Andolana originals

ಅಪಘಾತಮುಕ್ತ ವಲಯಕ್ಕೆ ಯೋಜನೆ ಸಿದ್ಧ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 127.01ಕೋಟಿ ರೂ.ವೆಚ್ಚದ ಯೋಜನೆ

ಮೈಸೂರು: ದಿನದ ೨೪ ಗಂಟೆಗಳ ಕಾಲವೂ ವಾಹನ ದಟ್ಟಣೆ ಇರುವ ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಎಂಟು ಬ್ಲ್ಯಾಕ್‌ಸ್ಪಾಟ್‌ಗಳನ್ನು ‘ಅಪಘಾತ ಮುಕ್ತ ವಲಯ’ವನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಈ ಭಾಗದಲ್ಲಿ ಅಪಘಾತಗಳ ಪ್ರಮಾಣ ತಗ್ಗಿಸಲು ಕೆಳ ಸೇತುವೆ, ಮೇಲ್ಸೇತುವೆ ನಿರ್ಮಿಸುವ ಮೂಲಕ ವಾಹನ ಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ಚಿಂತಿ ಸಲಾಗಿದ್ದು, ಇದಕ್ಕಾಗಿ ೧೨೭. ೦೧ ಕೋಟಿ ರೂ. ವೆಚ್ಚದ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೆತ್ತಿಕೊಂಡಿದೆ.

ಈಗಾಗಲೇ ಟೆಂಡರ್ ಮೂಲಕ ಬೆಂಗಳೂರಿನ ಕೃಷ್ಣ ಇನ್ರಾಟೆಕ್ ಸಂಸ್ಥೆ ಗುತ್ತಿಗೆಯನ್ನೂ ಪಡೆದುಕೊಂಡಿದೆ. ಈ ಪೈಕಿ ಒಂದು ಕಾಮಗಾರಿ ಶುರುವಾ ಗಿದ್ದು, ಇನ್ನುಳಿದ ಕೆಲಸಗಳಿಗೆ ಶೀಘ್ರ ದಲ್ಲೇ ಚಾಲನೆ ದೊರೆಯಲಿದೆ. ಈ ಎಲ್ಲ ಕಾಮಗಾರಿ ಮುಂದಿನ ೨೪ ತಿಂಗಳ ಒಳಗೆ ಪೂರ್ಣ ಗೊಳ್ಳಬೇಕಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಮತ್ತು ಮುಂದಿನ ೫ ವರ್ಷಗಳ ಕಾಲ ಕಾಮಗಾರಿಗಳ ನಿರ್ವಹಣೆಯ ಷರತ್ತನ್ನು ಗುತ್ತಿಗೆದಾರರಿಗೆ ವಿಧಿಸಲಾಗಿದೆ.

ಕರ್ನಾಟಕ-ಕೇರಳ ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ೭೬೬(ಹಿಂದಿನ ಸಂಖ್ಯೆ ೨೧೨) ಮೈಸೂರು-ಗುಂಡ್ಲುಪೇಟೆ ಮೂಲಕ ಹಾದು ಹೋಗಲಿದ್ದು, ಇದರಿಂದ ಅಂತಾರಾಜ್ಯ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಸಂಚಾರ ಮಾಡುತ್ತವೆ. ನಂಜನ ಗೂಡು, ಬಂಡೀಪುರ, ಊಟಿ, ಕೇರಳದ ವಯನಾಡಿಗೆ ತೆರಳುವ ಪ್ರವಾಸಿಗರೂ ಈ ಮಾರ್ಗದಲ್ಲೇ ಸಾಗಬೇಕಿದೆ. ನಂಜನಗೂಡು ಕೈಗಾರಿಕಾ ಪ್ರದೇಶ ಹೆದ್ದಾರಿಗೆ ಹೊಂದಿಕೊಂಡಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಾಹನಗಳು ಈ ಹೆದ್ದಾರಿಯಲ್ಲಿ ಸಾಗುತ್ತವೆ. ಅತಿ ವೇಗದ ಚಾಲನೆ ಯಿಂದಲೂ ಅನೇಕ ಅಪಘಾತಗಳು ಪುನರಾವರ್ತನೆ ಯಾಗುವ ಮೂಲಕ ಸಾವು-ನೋವುಗಳು ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿವೆ. ಇದಕ್ಕೆ ಪರಿಹಾರ ಕಂಡು ಕೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಽಕಾರ ಇದೀಗ ಎಚ್ಚೆತ್ತುಕೊಂಡಿದೆ.

