Andolana originals

‘ಹೆರಿಟೇಜ್ ಟೂರಿಸಂ ಅಭಿವೃದ್ಧಿಗೆ ಯೋಜನೆ’

ಟಾಂಗಾ ಸವಾರಿ ವಲಯ ನಿರ್ಮಾಣಕ್ಕೆ ೨.೭೧ ಕೋಟಿ ರೂ. ಮಂಜೂರು

ಕೇಂದ್ರದ ಸ್ವದೇಶ ದರ್ಶನ ಯೋಜನೆಯಡಿ ಗ್ರೀನ್ ಟೂರ್‌ಗೆ ಆದ್ಯತೆ 

ಮೈಸೂರು: ಮೈಸೂರಿನ ಪ್ರವಾಸೋದ್ಯಮದ ಕಲ್ಪನೆಯನ್ನು ಬದಲಾಯಿಸಬಲ್ಲ ಎರಡು ಹೊಸ ಯೋಜನೆಗಳು ಸಿದ್ಧವಾಗುತ್ತಿವೆ.

ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ ಬಿಟ್ಟರೆ ಮೈಸೂರಿನಲ್ಲಿ ಏನೂ ಇಲ್ಲ ಎನ್ನುವ ಪ್ರವಾಸಿಗರ ಗೊಣಗಾಟ ಶೀಘ್ರದಲ್ಲೇ ದೂರಾಗಲಿದೆ. ನಗರದ ಪಾರಂಪರಿಕ ಗತವೈಭವದ ಕೊಂಡಿಯಾಗಿರುವ ಟಾಂಗಾ ಸವಾರಿ ಹಾಗೂ ಗ್ರೀನ್ ಟೂರ್‌ಗೆ ಹೊಸ ರೂಪ ಬರಲಿದೆ.

ನಗರಕ್ಕೆ ಪ್ರತಿ ವರ್ಷ ಅಂದಾಜು ೪೦ರಿಂದ ೫೦ಲಕ್ಷ ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಒಮ್ಮೆ ಬಂದವರು ಮತ್ತೊಮ್ಮೆ ಬರಲು ಹೆಚ್ಚಿನ ಆಕರ್ಷಣೆ ಇಲ್ಲ. ಅರಮನೆ, ಮೃಗಾಲಯ ಹಾಗೂ ಬೆಟ್ಟಕ್ಕಷ್ಟೇ ಪ್ರವಾಸೋದ್ಯಮ ಸೀಮಿತವಾಗಿದೆ ಎನ್ನುವ ಅಸಮಾಧಾನ ಸಾಕಷ್ಟು ಜನರಲ್ಲಿತ್ತು. ಈ ತಾಣಗಳ ವೀಕ್ಷಣೆ ಬಳಿಕ ಪ್ರವಾಸಿಗರು ಮೈಸೂರಿನಲ್ಲಿ ವಾಸ್ತವ್ಯ ಹೂಡುವುದಿಲ್ಲ. ಅಕ್ಕಪಕ್ಕದ ಜಿಲ್ಲೆಗಳಿಗೆ ಹೋಗುತ್ತಾರೆ. ಇದರಿಂದ ಪ್ರವಾಸೋದ್ಯಮಕ್ಕೆ ನಿರೀಕ್ಷಿತ ಆದಾಯ ಬರುತ್ತಿಲ್ಲ ಎಂಬ ಅಭಿಪ್ರಾಯ ಇತ್ತು. ಇದೀಗ ಕೇಂದ್ರ ಸರ್ಕಾರದ ಎರಡು ಹೊಸ ಯೋಜನೆಗಳು ಮೈಸೂರಿನ ಪ್ರವಾಸೋದ್ಯಮಕ್ಕೆ ಹೊಸ ರೂಪ ನೀಡಲಿವೆ ಎಂದು ಅಂದಾಜಿಸಲಾಗಿದೆ.

