ಟಾಂಗಾ ಸವಾರಿ ವಲಯ ನಿರ್ಮಾಣಕ್ಕೆ ೨.೭೧ ಕೋಟಿ ರೂ. ಮಂಜೂರು
ಕೇಂದ್ರದ ಸ್ವದೇಶ ದರ್ಶನ ಯೋಜನೆಯಡಿ ಗ್ರೀನ್ ಟೂರ್‌ಗೆ ಆದ್ಯತೆ
ಮೈಸೂರು: ಮೈಸೂರಿನ ಪ್ರವಾಸೋದ್ಯಮದ ಕಲ್ಪನೆಯನ್ನು ಬದಲಾಯಿಸಬಲ್ಲ ಎರಡು ಹೊಸ ಯೋಜನೆಗಳು ಸಿದ್ಧವಾಗುತ್ತಿವೆ.
ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ ಬಿಟ್ಟರೆ ಮೈಸೂರಿನಲ್ಲಿ ಏನೂ ಇಲ್ಲ ಎನ್ನುವ ಪ್ರವಾಸಿಗರ ಗೊಣಗಾಟ ಶೀಘ್ರದಲ್ಲೇ ದೂರಾಗಲಿದೆ. ನಗರದ ಪಾರಂಪರಿಕ ಗತವೈಭವದ ಕೊಂಡಿಯಾಗಿರುವ ಟಾಂಗಾ ಸವಾರಿ ಹಾಗೂ ಗ್ರೀನ್ ಟೂರ್‌ಗೆ ಹೊಸ ರೂಪ ಬರಲಿದೆ.
ನಗರಕ್ಕೆ ಪ್ರತಿ ವರ್ಷ ಅಂದಾಜು ೪೦ರಿಂದ ೫೦ಲಕ್ಷ ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಒಮ್ಮೆ ಬಂದವರು ಮತ್ತೊಮ್ಮೆ ಬರಲು ಹೆಚ್ಚಿನ ಆಕರ್ಷಣೆ ಇಲ್ಲ. ಅರಮನೆ, ಮೃಗಾಲಯ ಹಾಗೂ ಬೆಟ್ಟಕ್ಕಷ್ಟೇ ಪ್ರವಾಸೋದ್ಯಮ ಸೀಮಿತವಾಗಿದೆ ಎನ್ನುವ ಅಸಮಾಧಾನ ಸಾಕಷ್ಟು ಜನರಲ್ಲಿತ್ತು. ಈ ತಾಣಗಳ ವೀಕ್ಷಣೆ ಬಳಿಕ ಪ್ರವಾಸಿಗರು ಮೈಸೂರಿನಲ್ಲಿ ವಾಸ್ತವ್ಯ ಹೂಡುವುದಿಲ್ಲ. ಅಕ್ಕಪಕ್ಕದ ಜಿಲ್ಲೆಗಳಿಗೆ ಹೋಗುತ್ತಾರೆ. ಇದರಿಂದ ಪ್ರವಾಸೋದ್ಯಮಕ್ಕೆ ನಿರೀಕ್ಷಿತ ಆದಾಯ ಬರುತ್ತಿಲ್ಲ ಎಂಬ ಅಭಿಪ್ರಾಯ ಇತ್ತು. ಇದೀಗ ಕೇಂದ್ರ ಸರ್ಕಾರದ ಎರಡು ಹೊಸ ಯೋಜನೆಗಳು ಮೈಸೂರಿನ ಪ್ರವಾಸೋದ್ಯಮಕ್ಕೆ ಹೊಸ ರೂಪ ನೀಡಲಿವೆ ಎಂದು ಅಂದಾಜಿಸಲಾಗಿದೆ.
ಬೆರಳೆಣಿಕೆ ಟಾಂಗಾಗಳು: ಒಂದು ಕಾಲದಲ್ಲಿ ಮೈಸೂರಿಗೆ ಬಂದವರು ಟಾಂಗಾ ಏರದೆ ಹಿಂದಿರುಗುತ್ತಿರಲಿಲ್ಲ. ನಂತರ ಸೂಕ್ತ ಮಾರ್ಗ ದರ್ಶನ, ದರ ನಿಗದಿ, ಸೌಲಭ್ಯ ಹಾಗೂ ಟ್ರಾಫಿಕ್ ಹೆಚ್ಚಳದಿಂದಾಗಿ ಜನರು ಟಾಂಗಾ ಪಯಣದಿಂದ ದೂರ ಸರಿದರು. ಮೈಸೂರಿನಲ್ಲಿ ಈಗ ೫೦ ಟಾಂಗಾಗಳು ಹಾಗೂ ೨೦ ಸಾರೋಟುಗಳು ಮಾತ್ರ ಇವೆ. ಹೊಸ ಯೋಜನೆಯಿಂದಾಗಿ ಇವುಗಳಿಗೆ ಮತ್ತೆ ಶುಕ್ರದೆಸೆ ಬರಲಿದೆ. ಹಸಿರು ಪರಿಸರ ಪ್ರವಾಸೋದ್ಯಮಕ್ಕೂ ಕೇಂದ್ರ ಸರ್ಕಾರ ಇದೇ ಯೋಜನೆಯಲ್ಲಿ ಅನುಮತಿ ನೀಡಿದೆ. ಇಕಾಲಾಜಿಕಲ್ ಎಕ್ಸ್‌ಪೀರಿಯನ್ಸ್ ಜೋನ್ (ಇಇಜೆಡ್)ಗೆ ೧೮.೪೭ ಕೋಟಿ ರೂ. ಮಂಜೂರು ಮಾಡಲಾಗಿದೆ. ಮೃಗಾಲಯದಿಂದ ಕಾರಂಜಿ ಕೆರೆ, ರೀಜನಲ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿಗೆ ಕೆನೋಪಿ ವಾಕ್ ಹೊಸ ಆಕರ್ಷಣೆಯಾಗಲಿದೆ.‘ಆಕಾಶ ನಡಿಗೆ’ ಮೂಲಕ ಈ ಮೂರೂ ತಾಣಗಳ ಸೌಂದರ್ಯವನ್ನು ವೀಕ್ಷಿಸಬಹುದಾಗಿದೆ. ಇದರೊಂದಿಗೆ ಇಕೊ ಬ್ರಿಡ್ಜ್, ಫುಡ್‌ಕೋರ್ಟ್ ಬರಲಿವೆ.
