದೆ. ಈ ಬಗ್ಗೆ ಸ್ಥಳೀಯರು ಅನೇಕ ಬಾರಿ ನಗರಪಾಲಿಕೆ, ಮೈಸೂರು ಅಭಿವೃದ್ಧಿ ಪ್ರಾಧಿಕಾರ, ಸ್ಥಳೀಯ ಜನಪ್ರತಿನಿಧಿಗಳಿಗೆ ದೂರು ನೀಡಿದ್ದಾರೆ. ಆದರೆ, ಈವರೆಗೂ ಗುಂಡಿ ಮುಚ್ಚಿ ರಸ್ತೆ ಸರಿಪಡಿಸುವ ಕಾರ್ಯವಾಗಿಲ್ಲ.

ಪರಿಹಾರಕ್ಕೆ ನ್ಯಾಯಾಲಯದ ಮೊರೆ : ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಕೆಲವು ಸ್ಥಳಗಳು ರೆವಿನ್ಯೂ ಬಡಾವಣೆ ವ್ಯಾಪ್ತಿಗೆ ಬರುತ್ತವೆ. ಈ ಭಾಗ ದಲ್ಲಿವಾಸಿಸುತ್ತಿರುವ ಕೆಲವು ನಿವಾಸಿಗಳು ರಸ್ತೆ ಜಾಗ ನಮಗೆ ಸೇರಿದ್ದು, ನಮಗೆ ಪರಿಹಾರ ನೀಡಿಲ್ಲ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯ ಪೂರಕ ದಾಖಲೆಗಳನ್ನು ನೀಡುವಂತೆ ಹೇಳಿದೆ. ಆದರೆ ಇದು ವರೆಗೂ ದಾಖಲೆಗಳನ್ನು ನೀಡಿಲ್ಲ. ದಾಖಲೆಗಳನ್ನು ಸಲ್ಲಿಸದಿರುವುದರಿಂದ ಇದುವರೆಗೂ ಪರಿಹಾರ ನೀಡಿಲ್ಲ. ಹಾಗಾಗಿ ರಸ್ತೆ ಸಮಸ್ಯೆ ಹಾಗೆಯೇ ಉಳಿದಿದೆ ಎನ್ನಲಾಗಿದೆ.

ರೆವಿನ್ಯೂ ಬಡಾವಣೆ ಆಗಿರುವುದೇ ಸಮಸ್ಯೆಗೆ ಕಾರಣ: ಡಾ.ರಾಜ್‌ಕುಮಾರ್ ರಸ್ತೆ ರೆವಿನ್ಯೂ ಬಡಾವಣೆಗೆ ಸೇರಿದೆ. ಇದೇ ಕಾರಣದಿಂದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ ಎಂದು ಹೇಳಲಾಗಿದೆ. ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂಬ ಕಾರಣದಿಂದ ಸಂಬಂಧಪಟ್ಟವರು ರಸ್ತೆ ದುರಸ್ತಿಗೆ ಮುಂದಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿಸ್ತುತಾರೆ. ರಸ್ತೆಯನ್ನು ಡಾಂಬರೀಕರಣಗೊಳಿಸಲು ಹಾಗೂ ಗುಂಡಿ ಮುಚ್ಚಲು ನ್ಯಾಯಾಲಯ ತಡೆಯಾಜ್ಞೆ ನೀಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನಹರಿಸಿ ಸಮಸ್ಯೆ ಬಗೆಹರಿಸುವ ಮೂಲಕ ಸಾರ್ವಜನಿಕರ ಸಮಸ್ಯೆಗೆ ತೆರೆ ಎಳೆಯಬೇಕಾಗಿದೆ.