ಅಪಘಾತಗಳ ಪ್ರಮಾಣವನ್ನು ಕಡಿಮೆ ಮಾಡಲು ಬ್ಲ್ಯಾಕ್ ಸ್ಪಾಟ್‌ಗಳಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ. ನಂಜನಗೂಡು ತಾಲ್ಲೂಕಿನ ಯಲಚಗೇರಿಯಲ್ಲಿ ಮೇಲ್ಸೇತುವೆ, ಕಳಲೆ ಗೇಟ್ ಬಳಿ ಕೆಳಸೇತುವೆ(ಅಂಡರ್ ಪಾಸ್) ನಿರ್ಮಿಸಲಾಗುತ್ತಿದೆ. ಹೊಸಹಳ್ಳಿ ಬಳಿ ಲಘು ವಾಹನಗಳ ಸಂಚಾರಕ್ಕಾಗಿ ಕೆಳ ಸೇತುವೆ ನಿರ್ಮಾಣ ವಾಗಲಿದೆ. ಮೈಸೂರು ತಾಲ್ಲೂಕಿನ ಕಡಕೊಳ ಗ್ರಾಮದಲ್ಲಿ ಲಘುವಾಹನ ಸಂಚಾರಕ್ಕಾಗಿ ಮತ್ತು ಪಾದಚಾರಿಗಳ ಓಡಾಟಕ್ಕಾಗಿ ಪ್ರತ್ಯೇಕ ಕೆಳ ಸೇತುವೆ ನಿರ್ಮಿಸಲಾಗುತ್ತಿದೆ.

ನಂಜನಗೂಡು ಹೆದ್ದಾರಿ ಮತ್ತು ವರ್ತುಲ ರಸ್ತೆ ಸಂಪರ್ಕಿಸುವ ಬಂಡೀಪಾಳ್ಯದ ಎಪಿಎಂಸಿ ಬಳಿ ಎರಡು ಕೆಳ ಸೇತುವೆಗಳು ನಿರ್ಮಾಣವಾಗಲಿವೆ. ಇದರಿಂದ ಎಪಿಎಂಸಿಗೆ ಸರಕು ಸಾಗಣೆ ಮಾಡುವ ಲಾರಿಗಳಿಗೆ ಅನುಕೂಲವಾಗಲಿದೆ. ವರ್ತುಲ ರಸ್ತೆ, ನಂಜನಗೂಡು ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೆ ತಡೆರಹಿತ ಸಂಚಾರ ಮುಂದುವರಿಸಲು ಅನುಕೂಲವಾಗಲಿದೆ.

ಗೌರಿಶಂಕರನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಬಳಿಯ ಜಾಗ ‘ಅಪಘಾತ ವಲಯ’ವಾಗಿ ಗುರುತಿಸಲ್ಪಟ್ಟಿದೆ. ಆಶ್ರಮಕ್ಕೆ ವಾಹನಗಳು ತಿರುವು ಪಡೆಯುವ ಸಂದರ್ಭದಲ್ಲಿ ಅವಘಡಗಳು ಹೆಚ್ಚಾಗಿ ಸಂಭವಿಸುತ್ತಿವೆ. ಈ ಭಾಗದಲ್ಲಿ ರಸ್ತೆ ಉಬ್ಬು ನಿರ್ಮಿಸಿ ಬ್ಯಾರಿಕೇಡ್ ಹಾಕಿದರೂ ಅಪಘಾತ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿ ವಾಹನಗಳ ಸಂಚಾರಕ್ಕಾಗಿ ಕೆಳ ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಜತೆಗೆ, ಕೆಂಪಯ್ಯನಹುಂಡಿ ಬಳಿ ವಾಹನಗಳಿಗೆ ಮತ್ತು ಪಾದಚಾರಿ ಗಳಿಗೆ ಪ್ರತ್ಯೇಕವಾಗಿ ಅಂಡರ್ ಪಾಸ್ ನಿರ್ಮಾಣವಾಗಲಿದೆ.