ಬೆರಳೆಣಿಕೆ ಟಾಂಗಾಗಳು: ಒಂದು ಕಾಲದಲ್ಲಿ ಮೈಸೂರಿಗೆ ಬಂದವರು ಟಾಂಗಾ ಏರದೆ ಹಿಂದಿರುಗುತ್ತಿರಲಿಲ್ಲ. ನಂತರ ಸೂಕ್ತ ಮಾರ್ಗ ದರ್ಶನ, ದರ ನಿಗದಿ, ಸೌಲಭ್ಯ ಹಾಗೂ ಟ್ರಾಫಿಕ್ ಹೆಚ್ಚಳದಿಂದಾಗಿ ಜನರು ಟಾಂಗಾ ಪಯಣದಿಂದ ದೂರ ಸರಿದರು. ಮೈಸೂರಿನಲ್ಲಿ ಈಗ ೫೦ ಟಾಂಗಾಗಳು ಹಾಗೂ ೨೦ ಸಾರೋಟುಗಳು ಮಾತ್ರ ಇವೆ. ಹೊಸ ಯೋಜನೆಯಿಂದಾಗಿ ಇವುಗಳಿಗೆ ಮತ್ತೆ ಶುಕ್ರದೆಸೆ ಬರಲಿದೆ. ಹಸಿರು ಪರಿಸರ ಪ್ರವಾಸೋದ್ಯಮಕ್ಕೂ ಕೇಂದ್ರ ಸರ್ಕಾರ ಇದೇ ಯೋಜನೆಯಲ್ಲಿ ಅನುಮತಿ ನೀಡಿದೆ. ಇಕಾಲಾಜಿಕಲ್ ಎಕ್ಸ್‌ಪೀರಿಯನ್ಸ್ ಜೋನ್ (ಇಇಜೆಡ್)ಗೆ ೧೮.೪೭ ಕೋಟಿ ರೂ. ಮಂಜೂರು ಮಾಡಲಾಗಿದೆ. ಮೃಗಾಲಯದಿಂದ ಕಾರಂಜಿ ಕೆರೆ, ರೀಜನಲ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿಗೆ ಕೆನೋಪಿ ವಾಕ್ ಹೊಸ ಆಕರ್ಷಣೆಯಾಗಲಿದೆ.‘ಆಕಾಶ ನಡಿಗೆ’ ಮೂಲಕ ಈ ಮೂರೂ ತಾಣಗಳ ಸೌಂದರ್ಯವನ್ನು ವೀಕ್ಷಿಸಬಹುದಾಗಿದೆ. ಇದರೊಂದಿಗೆ ಇಕೊ ಬ್ರಿಡ್ಜ್, ಫುಡ್‌ಕೋರ್ಟ್ ಬರಲಿವೆ.

ಮೃಗಾಲಯದ ಪ್ರಾಣಿ ಪಕ್ಷಿಗಳನ್ನು ಏರಿಯಲ್ವ್ಯೂ ಮೂಲಕ ವೀಕ್ಷಿಸಬಹುದಾಗಿದೆ. ಈ ಯೋಜ ನೆಗೆ ಇದ್ದ ಅರಣ್ಯ ಇಲಾಖೆ, ಪರಿಸರ ಇಲಾಖೆಗಳ ಆಕ್ಷೇಪಣೆಗಳನ್ನು ರಾಜ್ಯ ಅರಣ್ಯ ಸಚಿವರು ಹಾಗೂ ಕೇಂದ್ರ ಪ್ರವಾಸೋದ್ಯಮ ಸಚಿವರ ನೇತೃತ್ವದಲ್ಲಿ ನಡೆದ ಸಮಿತಿ ಸಭೆಯಲ್ಲಿ ನಿವಾರಿಸಲಾಗಿದೆ.

” ಮೈಸೂರು ಪಾರಂಪರಿಕ ನಗರ ಎನ್ನುವ ಖ್ಯಾತಿ ಗಳಿಸಿದೆ. ಆದರೆ, ಪ್ರವಾಸಿಗರಿಗೆ ಮೈಸೂರು ಅರಮನೆ ಹೊರತುಪಡಿಸಿ ಯಾವ ಪಾರಂಪರಿಕ ಕಟ್ಟಡಗಳನ್ನೂ ವೀಕ್ಷಿಸುವ ಸೌಲಭ್ಯವಿಲ್ಲ. ಸೂಕ್ತ ಮಾಹಿತಿ ಹಾಗೂ ಅವುಗಳಿಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಯೂ ಇಲ್ಲ. ನಗರದಲ್ಲಿ ಪ್ರವಾಸಿಗರು ನೋಡಲೇಬೇಕಾದ ಸುಮಾರು ೩೦ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳಿವೆ. ಈ ಹಿನ್ನೆಲೆಯಲ್ಲಿ ಅವುಗಳನ್ನು ಜೋಡಿಸುವ ಕೆಲಸ ಟಾಂಗಾ ಸವಾರಿಯಿಂದ ಆಗಲಿದೆ. ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಸ್ವದೇಶ ದರ್ಶನ ೨.೦ ಯೋಜನೆಯಡಿ ಟಾಂಗಾ ರೈಡ್ ಎಕ್ಸ್‌ಪೀರಿಯನ್ಸ್ ಜೋ ಯೋಜನೆ ಸಿದ್ಧವಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರ ೨.೭೧ ಕೋಟಿ ರೂ. ಮಂಜೂರು ಮಾಡಿದೆ.”