ಅಭಿವೃದ್ಧಿಗೆ ನ್ಯಾಯಾಲಯದ ತಡೆಯಾಜ್ಞೆ ಇಲ್ಲ : ಈ ರಸ್ತೆಯನ್ನು ಡಾಂಬರೀಕರಣಗೊಳಿಸಲು ಹಾಗೂ ಗುಂಡಿಮುಚ್ಚಲು ನ್ಯಾಯಾಲಯ ತಡೆಯಾಜ್ಞೆ ನೀಡಿಲ್ಲ. ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಅಭಿವೃದ್ಧಿಪಡಿಸಬೇಕಿದೆ. ರೆವಿನ್ಯೂ ಬಡಾವಣೆ ಆಗಿರುವುದರಿಂದ ಅಭಿವೃದ್ಧಿ ಮಾಡಲು ಆಗುವುದಿಲ್ಲ ಎನ್ನುವುದಾದರೆ ನಗರದ ಇತರ ರೆವಿನ್ಯೂ ಬಡಾವಣೆಗಳ ರಸ್ತೆಯನ್ನು ಅಭಿವೃದ್ಧಿ ಮಾಡಿಲ್ಲವೇ ಎಂದು ಇಲ್ಲಿನ ನಿವಾಸಿಗಳು ಪ್ರಶ್ನೆ ಮಾಡುತ್ತಾರೆ. ಬೇರೆ ಬಡಾವಣೆಗಳ ರಸ್ತೆಗಳನ್ನು ಅಭಿವೃದ್ಧಿ ಮಾಡಿರುವಂತೆಯೇ ಈ ರಸ್ತೆಯನ್ನು ಅಭಿವೃದ್ಧಿ ಮಾಡುವಂತೆ ನಿವಾಸಿಗಳು ಆಗ್ರಹಿಸುತ್ತಾರೆ.

” ಡಾ ರಾಜ್ ಕುಮಾರ್ ರಸ್ತೆಯಲ್ಲಿರುವ ಕೆಲಭಾಗಗಳು ರೆವಿನ್ಯೂ ಬಡಾವಣೆ ವ್ಯಾಪ್ತಿಗೆ ಬರುತ್ತವೆ. ಈ ಭಾಗದ ಹಲವರು ರಸ್ತೆ ಜಾಗ ನಮಗೆ ಸೇರಿದ್ದು, ಅದಕ್ಕೆ ಪರಿಹಾರ ದೊರೆತಿಲ್ಲ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪ್ರಕರಣದ ವಿಚಾರಣೆ ಮುಗಿದಿದ್ದು ಅಂತಿಮ ಹಂತಕ್ಕೆ ಬಂದಿದೆ. ತೀರ್ಪು ಬಂದ ನಂತರ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ರಸ್ತೆ ಅಭಿವೃದ್ಧಿಗೆ ೧ ಕೋಟಿ ರೂ . ಅನುದಾನಕ್ಕೆ ಅನುಮೋದನೆ ಸಿಕ್ಕಿದೆ.”

– ಯೋಗಾನಂದ , ಅಭಿವೃದ್ಧಿ ಅಧಿಕಾರಿ, ನಗರಪಾಲಿಕೆ ವಲಯ ಕಚೇರಿ ೯

” ಬಹಳ ದಿನಗಳಿಂದ ಈ ಗುಂಡಿಮಯ ರಸ್ತೆಯಲ್ಲಿ ಬೈಕ್ ಸವಾರರು ಹಾಗೂ ಪಾದಚಾರಿಗಳಿಗೆ ಸಾಕಷ್ಟು ಸಮಸ್ಯೆ ಉಂಟಾಗಿದೆ.ಪ್ರತಿದಿನ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಈ ರಸ್ತೆ ದಾಟಿ ಬೇರೆ ರಸ್ತೆಗೆ ಹೋಗಲು ಹರಸಾಹಸ ಪಡುವಂತಾಗಿದೆ.ಕೋರ್ಟ್‌ನಲ್ಲಿ ಕೇಸ್ ಇದೆ ಎಂಬ ನೆಪವೊಡ್ಡಿ ರಸ್ತೆ ದುರಸ್ತಿಪಡಿಸಲು ಮುಂದಾಗಿಲ್ಲ. ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ನರಕಯಾತನೆ ಅನುಭವಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಿ.”