ಮೈಸೂರು-ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ(೨೭೫) ಹಾದುಹೋಗುವ ಬನ್ನಿಕುಪ್ಪೆಯಲ್ಲಿ ಲಘು ವಾಹನಗಳಿಗೆ ಮತ್ತು ಭಾರಿ ವಾಹನಗಳಿಗೆ ಪ್ರತ್ಯೇಕ ಕೆಳ ಸೇತುವೆ ನಿರ್ಮಿಸಲಾಗುತ್ತಿದೆ.

ಸಮೀಕ್ಷೆ ಮೂಲಕ ಬ್ಲ್ಯಾಕ್‌ಸ್ಪಾಟ್ ಗುರುತು: ರಾಷ್ಟ್ರೀಯ ಹೆದ್ದಾರಿ ಪ್ರಾಽಕಾರ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅಪಾಯಕಾರಿ ಜಾಗ (ಆಕ್ಸಿಡೆಂಟ್ ಬ್ಲ್ಯಾಕ್ ಸ್ಪಾಟ್) ಹಾಗೂ ಹೆಚ್ಚು ಅಪಘಾತ ಪ್ರಕರಣಗಳು ವರದಿ ಯಾಗುತ್ತಿರುವ ಜಾಗ ಗುರುತಿಸಿ ಕ್ರಮಕ್ಕೆ ವರದಿ ಸಲ್ಲಿಸಿದ್ದರು.

ಮೂರು ವರ್ಷಗಳ ಅಪಘಾತಗಳ ಪ್ರಮಾಣ, ರಸ್ತೆಯ ರಚನೆ, ಸಂಚರಿಸುವ ವಾಹನಗಳ ಸಂಖ್ಯೆ ಇತ್ಯಾದಿ ಪರಿಗಣಿಸಿ ಬ್ಲ್ಯಾಕ್‌ಸ್ಪಾಟ್ ಗುರುತಿಸಲಾಗುತ್ತದೆ. ಗುರುತಿಸಲಾದ ಜಾಗಗಳಲ್ಲಿ ಹೈಮಾಸ್ಟ್ ದೀಪ, ಸ್ಪೀಡ್ ಬ್ರೇಕರ್‌ಗಳು, ಜೀಬ್ರಾ ಲೈನ್ ಹಂಪ್‌ಗಳು, ಕ್ಯಾಟ್-ಐ ಹಾಗೂ ಇನ್ನಿತರ ಪ್ರತಿ-ಲಕ (ರಿ-ಕ್ಟರ್ ಲೈಟ್), ಮಿಣುಕು ದೀಪಗಳನ್ನು ಅಳವಡಿಸುವುದೂ ಸೇರಿದಂತೆ ವಿವಿಧ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ತಿರುವುಗಳ ವಿಸ್ತರಣೆ, ರಸ್ತೆ ವಿಭಜಕಗಳು ಹಾಗೂ ವಾಹನಗಳ ಚಕ್ರಗಳು ರಸ್ತೆಯಿಂದ ಜಾರದಂತಹ ವ್ಯವಸ್ಥೆ ಮಾಡಲಾಗುತ್ತಿದೆ.

ನಂಜನಗೂಡು-ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಂಜನಗೂಡಿನ ಹುಲ್ಲಹಳ್ಳಿ ವೃತ್ತ, ದೇವೀರಮ್ಮನಹಳ್ಳಿಯ ವೃತ್ತಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದವು. ಹಾಗಾಗಿ ಇಲ್ಲಿ ಸಿಗ್ನಲ್ ಲೈಟ್ ಅಳವಡಿಸಲಾಗಿದೆ. ಆದರೆ, ಸಂಚಾರ ಪೊಲೀಸರ ನಿರ್ವಹಣೆಯ ಕೊರತೆ, ವಾಹನ ಸವಾರರು ನಿಯಮ ಪಾಲಿಸದಿರುವುದರಿಂದ ಮತ್ತೆ ಅಪಘಾತಗಳು ಸಂಭವಿಸುತ್ತಿವೆ.

