mysore university
ಮೈಸೂರು: ಶತಮಾನ ಪೂರೈಸಿರುವ ಮೈಸೂರು ವಿಶ್ವವಿದ್ಯಾನಿಲಯವು ಇದೇ ಮೊದಲ ಬಾರಿಗೆ ಸ್ನಾತ ಕೋತ್ತರ ಪದವಿ ಪರೀಕ್ಷೆಗಳನ್ನು ಒಂದೇ ಸೂರಿನಡಿ ನಡೆಸುವ ಮೂಲಕ ಪರೀಕ್ಷಾ ಚಟುವಟಿಕೆಗಳಲ್ಲಿ ಸುಧಾರಣೆಗೆ ಮುನ್ನುಡಿ ಬರೆದಿದೆ.
ಈವರೆಗೆ ಆಯಾಯ ಅಧ್ಯಯನ ವಿಭಾಗಗಳಲ್ಲೇ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಆದರೆ, ೨೦೨೫-೨೬ನೇ ಶೈಕ್ಷಣಿಕ ವರ್ಷದಲ್ಲಿ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮೈಸೂರು ವಿವಿಯ ಮೌಲ್ಯ ಭವನದಲ್ಲಿ ನಡೆಸಲಾಗುತ್ತದೆ. ಪ್ರಸಕ್ತ ಶೈಕ್ಷಣಿಕ ಸಾಲಿನ ೨ನೇ ಮತ್ತು ನಾಲ್ಕನೇ ಸೆಮಿಸ್ಟರ್ ಸ್ನಾತಕೋತ್ತರ ಪದವಿ ಪರೀಕ್ಷೆಗಳು ಜುಲೈ ೩ ರಿಂದಲೇ ಪ್ರಾರಂಭವಾಗಿದ್ದು, ಈ ಮೂಲಕ ಮೈಸೂರು ವಿವಿಯು ಮಹತ್ವದ ಹೆಜ್ಜೆ ಇರಿಸಿದೆ.
ವಿಶ್ವವಿದ್ಯಾನಿಲಯದ ೫೪ ವಿಭಾಗಗಳ ವಿದ್ಯಾರ್ಥಿಗಳು ಒಂದೇ ಸೂರಿನಡಿ ಪರೀಕ್ಷೆ ಬರೆದಾಗ ಸಾರ್ಥಕ ಭಾವನೆ ಬರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೂ ಪರೀಕ್ಷೆಯ ಬಗ್ಗೆ ಶಿಸ್ತು ಬರಲಿದೆ. ಇಲ್ಲಿಯವರೆಗೆ ಆಯಾ ವಿಭಾಗಗಳಲ್ಲೇ ಪರೀಕ್ಷೆಗಳು ನಡೆಯುತ್ತಿದ್ದಾಗ ಅದೇ ವಿಭಾಗಗಳ ಅಧ್ಯಾಪಕರು, ಪರಿವೀಕ್ಷಕರಾಗಿ ಕಾರ್ಯನಿರ್ವಹಿಸು ತ್ತಿದ್ದರು. ಇದೀಗ ಬೇರೆ ಬೇರೆ ವಿಭಾಗದವರು ಪರಿವೀಕ್ಷಕರಾಗಿ ಪರೀಕ್ಷೆಯ ಮೇಲ್ವಿಚಾರಣೆ ನಡೆಸು ವಂತಾ ಗಿದೆ. ವಿದ್ಯಾರ್ಥಿಗಳು ಅತ್ತ ಇತ್ತ ತಿರುಗಿ ನೋಡುವ ಪರಿಪಾಟಕ್ಕೂ ಬ್ರೇಕ್ ಬಿದ್ದಿದೆ.