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ‘ಜಗವೆ ಕೊಂಡಾಡುವ ಹಾಗೆ’

‘ಜಗವೆ ಕೊಂಡಾಡುವ ಹಾಗೆ’ ಕರುನಾಡ ಕಂಬನಿ, ಜನಮನದ ನಾಡಿ ಅರ್ಜುನನಿಗೆ ಅಶ್ರುತರ್ಪಣೆ ಅಭಿಮಾನದ ಅಭಿಮನ್ಯುಗೆ ಹೃದಯದ ಅಭಿನಂದನೆ ಅಂಬಾರಿಯ ಹೊತ್ತು…

2 hours ago

ಓದುಗರ ಪತ್ರ: ಮೈಕ್ರೋ ಜೆರಾಕ್ಸ್ ಹಾವಳಿಗೆ ಕಡಿವಾಣ ಹಾಕಿ

ಪರೀಕ್ಷಾ ಸಮಯದಲ್ಲಿ ಬಹುತೇಕ ಜೆರಾಕ್ಸ್ ಅಂಗಡಿಗಳ ಮುಂದೆ ವಿದ್ಯಾರ್ಥಿಗಳ ದಂಡೇ ನೆರೆದಿರುತ್ತದೆ. ಪರೀಕ್ಷಾ ಸಮಯದಲ್ಲಿ ನೋಟ್ಸ್‌ಗಳನ್ನು ಜೆರಾಕ್ಸ್ ಮಾಡಿಸಲು ಬರುವವರಿಗಿಂತ…

2 hours ago

ಓದುಗರ ಪತ್ರ: ಅಂಬೇಡ್ಕರ್ ಪ್ರತಿಮೆಗೆ ದೀಪಾಲಂಕಾರ ವ್ಯವಸ್ಥೆಯಾಗಲಿ

ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿ ಆವರಣದಲ್ಲಿ ಕಳೆದ  ಕೆಲವು ದಿನಗಳಿಂದ ೨೦೨೬ರ ದಸರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಯುವ ಸಂಭ್ರಮ…

2 hours ago

ಓದುಗರ ಪತ್ರ: ಮಿತಿ ಹೆಚ್ಚಳ ಕಾರ್ಮಿಕ ಸ್ನೇಹಿ ನಿರ್ಧಾರ

ಸಾಮಾಜಿಕ ಭದ್ರತೆಯ ಒಂದು ಭಾಗವಾದ ನೌಕರರ ಭವಿಷ್ಯ ನಿಧಿ ವ್ಯಾಪ್ತಿಗೆ ಒಳಪಡುವ ನೌಕರರ ವೇತನ ಮಿತಿಯನ್ನು ೧೫ ಸಾವಿರ ರೂಪಾಯಿಗಳಿಂದ…

2 hours ago

ಪೋಕ್ಸೋ ಪ್ರಕರಣ: ಬೇಕು ಮಕ್ಕಳ ಸ್ನೇಹಿ ವಾತಾವರಣ

ಒಡನಾಡಿ ಸ್ಟ್ಯಾನ್ಲಿ ಮಕ್ಕಳ ಮಾತನ್ನು ಆಲಿಸುವುದು ಕಾನೂನುಬದ್ಧ ಮೌಲ್ಯವೂ ಆಗಿದೆ ಮಕ್ಕಳನ್ನು ಒಳಗೊಂಡ ಬಹುತೇಕ ಪ್ರಕರಣಗಳಲ್ಲಿ ಆಕ್ರೋಶಗೊಂಡು, ತಾಳ್ಮೆಗೆಟ್ಟ ಪೋಷಕರು…

2 hours ago

ಮೋದಿ ಮುಂದೆ ಮೌನ ಮುರಿದ ಚಿರಾಗ್ ಚೀರಾಟ!

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌ ಅವರ ವಾರದ ಅಂಕಣ  ಬಿಜೆಪಿಯವರನ್ನೂ ನಾಚಿಸುವಂತೆ ಕಟ್ಟಾ ಧಾರ್ಮಿಕ ಭಕ್ತನಂತೆ ಕಾಣುವ ವ್ಯಕ್ತಿತ್ವ ಪ್ರಧಾನಿ…

3 hours ago