ಮೃಗಾಲಯದ ಪ್ರಾಣಿ ಪಕ್ಷಿಗಳನ್ನು ಏರಿಯಲ್ವ್ಯೂ ಮೂಲಕ ವೀಕ್ಷಿಸಬಹುದಾಗಿದೆ. ಈ ಯೋಜ ನೆಗೆ ಇದ್ದ ಅರಣ್ಯ ಇಲಾಖೆ, ಪರಿಸರ ಇಲಾಖೆಗಳ ಆಕ್ಷೇಪಣೆಗಳನ್ನು ರಾಜ್ಯ ಅರಣ್ಯ ಸಚಿವರು ಹಾಗೂ ಕೇಂದ್ರ ಪ್ರವಾಸೋದ್ಯಮ ಸಚಿವರ ನೇತೃತ್ವದಲ್ಲಿ ನಡೆದ ಸಮಿತಿ ಸಭೆಯಲ್ಲಿ ನಿವಾರಿಸಲಾಗಿದೆ.
” ಮೈಸೂರು ಪಾರಂಪರಿಕ ನಗರ ಎನ್ನುವ ಖ್ಯಾತಿ ಗಳಿಸಿದೆ. ಆದರೆ, ಪ್ರವಾಸಿಗರಿಗೆ ಮೈಸೂರು ಅರಮನೆ ಹೊರತುಪಡಿಸಿ ಯಾವ ಪಾರಂಪರಿಕ ಕಟ್ಟಡಗಳನ್ನೂ ವೀಕ್ಷಿಸುವ ಸೌಲಭ್ಯವಿಲ್ಲ. ಸೂಕ್ತ ಮಾಹಿತಿ ಹಾಗೂ ಅವುಗಳಿಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಯೂ ಇಲ್ಲ. ನಗರದಲ್ಲಿ ಪ್ರವಾಸಿಗರು ನೋಡಲೇಬೇಕಾದ ಸುಮಾರು ೩೦ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳಿವೆ. ಈ ಹಿನ್ನೆಲೆಯಲ್ಲಿ ಅವುಗಳನ್ನು ಜೋಡಿಸುವ ಕೆಲಸ ಟಾಂಗಾ ಸವಾರಿಯಿಂದ ಆಗಲಿದೆ. ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಸ್ವದೇಶ ದರ್ಶನ ೨.೦ ಯೋಜನೆಯಡಿ ಟಾಂಗಾ ರೈಡ್ ಎಕ್ಸ್‌ಪೀರಿಯನ್ಸ್ ಜೋ ಯೋಜನೆ ಸಿದ್ಧವಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರ ೨.೭೧ ಕೋಟಿ ರೂ. ಮಂಜೂರು ಮಾಡಿದೆ.”
ಸಿದ್ದಾಪುರ :- ನಗರದಲ್ಲಿ ನಡೆದ ದರೋಡೆ ಪ್ರಕರಣ ಭೇದಿಸಲು ಜಿಲ್ಲಾ ಹೆಚ್ಚುವರಿ ಪೋಲೀಸ್ ಅಧೀಕ್ಷರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿದೆ…
ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ ಸಮೀಪದ ಸೀರಗೊಡು ಗ್ರಾಮದ ಸೂಳಿಮೇಡು ಅರಣ್ಯ ಪ್ರದೇಶದಲ್ಲಿ ಸುಮಾರು ಆರು ತಿಂಗಳ ಚಿರತೆ ಮರಿಯನ್ನು ಗ್ರಾಮಸ್ಥರು…
ಹುಣಸೂರು : ಹುಣಸೂರು ಪಟ್ಟಣದಲ್ಲಿಂದು ಹಾಡಹಗಲೇ ಚಿನ್ನದಂಗಡಿ ದರೋಡೆ ನಡೆದಿದೆ. ಬಸ್ ನಿಲ್ದಾಣದ ಹಿಂಭಾಗದಲ್ಲಿ ಬೈಪಾಸ್ ರಸ್ತೆಯಲ್ಲಿರುವ ʻಸ್ಕೈ ಗೋಲ್ಡ್…
ಶ್ರೀರಂಗಪಟ್ಟಣ : ತಾಲ್ಲೂಕಿನ ಪಾಲಹಳ್ಳಿಯ ವರುಣಾ ನಾಲೆಯಲ್ಲಿ ಬಟ್ಟೆ ತೊಳೆಯಲು ಬಂದ ಮಹಿಳೆಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಮತಾ…
ಕರಾಚಿ : ಕಳೆದ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ…
ಚೆನ್ನೈ : ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಡಿಸೆಂಬರ್ 27 ಮಲೇಷ್ಯಾನಲ್ಲಿ ಅದ್ಧೂರಿಯಾಗಿ…