ಸದ್ಯ ಸ್ನಾತಕೋತ್ತರ ಪದವಿಯ ೨ನೇ ಮತ್ತು ನಾಲ್ಕನೇ ಸೆಮಿಸ್ಟರ್‌ಗಳಲ್ಲಿ ಒಟ್ಟು ೪,೫೦೦ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷೆಗಳು ಎರಡು ಅವಧಿಗಳಲ್ಲಿ ನಡೆಯುತ್ತಿವೆ ಎನ್ನುತ್ತಾರೆ ಮೈಸೂರು ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ನಾಗರಾಜು ಅವರು. ಈ ಹಿಂದೆ ಪರೀಕ್ಷಾ ಸಮಯದಲ್ಲಿ ನಿತ್ಯ ಆಯಾ ವಿಭಾಗಕ್ಕೆ ಹೋಗಿ ಪ್ರಶ್ನೆ ಪತ್ರಿಕೆ ನೀಡುವುದು, ಬಳಿಕ ಉತ್ತರ ಪತ್ರಿಕೆ ಸಂಗ್ರಹಿಸುವ ಕಾರ್ಯ ಮಾಡಲಾಗುತ್ತಿತ್ತು.
ಇದರಿಂದ ವಿವಿ ಆರ್ಥಿಕತೆಗೂ ಪೆಟ್ಟು ಬೀಳುತ್ತಿತ್ತು. ಆದರೆ, ಇದೀಗ ಎಲ್ಲ ವಿಭಾಗಗಳ ಪರೀಕ್ಷೆಗಳು ಒಂದೇ ಸೂರಿನಡಿ ನಡೆಯು ತ್ತಿರುವುದರಿಂದ ವಿವಿಗೆ ಆರ್ಥಿಕ ಅನುಕೂಲವಾಗಲಿದೆ. ಅಲ್ಲದೇ, ಈ ಹೊಸ ವ್ಯವಸ್ಥೆಗೆ ವಿದ್ಯಾರ್ಥಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೌಲ್ಯಭವನದಲ್ಲಿ ಪರೀಕ್ಷೆಗಳು ಯಾವುದೇ ಸಮಸ್ಯೆಗಳಿಲ್ಲದೆ ನಡೆಯುತ್ತಿದ್ದು, ವಿದ್ಯಾರ್ಥಿಗಳೂ ಸಂತಸಗೊಂಡಿದ್ದಾರೆ. ಮುಂದೆ ಇದು ನ್ಯಾಕ್ ಶ್ರೇಯಾಂಕ ಪಡೆಯುವಲ್ಲಿ ವಿವಿಗೆ ಸಹಕಾರಿಯಾಗಲಿದೆ ಎಂದು ಮೌಲ್ಯಮಾಪನ ಕುಲಸಚಿವ ಪ್ರೊ. ಎನ್.ನಾಗರಾಜ್ ಹೇಳುತ್ತಾರೆ.
“ಈ ಮೊದಲು ಆಯಾ ವಿಭಾಗಗಳಲ್ಲೇ ಪರೀಕ್ಷೆ ನಡೆಯುತ್ತಿತ್ತು. ಇದರಿಂದ ಪರೀಕ್ಷೆಯಲ್ಲಿ ಶಿಸ್ತು ಇರುತ್ತಿರಲಿಲ್ಲ. ಅಲ್ಲದೇ, ಒಂದೇ ವಿಭಾಗದವರೇ ಅಕ್ಕಪಕ್ಕದಲ್ಲಿ ಕುಳಿತು ಪರೀಕ್ಷೆ ಬರೆಯುತ್ತಿದ್ದರು. ಇದೀಗ ಮೌಲ್ಯಭವನದಲ್ಲಿ ಪರೀಕ್ಷೆ ನಡೆಯುತ್ತಿರುವುದರಿಂದ ಅಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದವರೆಲ್ಲಾ ಪರೀಕ್ಷೆ ಬರೆಯುತ್ತಾರೆ. ಇದು ನಮಗೆ ಪರೀಕ್ಷಾ ಭಯವನ್ನು ಹೋಗಲಾಡಿಸಲಿದೆ.” – ಶಿಲ್ಪಾ, ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿನಿ, ಎಂ.ಕಾಂ
“ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅವರ ಆಡಳಿತಾವಧಿಯಲ್ಲಿ ನಿರ್ಮಾಣವಾದ ಮೌಲ್ಯ ಭವನದಲ್ಲಿ ವಿಶ್ವವಿದ್ಯಾಲಯದ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಮಾತ್ರ ನಡೆಯುತ್ತಿತ್ತು. ಜೊತೆಗೆ ಈ ಹಿಂದೆ ವಿವಿ ನಡೆಸುತ್ತಿದ್ದ ಕೆ-ಸೆಟ್ ಕೇಂದ್ರವೂ ಆಗಿತ್ತು. ಇನ್ನು ಮೇಲೆ ಎಲ್ಲಾ ಪರೀಕ್ಷೆಗೆ ಸಂಬಂಽಸಿದ ಚಟುವಟಿಕೆಗಳಿಗೂ ಈ ಮೌಲ್ಯ ಭವನವನ್ನೇ ಬಳಸಲಾಗುವುದು.” – ಪ್ರೊ.ಎನ್.ನಾಗರಾಜು, ಮೌಲ್ಯಮಾಪನ ಕುಲಸಚಿವ
– ಚಂದು ಸಿ.ಎನ್.
ಯಾವುದೋ ಒಂದು ಹಕ್ಕು ಹೆಚ್ಚಿನ ಆದ್ಯತೆ ಹೊಂದಲು ಸಾಧ್ಯವೇ? ಕೆಲವು ಹಕ್ಕುಗಳು ಹೆಚ್ಚು ಮುಖ್ಯವಾಗುವವೇ? ಒಂದು ರೀತಿಯ ಹಕ್ಕಿನಿಂದ ಇನ್ನೊಂದು…
ಮನೆ ಮುಂಭಾಗ ತ್ಯಾಜ್ಯ ನೀರು ನಿಂತು ಗಬ್ಬುನಾರುತ್ತಿರುವ ಚರಂಡಿ ; ಸಾಂಕ್ರಾಮಿಕ ರೋಗ ಹರಡುವ ಭೀತಿ, ಚುನಾವಣೆ ಬಹಿಷ್ಕಾರಕ್ಕೆ ಸ್ಥಳೀಯರ…
ಚಾಮರಾಜನಗರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಕೋಳಿಮೊಟ್ಟೆ ವಿತರಣೆಗಾಗಿ ನೀಡಲಾಗುವ ಅನುದಾನ ಕಳೆದ ೬ತಿಂಗಳಿಂದ…
ಗುತ್ತಲು ಕೆರೆ, ಕಾಳೇನಹಳ್ಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಭೇಟಿ ಮಂಡ್ಯ: ನಗರದ ಗುತ್ತಲು ಕೆರೆಗೆ ತ್ಯಾಜ್ಯ…
ಪ್ರಶಾಂತ್ ಎಸ್. ಆರು ತಿಂಗಳಿನಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ ನೀರಿನ ಘಟಕ ನಿರ್ವಹಣೆ ಮಾಡುವಲ್ಲಿ ಕೆಎಸ್‌ಆರ್‌ಟಿಸಿ ವಿಫಲ…
ಗಿರೀಶ್ ಹುಣಸೂರು ಹೊಸ ವರ್ಷಾಚರಣೆ, ಕ್ರಿಸ್‌ಮಸ್ ರಜೆ ನಿರೀಕ್ಷೆಯಲ್ಲಿ ವ್ಯಾಪಾರಸ್ಥರು, ಉದ್ಯಮಿಗಳು ಮೈಸೂರು: ೨೦೨೫ನೇ ವರ್ಷಕ್ಕೆ ವಿದಾಯ ಹೇಳಿ, ೨೦೨೬ರ…