ಜಿಲ್ಲೆಯಲ್ಲಿ ೧೦೬ ಅಪಘಾತ ವಲಯ

ಜಿಲ್ಲೆಯಲ್ಲಿ ಅಂದಾಜು ೧೦೬ ಅಪಘಾತ ವಲಯಗಳನ್ನು ಗುರುತಿಸಲಾಗಿದೆ. ಹುಣಸೂರು ತಾಲ್ಲೂಕು ಅತಿ ಹೆಚ್ಚು ಬ್ಲ್ಯಾಕ್‌ಸ್ಪಾಟ್ ಹೊಂದಿದ್ದು, ನಂತರದ ಸ್ಥಾನದಲ್ಲಿ ಮೈಸೂರು ತಾಲ್ಲೂಕು ಇದೆ. ಈ ಅಪಘಾತ ವಲಯಗಳಲ್ಲಿ ಕಳೆದ ೩ ವರ್ಷಗಳಲ್ಲಿ ಆಗಿರುವ ಅಪಘಾತಗಳ ಪ್ರಮಾಣದ ಮಾಹಿತಿ ಕಲೆ ಹಾಕಿರುವ ಪೊಲೀಸರು ಅಪಘಾತಕ್ಕೆ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಿದ್ದಾರೆ. ಅಲ್ಲದೇ ರಸ್ತೆಗಳಲ್ಲಿ ಅಪಘಾತ ನಿಯಂತ್ರಣದ ಬಗ್ಗೆ ವೈಜ್ಞಾನಿಕ ಕ್ರಮದ ವರದಿಯನ್ನು ನೀಡಿದ್ದಾರೆ.

 

ಆಂದೋಲನ ಡೆಸ್ಕ್

Recent Posts

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆದ್ದರೆ ಆರು ಗ್ಯಾರಂಟಿ ಜಾರಿ: ಪ್ರಧಾನಿ ನರೇಂದ್ರ ಮೋದಿ

ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಜನರಿಗೆ ಆರು ಗ್ಯಾರಂಟಿಗಳನ್ನು ನೀಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.…

2 mins ago

ಭಾರತ ತಲುಪಿದ ಗ್ರೀನ್‌ ಆಶಾ: 15,000 ಟನ್‌ ಎಲ್‌ಪಿಜಿ ಹೊತ್ತು ತಂದ ನೌಕೆ

ಮುಂಬೈ: ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಭಾರತದ ಧ್ವಜ ಹೊಂದಿರುವ 15,400 ಟನ್‌ ಎಲ್‌ಪಿಜಿ ಹೊತ್ತ ಟ್ಯಾಂಕರ್‌ ಹಾರ್ಮುಜ್‌ ಜಲಸಂಧಿಯನ್ನು…

15 mins ago

ರೈತರ ಅಭ್ಯುದಯಕ್ಕೆ ಸರ್ಕಾರ ಬದ್ಧ: ಸಚಿವ ಪ್ರಿಯಾಂಕ್ ಖರ್ಗೆ.

ಚಿತ್ತಾಪುರ: ಕಾಂಗ್ರೆಸ್ ಸರ್ಕಾರ ರೈತರ ಅಭ್ಯುದಯಕ್ಕೆ ಶ್ರಮಿಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ನುಡಿದರು.…

23 mins ago

ರಾಜ್ಯಸಭೆ ಸದಸ್ಯರಾಗಿ ನಾಳೆ ನಿತೀಶ್‌ ಕುಮಾರ್‌ ಪ್ರಮಾಣ ವಚನ ಸ್ವೀಕಾರ

ಪಾಟ್ನಾ: ಮುಂದಿನ ವಾರ ಬಿಹಾರಕ್ಕೆ ಹೊಸ ಮುಖ್ಯಮಂತ್ರಿ ಆಯ್ಕೆಯಾಗುವ ಸಾಧ್ಯತೆ ಇದ್ದು, ನಾಳೆ ನಿತೀಶ್ ಕುಮಾರ್ ರಾಜ್ಯಸಭೆಯ ಸದಸ್ಯರಾಗಿ ಪ್ರಮಾಣವಚನ…

32 mins ago

ದಾವಣಗೆರೆ ದಕ್ಷಿಣದಲ್ಲಿ ಶೇ.50, ಬಾಗಲಕೋಟೆಯಲ್ಲಿ ಶೇ.54ರಷ್ಟು ಮತದಾನ

ಬೆಂಗಳೂರು: ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಸಂಜೆ 4.30ರ ವೇಳೆಗೆ ಬಾಗಲಕೋಟೆಯಲ್ಲಿ ಶೇ.54.82 ಹಾಗೂ ದಾವಣಗೆರೆ…

37 mins ago

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ 20 ವರ್ಷ ಜೈಲು ಶಿಕ್ಷೆ, 7 ಲಕ್ಷ ದಂಡ

ಮಂಡ್ಯ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ…

57 mins ago