-ಮಂಜುನಾಥ್, ಯರಗನಹಳ್ಳಿ ನಿವಾಸಿ

ಆಂದೋಲನ ಡೆಸ್ಕ್

Recent Posts

ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: 9 ಮಂದಿಗೆ ಗಾಯ

ಹನೂರು: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ 9 ಜನರು ಗಾಯಗೊಂಡಿರುವ ಘಟನೆ ಹನೂರು ಪಟ್ಟಣದ ಹೊರವಲಯದ ಮಹದೇಶ್ವರ ಐಟಿಐ ಕಾಲೇಜು…

4 hours ago

ಹುಬ್ಬೆ ಹುಣಸೆ ಡ್ಯಾಂ ಭರ್ತಿ, ಇದು ಮಾದಪ್ಪನ ಕೃಪೆ ಎಂದ ಶಾಸಕ ಮಂಜುನಾಥ್

ಹನೂರು : ಕ್ಷೇತ್ರದ ಅಧಿದೇವತೆ ಮಲೆ ಮಾದೇಶ್ವರ ಸ್ವಾಮಿ ಕೃಪೆಯಿಂದಲೇ ಈ ಬಾರಿ ಉತ್ತಮ ಮಳೆಯಾಗಿ, ಬರಗಾಲದಿಂದ ಕಂಗೆಟ್ಟಿದ್ದ ರೈತರ…

4 hours ago

ಓದುಗರ ಪತ್ರ: ‘ಜಗವೆ ಕೊಂಡಾಡುವ ಹಾಗೆ’

‘ಜಗವೆ ಕೊಂಡಾಡುವ ಹಾಗೆ’ ಕರುನಾಡ ಕಂಬನಿ, ಜನಮನದ ನಾಡಿ ಅರ್ಜುನನಿಗೆ ಅಶ್ರುತರ್ಪಣೆ ಅಭಿಮಾನದ ಅಭಿಮನ್ಯುಗೆ ಹೃದಯದ ಅಭಿನಂದನೆ ಅಂಬಾರಿಯ ಹೊತ್ತು…

8 hours ago

ಓದುಗರ ಪತ್ರ: ಮೈಕ್ರೋ ಜೆರಾಕ್ಸ್ ಹಾವಳಿಗೆ ಕಡಿವಾಣ ಹಾಕಿ

ಪರೀಕ್ಷಾ ಸಮಯದಲ್ಲಿ ಬಹುತೇಕ ಜೆರಾಕ್ಸ್ ಅಂಗಡಿಗಳ ಮುಂದೆ ವಿದ್ಯಾರ್ಥಿಗಳ ದಂಡೇ ನೆರೆದಿರುತ್ತದೆ. ಪರೀಕ್ಷಾ ಸಮಯದಲ್ಲಿ ನೋಟ್ಸ್‌ಗಳನ್ನು ಜೆರಾಕ್ಸ್ ಮಾಡಿಸಲು ಬರುವವರಿಗಿಂತ…

8 hours ago

ಓದುಗರ ಪತ್ರ: ಅಂಬೇಡ್ಕರ್ ಪ್ರತಿಮೆಗೆ ದೀಪಾಲಂಕಾರ ವ್ಯವಸ್ಥೆಯಾಗಲಿ

ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿ ಆವರಣದಲ್ಲಿ ಕಳೆದ  ಕೆಲವು ದಿನಗಳಿಂದ ೨೦೨೬ರ ದಸರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಯುವ ಸಂಭ್ರಮ…

8 hours ago

ಓದುಗರ ಪತ್ರ: ಮಿತಿ ಹೆಚ್ಚಳ ಕಾರ್ಮಿಕ ಸ್ನೇಹಿ ನಿರ್ಧಾರ

ಸಾಮಾಜಿಕ ಭದ್ರತೆಯ ಒಂದು ಭಾಗವಾದ ನೌಕರರ ಭವಿಷ್ಯ ನಿಧಿ ವ್ಯಾಪ್ತಿಗೆ ಒಳಪಡುವ ನೌಕರರ ವೇತನ ಮಿತಿಯನ್ನು ೧೫ ಸಾವಿರ ರೂಪಾಯಿಗಳಿಂದ…

8 hours ago